

Team Udayavani, May 18, 2024, 7:10 AM IST
ಹೊಸದಿಲ್ಲಿ: ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ವಿಶ್ವದ ನಾಗರಿಕರಲ್ಲಿ ಮತ್ತೊಮ್ಮೆ ಕನಸುಗಳನ್ನು ಬಿತ್ತಿದ್ದಾರೆ. ಇನ್ನು ಕೇವಲ 30 ವರ್ಷಗಳಲ್ಲಿ ಮಂಗಳ ಗ್ರಹದಲ್ಲಿ ಜನರು ವಾಸಿಸಲಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದು ಕುತೂಹಲಕಾರಿ ಚರ್ಚೆಗಳನ್ನು ಹುಟ್ಟು ಹಾಕಿದೆ.
ನಾವು ಇನ್ನು ಕೆಲವೇ ವರ್ಷಗಳಲ್ಲಿ ಮಂಗಳನಲ್ಲಿ ಇಳಿಯಲಿದ್ದೇವೆ ಎಂದು ಮಾಡಿದ ಟ್ವೀಟೊಂದಕ್ಕೆ ಪ್ರತಿಕ್ರಿಯಿಸಿದ ಮಸ್ಕ್, “5 ವರ್ಷಗಳ ಒಳಗೆ ಮಾನವರಹಿತ ನೌಕೆ ಮಂಗಳನ ಮೇಲೆ ಇಳಿಯಲಿದೆ, 10 ವರ್ಷಗಳ ಒಳಗೆ ಅಲ್ಲಿಗೆ ಮನುಷ್ಯರು ಹೋಗುತ್ತಾರೆ. ಬಹುಶಃ 20 ವರ್ಷಗಳ ಒಳಗೆ ಅಲ್ಲಿ ನಗರ ನಿರ್ಮಾಣವಾಗುತ್ತದೆ, ಆದರೆ ಖಚಿತವಾಗಿ 30 ವರ್ಷಗಳ ಒಳಗೆ ನಾಗರಿಕತೆಯೇ ಅಲ್ಲಿರುತ್ತದೆ’ ಎಂದು ಹೇಳಿದ್ದಾರೆ.
ಬಾಹ್ಯಾಕಾಶದ ಬಗೆಗಿನ ಎಲಾನ್ ಮಸ್ಕ್ ಅವರ ಪ್ರೀತಿ ಹೊಸದಲ್ಲ. ಅವರ ಸ್ಪೇಸ್‌ಎಕ್ಸ್ ಸಂಸ್ಥೆಯಿಂದ ಅಂತರಿಕ್ಷಕ್ಕೆ ನೌಕೆ ಕಳುಹಿಸಲು ಹಲವಾರು ರಾಕೆಟ್‌ಗಳನ್ನು ಸಿದ್ಧಪಡಿಸಲಾಗಿದೆ.
ಅಷ್ಟು ಮಾತ್ರವಲ್ಲ, ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ 10 ಲಕ್ಷ ಜನರನ್ನು ಮಂಗಳ ಗ್ರಹಕ್ಕೆ ಕಳುಹಿಸಿಕೊಡುವ ತಮ್ಮ ಮಹತ್ವಾಕಾಂಕ್ಷೆಯ ಯೋಜನೆಯನ್ನು ಎಲಾನ್ ಮಸ್ಕ್ ಹಂಚಿಕೊಂಡಿದ್ದರು. ಕೊನೆಗೆ ಗಡುವು ಕೊಟ್ಟು ಸುಮ್ಮನಾದರು. ಈಗ ಅವರು ಮಂಗಳ ಗ್ರಹದಲ್ಲೇ ಮನುಷ್ಯ ವಾಸಿಸುವ ಕನಸನ್ನು ಹುಟ್ಟು ಹಾಕಿದ್ದಾರೆ.
ಮಸ್ಕ್ ಹೇಳಿದ್ದೇನು?
- 5 ವರ್ಷಗಳ ಒಳಗೆ ಮಂಗಳನ ಅಂಗಳದಲ್ಲಿ ಮಾನವರಹಿತ ನೌಕೆ ಇಳಿಯುತ್ತದೆ.
- 10 ವರ್ಷಗಳಲ್ಲಿ ಜನರು ಅಲ್ಲಿಗೆ ಹೋಗುತ್ತಾರೆ.
- ಬಹುಶಃ 20 ವರ್ಷಗಳ ಒಳಗೆ ನಗರ ನಿರ್ಮಾಣವಾಗುತ್ತದೆ.
-ಖಚಿತವಾಗಿ 30 ವರ್ಷಗಳ ಒಳಗೆ ನಾಗರಿಕತೆಯೇ ಅಲ್ಲಿರುತ್ತದೆ.
Ad
ಕಾರ್ಮಿಕ ಮುಷ್ಕರ; ದ.ಕ.,ಉಡುಪಿ ಜಿಲ್ಲೆಯಲ್ಲಿ ಸಹಜ ಸ್ಥಿತಿ
ಕ್ಯಾಂಟೀನ್ ಸಿಬ್ಬಂದಿಗೆ ಹಲ್ಲೆ: ಜನಪ್ರತಿನಿಧಿಗಳು ಹೊಡೆಯುವುದು ಸರಿಯಲ್ಲ: ಸಿಎಂ ಫಡ್ನವೀಸ್
Kasaragod: ಸಾರ್ವತ್ರಿಕ ಮುಷ್ಕರ: ಬಸ್ ಕೊರತೆ
ಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆ
Uppinangady; ವಾಹನ ಅಪಘಾತ ಪ್ರಕರಣ; ಗಾಯಗೊಂಡಿದ್ದ ವ್ಯಕ್ತಿ ಸಾವು
ಕಾರ್ಮಿಕ ಮುಷ್ಕರ; ದ.ಕ.,ಉಡುಪಿ ಜಿಲ್ಲೆಯಲ್ಲಿ ಸಹಜ ಸ್ಥಿತಿ
ಕ್ಯಾಂಟೀನ್ ಸಿಬ್ಬಂದಿಗೆ ಹಲ್ಲೆ: ಜನಪ್ರತಿನಿಧಿಗಳು ಹೊಡೆಯುವುದು ಸರಿಯಲ್ಲ: ಸಿಎಂ ಫಡ್ನವೀಸ್
Kasaragod: ಸಾರ್ವತ್ರಿಕ ಮುಷ್ಕರ: ಬಸ್ ಕೊರತೆ
ಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆ
Uppinangady; ವಾಹನ ಅಪಘಾತ ಪ್ರಕರಣ; ಗಾಯಗೊಂಡಿದ್ದ ವ್ಯಕ್ತಿ ಸಾವು
You seem to have an Ad Blocker on.
To continue reading, please turn it off or whitelist Udayavani.