ಪುರಾಣಗಳಲ್ಲಿ ಪುನರ್ಜನ್ಮದ ಉಲ್ಲೇಖ : ಅಭಿಮನ್ಯುವಿಗೆ ಗರ್ಭಾವಸ್ಥೆಯಲ್ಲೇ ಚಕ್ರವ್ಯೂಹದ ಪಾಠ!

ತರಂಗಾಂತರಂಗ: ವೇದೋಪನಿಷತ್ತುಗಳ ಪ್ರಕಾರ, ಆತ್ಮವು ಮನುಷ್ಯ ರೂಪಕ್ಕೆ ಬಂದು ಸೇರುವುದಕ್ಕೆ ಮಂಚೆ ವಿವಿಧ ರೂಪಗಳಲ್ಲಿ ಕಾಣಿಸಿಕೊಂಡಿರುತ್ತದೆ

Team Udayavani, Jul 28, 2020, 5:34 PM IST

ಪುರಾಣಗಳಲ್ಲಿ ಪುನರ್ಜನ್ಮದ ಉಲ್ಲೇಖ : ಅಭಿಮನ್ಯುವಿಗೆ ಗರ್ಭಾವಸ್ಥೆಯಲ್ಲೇ ಚಕ್ರವ್ಯೂಹದ ಪಾಠ!

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಜನ್ಮ ಜನ್ಮಾಂತರದ ಬಂಧ, ಋಣಾನುಬಂಧ, ಏಳೇಳು ಜನ್ಮಗಳ ಬಂಧ… ಇಂತಹ ಹಲವಾರು ಪದಬಳಕೆಗಳನ್ನು ಜನರ ಆಡುಮಾತಿನಲ್ಲಿ ನಾವು ಪ್ರತಿನಿತ್ಯವೆಂಬಂತೆ ಕೇಳುತ್ತಲೇ ಇರುತ್ತೇವೆ. ದೇಹ ಮಾತ್ರವೇ ನಶಿಸುತ್ತದೆ, ಆತ್ಮಕ್ಕೆ ಸಾವಿಲ್ಲ ಎಂಬ ನಂಬಿಕೆಯೂ ಇದೆ. ಪುನರ್ಜನ್ಮ ಎಂಬುದು ಸಾಮಾನ್ಯರಿಗೆ ಭಯಮಿಶ್ರಿತ ಕುತೂಹಲದ, ತತ್ವಜ್ಞಾನಿಗಳಿಗೆ ಶೋಧನೆಯ, ವಿಜ್ಞಾನಿಗಳಿಗೆ ಅನ್ವೇಷಣೆಯ ಮತ್ತು ನಾಸ್ತಿಕರಿಗೆ ‘ಹಾಗೇನಿಲ್ಲ ಬಿಡಿ’ ಎಂಬ ಕುತೂಹಲದ ವಿಷಯವಾಗಿದೆ. ಈ ಹಿನ್ನಲೆಯಲ್ಲಿ ಪುನರ್ಜನ್ಮ ವಿಷಯದ ಕುರಿತಾಗಿ ಒಂದಷ್ಟು ವಿಚಾರಗಳನ್ನು ನಿಮಗೆ ತಿಳಿಸಿಕೊಡುವ ಪ್ರಯತ್ನ ನಮ್ಮದು.

ಈ ಹಿಂದೆ ‘ತರಂಗ’ ವಾರಪತ್ರಿಕೆಯಲ್ಲಿ ಪ್ರಕಟಗೊಂಡು ಜನಮನ್ನಣೆ ಪಡೆದುಕೊಂಡಿದ್ದ ಈ ಲೇಖನದ ಯಥಾವತ್ ರೂಪ ಇದೀಗ ನಿಮ್ಮ ಮುಂದೆ…

– ಡಾ| ಎನ್‌. ಗೋಪಾಲಕೃಷ್ಣ

ಪುನರ್ಜನ್ಮದ ಬಗ್ಗೆ ಸಮಗ್ರ ಮತ್ತು ತರ್ಕಬದ್ಧ ವಿವರಣೆಗಳನ್ನೊಳಗೊಂಡ ಗ್ರಂಥಗಳೆಂದರೆ, ವೇದಗಳು.

ಐದು ಸಾವಿರ ವರ್ಷಗಳಿಂದಲೂ ವಿಶ್ವಮಾನ್ಯವಾಗಿರುವ ಭಗವದ್ಗೀತೆ ಇಂದಿಗೂ ಸಾರ್ವಕಾಲಿಕ ಆಕರ ಗ್ರಂಥವಾಗಿದೆ.

ಕುರುಕ್ಷೇತ್ರದ ರಣರಂಗದ ಮಧ್ಯದಲ್ಲಿ ಪರಮಾತ್ಮನಾದ ಶ್ರೀ ಕೃಷ್ಣನು ಅರ್ಜುನನಿಗೆ ಆತ್ಮದ ಅಮರತೆಯ ಬಗ್ಗೆ ತಿಳಿಸಿಕೊಡುತ್ತಾನೆ.

