ಹೈವೋಲ್ಟೆಜ್ ಆ್ಯಕ್ಷನ್ “ಭರಾಟೆ’ಯಲ್ಲಿ ಶ್ರೀಮುರಳಿ
Team Udayavani, Oct 16, 2019, 9:52 PM IST
ಶ್ರೀಮುರಳಿ ಅಭಿನಯದ “ಭರಾಟೆ’ ಬಿಡುಗಡೆಗೂ ಮುನ್ನವೇ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಪೋಸ್ಟರ್, ಹಾಡು, ಟೀಸರ್ ಹೀಗೆ ಎಲ್ಲದರಲ್ಲೂ ಸುದ್ದಿ ಮಾಡಿದೆ. ಈಗ ಹೊಸ ಸುದ್ದಿಯೆಂದರೆ, ಚಿತ್ರ ಥಿಯೇಟ್ರಿಕಲ್ ಟ್ರೇಲರ್ ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಪಡೆದಿದೆ. ಟ್ರೇಲರ್ ನೋಡಿದವರಿಗೆ ಮಾಸ್ ಜೊತೆಗೆ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಫೀಲ್ ಸಿಕ್ಕಿದೆ. “ಭರಾಟೆ’ ಸಖತ್ ಹೈವೋಲ್ಟೆಜ್ ಆ್ಯಕ್ಷನ್ ಇರುವ ಚಿತ್ರ ಅನ್ನೋದು, ಮೊದಲ ಟೀಸರ್ನಲ್ಲೇ ಸಾಬೀತು ಮಾಡಿತ್ತು. ಈಗ ಬಿಡುಗಡೆಯಾಗಿರುವ ಥಿಯೇಟರಿಕಲ್ ಟ್ರೇಲರ್ ಕೂಡ ಸಖತ್ ಪವರ್ಫುಲ್ ಆಗಿದೆ ಎಂಬುದಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಸಾಕ್ಷಿ. ನಿರ್ದೇಶಕ “ಬಹದ್ದೂರ್’ ಚೇತನ್ ಕುಮಾರ್ ಅವರಿಗೆ ಇದು ಮೂರನೇ ಸಿನಿಮಾ. ಶ್ರೀಮುರಳಿ ಜೊತೆ ಮೊದಲ ಕಾಂಬಿನೇಷನ್. ಇನ್ನು ಈ ಚಿತ್ರದಲ್ಲಿ ಹಲವು ವಿಶೇಷತೆಗಳೂ ಇವೆ. ಇದೇ ಮೊದಲ ಮೊದಲ ಬಾರಿಗೆ “ಭರಾಟೆ’ ಮೂಲಕ ಸಾಯಿಕುಮಾರ್, ರವಿಶಂಕರ್ ಹಾಗೂ ಅಯ್ಯಪ್ಪ ಅವರು ಖಳ ನಟರುಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಒಟ್ಟು 17 ಮಂದಿ ಖಳನಟರು ತೆರೆಯ ಮೇಲೆ ಅಬ್ಬರಿಸುತ್ತಿದ್ದಾರೆ. ಅಂದಹಾಗೆ, ಈ ವಾರ “ಭರಾಟೆ’ ಬಿಡುಗಡೆಯಾಗುತ್ತಿದ್ದು, ಶ್ರೀಮುರಳಿ ಅವರಿಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ಅವಿನಾಶ್ ಇತರರು ಇದ್ದಾರೆ. ಈ ಚಿತ್ರವನ್ನು ಸುಪ್ರಿತ್ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದೆ. ಗಿರೀಶ್ ಅವರ ಛಾಯಾಗ್ರಹಣವಿದೆ. ದೀಪು ಎಸ್.ಕುಮಾರ್ ಅವರ ಸಂಕಲನವಿದೆ. ರವಿವರ್ಮ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…