ಪಂಜಾಬ್ ಫುಡ್ ಸ್ಪೆಷಲ್ : ಸಾಹಸವಂತರ ನಾಡಿನ ಆಹಾರ ಪದ್ಧತಿಯೂ ಹೃದಯಂಗಮ


Team Udayavani, Sep 12, 2020, 5:01 PM IST

Food-Punjab

ಧೈರ್ಯ, ಸಾಹಸ, ಕಷ್ಟ ದುಡಿಮೆಗೆ ಹೆಸರಾದ ಸಿಕ್ಖ್ ಜನಾಂಗದ ನಾಡಿದು, ಕೃಷಿ ಇವರ ಮುಖ್ಯ ಕಾಯಕ. ಇದಕ್ಕೆ ಕಾರಣಗಳೂ ಇವೆ. ಅನೇಕ ನದಿಗಳು ಈ ರಾಜ್ಯದಲ್ಲಿ ಹರಿಯುತ್ತವೆ, ಮಣ್ಣು ಫ‌ಲವತ್ತಾಗಿದೆ. ಈ ರಾಜ್ಯ ಭಾರತದ ವಾಯುವ್ಯ ದಿಕ್ಕಿನಲ್ಲಿ. ಈ ಪ್ರಾಂತ್ಯದ ಜನರು ಸ್ನೇಹಪರ, ಉತ್ಸಾಹಿ ಮತ್ತು ಉದ್ಯಮಶೀಲರು. ದುಡಿದ ಹಣವನ್ನು ಮುಂದಿನ ದಿನಗಳ ಯೋಚನೆ ಇಲ್ಲದೆ ಖರ್ಚು ಮಾಡುವವರು ಈ ಪ್ರಾಂತ್ಯದವರು.

ಗುರು ಗ್ರಂಥ ಸಾಹಿಬ್‌ ಇವರಿಗೆ ಭಗವದ್ಗೀತೆಯಂತೆ, ಧರ್ಮವನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ. ಅಚ್ಚುಮೆಚ್ಚಿನ ನೃತ್ಯ ಭಾಂಗ್ರಾ ಇಂದು ವಿಶ್ವವಿಖ್ಯಾತ. ಪಂಜಾಬಿ ಆಡುಭಾಷೆ, ಹರ್ಮಂರ್ದಿ ಸಾಹೇಬ್‌ ಇದು ಗೋಲ್ಡನ್‌ ಟೆಂಪಲ್’ ಎಂದು ಪ್ರಸಿದ್ಧ ಭಾಕ್ರಾನಂಗಲ್‌ ಅಣೆಕಟ್ಟು ಬತಿಂಡ ಕೋಟೆ, ಪಾಟಿಯಾಲ ಅರಮನೆ, ಶಾಲಿಮಾರ್‌ ತೋಟ ಮತ್ತು ವಾಗ್‌ ಗಡಿ ಪ್ರದೇಶ ಇವುಗಳು ಪ್ರವಾಸಿ ತಾಣಗಳು. ವಾಗ್‌ ಗಡಿ ಭಾರತ ಮತ್ತು ಪಾಕಿಸ್ತಾನವನ್ನು ಬೇರ್ಪಡಿಸುತ್ತದೆ. ‘ಚೇಂಜ್‌ ಆಫ್ ಗಾರ್ಡ್‌ ವಾಗ್‌ ಗಡಿಯಲ್ಲಿ ನೋಡಲೇಬೇಕಾದ ದೃಶ್ಯ, ಪಂಜಾಬಿನ ಪಠಾಣಕೋಟಿನಿಂದ ಜಮ್ಮು ಮತ್ತು ಕಾಶ್ಮೀರ್‌ಗಳಿಗೆ ಹೋಗಬಹುದು.

ಈ ರಾಜ್ಯದಲ್ಲಿ ಚಳಿಗಾಲದಲ್ಲಿ ಅತಿಯಾದ ಶೀತ ಇರುವುದರಿಂದ ಅಕ್ಟೋಬರಿನಿಂದ ಮಾರ್ಚ್‌ ವರೆಗೆ ಪ್ರವಾಸ ಮಾಡಲು ಅತ್ಯುತ್ತಮ ತಿಂಗಳುಗಳು. ವೈಶಾಖದ ತಿಂಗಳುಗಳಲ್ಲಿ ಅತಿಯಾದ ಸೆಕೆ ಇರುವುದರಿಂದ ಪ್ರವಾಸ ಮಾಡುವುದು ಉಚಿತವಲ್ಲ.

