“ಕವಚ’ದಲ್ಲಿ ಶಿವಣ್ಣ: ಥ್ರಿಲ್ಲರ್ ಟ್ರೈಲರ್ ವೀಕ್ಷಿಸಿ

ಶಿವರಾಜಕುಮಾರ್‌ ಮೊದಲ ಬಾರಿಗೆ “ಅಂಧ’ನ ಪಾತ್ರ ಮಾಡಿರುವ “ಕವಚ’ ಚಿತ್ರ ಈ ವಾರ ತೆರೆ ಕಾಣುತ್ತಿದ್ದು, ಇದು ಮಲೆಯಾಳಂನ “ಒಪ್ಪಂ’ ಚಿತ್ರದ ಕನ್ನಡ ರಿಮೇಕ್‌. ಚಿತ್ರದಲ್ಲಿ ಇಶಾ ಕೊಪ್ಪಿಕರ್‌, ರವಿಕಾಳೆ, ರಾಜೇಶ್‌ ನಟರಂಗ, ವಸಿಷ್ಠ ಸಿಂಹ, ಬೇಬಿ ಮೀನಾಕ್ಷಿ, ಜಯಪ್ರಕಾಶ್‌ ಇತರರು ನಟಿಸಿದ್ದಾರೆ. “ಹೆಚ್‌.ಎಂ.ಎ ಸಿನಿಮಾ’ ಬ್ಯಾನರ್‌ನಲ್ಲಿ ಎಂ.ವಿ.ವಿ ಸತ್ಯ ನಾರಾಯಣ್‌ “ಕವಚ’ ಚಿತ್ರವನ್ನು ನಿರ್ಮಿಸಿದ್ದಾರೆ. ಜಿ.ವಿ.ಆರ್‌ ವಾಸು ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಾಹುಲ್‌ ಶ್ರೀವಾತ್ಸವ್‌ ಛಾಯಾಗ್ರಹಣ ಮಾಡಿದ್ದಾರೆ. ಜೊ.ನಿ ಹರ್ಷ ಅವರ ಸಂಕಲನವಿದೆ. ಅರ್ಜುನ್‌ ಜನ್ಯ ಅವರಿಲ್ಲಿ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಕೆ. ಕಲ್ಯಾಣ್‌, ಡಾ. ವಿ ನಾಗೇಂದ್ರ ಪ್ರಸಾದ್‌, ಕವಿರಾಜ್‌ ಸಾಹಿತ್ಯವಿದೆ. ಚಿತ್ರದ ಥ್ರಿಲ್ಲರ್ ಟ್ರೈಲರ್ ವೀಕ್ಷಿಸಿ.


ಹೊಸ ಸೇರ್ಪಡೆ