
ಜಿಮೇಲ್‌ನಿಂದ ಮಾಹಿತಿ ಕದಿಯುತ್ತಾ ಬಾರ್ಡ್?
Team Udayavani, Mar 28, 2023, 8:00 AM IST

ವಾಷಿಂಗ್ಟನ್: ಮೈಕ್ರೋಸಾಫ್ಟ್ ನ ಚ್ಯಾಟ್‌ಜಿಪಿಟಿಗೆ ಪ್ರತಿಸ್ಪರ್ಧಿಯಾಗಿರುವ ಗೂಗಲ್‌ನ ಬಾರ್ಡ್ ಒಂದು ವಿಚಿತ್ರ ಉತ್ತರ ನೀಡಿ ಸ್ವತಃ ಗೂಗಲನ್ನು ತಬ್ಬಿಬ್ಬುಗೊಳಿಸಿದೆ. ಅದರ ಪರಿಣಾಮ ಬಾರ್ಡ್, ಜಿಮೇಲ್ ಮಾಹಿತಿಗಳನ್ನು ಕದಿಯುತ್ತಿದೆಯಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಹಾಗೆಲ್ಲ ಆಗುತ್ತಿಲ್ಲ ಗೂಗಲ್ ಸ್ಪಷ್ಟೀಕರಣವನ್ನೂ ನೀಡಿದೆ. ಇತ್ತೀಚೆಗೆ ಸಂಶೋಧಕರೊಬ್ಬರು, “ನೀನು ಎಲ್ಲಿಂದ ತರಬೇತಿ ಮಾಹಿತಿ ಪಡೆಯುತ್ತೀಯಾ?’ ಎಂದು ಬಾರ್ಡ್‌ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಾರ್ಡ್, ಜಿಮೇಲ್‌ನ ಆಂತರಿಕ ಮಾಹಿತಿ ಪಡೆಯುತ್ತಿರುವುದಾಗಿ ತಿಳಿಸಿದೆ!
ಇದರಿಂದ ಬಳಕೆದಾರರು ಹೌಹಾರಿದ್ದಾರೆ. ಜಿಮೇಲ್ ಕೂಡ ಗೂಗಲ್‌ನದ್ದೇ ಆಗಿರುವುದರಿಂದ ಮಾಹಿತಿ ಪಡೆಯುವುದು ಅಸಂಭವವೇನಲ್ಲ! ಇದರಿಂದೆಲ್ಲ ಚಿಂತಿತರಾದ ಬಳಕೆದಾರರಿಗೆ ಸಮಾಧಾನ ಮಾಡಿದ ಗೂಗಲ್, ನಾವು ಯಾರ ಖಾಸಗಿ ಮಾಹಿತಿಯನ್ನೂ ಪಡೆಯುತ್ತಿಲ್ಲ ಎಂದು ಹೇಳಿದೆ.
ಟಾಪ್ ನ್ಯೂಸ್
