Udayavni Special

ರಾಧೆಯ ಪ್ರೀತಿಗೆ ಅದರ ರೀತಿಗೆ!ಕೃಷ್ಣ ನ ಹುಡುಕಾಟ ರಾಧೆಗಾಗಿ…

Team Udayavani, Feb 13, 2020, 5:39 PM IST

radha-krishna

“ಪ್ರೇಮ” ವೆನ್ನುವುದು ಒಂದು ನವಿರಾದ ಭಾವನೆ. ಮನಸ್ಸಿಗೆ ಮುದ ನೀಡುವ ಕನಸುಗಳಿಗೆ ರಂಗುಬಳಿಯುವ ಈ ಭಾವ ನಿಷ್ಕಲ್ಮಶ ನಿಸ್ವಾರ್ಥದಿಂದ ಕೂಡಿದಾಗಲೇ ಪ್ರೀತಿಗೊಂದು ಬೆಲೆ ಮತ್ತು ಪ್ರೇಮಕ್ಕೊಂದು ಅರ್ಥ! ಅಲ್ಲೊಂದು ಆರಾಧನೆ, ಮಮತೆ, ಕಾಳಜಿ, ನಂಬಿಕೆಯಿದ್ದಾಗ ಪ್ರೀತಿ ಚಿಗುರೊಡೆದು ಪ್ರೇಮ ಸಾಫಲ್ಯ ಕಂಡುಕೊಳ್ಳಲು ಸಾಧ್ಯ. ಪ್ರೀತಿ -ಪ್ರೇಮಕ್ಕೆ ಒಳ್ಳೆಯ ನಿದರ್ಶನವೆಂದರೆ ಅದುವೇ ರಾಧಾ-ಕೃಷ್ಣ.

ಪ್ರೇಮಿಗಳ ದಿನಾಚರಣೆಯ ಈ ಸಂದರ್ಭದಲ್ಲಿ ಮನಸಿನ ಪರದೆಯ ಮೇಲೆ ಮೂಡಿದ್ದು ರಾಧಾಕೃಷ್ಣರ ನಿಷ್ಕಲ್ಮಶ ಪ್ರೇಮ. ಪ್ರೇಮದ ವ್ಯಾಖ್ಯಾನಕ್ಕೆ ರಾಧಾ ಕೃಷ್ಣರ ಪ್ರೀತಿ ಕನ್ನಡಿ ಹಿಡಿದಂತೆ. ರಾಧಾ ಕೇ ಬೀನಾ ಶ್ಯಾಮ್ ಆದಾ, ಶ್ಯಾಮ್ ಕೇ ಬಿನಾ ರಾಧಾ ಆದಾ ಇಸಲಿಯೇ ಕೆಹತೆ ಹೈ “ರಾಧೆಶ್ಯಾಮ್”!. ಎಷ್ಟೊಂದು ಸುಂದರ. ಎಂಥಾ ವರ್ಣಾನಾತೀತ, ಅವನೆಂದರೆ ಅದೇನೊ ಸೆಳೆತ, ಮುರುಳಿಯ ಗಾನಕ್ಕೆ ಮನಸೋತು ಭಕ್ತಿಯ ಭಾವದಲ್ಲಿ ಸೆರೆಯಾಗುವಳು ಅವಳು. ಕೊಳಲಿನ ನೀನಾದಕ್ಕೆ ಗೆಜ್ಜೆ ಕಟ್ಟಿ ನರ್ತಿಸುತ್ತಿದ್ದರೆ ಮೋಹನ ನಾಗುವನು ರಾಧೆಯಲ್ಲಿ ಪರವಶ. ಶ್ಯಾಮನ ಪ್ರೀತಿಯ ಕೊಳಲಿನಲ್ಲಿ ರಾಧೆಯ ಪ್ರೇಮದ ಉಸಿರು ಇಡೀ ಬೃಂದಾವನವನ್ನು ಆವರಿಸುವಂತೆ ಮಾಡುತ್ತಿತ್ತು. ಪ್ರೀತಿಯ ಸೆಲೆ ಭಕ್ತಿಯ ಅಲೆ ಅಲೆಯಾಗಿ ಹೊರಹೊಮ್ಮುತ್ತಿತ್ತು.

