ಕೂ- 2021ರ ಪ್ರಮುಖ ಕ್ಷಣಗಳು: ಅಗಲಿದ ಪುನೀತ್ ಹೆಚ್ಚು ಉಲ್ಲೇಖಗೊಂಡ ಸೆಲೆಬ್ರಿಟಿ

Team Udayavani, Dec 25, 2021, 11:33 AM IST

koo

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಕಾಲಿಕವಾಗಿ ನಮ್ಮನ್ನು ಬಿಟ್ಟು ಅಗಲಿದಾಗ ಇಡೀ ಕರುನಾಡು ದುಃಖತಪ್ತವಾಗಿತ್ತು. ಅವರವರ ಭಾಷೆಯಲ್ಲೇ ಭಾರತೀಯರನ್ನು ತಲುಪುತ್ತಿರುವ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಕೂ ನಲ್ಲಿಯೂ ಕನ್ನಡಿಗರು ಸೇರಿದಂತೆ ವಿವಿಧ ಭಾಷೆಯ ಜನರು ಪುನೀತ್ ರಾಜ್‌ಕುಮಾರ್ ಕುರಿತು ಹೆಚ್ಚು ಮಾತನಾಡಿದ್ದರಿಂದ ಅವರು ಈ ವರ್ಷ ಕೂ ನಲ್ಲಿ ಹೆಚ್ಚು ಉಲ್ಲೇಖಿಸಲಾದ ಸೆಲೆಬ್ರಿಟಿಯಾಗಿದ್ದಾರೆ.

ಪ್ರತಿ ಭಾರತೀಯರು ತಮ್ಮ ಆಯ್ಕೆಯ ಭಾಷೆಯಲ್ಲಿ ಆನ್‌ಲೈನ್‌ನಲ್ಲಿ ಮುಕ್ತವಾಗಿ ಅಭಿವ್ಯಕ್ತಿಸಲು ಅವಕಾಶ ಒದಗಿಸುವ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಕೂ ಅಪ್ಲಿಕೇಶನ್ ತನ್ನ ಮೊದಲ ‘ವಾಯ್ಸ್ ಆಫ್ ಇಂಡಿಯಾ’ ವರದಿಯನ್ನು ಬಿಡುಗಡೆ ಮಾಡಿದೆ.  ಇದು ಭಾಷಾ ವೈವಿಧ್ಯವಿರುವ ಭಾರತೀಯರ ಅಭಿಪ್ರಾಯಗಳ ಕುರಿತು ಅನನ್ಯ ಒಳನೋಟಗಳನ್ನು ತೆರೆದಿಡುತ್ತದೆ.

ವೈವಿದ್ಯತೆ ಎನ್ನುವುದು ಆಲೋಚನೆಯಲ್ಲೆ ಮಿಳಿತಗೊಂಡಿದೆ ಎನ್ನುವುದನ್ನು ಇದು ತೋರಿಸುತ್ತದೆ. ವಿವಿಧ ಪ್ರದೇಶದ ಜನರು ಅವರವರ ಭಾಷೆ, ಅಲ್ಲಿನ ಸೊಗಡು, ಆ ಭಾಗದ ಜನರ/ಸೆಲೆಬ್ರಿಟಿಗಳ ಸಂಭ್ರಮಿಸುವ ಬಗೆಯನ್ನು ಈ ದತ್ತಾಂಶಗಳಿಂದ ಕಾಣಬಹುದು. ಭಾರತವು ಸಾಂಸ್ಕೃತಿಕವಾಗಿ ವೈವಿಧ್ಯಮಯವಾಗಿದ್ದರೂ, ಎಲ್ಲಾ ಭಾರತೀಯರು ಆನ್‌ಲೈನ್‌ನಲ್ಲಿ ತಮ್ಮ ಮಾತೃಭಾಷೆಯಲ್ಲಿ ಅಭಿವ್ಯಕ್ತಿಸಬೇಕು ಎನ್ನುವ ಇಂಗಿತವನ್ನು ಎಂದು ‘ವಾಯ್ಸ್ ಆಫ್ ಇಂಡಿಯಾ’ ಪುನರುಚ್ಚರಿಸುತ್ತದೆ.

