
ಫೈನಲ್‌ಗೆ ನೆಗೆದ ಮುಂಬೈ ಇಂಡಿಯನ್ಸ್: ಐಸಿ ವೋಂಗ್ ಹ್ಯಾಟ್ರಿಕ್
ಯುಪಿಗೆ 72 ರನ್ ಸೋಲು: ರವಿವಾರ ಫೈನಲ್
Team Udayavani, Mar 25, 2023, 6:47 AM IST

ಮುಂಬಯಿ: ಎಲಿಮಿನೇಟರ್ ಪಂದ್ಯದಲ್ಲಿ ಯುಪಿ ವಾರಿಯರ್ ತಂಡವನ್ನು 72 ರನ್ನುಗಳಿಂದ ಬಗ್ಗುಬಡಿದ ಮುಂಬೈ ಇಂಡಿಯನ್ಸ್ ವನಿತಾ ಪ್ರೀಮಿಯರ್ ಲೀಗ್ ಫೈನಲ್‌ಗೆ ಲಗ್ಗೆ ಹಾಕಿದೆ. ರವಿವಾರದ ಪ್ರಶಸ್ತಿ ಕಾಳಗದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ಟಾಸ್ ಗೆದ್ದ ಯುಪಿ ಬ್ಯಾಟಿಂಗ್ ಬಿಟ್ಟುಕೊಟ್ಟು ಕೈ ಸುಟ್ಟುಕೊಂಡಿತು. ಮುಂಬೈ 4 ವಿಕೆಟಿಗೆ 182 ರನ್ ರಾಶಿ ಹಾಕಿತು. ಯುಪಿ 17.4 ಓವರ್‌ಗಳಲ್ಲಿ 110ಕ್ಕೆ ಕುಸಿಯಿತು.
ನಥಾಲಿ ಸ್ಕಿವರ್ ಬ್ರಂಟ್ ಅವರ ಪ್ರಚಂಡ ಆಟ, ಮಧ್ಯಮ ವೇಗಿ ಐಸಿ ವೋಂಗ್ ಅವರ ಹ್ಯಾಟ್ರಿಕ್ ಮುಂಬೈ ಗೆಲುವಿನ ಆಕರ್ಷಣೆಯನ್ನು ಹೆಚ್ಚಿಸಿತು. ವೋಂಗ್ ಸತತ ಎಸೆತಗಳಲ್ಲಿ ಕಿರಣ್ ನವಿಗಿರೆ, ಸಿಮ್ರಾನ್ ಶೇಖ್ ಹಾಗೂ ಸೋಫಿ ಎಕ್ಲ್‌ಸ್ಟೋನ್ ವಿಕೆಟ್ ಹಾರಿಸಿದರು. ಇದು ಈ ಕೂಟದ ಮೊದಲ ಹ್ಯಾಟ್ರಿಕ್ ಆಗಿದೆ.
6 ರನ್ ಆಗಿದ್ದಾಗ ಎಕ್ಲ್‌ಸ್ಟೋನ್ ಅವರಿಂದ ಜೀವದಾನ ಪಡೆದ ನಥಾಲಿ ಸ್ಕಿವರ್ ಬ್ರಂಟ್ ಇದರ ಭರಪೂರ ಲಾಭವೆತ್ತಿದರು. ವನ್‌ಡೌನ್‌ನಲ್ಲಿ ಬಂದು ಕೊನೆಯ ತನಕ ಬ್ಯಾಟಿಂಗ್ ವಿಸ್ತರಿಸಿ ಅಜೇಯ 72 ರನ್ ಬಾರಿಸಿದರು. ಇದು ಕೇವಲ 38 ಎಸೆತಗಳಿಂದ ಬಂತು. ಸಿಡಿಸಿದ್ದು 9 ಬೌಂಡರಿ, 2 ಸಿಕ್ಸರ್.
ಯಾಸ್ತಿಕಾ ಭಾಟಿಯಾ (21) ಮತ್ತು ಹ್ಯಾಲಿ ಮ್ಯಾಥ್ಯೂಸ್ (26) ಎಚ್ಚರಿಕೆಯ ಆರಂಭ ನೀಡಿದರು. ಆರಂಭಿಕ ವಿಕೆಟಿಗೆ 4.2 ಓವರ್‌ಗಳಿಂದ 31 ರನ್ ಒಟ್ಟುಗೂಡಿತು. ಅಂಜಲಿ ಸರ್ವಾಣಿ ಈ ಜೋಡಿಯನ್ನು ಬೇರ್ಪಡಿಸಿ ಯುಪಿಗೆ ಮೊದಲ ಯಶಸ್ಸು ತಂದಿತ್ತರು. ಹ್ಯಾಲಿ ಮ್ಯಾಥ್ಯೂಸ್ 10ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಯಶಸ್ಸು ಕಾಣಲಿಲ್ಲ. 14 ರನ್ ಮಾಡಿ ಎಕ್ಲ್‌ಸ್ಟೋನ್ ಎಸೆತದಲ್ಲಿ ಬೌಲ್ಡ್ ಆದರು.
