ಟ್ವಿಟರ್ ಬಳಕೆದಾರರು ಗಮನಿಸಿ, ಸರಿಯಾದ ಮಾಹಿತಿ ಪಡೆಯುವುದು ಹೇಗೆ #ThinkBeforeYouShare


Team Udayavani, Apr 9, 2020, 3:48 PM IST

ಟ್ವಿಟರ್ ಬಳಕೆದಾರರು ಗಮನಿಸಿ, ಸರಿಯಾದ ಮಾಹಿತಿ ಪಡೆಯುವುದು ಹೇಗೆ #ThinkBeforeYouShare

ಕೋವಿಡ್-19 ವೈರಸ್ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ  ಅಗತ್ಯ ಮತ್ತು ಅನಗತ್ಯ ಮಾಹಿತಿಗಳು ಎಗ್ಗಿಲ್ಲದಂತೆ ಪ್ರಸಾರವಾಗುತ್ತಿವೆ. ಇದರಲ್ಲಿ ಸತ್ಯ ಯಾವುದು? ಸುಳ್ಳು ಯಾವುದು ಎಂಬ ಗೊಂದಲ ಸಾರ್ವಜನಿಕರಿಗೆ ಮೂಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಟ್ವಿಟರ್ ತನ್ನ ಬಳಕೆದಾರರಿಗೆ ಈ ಸಂದರ್ಭದಲ್ಲಿ ಕೆಲವು ಸಲಹೆಗಳನ್ನು ನೀಡಿದೆ. ಖಚಿತ ಮಾಹಿತಿ ಪಡೆಯಲು ಟ್ವಿಟರ್ ಬಳಕೆದಾರರು ಏನನ್ನು ಅನುಸರಿಸಬೇಕು ಎಂಬ ಮಾರ್ಗದರ್ಶನ ಮಾಡಿದೆ.

ಲಾಕ್‌ಡೌನ್ ಸಮಯದಲ್ಲಿ ನಾವೆಲ್ಲರೂ ದೂರದೂರವಾಗಿದ್ದರೂ  ಒಟ್ಟಾಗಿರುವುದಕ್ಕಾಗಿ ಟ್ವಿಟ್ಟರ್‌ನಲ್ಲಿ ವಿಶ್ವಾಸನೀಯ ಮಾಹಿತಿಯನ್ನು ಪಡೆಯುವುದಕ್ಕೆ ಕೆಲವು ಸಲಹೆಗಳನ್ನು ನೀಡಿದೆ. #ThinkBeforeYouShare    #FlattenTheCurve ಎಂಬ ಹ್ಯಾಶ್‌ಟ್ಯಾಗನ್ನು ಇದಕ್ಕಾಗಿ ನೀಡಿದೆ.

*ವಿಶ್ವಾಸನೀಯ ಮೂಲಗಳನ್ನೇ ಅನುಸರಿಸಿ, ಮತ್ತು ವಿಶ್ವಾಸನೀಯ ಮೂಲಗಳಿಂದ ಕೋವಿಡ್-19 ಸೋಂಕು ಕುರಿತ ಮಾಹಿತಿ ಪಡೆಯಿರಿ. COVID-19 search prompt ಅನ್ನೇ ಉಪಯೋಗಿಸಿ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ @MoHFW,  @WHO @PMO ದಂತಹ ಅಧಿಕೃತ ಖಾತೆಗಳಿಗೆ ಸೂಚನೆಗಳನ್ನು (ನೋಟಿಫಿಕೇಶನ್‌) ಆನ್ ಮಾಡಿ.

*ಪರಿಶೀಲಿತ ಮೂಲಗಳಿಂದ ಕೋವಿಡ್-19 ಕುರಿತಾದ ಇತ್ತೀಚಿನ ವಾಸ್ತವಾಂಶಗಳಿಗಾಗಿ dedicated bilingual events page ನೋಡಿ. ಭಾರತೀಯರು ತಮ್ಮ ದೇಶದ ಕಾಲಮಾನದ ಮೇಲ್ಭಾಗದಲ್ಲಿ ಈ ಪುಟವನ್ನು ನೋಡಬಹುದು. ಈ ಕಾಲಮಾನವು ಇತ್ತೀಚಿನ ಸಾಮಾಜಿಕ ಅಂತರ ಮತ್ತು ಆರೋಗ್ಯ ಶುಶ್ರೂಷಾ ಮಾಹಿತಿಗಳ ಸುತ್ತ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಲು ಜನರಿಗೆ ನೆರವಾಗುತ್ತದೆ.