ಇದನ್ನೂ ಓದಿ:‘ರೈಡರ್’ ಚಿತ್ರವಿಮರ್ಶೆ: ಫ್ಯಾಮಿಲಿ ಪ್ಯಾಕೇಜ್‌ ನಲ್ಲಿ ಪ್ರೇಮ್‌ ಕಹಾನಿ

2021 ಕರ್ನಾಟಕದ ಜನರು ತಮ್ಮ ಮಾತೃಭಾಷೆಯಲ್ಲಿ ಆನ್‌ಲೈನ್‌ನಲ್ಲಿ ಸಕ್ರಿಯವಾಗಿ ಅಭಿವ್ಯಕ್ತಿಸಲು ಸಾದ್ಯವಾದ ವರ್ಷ. ಬಳಕೆದಾರರು ಕೂ ಒಪ್ಪಿಕೊಳ್ಳುವ ಮೂಲಕ ಇಂಗ್ಲಿಷ್ ಭಾಷೆಯಲ್ಲಿ ಅಷ್ಟೇ ಇದ್ದ ಡಿಜಿಟಲ್ ಅಭಿವ್ಯಕ್ತಿಯು ಕನ್ನಡದ ಸ್ವಾದವನ್ನು ಪಡೆದುಕೊಂಡಿತು.  ಪ್ರಾದೇಶಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ವಿಷಯಗಳ ಕುರಿತು ಸಂವಾದಿಸಲು, ಚರ್ಚಿಸಲು ಮತ್ತು ತೊಡಗಿಸಿಕೊಳ್ಳಲು ಸಾಧ್ಯವಾಯಿತು. Koo ಆಪ್‌ನಲ್ಲಿ ಬಿಡುಗಡೆಯಾದ ಮೊದಲ ಭಾಷೆ ಕನ್ನಡ ಎನ್ನುವುದು ಕನ್ನಡಿಗರ ಹೆಮ್ಮೆಯಾಗಿದೆ.

ಕೊಹ್ಲಿಯ ಕನ್ನಡ ಕೂ

ಸಾಮಾಜಿಕ ಜಾಲತಾಣದಲ್ಲಿ ಎಂದೂ ಕನ್ನಡ ಬಳಸಿರದ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಕನ್ನಡ ಕೂ ಈ ವರ್ಷದಲ್ಲೇ ಅತಿ ಹೆಚ್ಚು ಜನ ಇಷ್ಟಪಟ್ಟ ಕೂ ಆಗಿದೆ. ಕ್ರಿಕೆಟ್‌ನಿಂದ ಎಬಿ ಡಿವಿಲಿಯರ್ಸ್ ನಿವೃತ್ತಿಯ ಕುರಿತು ವಿರಾಟ್ ಕೊಹ್ಲಿ ಕನ್ನಡದಲ್ಲಿ ಕೂ ಮಾಡಿದ್ದರು. ಬೆಂಗಳೂರು ತಂಡ ಆರ್‌ಸಿಬಿಯಲ್ಲಿ ಎಬಿಡಿ ಸಹ ಆಟಗಾರನಾಗಿದ್ದ ವಿರಾಟ್ ಕೊಹ್ಲಿ ಆಪ್ ನಲ್ಲಿನ ಬಹು-ಭಾಷಾ ವೈಶಿಷ್ಟ್ಯಗಳನ್ನು ಬಳಸಿ ಕನ್ನಡದಲ್ಲಿ ಕೂ (ಇಂಗ್ಲಿಷ್ ಮತ್ತು ಹಿಂದಿ ಜೊತೆಗೆ) ಮಾಡುವ ಮೂಲಕ ಕನ್ನಡಿಗರಿಗೆ ಹೆಚ್ಚು ಹತ್ತಿರವಾಗಿದ್ದರು.