ಬ್ರಂಟ್ ಅವರಿಗೆ ಮೆಲಿ ಕೆರ್ ಉತ್ತಮ ಬೆಂಬಲ ನೀಡಿದರು. 6.1 ಓವರ್‌ಗಳಲ್ಲಿ 60 ರನ್ ಒಟ್ಟುಗೂಡಿತು. ಕೆರ್ ಕೊಡುಗೆ 19 ಎಸೆತಗಳಿಂದ 29 ರನ್ (5 ಬೌಂಡರಿ). ಕೊನೆಯಲ್ಲಿ ಪೂಜಾ ವಸ್ತ್ರಾಕರ್ ನಾಲ್ಕೇ ಎಸೆತಗಳಿಂದ ಅಜೇಯ 11 ರನ್ ಬಾರಿಸಿದರು (1 ಬೌಂಡರಿ, 1 ಸಿಕ್ಸರ್).
ಆರಂಭಿಕ ಕುಸಿತ
ಬೃಹತ್ ಮೊತ್ತವನ್ನು ಬೆನ್ನಟ್ಟ ಲಾರಂಭಿಸಿದ ಯುಪಿ ಆರಂಭದಲ್ಲೇ ಕುಸಿತಕ್ಕೆ ಒಳಗಾಯಿತು. ಶ್ವೇತಾ ಸೆಹ್ರಾವತ್ (1), ನಾಯಕಿ ಅಲಿಸ್ಸಾ ಹೀಲಿ (11), ಟಹ್ಲಿಯಾ ಮೆಕ್‌ಗ್ರಾತ್ (7), ಗ್ರೇಸ್ ಹ್ಯಾರಿಸ್ (14) ಬೇಗನೇ ಪೆವಿಲಿಯನ್ ಸೇರಿಕೊಂಡರು. ಕಿರಣ್ ನವಿಗಿರೆ ಸ್ಫೋಟಕ ಆಟವಾಡಿದರೂ ಪ್ರಯೋ ಜನವಾಗಲಿಲ್ಲ. ಅವರು 27 ಎಸೆತ ಗಳಿಂದ 43 ರನ್ ಹೊಡೆದರು (4 ಬೌಂಡರಿ, 3 ಸಿಕ್ಸರ್). ಕೊನೆಯಲ್ಲಿ ವೋಂಗ್ ಹ್ಯಾಟ್ರಿಕ್ ಮ್ಯಾಜಿಕ್ ಮಾಡಿದರು.
ಸಂಕ್ಷಿಪ್ತ ಸ್ಕೋರ್: ಮುಂಬೈ ಇಂಡಿಯನ್ಸ್-4 ವಿಕೆಟಿಗೆ 182 (ಬ್ರಂಟ್ ಔಟಾಗದೆ 72, ಕೆರ್ 29, ಮ್ಯಾಥ್ಯೂಸ್ 26, ಯಾಸ್ತಿಕಾ 21, ಎಕ್ಲ್‌ಸ್ಟೋನ್ 39ಕ್ಕೆ 2). ಯುಪಿ ವಾರಿಯರ್-17.4 ಓವರ್‌ಗಳಲ್ಲಿ 110 (ನವಿಗಿರೆ 43, ದೀಪ್ತಿ 16, ವೋಂಗ್ 15ಕ್ಕೆ 4, ಸೈಕಾ 24ಕ್ಕೆ 2).
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thailand Open Badminton: ಸೆಮಿಫೈನಲ್ ಪ್ರವೇಶಿಸಿದ ಲಕ್ಷ್ಯ ಸೇನ್; ಕಿರಣ್ ಔಟ್

Wrestlers protest : 1983ರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ಬೆಂಬಲ

World Test Championship Final: ಐಪಿಎಲ್ ಆಟ ಟೆಸ್ಟ್ ನಲ್ಲೂ ಕಾಣುತ್ತಾ?

ಮಹಿಳಾ Asia Cup ಗೆ ಭಾರತ ಎ ತಂಡ ಪ್ರಕಟ: ಕರ್ನಾಟಕದ ಶ್ರೇಯಾಂಕಾ ಪಾಟೀಲ್ ಗೆ ಸ್ಥಾನ

Thailand Open Badminton: ಕಿರಣ್, ಸೇನ್ ಕ್ವಾರ್ಟರ್ ಫೈನಲಿಗೆ
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
