“ಸೂಜಿದಾರ’ದ ನಡುವೆ ಹರಿಪ್ರಿಯಾ: ಬ್ಯೂಟಿಫುಲ್ ಟ್ರೈಲರ್ ವೀಕ್ಷಿಸಿ
Team Udayavani, May 8, 2019, 10:20 PM IST
ಸಿನಿಸ್ನೇಹ ಟಾಕೀಸ್ ಲಾಂಛನದಲ್ಲಿ ಅಭಿಜಿತ್ ಕೋಟೆಗಾರ್ ಹಾಗೂ ಸಚೀಂದ್ರನಾಥ್ ನಾಯಕ್ ನಿರ್ಮಿಸಿರುವ ಹರಿಪ್ರಿಯಾ ಅಭಿನಯದ ಬಹು ನಿರೀಕ್ಷಿತ ಚಿತ್ರ “ಸೂಜಿದಾರ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಮೌನೇಶ್ ಬಡಿಗೇರ್ ಅವರ ನಿರ್ದೇಶನವಿದ್ದು, ಭಿನ್ನಷಡ್ಜ ಸಂಗೀತ, ಅಶೋಕ್ ವಿ ರಾಮನ್ ಅವರ ಛಾಯಾಗ್ರಹಣ, ಮೋಹನ್ ಸಂಕಲನ, ಮಲ್ಲಿಕಾರ್ಜುನ್ ಮತ್ತಿಘಟ್ಟ ಅವರ ಕಲಾ ನಿರ್ದೇಶನ ಹಾಗೂ ಪ್ರದೀಪ್ ವರ್ಮ ಅವರ ಹಿನ್ನಲೆ ಸಂಗೀತವಿದೆ. ಇನ್ನು ಹರಿಪ್ರಿಯಾಗೆ ನಾಯಕನಾಗಿ ಯಶ್ವಂತ್ ಶೆಟ್ಟಿ ನಟಿಸಿರುವ ಈ ಚಿತ್ರದಲ್ಲಿ ಅಚ್ಯುತಕುಮಾರ್, ಸುಚೇಂದ್ರ ಪ್ರಸಾದ್, ಚೈತ್ರ ಕೊಟ್ಟೂರು, ಶ್ರೇಯಾ, ಬಿರಾದಾರ್ ಸೇರಿದಂತೆ ಮುಂತಾದವರ ತಾರಾಬಳಗವಿದೆ. ಚಿತ್ರದ ಬ್ಯೂಟಿಫುಲ್ ಟ್ರೈಲರ್ ವೀಕ್ಷಿಸಿ.