Koo App

ಆರ್‌ಸಿಬಿ ತಂಡಕ್ಕಾಗಿ ನೀವು ಎಲ್ಲವನ್ನೂ ಅರ್ಪಿಸಿದ್ದೀರಿ ಎಂಬುದನ್ನ ನಾನು ಹೃದಯಾಂತರಾಳದಿಂದ ಬಲ್ಲೆ. ನೀವು ನನಗೆ ಮತ್ತು ಈ ಪ್ರಾಂಚೈಸಿಗೆ ಎಷ್ಟು ಆಪ್ತರು ಎಂಬುದನ್ನು ಪದಗಳಲ್ಲಿ ತಿಳಿಸಲು ಸಾಧ್ಯವೇ ಇಲ್ಲ. ಚಿನ್ನಸ್ವಾಮಿ ಕ್ರೀಡಾಂಗಣವು ನಿಮ್ಮ ಆಟ ನೋಡಿ ಚಪ್ಪಾಳೆ ಹೊಡೆಯುವುದನ್ನು ಮತ್ತು ನಾನು ನಿಮ್ಮ ಜೊತೆಗಾರನಾಗಿ ಆಡುವುದನ್ನು ಮಿಸ್ ಮಾಡಿಕೊಳ್ಳುತ್ತೇನೆ ಗೆಳೆಯ. ನಿಮ್ಮನ್ನು ಸದಾ ಪ್ರೀತಿಸುವೆ ಹಾಗೂ ಎಂದಿಗೂ ನಾನೇ ನಿಮ್ಮ ನಂಬರ್ 1 ಅಭಿಮಾನಿಯಾಗಿರುತ್ತೇನೆ. G.O.A.T #ABD

Virat Kohli (@virat.kohli) 19 Nov 2021

ಕನ್ನಡಿಗರು ಹೆಚ್ಚು ಕೂ ಮಾಡಿದ ವಿಷಯಗಳ ಇಣುಕುನೋಟ ಇಲ್ಲಿದೆ:

ಟ್ರೆಂಡಿಂಗ್ ಹ್ಯಾಶ್‌ಟ್ಯಾಗ್‌ಗಳು

#ಸಂಗೊಳ್ಳಿ ರಾಯಣ್ಣ, #100ಲಸಿಕೆ #ಕೆಂಪೇಗೌಡ-ಜಯಂತಿ #ಕನಕದಾಸಜಯಂತಿ ಹೀಗೆ ಕನ್ನಡದ ಪ್ರಮುಖ ವಿಷಯಗಳು ಕುರಿತು ಈ ವರ್ಷ ಹೆಚ್ಚು ಮಾತನಾಡಿದ್ದಾರೆ.

ಪೌರಾಣಿಕ ಯೋಧ ಸಂಗೊಳ್ಳಿ ರಾಯಣ್ಣನ ಜನ್ಮದಿನದಂದು ಕೂ- ಕನ್ನಡ ಸಮುದಾಯವು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿತು ಮತ್ತು ಭಾರತವು 100 ಕೋಟಿ ಲಸಿಕೆಯನ್ನು ಸಾಧಿಸಿದ ಮೈಲಿಗಲ್ಲನ್ನು ಆಚರಿಸಿತು. ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡ ಅವರ ಜನ್ಮದಿನದಂದು ಸಮುದಾಯವು ಶ್ರದ್ಧಾಂಜಲಿ ಸಲ್ಲಿಸಿತು ಮತ್ತು ಕನಕದಾಸ ಜಯಂತಿಯಂದು ಹೆಸರಾಂತ ಕವಿ ಮತ್ತು ಸಂಗೀತಗಾರ ಕನಕದಾಸರನ್ನು ಕುರಿತು ಮಾತಾಡಲಾಯಿತು.

ಇಂದು, ವೇದಿಕೆಯು 10 ಭಾಷೆಗಳಲ್ಲಿ ಲಭ್ಯವಿದೆ – ಹಿಂದಿ, ಮರಾಠಿ, ಕನ್ನಡ, ತೆಲುಗು, ಬೆಂಗಾಲಿ, ತಮಿಳು, ಅಸ್ಸಾಮಿ, ಗುಜರಾತಿ, ಪಂಜಾಬಿ ಮತ್ತು ಇಂಗ್ಲಿಷ್. ಇದು ಇತ್ತೀಚೆಗೆ 20 ಮಿಲಿಯನ್ ಡೌನ್‌ಲೋಡ್‌ಗಳ ಮೈಲಿಗಲ್ಲನ್ನು ತಲುಪಿದೆ ಮತ್ತು ಮುಂದಿನ ವರ್ಷದಲ್ಲಿ 100 ಮಿಲಿಯನ್ ಡೌನ್‌ಲೋಡ್‌ಗಳ ಗುರಿಯನ್ನು ಹೊಂದಿದೆ.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.