ಚನ
ಬೇಕಾಗುವ ಸಾಮಗ್ರಿ:
ಬಿಳಿ ಕಡಲೆ ಒಂದು ಕಪ್, ಈರುಳ್ಳಿ ಎರಡು (ದೊಡ್ಡ ಗಾತ್ರದ), ಟೊಮೆಟೊ ಐದು, ಈ ಒಂದು ಇಂಚು ತುಂಡು, ಜೀರಿಗೆ ಒಂದು ಟೀ ಚಮಚ, ಗರಂ ಮಸಾಲ ಪುಡಿ ಅರ್ಧ ಟೀ ಚಮಚ, ಮೆಣಸಿನ ಪುಡಿ ಒಂದು ಟೀ ಚಮಚ, ಹುಣಸೆ ಹಣ್ಣಿನ ರಸ ಒಂದು ಟೇಬಲ್‌ ಚಮಚ, ಸಕ್ಕರೆ ಅರ್ಧ ಟೀ ಚಮಚ, ಎಣ್ಣೆ ಒಂದು ಟೇಬಲ್‌ ಚಮಚ, ಕೊತ್ತಂಬರಿ ಸೊಪ್ಪು ಮೇಲೆ ಉದುರಿಸಲು ಬೇಕಾಗುವಷ್ಟು ಅರಸಿನ ಪುಡಿ ಅರ್ಧ ಚಮ ಉಪ್ಪು ರುಚಿಗೆ ತಕ್ಕಂತೆ.

ವಿಧಾನ: ಕಡಲೇ ಕಾಳನ್ನು ಆರು ಗಂಟೆಗಳ ಕಾಲ ನೆನೆಸಿ. ಬೇಯಿಸಿಕೊಳ್ಳಿ, ಶುಂಠಿ, ಅರ್ಧ ಈರುಳ್ಳಿ (ಹೆಚ್ಚಿದ ತುಂಡುಗಳು), ಜೀರಿಗೆಯನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದುಕೊಳ್ಳಿ, ಹುರಿದ ಸಾಮಾನನ್ನು ಅರಶಿನ ಪುಡಿ, ಎರಡು ಟೀ ಚಮಚ ಬೇಯಿಸಿದ ಕಡಲೆ ಯೊಂದಿಗೆ ರುಬ್ಬಬೇಕು. ಮಿಕ್ಕಿದ ಈರುಳ್ಳಿ (ಹೆಚ್ಚಿಟ್ಟ)ಯನ್ನು ಕೆಂಪಗಾಗುವಂತೆ ಹುರಿಯಬೇಕು. ಇದಕ್ಕೆ ಮೆಣಸಿನಪುಡಿ, ಗರಂ ಮಸಾಲ ಪುಡಿಯನ್ನು ಸೇರಿಸಿ ಒಂದು ನಿಮಿಷ ಹುರಿಯಬೇಕು. ಹುರಿದ ಮಿಶ್ರಣ ಕ್ಕೆ ರುಬ್ಬಿದ ಮಸಾಲೆ ಹಾಕಿ ಎರಡು ನಿಮಿಷಗಳ ಕಾಲ ಕೈಯಾಡಿಸಿ. ಈಗ ಹೆಚ್ಚಿದ ಟೊಮೆಟೊವನ್ನು ಹಾಕಿ ಹುರಿಯಿರಿ. ಟೊಮೆಟೊ ಬಿಂದು, ಮಸಾಲ ಮಿಶ್ರಣ ಘಮಘಮಿಸುವವರೆಗೆ ಹುರಿಯಬೇಕು. ಎಣ್ಣೆ ಮಸಾಲೆಯಿಂದ ಹೊರಬರುತ್ತದೆ. ಬೇಯಿಸಿದ ಕಡಲೆಯನ್ನು ಹುರಿದ ಮಿಶ್ರಣಕ್ಕೆ ಹಾಕಿ, ಕುದಿಸಬೇಕು. ಬೇಕಾದಲ್ಲಿ ನೀರನ್ನು ಹಾಕಿ ಚೆನ್ನಾಗಿ ಕುದಿಸಿ, ಕೊತ್ತಂಬರಿ ಸೊಪ್ಪನ್ನು ಬೇಕಾದ ಪ್ರಮಾಣದಲ್ಲಿ ಮೇಲಿನಿಂದ ಹಾಕಿ ಅಲಂಕರಿಸಿ.

ಸರಸೊಂಕಾ ಸಾಗ್‌
ಬೇಕಾಗುವ ಸಾಮಗ್ರಿ:
ಸಾಸಿವೆ ಸೊಪ್ಪು ಒಂದು ದೊಡ್ಡ ಕಟ್ಟು ಪಾಲಕ್‌ ಒಂದು ಚಿಕ್ಕ ಕೆಟ್ಟು ಮೆಣಸಿನಪುಡಿ ಒಂದು ಟೀ ಚಮಚ (ಹೆಚ್ಚು ಬಾರ ಬೇಕಾದಲ್ಲಿ ಅರ್ಧ ಟೀ ಚಮಚ ಹೆಚ್ಚು ಬೆರೆಸಬಹುದು), ಶುಂಠಿ ಒಂದು ಇಂಚು ತುಂಡು, ಈರುಳ್ಳಿ ಎರಡು ಚಿಕ್ಕ ಗಾತ್ರದ್ದು ಎಣ್ಣೆ ಅಥವಾ ತುಪ್ಪ ನಾಲ್ಕು ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಸೊಪ್ಪನ್ನು ಮತ್ತು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ, ಚೆನ್ನಾಗಿ ತೊಳೆದುಕೊಳ್ಳಿ. ತೊಳೆದ ಸೊಪ್ಪನ್ನು ಹೆಚ್ಚಿ ಶುಂಠಿ, ಉಪ್ಪು ಮತ್ತು ಮೆಣಸಿನ ಪುಡಿ ಯೊಂದಿಗೆ ಕುಕ್ಕರಿನಲ್ಲಿ ಬೇಯಿಸಿದ ಬೆಂದ ಸೊಪ್ಪನ್ನು ಕುಡುಗೋಲಿನಿಂದ ಕಡೆಯಿರಿ. ಈರುಳ್ಳಿ ಯನ್ನು ತುಪ್ಪ ಅಥವಾ ಎಣ್ಣೆಯಲ್ಲಿ ಹುರಿದು ಕಡದ ಸೊಪ್ಪಿನೊಂದಿಗೆ ಬೆರೆಸಿಕೊಳ್ಳಬೇಕು.

