ಕಬೀರ್ ಸಿಂಗ್ ನಲ್ಲಿ ಶಾಹಿದ್ ಜಬರ್ದಸ್ತ್ ಲುಕ್

ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಕಬೀರ್ ಸಿಂಗ್ ಹಿಂದಿ ಚಿತ್ರದ ಟ್ರೈಲರ್ ಇದೀಗ ಯೂ ಟ್ಯೂಬ್ ನಲ್ಲಿ ಭಾರೀ ಸೌಂಡ್ ಮಾಡುತ್ತಿದೆ. ಶಾಹೀದ್ ಕಪೂರ್ ಈ ಚಿತ್ರದಲ್ಲಿ ಆ್ಯಂಗ್ರಿ ಲುಕ್ ನಲ್ಲಿ ಗಮನ ಸೆಳೆಯುತ್ತಾರೆ.

ಯೂಟ್ಯೂಬ್ ನಲ್ಲಿ ಸೋಮವಾರ ಕಬೀರ್ ಸಿಂಗ್ ಟ್ರೈಲರ್ ಬಿಡುಗಡೆಯಾಗಿದ್ದು ಇದುವರೆಗೆ ಒಂದೂವರೆ ಕೋಟಿ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ತೆಲುಗಿನ ಅರ್ಜುನ್ ರೆಡ್ಡಿ ಚಿತ್ರದ ರಿಮೇಕ್ ಇದಾಗಿದ್ದು ಇಲ್ಲಿ ಶಾಹೀದ್ ಕಪೂರ್ ರೆಬೆಲ್ ನಟನೆ ಟ್ರೈಲರ್ ಜೋಶ್ ಅನ್ನು ಹೆಚ್ಚಿಸಿದೆ.

ತನ್ನ ಜಬರ್ದಸ್ತ್ ಸಂಗೀತದಿಂದಲೂ ಕಬೀರ್ ಸಿಂಗ್ ಚಿತ್ರಪ್ರೇಮಿಗಳಲ್ಲಿ ಕುತೂಹಲ ಮೂಡಿಸುತ್ತದೆ.

ಜೂನ್ 21ರಂದು ಕಬೀರ್ ಸಿಂಗ್ ವಿಶ್ವಾದ್ಯಂತ ತೆರೆಕಾಣುತ್ತಿದೆ.


ಹೊಸ ಸೇರ್ಪಡೆ