*ದೊಡ್ಡ ಸಂವಾದಗಳ ಗುಂಪನ್ನು ಸೇರಿಕೊಳ್ಳಲು, ನಿಮ್ಮ ಟ್ವೀಟ್‌ಗಳಲ್ಲಿ ಅದಕ್ಕೆ ಸಂಬಂಧಪಟ್ಟ ಹ್ಯಾಶ್‌ಟ್ಯಾಗ್ ಉಪಯೋಗಿಸಿ. ಉದಾಹರಣೆಗೆ, ವೈರಾಣುವನ್ನು ನಿಗ್ರಹಿಸಲು ಭಾರತದ ಪ್ರಯತ್ನಗಳು ಮತ್ತು ಕಾರ್ಯಾಚರಣೆಗಳ ಕುರಿತಾದ ಟ್ವೀಟ್‌ಗಳನ್ನು ಅನುಸರಿಸಲು #IndiaFightsCorona ಸೂಕ್ತವಾದ ಹ್ಯಾಶ್‌ಟ್ಯಾಗ್ ಆಗಿದೆ.

*ಬಹಳ ಜವಾಬ್ದಾರಿಯುತವಾಗಿ ಟ್ವೀಟ್ ಮರುಟ್ವೀಟ್ ಮಾಡಿ ಮತ್ತು ತೊಡಗಿಕೊಳ್ಳಿ. ನಿಮ್ಮ ಮಾಹಿತಿಯ ಮೂಲವು ವಿಶ್ವಾಸನೀಯವಾಗಿರುವುದನ್ನು ಖಾತರಿಪಡಿಸಿಕೊಳ್ಳಿ. ಅಧಿಕೃತ ಮೂಲದಿಂದ ಬಂದಿರುವುದು ಅಥವಾ ಪರಿಶೀಲಿಸಲ್ಪಟ್ಟಿರುವುದನ್ನು ಹೊರತುಪಡಿಸಿ ಇತರ ಅಪರಿಶೀಲಿತ ಸಂದೇಶಗಳು ಅಥವಾ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳಬೇಡಿ. ತಪ್ಪು ಮಾಹಿತಿ ಸಂಗ್ರಹಿಸಬೇಡಿ ಅಥವಾ ಕಳುಹಿಸಬೇಡಿ. #ThinkBeforeYouShare

*ಜಾಗತಿಕ, ರಾಷ್ಟ್ರೀಯ ಹಾಗು ಪ್ರಾದೇಶಿಕ ಸಂದರ್ಭದಲ್ಲಿ, ಕೋವಿಡ್-19 ಸುತ್ತಲಿರುವ ಇತ್ತೀಚಿನ ಮಾಹಿತಿ ಮತ್ತು ಸುದ್ದಿಗಳನ್ನು ತಿಳಿದುಕೊಂಡಿರಲು ವಿಶ್ವಾಸನೀಯ ದಿನ ಪತ್ರಿಕೆಗಳ ಖಾತೆಗಳನ್ನು ಅನುಸರಿಸಿ.

* ಒಂದು ಟ್ವೀಟ್ ಕೋವಿಡ್-19 ಕುರಿತು ಗಾಳಿಸುದ್ದಿ ಹರಡುತ್ತಿದೆ ಅಥವಾ ಮೂಢನಂಬಿಕೆ ಬೆಳೆಸುತ್ತಿದೆ ಎಂದು ನಿಮಗನಿಸಿದರೆ, ಅಥವಾ ಟ್ವಿಟರ್ ನಿಯಮಗಳನ್ನು ಉಲ್ಲಂಸುತ್ತಿದೆ ಎನಿಸಿದರೆ ದಯವಿಟ್ಟು ಅದನ್ನು ವರದಿ ಮಾಡಿ. ಟ್ವಿಟ್ಟರ್ ಉದ್ಯೋಗಿಗಳು ಅಥವಾ ಟ್ವಿಟ್ಟರ್ ಸಂಸ್ಥೆಯ ಖಾತೆಗಳಿಗೆ ಟ್ಯಾಗ್ ಮಾಡಿ. ಒಂದು ಟ್ವೀಟ್‌ಅನ್ನು ವರದಿ ಮಾಡಲು,  ಟ್ವೀಟ್‌ನ ಮೇಲ್ಭಾಗದಲ್ಲಿರುವ ಡ್ರಾಪ್‌ ಡೌನ್ ಮೆನು ಮೇಲೆ ಕ್ಲಿಕ್ ಮಾಡಿ. ಹೆಚ್ಚಿನ ಮಾಹಿತಿಗೆ ಕ್ಲಿಕ್‌ ಮಾಡಿ. https://blog.twitter.com/en_in/topics/events/2019/Twitter-rules-reporting.html