ಹರೆಯದ ಕನಸಿಗೆ ಪರಿಶುದ್ಧತೆಯ ಕುಂಚ ಹಿಡಿದು ನಿಸ್ವಾರ್ಥ ಪ್ರೀತಿಯ ಬಣ್ಣ ಬಳಿದರು. ಆಕರ್ಷಣೆಯ ಲೇಪನವಿಲ್ಲದ, ಷರತ್ತುಗಳ ಕಟ್ಟಳೆಯಿಲ್ಲದ, ಸಂಬಂಧಗಳ ನಂಟಿನಲ್ಲಿ ಮಧುರ ಬಾಂಧವ್ಯಕ್ಕೆ ಮುನ್ನುಡಿ ಬರೆದರು.  ಇಂದಿನ ಮನುಕುಲಕ್ಕೆ ಮಾದರಿ ಅವರ ನಿಷ್ಕಾಮ ಪ್ರೇಮ. ಯಮುನಾ ತಟದಲಿ ಬಾಲ್ಯದ ಗೆಳತಿಯ ಸಾಂಗತ್ಯದಲ್ಲಿ ಯಶೋದೆಯ ಕನ್ಹಯ್ಯ ಕಳೆದುಹೋಗುವನು. ವೃಂದಾವನದಲಿ ಗೋಪಿಕೆಯರೊಡನೆ ರಾಸಲೀಲೆ ಆಡುತ್ತ, ತಂಟೆ-ತಕರಾರು ಮಾಡುತ್ತ, ಕಾಡುತ್ತ-ರಮಿಸುತ್ತ ಕಾಲೆಳೆಯುವ ಗೋಪಾಲನಿಗೆ ಗೋಪಿಯರಲ್ಲಿ ಅಚ್ಚು ಮೆಚ್ಚು ರಾಧೆ.

ರಾಧೆಯೆಂದರೆ ಎಲ್ಲಿಲ್ಲದ ಪ್ರೀತಿ! ಅವಳೊಂದು ಉತ್ಸಾಹ, ಭಕ್ತಿಯ ಚಿಲುಮೆ. ರಾಧೆಯ ಒಲುಮೆಯಲ್ಲಿ ಗೆಲುಮೆಯನ್ನು ಕಾಣುವ ಶ್ಯಾಮನಿಗೆ ಅವಳೊಬ್ಬಳು ಆತ್ಮಸಂಗಿನಿ ಮತ್ತು ಅಗಣಿತ ತಾರೆ. ಎಲ್ಲ ಕಟ್ಟುಪಾಡುಗಳನ್ನು ಮೀರಿ, ಮಡಿವಂತಿಕೆಯನ್ನು ಬದಿಗೊತ್ತಿ ಲೌಕಿಕ ನೆಲೆಯಲ್ಲಿ ಅಲೌಕಿಕ ಪಾರಮಾರ್ಥಿಕವನ್ನು ಮೆರೆದು ಪವಿತ್ರ ಪ್ರೇಮಕ್ಕೆ ಸಾಕ್ಷಿಯಾದಳು. ರಾಧೆಯ ನಿರ್ವಾಜ್ಯ ಪ್ರೇಮಕ್ಕೆ ಮಾಧವ ಸೋತ. ಅವಳ ಪ್ರೀತಿಯ ಮಳೆಯಲ್ಲಿ ನೆನೆದ. ತಿಂಗಳ ರಾತ್ರಿ ತೊರೆಯ ಸಮೀಪ ಉರಿಯುವ ದೀಪದ ನಡುವೆ ಕೃಷ್ಣ ನ ಹುಡುಕಾಟ ರಾಧೆಗಾಗಿ. ಅವಳು ಬಂದೆ ಬರುತ್ತಾಳೆನ್ನುವ ಅಧಮ್ಯ ವಿಶ್ವಾಸ ಗೋಪಿಕಾವಲ್ಲಭನಿಗೆ. ಲೋಕದ ಕಣ್ಣಿಗೆ ರಾಧೆ ಕೇವಲ ಹೆಣ್ಣಾಗಿರಬಹುದು. ಆದರೆ ಶ್ಯಾಮನ ಪಾಲಿಗೆ ಪ್ರೀತಿಯ ಕಣ್ಣು. ರಾಧೆಯ ಸಾಂಗತ್ಯ ಪ್ರೇಮಾರಾಧನೆಯ ಭಕ್ತಿ, ರಾಧೆಗಾಗಿ ಪಡುವ ಪರಿತಾಪ ಪರಮಾತ್ಮನಾದರೂ ಪ್ರೀತಿಯ ಆಳವನ್ನು ಪರಿಚಯಿಸುತ್ತದೆ. ವಯಸ್ಸಿನಲ್ಲಿ ಕೃಷ್ಣ ನಗಿಂತ ದೊಡ್ಡವಳಾದರೂ ನಿಸ್ವಾರ್ಥ ಪ್ರೇಮವನ್ನು ತುಂಬು ಮನದಿಂದ ಧಾರೆಯೆರೆದ ತ್ಯಾಗದ ಮೂರ್ತಿ ಅವಳು. ದೈಹಿಕ ಸಂಬಂಧವನ್ನು ಮೀರಿದ, ಎಲ್ಲಾ ಸಂಬಂಧಗಳಿಗಿಂತಲೂ ಮಿಗಿಲಾದ ಪರಮಾತ್ಮ ಜೀವಾತ್ಮಗಳ ಮಿಲನವದು. ಕೃಷ್ಣನ ಹೃದಯದಲ್ಲಿ ಲೀನವಾಗುವ, ಭಕ್ತಿ-ಭಾವದ ಸಂಕೇತವಾಗಿರುವ ರಾಧೆ ಅಜರಾಮರಳಾಗಿ ಉಳಿಯುತ್ತಾಳೆ.

