ಜಿರಾಫೆ ಬಾಯಿ ಸೇರಿದ ಮದುಮಗನ ಮುಂಡಾಸು
Team Udayavani, Mar 12, 2020, 1:42 PM IST
ಇನ್ನು ಹೊಸತಾಗಿ ವಿವಾಹವಾಗುವವರು ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಳ್ಳುವವರು ಸಮೀಪದಲ್ಲಿ ಮಂಗಣ್ಣನೋ, ಜಿರಾಫೆಯೋ ಇದೆಯೋ ಎಂದು ಪರೀಕ್ಷಿಸಿಕೊಳ್ಳಿ. ಏಕೆಂದರೆ ವರನ ತಲೆ ಮೇಲೆ ಇರುವ ಮುಂಡಾಸು, ಕ್ಯಾಪ್ ಅನ್ನು ಹೊತ್ತೂಯ್ಯುವ ಸಾಧ್ಯತೆ ಇದೆ.
ಹೀಗೆ ಮುನ್ನೆಚ್ಚರಿಕೆ ಕೊಡಲು ಸೂಕ್ತ ಕಾರಣವೂ ಉಂಟು. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕೆಲ ದಿನಗಳ ಹಿಂದಷ್ಟೇ ದಾಂಪತ್ಯ ಜೀವನ ಪ್ರವೇಶ ಮಾಡಿದ್ದ ಯುವ ಜೋಡಿ ಫೋಟೋಶೂಟ್ ಮಾಡಿಸಿಕೊಳ್ಳಲು ಮಲಿಬುವಿನ ಸ್ಯಾಡಲ್ ರಾಕ್ ರಾಂಚ್ಗೆ ತೆರಳಿತ್ತು.
ಹೊಸ ದಿರಿಸು ಧರಿಸಿ, ಮದು ಮಕ್ಕಳು ಫೋಟೋ ಶೂಟ್ಗೆ ರೆಡಿಯಾದರು. ಇನ್ನೇನು ರೆಡಿ ಸ್ಟಾರ್ಟ್ ಕ್ಯಾಮರಾ, ಆ್ಯಕ್ಷನ್ ಎನ್ನುವಷ್ಟರಲ್ಲಿ ಅಲ್ಲಿಯೇ ಜಿರಾಫೆ ಮದುಮಗನ ತಲೆಯ ಮೇಲಿದ್ದ ಮುಂಡಾಸು ಕಚ್ಚಿ ತೆಗೆಯಿತು. ಮದುಮಗ ಮತ್ತು ಫೋಟೋ ಶೂಟ್ಗೆ ಬಂದಿದ್ದಾತ ಜಿರಾಫೆಯಿಂದ ಮುಂಡಾಸು ಪಡೆಯುವ ವಿಡಿಯೋ ಈಗ ವೈರಲ್ ಆಗಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