ಮಕಾಯಿ ಕಿ ರೋಟಿ
ಬೇಕಾಗುವ ಸಾಮಗ್ರಿ:
ಹಳದಿ ಜೋಳದ ಹಿಟ್ಟು ಎರಡು ಕಪ್‌, ಮೈದಾ ಕಾಲು ಕಪ್‌, ಎಣ್ಣೆ ಎರಡು ಟೀ ಚಮಚ, ಬಿಸಿ ನೀರು ನಾದಲು, ತುಪ್ಪ ಬೇಕಾದ ಪ್ರಮಾಣ, ಉಪ್ಪು ರುಚಿಗೆ ತಕ್ಕಂತೆ.

ವಿಧಾನ: ಜೋಳದ ಹಿಟ್ಟು, ಎಣ್ಣೆ, ಉಪ್ಪನ್ನು ಬಿಸಿನೀರಿನಿಂದ ಚಪಾತಿ ಹಿಟ್ಟಿನಂತೆ ಕಲಸಿ. ಚಿಕ್ಕ ಚಿಕ್ಕ ಪೂರಿಯಂತೆ ಲಟ್ಟಿಸಿ. ಲಟ್ಟಿಸುವಾಗ ಮೈದಾದಲ್ಲಿ ಅದ್ದಿಕೊಳ್ಳಿ. ಬಿಸಿ ಹಂಚಿನ ಮೇಲೆ ಎರಡೂ ಕಡೆ ಹೊಂಬಣ್ಣ ಬರುವವರೆಗೆ ಬೇಯಿಸಬೇಕು. ತುಪ್ಪ ಸವರಿ ಸರಸೊಂಕಾ ಸಾಗ್‌ನೊಂದಿಗೆ ಸವಿಯಲು ಕೊಡಿ.

ಬತೂರ
ಬೇಕಾದ ಸಾಮಗ್ರಿ:
ಮೈದಾ ಮೂರು ಕಪ್‌, ಅರ್ಧ ಟೀ ಚಮಚ ಮೊಸರು, ಮೂರು ಟೇಬಲ್‌ ಚಮಚ, ಬೆಣ್ಣೆ ಎರಡು ಟೀ ಚಮಚ, ಸಕ್ಕರೆ ಒಂದು ಟೀ ಚಮಚ ಎಣ್ಣೆ ಕರಿಯಲು, ಉಪ್ಪು ರುಚಿಗೆ ತಕ್ಕಂತೆ.

ವಿಧಾನ: ಯೀಸ್ಟ್‌ ಮತ್ತು ಸಕ್ಕರೆಯನ್ನು ಸ್ವಲ್ಪ ಉಗುರು ಬೆಚ್ಚನೆ ನೀರಿನಲ್ಲಿ ನೆನೆಸಿಡಿ (ಸಾಧಾರಣ ಹತ್ತು ನಿಮಿಷಗಳ ಕಾಲ), ಜರಡಿ ಬಿಸಿ ಎಣ್ಣೆಯಲ್ಲಿ ಕರಿಯಿರಿ. ಮಾಡಿದ ಮೈದಾಕ್ಕೆ ಯೀಸ್ಟ್‌ ಮಿಶ್ರಣ, ಉಪ್ಪು, ಮೊಸರು, ಬೆಣ್ಣೆಯನ್ನು ಸೇರಿಸಿ ಹಿಟ್ಟನ್ನು ಮೃದುವಾಗಿ ನಾದಿಕೊಳ್ಳಿ. ಬೇಕಾದಲ್ಲಿ ಸ್ವಲ್ಪ ನೀರನ್ನು ಉಪಯೋಗಿಸಬಹುದು. ನಾದಿದ ಹಿಟ್ಟನ್ನು ಶುದ್ಧವಾದ ಒದ್ದೆ ಬಟ್ಟೆಯಿಂದ ಗಂಟೆಗಳ ಕಾಲ ಮುಚ್ಚಿಡಿ. ಪುನಃ ಚೆನ್ನಾಗಿ ನಾದಿಕೊಳ್ಳಿ. ದೊಡ್ಡ ಪೂರಿ ಗಾತ್ರಕ್ಕೆ ಲಟ್ಟಿಸಿ, ಬಿಸಿ ಎಣ್ಣೆಯಲ್ಲಿ ಕರಿಯಿರಿ.

