ಸರ್ಕಾರಿ ಮೆಡಿಕಲ್ ಕಾಲೇಜು ವಸತಿಗೃಹದಲ್ಲೇ ಚಿರತೆ ಓಡಾಟ: ಸಿಸಿ ಟಿವಿಯಲ್ಲಿ ದೃಶ್ಯ ಸೆರೆ
Team Udayavani, Jan 7, 2021, 12:18 PM IST
ಚಾಮರಾಜನಗರ: ನಗರದ ಹೊರ ವಲಯದ ಎಡಬೆಟ್ಟದ ಪಕ್ಕದಲ್ಲೇ ಇರುವ ಸರ್ಕಾರಿ ಮೆಡಿಕಲ್ ಕಾಲೇಜಿನ ಸಿಬ್ಬಂದಿ ವಸತಿಗೃಹದಲ್ಲಿ ನಿನ್ನೆ ರಾತ್ರಿ ಚಿರತೆ ಕಾಣಿಸಿಕೊಂಡಿದೆ.
ಚಿರತೆ ಕಟ್ಟಡದ ಆವರಣದಲ್ಲಿ ಓಡಾಡುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮಾತ್ರವಲ್ಲದೇ ಮೆಡಿಕಲ್ ಕಾಲೇಜ್ ಸಿಬ್ಬಂದಿ ಸಹ ಚಿರತೆಯನ್ನು ನೋಡಿದ್ದಾರೆ. ಈ ವಿಡಿಯೋ ಸ್ಥಳೀಯವಾಗಿ ಇಂದು ಬೆಳಿಗ್ಗೆಯಿಂದ ವಾಟ್ಸಪ್ ನಲ್ಲಿ ವೈರಲ್ ಆಗಿದೆ.