‘ನಾನಾಗಲಿ ನೀನಾಗಲಿ ಇಲ್ಲಿ ಯಾವಾಗಲೂ ಇದ್ದವರೆ, ಈ ರಾಜರಾದರೂ ಅಷ್ಟೇ. ಮುಂದೆಯೂ ಎಂದೆಂದಿಗೂ ನಾವೆಲ್ಲ ಇಲ್ಲದೆ ಇಲ್ಲ. ನಾಶವಾಗದಂಥ ಈ ಆತ್ಮವನ್ನು ಯಾರಿಂದಲೂ ನಾಶಮಾಡಲಾಗದು ಅರ್ಜುನ.’

‘ಒಬ್ಬನು ಇವನನ್ನು (ಆತ್ಮನನ್ನು) ಆಶ್ಚರ್ಯವನ್ನು ಕಂಡಂತೆ ನೋಡುತ್ತಾನೆ. ಇನ್ನೊಬ್ಬನನ್ನು ಆಶ್ಚರ್ಯವನ್ನು ಕುರಿತು ಹೇಳುವಂತೆ ಹೇಳುತ್ತಾನೆ. ಮತ್ತೊಬ್ಬನು ಆಶ್ಚರ್ಯವನ್ನು ಕೇಳಿಸಿಕೊಳ್ಳುವಂತೆ ಕೇಳುತ್ತಾನೆ. ಆದರೂ ಇವನ ವಿಷಯವನ್ನೂ ಕೇಳಿದರೂ ಅರ್ತಮಾಡಿಕೊಳ್ಳುವುದೇ ಇಲ್ಲ’ ಎಂಬುದೂ ಶ್ರೀಕೃಷ್ಣ ಉವಾಚವೇ ಆಗಿದೆ.

ಗೀತೆಯಲ್ಲಿ ಆತ್ಮನ ಬಗೆಗಿನ ವರ್ಣನೆ ಹೀಗಿದೆ- ಈ ವಿಶ್ವವವನ್ನು ಸೂರ್ಯದೇವನು ಯಾವ ರೀತಿ ಬೆಳಗುತ್ತಿರುವನೋ, ಅದೇ ರೀತಿ ಶರೀರದೊಳಗಿರುವ ಆತ್ಮನು ಶರೀರವನ್ನು ಪ್ರಜ್ಞಾಸ್ಥಿತಿಯಿಂದ ಬೆಳಗುತ್ತಿರುತ್ತಾನೆ.

ಮನುಷ್ಯ ತಾನು ಸಾಯುವ ಕಾಲದಲ್ಲಿ ಎಂಥ ಸ್ಥಿತಿಯನ್ನು ನೆನಪಿಸಿಕೊಳ್ಳುವನೋ ಅಂಥದೇ ಸ್ಥಿತಿಯಲ್ಲಿ ತನ್ನ ಮುಂದಿನ ಜನ್ಮದಲ್ಲಿ ಜನಿಸುತ್ತಾನೆ ಎಂದೂ ಭಗವದ್ಗೀತೆ ಹೇಳುತ್ತದೆ. ಭರತ ಮಹಾರಾಜನ ಕಥೆಯಿಂದ ಈ ಹೇಳಿಕೆಯನ್ನು ಪುಷ್ಟೀಕರಿಸುವವರಿದ್ದಾರೆ.

ವೇದೋಪನಿಷತ್ತುಗಳ ಪ್ರಕಾರ, ಆತ್ಮವು ಮನುಷ್ಯ ರೂಪಕ್ಕೆ ಬಂದು ಸೇರುವುದಕ್ಕೆ ಮಂಚೆ ವಿವಿಧ ರೂಪಗಳಲ್ಲಿ ಕಾಣಿಸಿಕೊಂಡಿರುತ್ತದೆ.

ಇದನ್ನೂ ಓದಿ: ತರಂಗಾಂತರಂಗ: ಪುನರ್ಜನ್ಮ- ಹುಟ್ಟು, ಸಾವು, ಮರುಹುಟ್ಟು ; ಇವುಗಳ ಗುಟ್ಟೇನು?

ಇದನ್ನೂ ಓದಿ: ‘ನನಗೆ ಸಾವಿರಾರು ಜನ್ಮಗಳಾಗಿವೆ ; ಅವೆಲ್ಲದರಲ್ಲೂ ತಂದೆ- ತಾಯಿಗಳಿದ್ದರು ಅದರಲ್ಲಿ ನಿವ್ಯಾರು?’