ಆಲೂ ಪರೋಟ
ಬೇಕಾಗುವ ಸಾಮಗ್ರಿ:
ಆಲೂಗಡ್ಡೆ ನಾಲ್ಕು ದೊಡ್ಡ ಗಾತ್ರದ್ದು ಗೋಧಿ ಹಿಟ್ಟು ಒಂದು ಕಪ್‌, ಮೈದಾ ಅರ್ಧ ಕಪ್‌, ಅರಸಿನ ಪುಡಿ ಅರ್ಧ ಟೀ ಚಮಚ, ಗರಂ ಮಸಾಲ ಪುಡಿ ಒಂದು ಟೀ ಚಮಚ, ಹಸಿ ಶುಂಠಿ ಒಂದು ಇಂಚು ತುಂಡು, ಕೊತ್ತಂಬರಿ ಸೊಪ್ಪು ಅರ್ಧ ಕಪ್‌ (ಹೆಚ್ಚಿದ ಸೊಪ್ಪು, ಹಸುರು ಮೆಣಸಿನಕಾಯಿ ನಾಲ್ಕು, ತುಪ್ಪ ಹುರಿಯಲು, ಉಪ್ಪು ರುಚಿಗೆ ತಕ್ಕಂತೆ.

ವಿಧಾನ: ಆಲೂಗಡ್ಡೆಯನ್ನು ತೊಳೆದು ಬೇಯಿಸಿ, ಸಿಪ್ಪೆ ಸುಲಿದು, ಹಿಸುಕು ಪುಡಿಮಾಡಿ ಇಡಿ. ಶುಂಠಿ ಮತ್ತು ಹಸಿರು ಮೆಣಸಿನಕಾಯಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಶುಂಠಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಆಲೂಗಡ್ಡೆ ಅರಸಿನ ಪುಡಿ, ಸ್ವಲ್ಪ ಉಪ್ಪು, ಗರಂ ಮಸಾಲ ಪುಡಿ ಇವುಗಳನ್ನು ಬೆರೆಸಿ, ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಬೇಕು. ಮೈದಾ ಮತ್ತು ಗೋಧಿ ಹಿಟ್ಟನ್ನು ಸ್ವಲ್ಪ ಉಪ್ಪಿನೊಂದಿಗೆ ಬೆರೆಸಿ, ನೀರಿನೊಂದಿಗೆ ಹಿಟ್ಟನ್ನು ಕಲಸಿ, ನಾದಿ ಕೊಳ್ಳಬೇಕು. ಚಪಾತಿ ಹಿಟ್ಟಿನಷ್ಟು ತೆಗೆದು, ಚಿಕ್ಕದಾಗಿ ಲಟ್ಟಿಸಿ. ಅದರ ಮಧ್ಯೆ ಆಲೂಗೆಡ್ಡೆಯ ಮಿಶ್ರಣವನ್ನು ಇಟ್ಟು ಎಲ್ಲಾ ಬದಿಯಿಂದ ಮುಚ್ಚಿ ಇದನ್ನು ಸ್ವಲ್ಪ ದಪ್ಪ ಲಟ್ಟಿಸಿ. ಕಾದ ಹಂಚಿನ ಮೇಲೆ ಬೇಯಿಸಿ, ಸ್ವಲ್ಪ ತುಪ್ಪವನ್ನು ಸವರಿ ಮಗುಚಿ, ಇನ್ನೊಂದು ಬದಿಯನ್ನು ಬೇಯಿಸಿ ಸ್ವಲ್ಪ ತುಪ್ಪವನ್ನು ಸವರಿ, ಗಟ್ಟಿ ಮೊಸರಿನೊಂದಿಗೆ ಸವಿಯಲು ಕೊಡಿ. (ಹೋಳಿಗೆ ಮಾಡಿದಂತೆ ಎನ್ನಬಹುದು)

ಬಟರ್‌ ಚಿಕನ್‌
ಬೇಕಾಗುವ ಸಾಮಗ್ರಿ:
ಕೋಳಿ ಒಂದು ಕೆ.ಜಿ., ಟೊಮೆಟೊ ಎರಡು, ಈರುಳ್ಳಿ ಎರಡು, ಹಸಿ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಒಂದು ದೊಡ್ಡ ಚಮಚ, ಗೇರುಬೀಜ 15, ಬೆ ಆರು ಟೀ ಚಮಚ, ಹಾಲಿನ ಕೆನೆ ಎರಡು ದೊಡ್ಡ ಚಮಚ, ಮೆಣಸಿನ ಪುಡಿ ಒಂದು ಟೀ ಚಮಚ, ಎಣ್ಣೆ ಒಂದು ಟೀ ಚಮಚ, ಕೊತ್ತಂಬರಿ ಸೊಪ್ಪು ಸಲ ತಂದೂರಿ ಮಸಾಲೆ ಒಂದು ಟೀ ಚಮಚ, ಗರಂ ಮಸಾಲ ಪುಡಿ ಒಂದು ಟೀ ಚಮಚ, ನಿಂಬೆಹಣ್ಣಿನ ರಸ ಎರಡು ಟೀ  ಚಮಚ, ಜೀರಿಗೆ ಪುಡಿ ಅರ್ಧ ಟೀ ಚಮಚ, ಮೊಸರು ನಾಲ್ಕು ದೊಡ್ಡ ಚಮಚ, ಉಪ್ಪು ರುಚಿಗೆ

