Dad’s Love and Affecttion: ಕಣ್ಮರೆಯಾದರು ಆಸರೆಯಾದ ಅಪ್ಪ


Team Udayavani, Jan 15, 2024, 12:38 PM IST

8-uv-fusion

ಅಪ್ಪನ ಮೌಲ್ಯ ತಿಳಿಯುವ ಮೊದಲೇ ಕಣ್ಮರೆಯಾಗಿದ್ದರು ನನ್ನ ಅಪ್ಪ. ತಂದೆಯ ಪ್ರೀತಿ ಹೇಗೆ ಇರಬಹುದು ಎಂಬುದರ ಕುರಿತು ಸರಿಯಾದ ತಿಳುವಳಿಕೆ ನನಗಿಲ್ಲ. ಆದರೆ  ಅವರ ಜತೆಗಿನ ಕೆಲವು ಸಂದರ್ಭಗಳು ಮಾತ್ರ ನೆನಪಿನಂಗಳದಲ್ಲಿ ಸದಾ ಜೀವಂತವಾಗಿವೆ.

ಅಪ್ಪ ಎಂದರೆ ಎಲ್ಲರಿಗೂ ಧೈರ್ಯ ಆಸರೆ ನೀಡುವ ವ್ಯಕ್ತಿತ್ವ. ನನ್ನ ಜೀವನದಲ್ಲಿ ಇದುವರೆಗೂ ಸದಾ ಆಸರೆಯಾದ ನನ್ನ ಅಪ್ಪ ದೈಹಿಕವಾಗಿ ನನ್ನ ಜತೆ ಇಲ್ಲದಿದ್ದರೂ ಸದಾ ಆಸರೆಯಾಗಿ ನನ್ನ ಜೀವನದಲ್ಲಿ ಇದ್ದಾರೆ ಎಂಬುದು ನನ್ನ ನಂಬಿಕೆ ಅದು ನಿಜ ಕೂಡ.

ನನ್ನ ತಂದೆ ತುಂಬಾ ದೂರ ಆಲೋಚನೆವುಳ್ಳ ಮನುಷ್ಯ ತಾನು ಒಂದು ವೇಳೆ ಇಲ್ಲದಿದ್ದರೂ ಕುಟುಂಬದವರಿಗೆ ತೊಂದರೆ ಆಗಬಾರದು ಎಂಬ ಯೋಚನೆ ಹೊಂದಿದ ವ್ಯಕ್ತಿತ್ವ ಅವರದು. ಇದುವರೆಗೂ ಅವರು ಹಾಕಿಕೊಟ್ಟ ಭದ್ರ ಬುನಾದಿಯಲ್ಲಿಯೇ ಬೆಳೆದು ಬಂದಿದ್ದು ಕಿಂಚಿತ್ತೂ ತೊಂದರೆ ಆಗದ ರೀತಿಯಲ್ಲಿ ನನ್ನ ಜೀವನ ರೂಪಿಸಿ ಕೊಟ್ಟಿದ್ದಾರೆ.

ಅವರು ಕಣ್ಮರೆಯಾಗಿ 17 ವರ್ಷಗಳಾದರೂ ಜನ ಅವರನ್ನು ಇನ್ನೂ ಮರೆಯಲಾಗದ ವ್ಯಕ್ತಿತ್ವ ಅವರದು. ನನ್ನ ಜೀವನದಲ್ಲಿ ಏನಾದರು ತೊಂದರೆಗಳು ಎದುರಾದಾಗ ಅವರ ಹೆಸರು ಹೇಳಿದರೆ ಸಾಕು ಕಷ್ಟಗಳು ನಿವಾರಣೆ ಆಗುವ ಸಂದರ್ಭಗಳನ್ನು ನಾನು ಬಹಳಷ್ಟು ಬಾರಿ ಕಂಡಿದ್ದೇನೆ. ಹಲವು ಬಾರಿ ಅವರಿಂದ ಸಹಾಯ ಪಡೆದ ವ್ಯಕ್ತಿಗಳು ಈಗಲೂ ಸಹ ಅವರನ್ನು ನೆನಪಿನಲ್ಲಿಟ್ಟಕೊಂಡು ನನ್ನ ಬಳಿ ಅವರ ನೆನಪುಗಳನ್ನು ಹಂಚಿಕೊಂಡ ಸಂದರ್ಭಗಳು ಕೂಡ ಉಂಟು. ಅದಲ್ಲದೆ ಅವರ ಸ್ನೇಹಿತರು ಸಹ ನನ್ನ ಕಷ್ಟಕರ ಸಂದರ್ಭಗಳಲ್ಲಿ ಸಹಾಯ ಮಾಡಲು ಬರುವರು.

ಅಪ್ಪ ನನ್ನ ಜೀವನದಲ್ಲಿ ಈ ರೀತಿಯಾಗಿ ಕೊಡುಗೆಗಳನ್ನು ನೀಡಿದ್ದು, ಅವರಿಗೆ ಪ್ರತಿಫ‌ಲವಾಗಿ ನಾನು ಯಾವ ರೀತಿಯ ಕೊಡುಗೆ ನೀಡಿದ್ದೇನೆ ಎಂಬುದು ಸದಾ ನನಗೆ ಕಾಡುವ ಪ್ರಶ್ನೆ. ದಿನನಿತ್ಯವೂ ಅಪ್ಪನ ಋಣ ಹೇಗೆ ತೀರಿಸಲಿ ಎಂಬ ಗೊಂದಲದಲ್ಲಿಯೇ ಜೀವನ ಸಾಗುತ್ತಿದೆ. ಆದರೆ ಅಪ್ಪನ ಆಸರೆಯೂ ನನ್ನ ಕನಸುಗಳಿಗೆ ಸದಾ ಜೀವತುಂಬುತ್ತದೆ.

ಅಪ್ಪ ಆಗಸದಲ್ಲಿರುವ ನಕ್ಷತ್ರ ನೀನು..

ಭೂಮಿಯಲ್ಲಿ ಸರಿಸಾಟಿಯಿಲ್ಲದ ಜೀವ ನೀನು..

ನಿನ್ನ ಋಣ  ಹೇಗೆ ತೀರಿಸಲಿ ನಾನು….

-ಮಡು ಮೂಲಿಮನೆ

ಟಾಪ್ ನ್ಯೂಸ್

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-fusion-cinema

UV Fusion: Cinema- ದಿ ಲಾಸ್ಟ್‌  ಬರ್ತ್‌ಡೇ

4-fusion-2

UV Fusion: Cinema- ದಿ ಪ್ರೆಸಿಡೆಂಟ್

15-uv-fusion

Reality Shows: ಮಕ್ಕಳ ಬೆಳವಣಿಗೆಯಲ್ಲಿ ರಿಯಾಲಿಟಿ ಶೋಗಳ ಪಾತ್ರ

14-uv-fusion

Tourism: ಭೂಲೋಕದ ಸ್ವರ್ಗ ಕಪ್ಪತ ಗುಡ್ಡ

13-uv-fusion

UV Fusion: ಚಪ್ಪಲಿಯೆಂದು ಹೀಗಳೆಯದಿರು ಮನುಜ, ಅದಕ್ಕೂ ಒಂದು ಮೌಲ್ಯವಿದೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.