2,300 ಅಡಿ ಎತ್ತರದಿಂದ ಜಿಗಿದ ನಾಯಿ ಕಜುವಾ
Team Udayavani, Mar 11, 2020, 4:27 PM IST
ಆ ನಾಯಿ ಜಿಗಿದದ್ದು ಒಂದಲ್ಲ, ಎರಡಲ್ಲ, ಬರೋಬ್ಬರಿ 2,300 ಅಡಿ ಎತ್ತರದಿಂದ. ಈ ಘಟನೆ ನಡೆದದ್ದು ಅಮೆರಿಕದಲ್ಲಿ. ಕಜುವಾ ಎಂಬ ಹೆಸರಿನ ಈ ಶ್ವಾನ ತಾನೇ ಆಗಿ ಜಿಗಿದದ್ದು ಅಲ್ಲ. ತನ್ನ ಮಾಲೀಕ ಬರ್ನೋ ವ್ಯಾಲೆಂಟೈನ್ ಜತೆಯಲ್ಲಿ ಪ್ಯಾರಾಚೂಟ್ ಮೂಲಕ. ಮಾನವರಾಗಿರುವ ನಮಗೆಲ್ಲ ಸಣ್ಣ ಎತ್ತರದಿಂದ ಜಿಗಿಯಲು ಕೆಲವೊಮ್ಮೆ ಹೃದಯ ಬಾಯಿಗೆ ಬಂದಂತೆ ಆಗುತ್ತದೆ. ಅದರ ಸಾಹಸವನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದೆ.
ಇಂಥ ಸಾಹಸ ಸದೃಶವಾಗಿರುವ ಜಿಗಿತಗಳು ಅದಕ್ಕೆ ಹೊಸತೇನಲ್ಲ. ಹೀಗಾಗಿ, ಅದು ಧೈರ್ಯದಿಂದಲೇ ಇತ್ತು ಎನ್ನೋಣ. ಈ ಮಾತನನ್ನು ಮಾಲೀಕ ಬರ್ನೋ ಕೂಡ ಖಚಿತಪಡಿಸಿದ್ದಾರೆ. ಆಗಾಗ ಇಂಥ ಜಂಪ್ಗ್ಳಲ್ಲಿ ಕಜುವಾ ಎಂಬ ಹೆಸರಿನ ಶ್ವಾನ ಉತ್ಸಾಹದಿಂದಲೇ ಭಾಗವಹಿಸುತ್ತದೆ.
ನನಗೂ ಇಂಥ ಜಿಗಿತಗಳಲ್ಲಿ ಭಾಗವಹಿಸುವುದೆಂದರೆ ಆಸಕ್ತಿ. ಆ ಸಂದರ್ಭದಲ್ಲಿ ನನ್ನ ಕಜುವಾನನ್ನು ನೋಡಿಕೊಳ್ಳಲು ಯಾರೂ ಇರುತ್ತಿರಲಿಲ್ಲ. ಹೀಗಾಗಿ, ಅದನ್ನೂ ಕರೆದುಕೊಂಡು ಹೋದರೆ ಏನು ಎಂಬ ಯೋಚನೆ ಬಂತು. ಅದು ಹೆದರಿಕೊಳ್ಳುತ್ತದೆಯೋ ಎಂಬ ಯೋಚನೆ ಇತ್ತು. ಒಂದೆರಡು ಸಾಹಸಗಳ ಬಳಿಕ ಅದಕ್ಕೇನೂ ಅನ್ನಿಸುತ್ತಿಲ್ಲ, ಬದಲಾಗಿ ಅದು ಖುಷಿ ಪಡುತ್ತಿದೆ ಎನ್ನುವುದು ಖಾತ್ರಿಯಾಯಿತು. ಹೀಗಾಗಿ ಅದು ಮುಂದುವರಿದಿದೆ ಎನ್ನುತ್ತಾರೆ ಬರ್ನೋ.