ವಿಧಾನ: ಕೋಳಿಯನ್ನು ಮಧ್ಯಮ ಗಾತ್ರದ ತುಂಡುಗಳಾಗಿ ಮಾಡಿ, ತೊಳೆದು, ಹಿಂಡಿ ತೆಗೆಯಬೇಕು. ಅದನ್ನು ಮೇಲೆ ಹೇಳಿದ ಮಸಾಲೆಗಳೊಂದಿಗೆ ಬೆರೆಸಿ, ಒಂದು ಗಂಟೆ ಇಡಬೇಕು. ಆನಂತರ ಕೋಳಿಯ ತುಂಡುಗಳನ್ನು ತೆಗೆದು ಬಿಸಿ ಎಣ್ಣೆಯಲ್ಲಿ ಕರಿದು ತೆಗೆದಿಡಿ. ಟೊಮೇಟೋ ಚೂರುಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಆರುಳ್ಳಿಯನ್ನು ಹೆಚ್ಚಿಕೊಳ್ಳಬೇಕು. ಗೇರುಬೀಜವನ್ನು ನೆನೆಸಿ, ಬೇರೆ ರುಬ್ಬಿಕೊಳ್ಳಬೇಕು, ಹೆಚ್ಚಿದ ಈರುಳ್ಳಿಯನ್ನು ಬೆಣ್ಣೆಯಲ್ಲಿ ಹೊಂಬಣ್ಣಕ್ಕೆ ಬರುವವರೆಗೆ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ಶುಂಠಿ, ಬೆಳ್ಳುಳ್ಳಿ ಪೇಸ್ಟ್‌ ಸೇರಿಸಿ ಮಾಡಿಕೊಳ್ಳಬೇಕು. ರುಬ್ಬಿದ ಗೇರುಬೀಜ, ಮೆಣಸಿನಪುಡಿಯನ್ನು ಹಾಕಿ ಬೆರೆಸಿ, ಕೈಯಾಡಿಸಿ, ಟೊಮೇಟೋ ಪೇಸ್ಟು ಹಾಕಿ, ಹತ್ತು ನಿಮಿಷ ಸಣ್ಣ ಉರಿಯಲ್ಲಿ ಕೈಯಾಡಿಸಿ, ಈಗ ಮಿಕ್ಕಿದ ಬೆಣ್ಣೆ ಹಾಲಿನ ಕೆನೆ ಅಥವಾ ಫ್ರೆಶ್‌ ಕ್ರೀಮ್, ಕೋಳಿ ತುಂಡುಗಳನ್ನು ಹಾಕಿ ಬೇಯಿಸಿಕೊಳ್ಳಬೇಕು. ಬೆಂದ ಅನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಫ್ರೆಶ್‌ ಕ್ರೀಮ್‌ ಅಂಗಡಿ ಗಳಲ್ಲಿ ಲಭ್ಯವಿದೆ.

ಬೇಸನ್‌ ಕಿ ರೋಟಿ
ಬೇಕಾಗುವ ಸಾಮಗ್ರಿ:
ಕಡಲೆ ಹಿಟ್ಟು ಎರಡು ಕಪ್, ಗೋಧಿ ಹಿಟ್ಟು ಎರಡು ಕಪ್, ಎಣ್ಣೆ ಕಾಲು ಕಪ್, ಮೆಣಸಿನ ಪುಡಿ ಎರಡು ಟೀ ಚಮಚ, ಒಣಮೆಣಸಿನಕಾಯಿ ಐದು, ಕೊತ್ತಂಬರಿ ಸೊಪ್ಪು ಅರ್ಧ ಕಪ್‌, ಹಸುರು ಮೆಣಸಿನಕಾಯಿ ಮೂರು (ಸಣ್ಣಗೆ ಹೆಚ್ಚಿಕೊಳ್ಳಿ), ದಾಳಿಂಬೆ ಬೀಜ ನಾಲ್ಕು ಟೀ ಚಮಚ (ಪುಡಿ ಮಾಡಿ), ಜೀರಿಗೆ ಎರಡು ಟೀ ಚಮಚ (ಪುಡಿಮಾಡಿ). ಕೊತ್ತಂಬರಿ ಬೀಜ ಎರಡು ಟೀ ಚಮಚ (ಪುಡಿಮಾಡಿ), ಈರುಳ್ಳಿ ಒಂದು ಮಧ್ಯಮ ಗಾತ್ರ (ಸಣ್ಣಗೆ ಹೆಚ್ಚಿಕೊಳ್ಳಬೇಕು). ಎಣ್ಣೆ ಕರಿಯಲು, ನೀರು ಹಿಟ್ಟು ಕಲಸಲು, ಉಪ್ಪು ರುಚಿಗೆ ತಕ್ಕಂತೆ.