ರಾಧೆಯಿಲ್ಲದ ಮಾಧವ ಕಲ್ಪನೆಗೂ ನಿಲುಕಲಾರ! ರಾಧೆಯ ಪ್ರೇಮದ ಶಕ್ತಿ ರಾಧಾಕೃಷ್ಣರನ್ನು ಅಗ್ರಸ್ಥಾನದಲ್ಲಿ ನಿಲ್ಲುವಂತೆ ಮಾಡಿದೆ. ರಾಧೆಯ ಪ್ರೀತಿಗೆ ಅದರ ರೀತಿಗೆ ಬೆಲೆ ಕಟ್ಟಲು ಅಸಾಧ್ಯ.  ಜಗತ್ತು ಇರುವ ತನಕ ರಾಧಾಕೃಷ್ಣ ರ ಹೆಸರು ಸದಾ ಜೀವಂತ ಮತ್ತು ಪ್ರೇಮಕ್ಕೆ ಮತ್ತೊಂದು ಭಾಷ್ಯವೇ ರಾಧಾಕೃಷ್ಣ!

ಸುಮಾ ಸತೀಶ್.
(ಸುಮಂಗಲಾ ಸತೀಶ ಭಟ್ಟ, ಶಿರಸಿ)

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ಕೋವಿಡ್ 19 ಚರ್ಚೆ: ಪ್ರಣಬ್, ಸೋನಿಯಾ, ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ

ಕೋವಿಡ್ 19 ಚರ್ಚೆ: ಪ್ರಣಬ್, ಸೋನಿಯಾ, ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಕಾಳಗ; ಐವರು ಉಗ್ರರ ಸಾವು, 3 ಯೋಧರು ಹುತಾತ್ಮ

ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಕಾಳಗ; ಐವರು ಉಗ್ರರ ಸಾವು, 3 ಯೋಧರು ಹುತಾತ್ಮ

ಕೋವಿಡ್-19 ಗೆದ್ದ 104 ವರ್ಷದ ಸೈನಿಕ

ಕೋವಿಡ್-19 ಗೆದ್ದ 104 ವರ್ಷದ ಸೈನಿಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

lovee

ಜೀವವೇ ಕೊಡುಗೆ

love

ಪ್ರೇಮಕವಿ

br-tdy-1

ಪ್ರೇಮಿಗಳ ದಿನ: ಗುಲಾಬಿಗೆ ಡಿಮ್ಯಾಂಡ್‌

Ratan-Tata-01-730

ಪ್ರೇಮ ವೈಫ‌ಲ್ಯದ ಕತೆ ಬಿಚ್ಚಿಟ್ಟ ರತನ್‌ ಟಾಟಾ

2-crsuh

ಟಾಲ್ ಬಾಯ್, ಶಾರ್ಟ್ ಗರ್ಲ್ ಪರ್ಫೆಕ್ಟ್ ಪೇರ್.. ಕಾಲೇಜು ಕ್ರಶ್ ಎಂಬ ಮಧುರ ಭಾವನೆ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಲಾಕ್‌ ಡೌನ್‌ ಅರ್ಧ ಮುಕ್ತಾಯ; ನಿಯಮ ಸಡಿಲಿಕೆ?

ಲಾಕ್‌ ಡೌನ್‌ ಅರ್ಧ ಮುಕ್ತಾಯ; ನಿಯಮ ಸಡಿಲಿಕೆ?

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ಸೋಂಕಿತರ ಪತ್ತೆಗೆ ಆನ್‌ಲೈನ್‌, ದೂರವಾಣಿ ಸಮೀಕ್ಷೆ  ಆರಂಭ

ಸೋಂಕಿತರ ಪತ್ತೆಗೆ ಆನ್‌ಲೈನ್‌, ದೂರವಾಣಿ ಸಮೀಕ್ಷೆ ಆರಂಭ