“ಚಪಾಕ್‍’ ಟ್ರೈಲರ್​ ಬಿಡುಗಡೆ: ಆ್ಯಸಿಡ್ ಸಂತ್ರಸ್ತೆಯಾಗಿ ದೀಪಿಕಾ

ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ “ಚಪಾಕ್​’ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಟ್ರೈಲರ್‌‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಆ್ಯಸಿಡ್​ ದಾಳಿಗೆ ಒಳಗಾಗಿದ್ದ ಲಕ್ಷ್ಮೀ ಅಗರ್​ವಾಲ್​ ಅವರ ನೈಜ ಜೀವನಾಧರಿತ ಕಥೆಯಾಗಿದ್ದು, ಆ್ಯಸಿಡ್​ ಸಂತ್ರಸ್ತೆಯಾಗಿ ನಟಿ ದೀಪಿಕಾ ಮನಮುಟ್ಟುವ ಅಭಿನಯವನ್ನು ಪ್ರದರ್ಶಿಸಿದ್ದಾರೆ. ಸಾಮಾನ್ಯ ಯುವತಿಯೊಬ್ಬಳು ಆ್ಯಸಿಡ್​ ದಾಳಿಗೆ ತುತ್ತಾಗಿ ಆಕೆ ಪಡುವ ಕಷ್ಟ, ಆಕೆಯ ರೂಪದ ಕುರಿತು ಜನರಲ್ಲಿ ಮೂಡುವ ಭಯ, ತನ್ನ ವಿರೂಪಕ್ಕೆ ಕಾರಣರಾದವರ ವಿರುದ್ಧ ಹೋರಾಡುವ ಛಲ ಹೊಂದಿರುವ ಕಥೆ ಇದಾಗಿದೆ. ಮಾಲತಿ ಎಂಬ ಹೆಸರಿನಲ್ಲಿ ನಟಿ ದೀಪಿಕಾ ಅಭಿನಯಿಸಿದ್ದು, ಅವರ ಅಭಿನಯ ಅಭಿಮಾನಿಗಳಿಗೆ ಮೆಚ್ಚುಗೆಯಾಗಿದೆ. ಮುಖ್ಯವಾಗಿ ಆ್ಯಸಿಡ್​ ದಾಳಿ ಸಂತ್ರಸ್ತೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ದೀಪಿಕಾರ ನಟನೆ ಹಾಗೂ ಮೇಕಪ್​ ಎಲ್ಲಿಯೂ ಕಳೆಕುಂದದಂತೆ ಇರುವುದು ಚಿತ್ರದ ಹೈಲೈಟ್​. ಇನ್ನು ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ದೀಪಿಕಾಗೆ ಈ ಚಿತ್ರ ವಿಶೇಷವಾಗಿದ್ದು, ಜನವರಿ 10 ರಂದು ತೆರೆಗೆ ಬರಲು ಸಜ್ಜಾಗಿದೆ.


ಹೊಸ ಸೇರ್ಪಡೆ