ವಿಧಾನ: ನೀರಿನ ಹೊರತು ಮತ್ತೆಲ್ಲ ಸಾಮಗ್ರಿಗಳನ್ನು ಬೆರೆಸಿ ಬೇಕಾದಷ್ಟು ನೀರು ಸೇರಿಸಿ ಮೃದುವಾದ ಹಿಟ್ಟಿನ ಹದಕ್ಕೆ ಕಲಸಿ, ನಾದಿದ, ಮುಚ್ಚಿಡಿ. 30 ನಿಮಿಷಗಳ ನಂತರ ಚಿಕ್ಕ ಚಿಕ್ಕ ಉಂಡೆ ಮಾಡಿ, ಚಪಾತಿಯಂತೆ ಲಟ್ಟಿಸಿಕೊಳ್ಳಿ. ಸ್ವಲ್ಪ ಎಣ್ಣೆಯನ್ನು ಬಳಸಿ, ಕಾದ ಹಂಚಿನ ಮೇಲೆ – ಎರಡೂ ಕಡೆ ಹೊಂಬಣ್ಣಕ್ಕೆ ಬೇಯಿಸಿ ತೆಗೆಯಿರಿ.

ಸಿಂಧಿ ಕಡಿ
ಬೇಕಾಗುವ ಸಾಮಗ್ರಿ:
ಉದ್ದಿನ ಬೆಳೆ ಒಂದು ಕಪ್‌, ಕಡಲೇಹಿಟ್ಟು ಒಂದು ದೊಡ್ಡ ಚಮಚ, ಹುಣಸೇ ಹಣ್ಣಿನ ನೀರು ಕಾಲು ಕಪ್‌, ಬೆಂಡೇಕಾಯಿ ಹತ್ತು ಮತ್ತು ಬದನೇಕಾಯಿ ಎರಡು ಚಿಕ್ಕ ಗಾತ್ರದ್ದು ಅಥವಾ ನುಗ್ಗೇಕಾಯಿ  ಎರಡು ಮತ್ತು ಒಂದು ಆಲೂಗಡ್ಡೆ, ಶುಂಠಿ ಚಿಕ್ಕ ತುಂಡು, ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಸ್ವಲ್ಪ, ಹಸುರು ಮೆಣಸಿನಕಾಯಿ ಮೂರು (ಸಣ್ಣಗೆ ಹೆಚ್ಚಿಕೊಳ್ಳಬೇಕು), ಜೀರಿಗೆ ಅರ್ಧ ಟೀ ಚಮಚ, ಅರಸಿನಪುಡಿ ಕಾಲು ಟೀ ಚಮಚ, ಮೊದರು ಎಣ್ಣೆ ಒಂದು ದೊಡ್ಡ ಚಮಚ.

ವಿಧಾನ: ಉದ್ದಿನಬೇಳೆ ತೊಳೆದು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ಎಣ್ಣೆ ಬಿಸಿಮಾಡಿ, ಹಸುರು ಮೆಣಸಿನಕಾಯಿ, ಜೀರಿಗೆ ಅರಸಿನಪುಡಿ, ಮತ್ತು ಶುಂಠಿ ಹಾಕಿ ಕೈಯಾಡಿಸಿ, ಮಸಾಲೆಯನ್ನು ಹೆಚ್ಚಿದ ಬೆಂಡೇಕಾಯಿ ಮತ್ತು ಬದನೇಕಾಯಿಯನ್ನು ಹಾಕಿ. ಕಡಲೇ ಹಿಟ್ಟಿಗೆ ಅರ್ಧ ನೀರು ಮತ್ತು ಅರ್ಧ ಮೊಸರು ಸೇರಿಸಿ. ತರಕಾರಿ ಬೇಯುವವರೆಗೆ ಕುದಿಸಿಕೊಳ್ಳಿ. ಹುಣಸೇ ರಸವನ್ನು ಹಾಕಿ ಎರಡು ನಿಮಿಷಗಳ ಕಾಲ ಕುದಿಸಿ, ಸಣ್ಣಗೆ ಹೆಚ್ಚಿದ ಪುದೀನಾ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಉದುರಿಸಿ ಬಡಿಸಿ.

ಪನ್ನೀರ್‌ ಕಿ ಖೀರ್‌
ಬೇಕಾಗುವ ಸಾಮಗ್ರಿ:
ಹಾಲು ಒಂದು ಲೀಟರ್‌, ಮೊಸರು ಒಂದು ದೊಡ್ಡ ಚಮಚ (ಅಥವಾ ಅರ್ಧ ಕಿಲೋ ಪನೀರು) ಏಲಕ್ಕಿಪುಡಿ ಅರ್ಧ ಟೀ ಚಮಚ, ಸಕ್ಕರೆರುಚಿಗೆ.

ವಿಧಾನ: ಅರ್ಧ ಲೀ ಹಾಲನ್ನು ಕಾಯಿಸಿ ಮೊಸರಿನೊಂದಿಗೆ ಬೆರೆಸಿ ಚೆನ್ನಾಗಿ ಕದೆಇ. ಹತ್ತು ನಿಮಿಷದ ಅನಂತರ ಅದನ್ನು ಸೋಸಬೇಕು. ಇದು ಪನೀರು ಮಿಕ್ಕಿದ ಹಾಲನ್ನು ಕುದಿಸಿ, ಅರ್ಧಕ್ಕೆ ಇಳಿಸಿ, ಸಕ್ಕರೆ ಸೇರಿಸಿ ಕುದಿಸಿ, ಪನೀರನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಹೆಚ್ಚಿ ಕುದಿಯುವ ಹಾಲಿಗೆ ಸೇರಿಸಿ. ಐದು ನಿಮಿಷಗಳವರೆಗೆ ಉದುರಿಸಿ ಸವಿಯಲು ಕೊಡಿ. ಬೇಕಿದ್ದರೆ ಹುರಿದ ಗೋಡಂಬಿ, ಪಿಸ್ತಾ ಸೇರಿಸಬಹುದು. (ಮಾರ್ಕೆಟ್‌ನಲ್ಲಿ ಸಿಗುವ ಪನೀರಿನಿಂದಲೂ ಈ ಸಿಹಿ ಖೀರನ್ನು ಮಾಡಬಹುದು.

