ಶಿವರಾಜ ಕುಮಾರ್ ಅಭಿನಯದ “ಆಯುಷ್ಮಾನ್ ಭವ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿದವರಿಗೆ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವುದರಲ್ಲಿ ಯಾವುದೇ ಅನುಮಾನವಿಲ್ಲ. ಆ ಮಟ್ಟದ ಕುತೂಹಲವನ್ನು ಚಿತ್ರದ ಟೀಸರ್ನಲ್ಲಿ ಇಡಲಾಗಿದೆ. ಪಿ.ವಾಸು ಈ ಚಿತ್ರದ ನಿರ್ದೇಶಕರು. ಚಿತ್ರದ ಟೀಸರ್ ನೋಡುವಾಗ ಹಾರರ್ ಟಚ್ ಕೊಟ್ಟಂತಿದೆ. ಜೊತೆಗೆ ಚಿತ್ರದಲ್ಲಿ ಸಾಕಷ್ಟು ಥ್ರಿಲ್ಲರ್ ಅಂಶಗಳು ಕೂಡಾ ಗೋಚರಿಸುತ್ತಿವೆ. ಅಂದಹಾಗೆ, ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಚಿತ್ರದಲ್ಲಿ ಅಂಡರ್ ವಾಟರ್ ಫೈಟ್ ಇದ್ದು, ಶಿವರಾಜ ಕುಮಾರ್ ಅವರಿಗೆ ಈ ಫೈಟ್ ಸಖತ್ ಖುಷಿ ಕೊಟ್ಟಿದೆಯಂತೆ. “ಆಯುಷ್ಮಾನ್ ಭವ’ ಚಿತ್ರ ದ್ವಾರಕೀಶ್ ಬ್ಯಾನರ್ನಲ್ಲಿ ತಯಾರಾಗಿದ್ದು, ಇದು ಆ ಬ್ಯಾನರ್ನ 52ನೇ ಸಿನಿಮಾ ಎಂಬುದು ವಿಶೇಷ. ಮನುಷ್ಯನ ಬದುಕು ಎಷ್ಟು ಮುಖ್ಯವಾಗುತ್ತೆ ಎಂಬುದನ್ನು ಇಲ್ಲಿ ಹೇಳಲಾಗಿದೆ. ಇದು ಗುರುಕಿರಣ್ ಸಂಗೀತ ನಿರ್ದೇಶನದ ನೂರನೇ ಸಿನಿಮಾ.
ಶಿವಣ್ಣನ “ಆಯುಷ್ಮಾನ್’ ಟೀಸರ್ನಲ್ಲಿ ಹಾರರ್ ಛಾಯೆ
Team Udayavani, Oct 16, 2019, 9:44 PM IST