ಮಂಗಳೂರಿನಲ್ಲಿ ಮೊದಲ electric auto rickshaw !
Team Udayavani, Mar 4, 2020, 6:34 PM IST
ಮಂಗಳೂರು :ಕಡಲ ನಗರಿ ಮಂಗಳೂರಿನಲ್ಲಿ ಈಗ ವಿಭಿನ್ನ ರೀತಿಯ ರಿಕ್ಷಾವೊಂದು ಎಲ್ಲರ ಗಮನ ಸೆಳೆಯುತ್ತಿದೆ… ವಿಶೇಷ ಅಂದ್ರೆ ಈ ಆಟೋ ರಿಕ್ಷಾ ಹೊಗೆ ಬಿಡುವುದಿಲ್ಲ, ಶಬ್ದ ಮಾಲಿನ್ಯ ಮಾಡುವುದಿಲ್ಲ.
ಯಾವುದು ವಿಭಿನ್ನ ರಿಕ್ಷಾ ಅಂದ್ರೆ ಎಲೆಕ್ಟ್ರಿಕ್ ರಿಕ್ಷಾ.. ವಿಶೇಷ ಬಣ್ಣದಿಂದಲೂ ಗಮನ ಸೆಳೆಯುತ್ತಿರುವ ಎಲೆಕ್ಟ್ರಿಕ್ ರಿಕ್ಷಾ ಪ್ರಯಾಣಿಕರ ಹಾಗೂ ನೋಡುಗರ ಕುತೂಹಲಕ್ಕೆ ಕಾರಣವಾಗಿದೆ. ಮಂಗಳೂರಿನ ಮೊದಲ ಎಲೆಕ್ಟ್ರಿಕ್ ರಿಕ್ಷಾವನ್ನು ಓಡಿಸುತ್ತಿರುವವರು ರಾರ್ಬಟ್ ಉಳ್ಳಾಲ ಎಂಬುವವರು.