ಮಟನ್‌ ದೋ ಪ್ಯಾಜ್‌
ಬೇಕಾಗುವ ಸಾಮಗ್ರಿ:
ಮಾಂಸ ಅರ್ಧ ಕೆ.ಜಿ, ಕುರುಳ್ಳಿ ನಾಲ್ಕು, ಬೆಳ್ಳುಳ್ಳಿ ಎಂಟು ಎಸಳು, ಒಣ ಮೆಣಸಿನಕಾಯಿ ನಾಲ್ಕು ಹಸಿ ಶುಂಠಿ ಎರಡು ಇಂಚು, ಬೇಕಾದಷ್ಟು ಎಣ್ಣೆ ಅರಸಿನ ಕಾಲು ಟೀ ಚಮಚ, ಲವಂಗ ಐದು, ಏಲಕ್ಕಿನಾಲ್ಕು, ಉಪ್ಪು ರುಚಿಗೆ.

ವಿಧಾನ:
ಮಾಂಸದ ತುಂಡುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ, ಅರಸಿನ ಮತ್ತು ಸ್ವಲ್ಪ ಉಪ್ಪು ಹಾಗೂ ನೀರಿನೊಂದಿಗೆ ಮಾಂಸದ ತುಂಡನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ಎರಡು ಈರುಳ್ಳಿ ಬೆಳ್ಳುಳ್ಳಿ, ಏಲಕ್ಕಿ, ಲವಂಗ, ಶುಂಠಿ, ಮೆಣಸಿನಕಾಯಿ ಅವುಗಳನ್ನು ರುಬ್ಬಿಕೊಳ್ಳಿ, ಮಿಕ್ಕಿದ ಈರುಳ್ಳಿಯನ್ನು ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಹುರಿದು ಕೊಳ್ಳಿ, ಹುರಿದು ಈರುಳ್ಳಿಗೆ ಬೇಯಿಸಿದ ಮಾಂಸ, ರುಬ್ಬಿದ ಮಸಾಲೆಯನ್ನು ಸೇರಿಸಿ, ಕೈಯಾಡಿಸಿ. ಬೇಕಾದಷ್ಟು ಉಪ್ಪನ್ನು ಬೆರೆಸಿ, ಸಾರನ್ನು ಬೇಕಾದ ಹದಕ್ಕೆ ಬರುವವರೆಗೂ ಕುದಿಸಿ ಕೊಳ್ಳಿ. ಬೇಕಾದ ಕೊತ್ತಂಬರಿ ಸೊಪ್ಪನ್ನು ಹೆಚ್ಚಿ ಹಾಕಿ, ಎರಡು ನಿಮಿಷ ಮುಚ್ಚಿಡಿ.

ಪಾಲಕ್‌ ಚಿಕನ್‌
ಬೇಕಾಗುವ ಸಾಮಗ್ರಿ:
ಕೋಳಿ ಚೂರುಗಳು ಮೆಣಸಿನ ಪುಡಿ ಅರ್ಧ ಟೀ ಚಮಚ, ಹಸುರು ಮೆಣಸಿನಕಾಯಿ ಮೂರು, ಅರಸಿನ ಪುಡಿ ಕಾಲು ಟೀ ಚಮಚ, ಧನಿಯಾ ಪುಡಿ (ಕೊತ್ತಂಬರಿ ಬೀಜದ ಪುಡಿ) ಒಂದು ಟೀ ಚಮಚ, ಜೀರಿಗೆ ಪುಡಿ ಒಂದು ಟೀ ಚಮಚ, ಗರಂ ಮಸಾಲ ಪುಡಿ ಅರ್ಧ ಟೀ ಚಮಚ, ಬೆಳ್ಳುಳ್ಳಿ ಹತ್ತು ಎಸಳು, ಹಸಿಶುಂಠಿ ಎರಡು ಇಂಚು ತುಂಡು, ಎಕ್ಕದ ಎರಡು ಟೇಬಲ್‌ ಚಮಚ, ನೀರು ಅರ್ಧ ಕಪ್, ಉಪ್ಪು ರುಚಿಗೆ.