ಚಕ್ರವ್ಯೂಹ
ಮಹಾಭಾರತದಲ್ಲಿ ಅರ್ಜುನನ ಮಗ ಅಭಿಮನ್ಯು ತನ್ನ ತಾಯಿ ಸುಭದ್ರೆಯ ಗರ್ಭದಲ್ಲಿರುವಾಗಲೇ, ಚಕ್ರವ್ಯೂಹದೊಳಕ್ಕೆ ಪ್ರವೇಶಿಸಿ ಯುದ್ಧ ಮಾಡುವ ಕಲೆ ಕುರಿತ ವಿವರಣೆಯನ್ನು ಕೃಷ್ಣನಿಂದ ಕೇಳಿಸಿಕೊಂಡಿರುತ್ತಾನೆ. ಚಕ್ರವ್ಯೂಹ ಪ್ರವೇಶ ಹೇಗೆ ಎಂಬಲ್ಲಿಯವರೆಗೆ ಮಾತ್ರ ಕೇಳಿಸಿಕೊಂಡ ಸುಭದ್ರೆ ವ್ಯೂಹದಿಂದ ಹೊರಬರುವ ಕಲೆಯನ್ನು ಶ್ರೀಕೃಷ್ಣ ವಿವರಿಸುವಷ್ಟರಲ್ಲಿ ನಿದ್ರಿಸಿಬಿಡುತ್ತಾಳೆ. ಇದರಿಂದಾಗಿ ಮುಂದೆ ಯುದ್ಧರಂಗದಲ್ಲಿ ಅಭಿಮನ್ಯು ಚಕ್ರವ್ಯೂಹದಿಂದ ಹೊರಬರಲಾಗದೆ ಪ್ರಾಣ ತೆರುತ್ತಾನೆ. ಅಂದ ಮೇಲೆ ಮಗು ತಾಯಿಯ ಗರ್ಭದಲ್ಲಿದ್ದಾಗಲೇ ಅದರ ನೆನೆಪಿನ ಕೋಶ ಮಾಹಿತಿ ಸಂಗ್ರಹ ಮಾಡಿಕೊಳ್ಳುತ್ತದೆ.

ಹಿಂದಿನ ಜನ್ಮದ ನೆನೆಪುಗಳ ಜೊತೆಗೇ ಈ ಜನ್ಮದ ನೆನೆಪು, ಮಾಹಿತಿ, ವಿದ್ಯೆ, ಜ್ಞಾನ ಎಲ್ಲ ಸೇರುತ್ತಾ ಹೋಗುತ್ತವೆ. ಎಲ್ಲೋ ಕೆಲವರು ಮಾತ್ರ ಹಿಂದಿನ ಜನ್ಮದ ನೆನಪುಗಳನ್ನು ಹೊರತೆಗೆಯಬಲ್ಲರು. ಬಹಳ ಜನರಿಗೆ ಅದು ಸಾಧ್ಯವಾಗುವುದಿಲ್ಲ. ಚಕ್ರವ್ಯೂಹದ ಸಂದರ್ಭವನ್ನು ದಾರ್ಶನಿಕರು ಈ ರೀತಿಯಾಗಿಯೂ ವ್ಯಾಖ್ಯಾನಿಸುತ್ತಾರೆ. ಈ ವಿಶ್ವವೇ ಒಂದು ಚಕ್ರವ್ಯೂಹ. ಬಹಳ ಜನರಿಗೆ ಚಕ್ರವ್ಯೂಹದೊಳಗೆ ಹೋಗುವುದು ತಿಳಿದಿದ್ದರೂ ಅದರಿಂದ ಹೊರಗೆ ಬದಲು ಅಸಾಧ್ಯವಾಗುತ್ತದೆ.

ಇದನ್ನೂ ಓದಿ: ಮನದಲ್ಲಿದ್ದ ತೀವ್ರ ಬಯಕೆಯೇ ಜಿಂಕೆಯ ಜನ್ಮ ತಾಳಲು ಕಾರಣವಾದ ‘ಜಡ ಭರತ’ನ ರೋಚಕ ಕಥೆ!

ಶ್ರೀ ರಾಮಕೃಷ್ಣರು ತಿಳಿಸುವಂತೆ ವಿಶ್ವವೆಂಬ ನದಿಯ ತುಂಬ ಮೊಸಳೆಗಳಿರುತ್ತವೆ. ಅವುಗಳನ್ನು ದಾಟಿಕೊಂಡೇ ನಾವು ಹೋಗಬೇಕು. ಜೀವನ ದುಷ್ಟ ಶಕ್ತಿಗಳಾದ ಅಹಂ, ಕೋಪ, ಅಸೂಯೆಗಳಂಥ ಅನೇಕ ದುಷ್ಟಶಕ್ತಿಗಳಿಂದ ತುಂಬಿರುತ್ತದೆ. ಹೀಗಾಗಿ ಪ್ರತಿ ಹೆಜ್ಜೆಯಲ್ಲೂ ಆಮಿಷಗಳೂ ಇರುತ್ತವೆ. ಜಾಗರೂಕತೆಯಿಂದ ಇರಬೇಕಾಗುತ್ತದೆ.

(ಮುಂದುವರಿಯುತ್ತದೆ…)

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food-Punjab

ಪಂಜಾಬ್ ಫುಡ್ ಸ್ಪೆಷಲ್ : ಸಾಹಸವಂತರ ನಾಡಿನ ಆಹಾರ ಪದ್ಧತಿಯೂ ಹೃದಯಂಗಮ

ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ

ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ

ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ

ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ

ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ

ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ

ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು

ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.