Hi Nanna: ಭಾವನಾತ್ಮಕ ಕಥಾಹಂದರದ ಚಿತ್ರ ಹಾಯ್‌ ನಾನ್ನ


Team Udayavani, Jan 15, 2024, 12:33 PM IST

7-hi-nana

ಸೌಂದರ್ಯ,ಹಣ, ಅಂತಸ್ತು ಕಾಲ ಕಳೆದೆಂತೆ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತವೆ. ಇಂದು ಒಬ್ಬರ ಬಳಿಯಿದ್ದ ಹಣ ನಾಳೆ ಇನ್ನೊಬ್ಬರ ಬಳಿ ಹೊಗುತ್ತದೆ. ಇದರಿಂದಾಗಿ ಅವರ ಸಾಮಾಜಿಕ ಅಂತಸ್ತು ಸಹ ಹೆಚ್ಚಾಗುತ್ತದೆ, ಅದೇ ರೀತಿ ವಯಸ್ಸು ಕಳೆದಂತೆ ದೇಹದ ಸೌಂದರ್ಯ ಕಡಿಮೆಯಾಗುತ್ತಾ ಸಾಗುತ್ತದೆ, ಅದರೆ ಇಬ್ಬರ ನಡುವಿನ ಪ್ರೀತಿಗೆ ಎಷ್ಟೇ ವಯಸ್ಸಾದರು, ಎಷ್ಟೇ ಕಷ್ಟಗಳು ಬಂದರೂ ಪ್ರೀತಿಯಿಂದ ಕೂಡಿರುವ ಕುಟುಂಬವನ್ನು ಬೇರೆ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ತೆಲುಗಿನ ಚಿತ್ರ ಹಾಯ್‌ ನಾನ್ನ ಸಮಾಜಕ್ಕೆ ನೀಡುತ್ತದೆ.

ಹಾಯ್‌ ನಾನ್ನ ಚಿತ್ರ ಗಂಡ- ಹೆಂಡತಿ,  ಮಗಳು, ಅತ್ತೆ -ಮಾವ, ಸ್ನೇಹಿತರೆಂಬ ಸಂಬಂಧಗಳ ಮಹತ್ವವನ್ನು ಪ್ರೇಕ್ಷಕರಿಗೆ ತಿಳಿಯಪಡಿಸುತ್ತದೆ.ತೆಲುಗಿನ ನಟ ನಾನಿ ಅವರು ತಂದೆಯ ಪಾತ್ರದಲ್ಲಿ , ಗಂಡನ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದಾರೆ.

ನಾನಿಯ ಅಭಿನಯದಲ್ಲಿ ಪ್ರಬುದ್ಧತೆಯನ್ನು ಕಾಣಬಹುದಾಗಿದೆ, ಚಿತ್ರ ಯಶಸ್ವಿಯಾಗುವುದಕ್ಕೆ ಬೇಕಾದ ಎಲ್ಲ ಅಂಶಗಳು ಚಿತ್ರದಲ್ಲಿದ್ದು, ನಾನಿ ಮತ್ತು ಮಗಳ ಪಾತ್ರದಲ್ಲಿ ನಟಿಸಿರುವ ಕಿಯಾರ ಕನ್ನಾ ಪ್ರೇಕ್ಷಕರರನ್ನು ಭಾವನಾತ್ಮಕವಾಗಿ ಸೆಳೆಯುವ ನೆಲೆಯಲ್ಲಿ ಅಮೋಘವಾಗಿ ಅಭಿನಯಿಸಿದ್ದಾರೆ.

ಚಿತ್ರದ ನಾಯಕಿ ಸೀತಾರಾಮನ್‌ ಖಾತ್ಯಿಯ ಮೃಣಾಲ್‌ ಟಾಕೂರ್‌  ತಮ್ಮ ಗ್ಲಾಮರಸ್‌ ಸೌಂದರ್ಯದ  ಜತೆಗೆ  ನಟನೆಯಲ್ಲು ಸಹ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮೃಣಾಲ್‌ ಟಾಕೂರ್‌ ನಗು ಅವರ ಪ್ಲಸ್‌ ಪಾಯಿಂಟ್‌ ಅಗಿದ್ದು , ದುಃಖ ಸನ್ನಿವೇಶದಲ್ಲಿ  ಅವರ ಚೆಲುವು ಇಮ್ಮಡಿಯಾಗಿತ್ತದೆ.