ವಿಧಾನ:
ಕೋಳಿ ತುಂಡುಗಳನ್ನು ಚೆನ್ನಾಗಿ ಅರ್ಧ ಕೆ.ಜಿ., ಪಾಲಕ್‌ ಸೊಪ್ಪು ಮೂರು ಕಟ್ಟು ಈರುಳ್ಳಿ ಎರಡು, ಟೋಮೇಟೋ ಮೂರು, ತೊಳೆದುಕೊಳ್ಳಿ, ಪಾಲಕ್‌ ಸೊಪ್ಪನ್ನು ತೊಳೆದುಕೊಳ್ಳಿ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿಯನ್ನು ಹೊಂಬಣ್ಣ ಬರುವವರೆಗೆ ಹುರಿದುಕೊಳ್ಳಿ. ರುಬ್ಬಿದ ಮಸಾಲೆಯನ್ನು ಈರುಳ್ಳಿಗೆ ಬೆರೆಸಿ ಹುರಿದುಕೊಳ್ಳಬೇಕು. ಹುರಿದ ಮಸಾಲೆ ಮೆಣಸಿನ ಪುಡಿ, ದನಿಯಾ ಪುಡಿ, ಜೀರಿಗೆ ಪುಡಿ, ಅರಸಿನ ಪುಡಿ ಬೆರೆಸಿ ಕೈಯಾಡಿಸಿ. ಹೆಚ್ಚಿದ ಟೊಮೇಟೊವನ್ನು ಈರುಳ್ಳಿ ಮಿಶ್ರಣಕ್ಕೆ ಬೆರೆಸಿ, ಹತ್ತು ನಿಮಿಷ ಬೇಯಿಸಿ, ಕೋಳಿ ತುಂಡನ್ನು ಸೇರಿಸಿ ಬೇಯಿಸಿಕೊಳ್ಳಿ, ಉರಿ ಸಣ್ಣಕ್ಕೆ ಇರಲಿ. ರುಬ್ಬಿದ ಪಾಲಕನ್ನು ಬೇಕಾದ ಪ್ರಮಾಣಕ್ಕೆ ನೀರನ್ನು ಹಾಕಿ ಕುದಿಸಿ, ಗರಂಮಸಾಲೆಯನ್ನು ಸಿಂಪಡಿಸಿ, ನೀರು ಇಂಗಿ, ಪಾಲಕ್ ಮಿಶ್ರಣ ದಪ್ಪಕ್ಕೆ ಕೋಳಿ ತುಂಡುಗಳು ಸೇರಿ, ಎಣ್ಣೆ ಬೇರೆಯಾದ ಅನಂತರ ತೆಗೆದಿಡಿ.

ಆಲೂ ಟಿಕ್ಕಿ
ಬೇಕಾಗುವ ಸಾಮಗ್ರಿ:
ಆಳುಗಳ ನಾಲ್ಕು ಕಡಲೆ ಬೀಜ ಒಂದು ದೊಡ್ಡ ಚಮಚ, ಈರುಳ್ಳಿ ಒಂದು ಹಸಿರು ಮೆಣಸಿನಕಾಯಿ ಐದು, ಎಣ್ಣೆ ಹುರಿಯಲು, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಈರುಳ್ಳಿಯನ್ನು ಹಸಿರು ಮೆಣಸಿನಕಾಯಿಗಳನ್ನು ಹೆಚ್ಚಿಕೊಳ್ಳಬೇಕು. ಆಲೂಗಡ್ಡೆ ತೊಳೆದು ಬೇಯಿಸಿ, ಸಿಪ್ಪೆಯನ್ನು ಸುಲಿದು, ಜಜ್ಜಿಕೊಳ್ಳಬೇಕು. ಕಡಲೇ ಬೀಜ ಹುರಿದು, ಸಿಪ್ಪೆ ತೆಗೆದು ತರಿತರಿಯಾಗಿ ಪುಡಿ ಮಾಡಿಕೊಳ್ಳಬೇಕು. ಈರುಳ್ಳಿ ಚೂರು, ಹಸುರು ಮೆಣಸಿನಕಾಯಿ, ಉಪ್ಪು ಕಡ್ಲೆಬೀಜ ಪುಡಿ, ಆಲೂಗಡ್ಡೆ ಯೊಂದಿಗೆ ಬೆರೆಸಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ, ಬಿಸಿಯಾದ ಹಂಚಿನಲ್ಲಿ ಉಂಡೆಗಳನ್ನು ವಡೆಗಳಂತೆ ತಟ್ಟೆ ಎರಡೂ ಬದಿಗಳನ್ನು ಹೊಂಬಣ್ಣಕ್ಕೆ ಹುರಿದುಕೊಳ್ಳಬೇಕು. ಸಿಹಿ ಚಟ್ನಿ, ಮೊಸರು ಮತ್ತು ಪುದೀನಾ ಸೊಪ್ಪಿನ ಚಟ್ನಿಯೊಂದಿಗೆ ಸವಿಯಲು ಕೊಡಿ.

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ

ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ

ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ

ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ

ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ

ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ

ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು

ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು

ರುದ್ರಾಕ್ಷಿಗಳಲ್ಲಿ ಎಷ್ಟು ಪ್ರಬೇಧಗಳಿವೆ ಗೊತ್ತಾ? ಅವುಗಳನ್ನು ಧರಿಸಿದರೆ ಆಗುವ ಲಾಭಗಳೇನು?

ರುದ್ರಾಕ್ಷಿಗಳಲ್ಲಿರುವ ಪ್ರಬೇಧಗಳು ಮತ್ತು ಇವುಗಳ ಧಾರಣೆಯಿಂದ ಆಗುವ ಪ್ರಯೋಜನಗಳ Full Details

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.