*ಇಚ್ಛೆಯಿಲ್ಲದ ಖಾತೆಗಳನ್ನು ಅನುಸರಿಸಬೇಡಿ. ಅಂಥ ಖಾತೆಗಳು ನಿಮ್ಮನ್ನು ಅನುಸರಿಸುವುದನ್ನು ಬ್ಲಾಕ್ ಮಾಡಿ. ತಪ್ಪು ಮಾಹಿತಿ ಹರಡದಂತೆ ಎಚ್ಚರ ವಹಿಸಿ. ನಿಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಮಾತುಕತೆ ನಡೆಸಿ. ನಿಮ್ಮ ಮಾನಸಿಕ ಆರೋಗ್ಯವನ್ನು ಸಂರಕ್ಷಿಸಿಕೊಳ್ಳಿ.

*ನಿಮ್ಮ ಆಸಕ್ತಿಯನ್ನು ಗಮನಿಸಿ. ನೀವು ಅನುಸರಿಸಲು ಬಯಸುವ ಖಾತೆಗಳ ಪಟ್ಟಿ ಮಾಡಿ. ಪಟ್ಟಿಯ ಸಮಯಸೂಚಿ ನೋಡುವುದರಿಂದ ನೀವು ಕೇವಲ ಆ ಪಟ್ಟಿಯಲ್ಲಿರುವ ಖಾತೆಗಳಿಗೆ ಮಾತ್ರ ಟ್ವೀಟ್ ಮಾಡಲು ವ್ಯವಸ್ಥಿತವಾಗುತ್ತೀರಿ. ನಿಮ್ಮ ಸಮಯಸೂಚಿಗೆ ಪಟ್ಟಿಯನ್ನು ಪಿನ್ ಮಾಡುವುದರಿಂದ ನಿಮ್ಮ ಸರಿಸಮಾನ ಆಸಕ್ತರು ಅದನ್ನು ನೋಡಬಹುದು. ಹೆಚ್ಚಿನ ಮಾಹಿತಿಗಾಗಿ https://help.twitter.com/en/using-twitter/twitter-lists

*ನೇರ ಸಂದೇಶಗಳನ್ನು ನೀವು ನಿಷ್ಕ್ರಿಯಗೊಳಿಸಬಹುದು. ನಿಮ್ಮ ನೋಟಿಫಿಕೇಶನ್‌ಗಳನ್ನು ಫಿಲ್ಟರ್ ಮಾಡಬಹುದು. ಇವುಗಳು ಹಾಗು ಇತರ ಸುರಕ್ಷತಾ ಅಂಶಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ: https://help.twitter.com/en/safety-and-security/control-your-twitter-experience

 

ಕೆ.ಎಸ್. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewe

Nothing ಫೋನ್ (2ಎ), ನಥಿಂಗ್ಸ್ ಬಡ್ಸ್ ಮತ್ತು ನೆಕ್‌ಬ್ಯಾಂಡ್ ಪ್ರೋ ಬಿಡುಗಡೆ

1-wqeqwe

Flipkart ನಿಂದ ಯುಪಿಐ ಹ್ಯಾಂಡಲ್ ಆರಂಭ

1-weqweqweqwe

Boult Z40 Ultra TWS ಬಿಡುಗಡೆ: ಅತ್ಯುತ್ತಮ ಗುಣಮಟ್ಟದ ಸೌಂಡ್

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

18

ಅಧಿಕ ಹೃದಯ ಬಡಿತದ ಸೂಚನೆ ನೀಡಿದ ಆಪಲ್ ವಾಚ್: ಅಪಾಯದಿಂದ ಪಾರಾದ ಬೆಂಗಳೂರಿನ ಟೆಕಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.