“ಗೌಡ್ರ ಸೈಕಲ್’ ನೋಡ್ರಪ್ಪ: ಬೊಂಬಾಟ್ ಟ್ರೈಲರ್ ವೀಕ್ಷಿಸಿ

ಪ್ರಶಾಂತ್‌ ಕೆ.ಎಳ್ಳಂಪಳ್ಳಿ ನಿರ್ದೇಶನದ “ಗೌಡ್ರು ಸೈಕಲ್‌’ ಚಿತ್ರವು ಈ ವಾರ ಬಿಡುಗಡೆಯಾಗುತ್ತಿದ್ದು, ಸವಿತಾ ರಾಜೇಶ್‌ ಚೌಟ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಳ್ಳಿಯೊಂದರ ಗೌಡರ ಬಳಿ ಹಳೆಯದಾದ ಸೈಕಲ್‌ವೊಂದು ಇರುತ್ತದೆ. ತನ್ನ ಜೀವನದ ಜೊತೆ ಜೊತೆಯಲ್ಲೇ ಆ ಸೈಕಲ್‌ ಅನ್ನು ಗೌಡರು ಜೋಪಾನವಾಗಿ ಕಾಪಾಡಿಕೊಂಡು ಬಂದಿರುತ್ತಾರೆ. ತನ್ನ ಎಲ್ಲಾ ಕಷ್ಟ-ಸುಖದಲ್ಲೂ ಜೊತೆಯಲ್ಲಿದ್ದ ಸೈಕಲ್‌ ಅನ್ನು ಕಾಲಾಂತರದಲ್ಲಿ ಅವರ ಜೊತೆಗಿದ್ದವರು ಅಸಡ್ಡೆಯಿಂದ ನೋಡಲು ಶುರು ಮಾಡುತ್ತಾರೆ. ಅಲ್ಲದೆ “ಗೌಡ್ರು ಸೈಕಲ್‌’ ಅನ್ನು ಇಂದಿನ ಜನರೇಷನ್‌ಗೆ ತಕ್ಕಂತೆ ನವೀಕರಿಸಲು ಮುಂದಾಗುತ್ತಾರೆ. ಆಗ ಏನೇನು ಘಟನಾವಳಿಗಳು ನಡೆಯುತ್ತವೆ ಎನ್ನುವುದೇ “ಗೌಡ್ರು ಸೈಕಲ್‌’ ಚಿತ್ರದ ಕಥಾ ಹಂದರ. ಚಿತ್ರದಲ್ಲಿ ಶಶಿಕಾಂತ್‌ ನಾಯಕನಾಗಿ, ಬಿಂಬಶ್ರೀ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕೃಷ್ಣಮೂರ್ತಿ, ರಾಮಸ್ವಾಮಿ, ಎಂ.ಕೆ ಮಠ, ಆರ್ಯಹರ್ಷ ಶೆಟ್ಟಿ ನಟಿಸಿದ್ದಾರೆ. ಸಾಯಿ ಸರ್ವೇಶ್‌ ಸಾಹಿತ್ಯ, ಸಂಗೀತವಿದೆ. ಚಿತ್ರದ ಬೊಂಬಾಟ್ ಟ್ರೈಲರ್ ವೀಕ್ಷಿಸಿ.


ಹೊಸ ಸೇರ್ಪಡೆ