Shimoga: ಇನ್ಸ್ಟಾಗ್ರಾಂ ಗೆಳೆಯನ ಜತೆ ಹಸೆಮಣೆ ಏರಿ ಪರೀಕ್ಷೆ ಬರೆದಳು
Team Udayavani, Sep 10, 2023, 11:31 PM IST
ಶಿವಮೊಗ್ಗ: ಇನ್ಸ್ಟಾಗ್ರಾಂ ಗೆಳೆಯನ ಜತೆ ಮದುವೆಯಾಗಿ ಅದೇ ದಿನ ಅಂತಿಮ ಪದವಿ ಪರೀಕ್ಷೆ ಬರೆಯುವ ಮೂಲಕ ಶಿವಮೊಗ್ಗದ ಯುವತಿ ಗಮನ ಸೆಳೆದಳು.
2 ವರ್ಷಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಚೆನ್ನೈ ಮೂಲದ ಫ್ರಾನ್ಸಿಸ್ ಜತೆಗೆ ಸತ್ಯವತಿಗೆ ಪ್ರೇಮಾಂಕುರವಾಗಿದೆ. ಫ್ರಾನ್ಸಿಸ್ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಹಿಂದೂ ಧಾರ್ಮಿಕ ಪದ್ಧತಿಯಂತೆ ವಿವಾಹವಾಗಿದ್ದಾರೆ.