ಕೌಟುಂಬಿಕ ಪಾತ್ರಗಳಿಗೆ ಮೃನಾಲ್‌ ಟಾಕೂರ್‌ ಹೇಳಿ ಮಾಡಿಸಿದ ನಟಿಯಾಗಿದ್ದು, ಸೀರೆಯಲ್ಲೂ ಮತ್ತು ಮಾಡರ್ನ್ ಧಿರಿಸಿನಲ್ಲೂ ಸಹ ತಮ್ಮ ಸೌಂದರ್ಯವನ್ನು ಚೆಲ್ಲುತ್ತಾರೆ.ಹಿರಿಯ ಕಲಾವಿದರಾದ ಮಲಯಾಳಂ ಕಲಾವಿದ ಜಯರಾಂರ ಅಭಿನಯ ಸಹ ಜನರ ಮೆಚ್ಚುಗೆ ಪಡೆಯುವಲ್ಲಿ ಯಾವುದೇ ಸಂಶಯವಿಲ್ಲ.

ಹಾಯ್‌ ನಾನ್ನ ಚಿತ್ರದ ಸಂಗೀತ ಇಂಪಾಗಿದ್ದು, ಹೊಸತನದಿಂದ ಕೂಡಿದೆ, ಸಂಗೀತ ನಿರ್ದೇಶಕ ಖುಷಿ ಚಿತ್ರದ ಹೇಮೆಶ್‌  ಸಂಗೀತ ಚಿತ್ರದ ಯಶಸ್ಸಿಗೆ ಮತ್ತೂಂದು ಪ್ರಮುಖ ಅಂಶವೆಂದರೆ ತಪ್ಪಾ³ಗಲಾರದು. ಪ್ರೀತಿಸಿ ಮದುವೆಯಾದ ಜೋಡಿ ಸಣ್ಣ ಮನಸ್ತಾಪದಿಂದ ದೂರಾಗಿ, ಅಪಘಾತದಲ್ಲಿ ನೆನಪು ಕಳೆದುಕೊಳ್ಳುವ ನಾಯಕಿ  ಮತ್ತೂಮ್ಮೆ ಎರಡನೆ ಬಾರಿ ನಾಯಕನ ಕತೆ ಕೇಳಿ, ಮುಗ್ಧ ಮಗುವಿನ ಪ್ರೀತಿಗಾಗಿ ತನ್ನ ಗಂಡನ್ನನೇ ಪ್ರೀತಿಸುವ ಕಥೆ ಹೊಸದಾಗಿದೆ.

ಹಾಯ್‌ ನಾನ್ನ ಚಿತ್ರ ಹೊಸತನದಿಂದ ಕೂಡಿದ್ದು, ಸದಭಿರುಚಿಯ ಪ್ರೇಕ್ಷಕರರಿಗೆ ಮನೋರಂಜನೆ ನೀಡುವುದು ಖಾತ್ರಿ. ಭಾವನೆಗಳಿಗೆ ಭಾಷೆಯ ಹಂಗು ಇರುವುದಿಲ್ಲ. ಕೌಟುಂಬಿಕ ಚಿತ್ರವಾದ ಹಾಯ್‌ ನಾನಿ ಗಂಡ -ಹೆಂಡತಿ-  ಮಗುವಿನ ನಡುವೆಯಿರುವ ಭಾವನೆಗಳ ಕುರಿತಾದ ಚಿತ್ರವಾಗಿದ್ದು, ಇದನ್ನು ನೋಡುವ ಮೂಲಕ ಸಮಾಜದಲ್ಲಿನ ವಿವಾಹ ವಿಚ್ಛೇದನ ಮನಸ್ಸು ಮಾಡುವ ಇತ್ತೀಚಿನ ಜನಾಂಗಕ್ಕೆ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಅನ್ಯೂನ್ಯವಾಗಿದ್ದರೆ ಎಲ್ಲವೂ ಸಾಧ್ಯವೆಂಬ ಒಂದೊಳ್ಳೆ ಸಾಮಾಜಿಕ ಸಂದೇಶ ನೀಡುವ ಸಿನೆಮಾ ಇದಾಗಿದೆ.

-ರಾಸುಮ ಭಟ್‌

ವಿ.ವಿ., ಚಿಕ್ಕಮಗಳೂರು

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.