“ಒಡೆಯ’ನ ಲುಕ್‍ನಲ್ಲಿ ದರ್ಶನ್: ಮಾಸ್ ಟ್ರೈಲರ್

ಸಂದೇಶ್‌ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಎನ್‌.ಸಂದೇಶ್‌ ಅವರು ನಿರ್ಮಿಸಿರುವ, ದರ್ಶನ್‌ ಅಭಿನಯದ “ಒಡೆಯ’ ಚಿತ್ರ ಈ ವಾರ ರಾಜ್ಯಾದ್ಯಂತ  ಬಿಡುಗಡೆಯಾಗುತ್ತಿದೆ. ಎಂ.ಡಿ.ಶ್ರೀಧರ್‌ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಅವರ ಸಂಗೀತವಿದೆ. ಜಯಂತ ಕಾಯ್ಕಿಣಿ, ಡಾ.ವಿ.ನಾಗೇಂದ್ರಪ್ರಸಾದ್‌,  ಕವಿರಾಜ್‌ ಹಾಗೂ ಬಹದ್ದೂರ್‌ ಚೇತನ್‌ ಕುಮಾರ್‌ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಕೃಷ್ಣಕುಮಾರ್‌ ಛಾಯಾಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನ, ಕಲೈ  ನೃತ್ಯ ಹಾಗೂ ವಿಜಯ್‌ ಅವರ ಸಾಹಸ ನಿರ್ದೇಶನವಿದೆ. ಪ್ರಶಾಂತ್‌ ರಾಚಪ್ಪ ಸಂಭಾಷಣೆ ಬರೆದಿದ್ದಾರೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರಿಗೆ ನಾಯಕಿಯಾಗಿ ಸನಾ ತಿಮ್ಮಯ್ಯ ಅಭಿನಯಿಸಿದ್ದಾರೆ. ದೇವರಾಜ್‌, ರವಿಶಂಕರ್‌, ಸಾಧುಕೋಕಿಲ, ಶರತ್‌ ಲೋಹಿತಾಶ್ವ, ಚಿಕ್ಕಣ್ಣ, ಯಶಸ್‌ ಸೂರ್ಯ, ಪಂಕಜ್‌, ನಿರಂಜನ್‌, ಸಮರ್ಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.


ಹೊಸ ಸೇರ್ಪಡೆ