ಮಾ.25ರ ವೇಳೆಗೆ ದೇಶದಲ್ಲಿನ ಪರಿಸ್ಥಿತಿ ಸುಧಾರಣೆಯಾಗಲಿದೆ. ಏಕೆಂದರೆ ಆ ವೇಳೆಗೆ ಗ್ರಹಗತಿಗಳಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. ಏ.2ರ ವೇಳೆಗೆ ಸ್ಥಿತಿ ಉತ್ತಮಗೊಳ್ಳಲಿದೆ.

- ಅನಿರುದ್ಧ್ ಕುಮಾರ್‌

ದಯವಿಟ್ಟು ಮನೆಯಿಂದ ಹೊರಕ್ಕೆ ಬರಬೇಡಿ. ಇದೇ ಮೊದಲ ಬಾರಿಗೆ ಮನೆಯಿಂದ ಹೊರಗೆ ಬರದವನೇ ಗೆದ್ದವ. ಇದು ನಿಜಕ್ಕೂ ಪಂಥಾಹ್ವಾನ.

- ಅಕ್ಷಯ ಕುಮಾರ್‌

ನೀವು ಅವರಿಗೆ ಆಶ್ವಾಸನೆ ಕೊಟ್ಟರೆ, ಅದು ಅವರಲ್ಲಿ ಭರವಸೆ ಮೂಡಿಸುತ್ತದೆ. ಆ ಆಶ್ವಾಸನೆ ಈಡೇರಿಸಿದರೆ, ಅವರಲ್ಲಿ ನಂಬಿಕೆ ಹುಟ್ಟುತ್ತದೆ.

- ಶೆರ್ಗಿಲ್‌

ಜನರನ್ನು ವೈರಸ್‌ ಕೊಲ್ಲುವುದಕ್ಕಿಂತ ಹೆಚ್ಚು ಭಯ ಕೊಲ್ಲುತ್ತದೆ. ಭಯ ಬಿಡಿ, ಮುನ್ನೆಚ್ಚರಿಕೆ ತೆಗೆದುಕೊಳ್ಳಿ.

- ಚೇತನ್‌ ಭಗತ್‌

ಕಚೇರಿಗೆ ಹೋಗಿ ಕೆಲಸ ಮಾಡುವಾಗ ದುಡಿವ ಹಣವೆಲ್ಲಾ ಓಲಾ, ಉಬರ್‌ಗೆ ಖರ್ಚಾಗುತ್ತಿದೆ. ವರ್ಕ್‌ ಫ್ರಂ ಹೋಮ್‌ ಮಾಡುವಾಗ ಝೋಮ್ಯಾಟೊ, ಸ್ವಿಗ್ಗಿಗೆ ಖರ್ಚಾಗುತ್ತಿದೆ.

- ವಸುಧಾ

ಇಡೀ ದೇಶ ಕೊರೊನಾ ಅಪಾಯದಿಂದ ತತ್ತರಿಸಿದೆ. ಇಂಥ ಸಮಯದಲ್ಲಿ ಬಿಜೆಪಿ-ಕಾಂಗ್ರೆಸ್‌ ಮಧ್ಯ ಪ್ರದೇಶದಲ್ಲಿ ಅಧಿಕಾರಕ್ಕಾಗಿ ನಡೆಸಿರುವ ಹಗ್ಗಜಗ್ಗಾಟ ಬೇಸರ ತರಿಸುವಂತಿದೆ.

- ಅನಿರ್ಬಾನ್‌ ಚೌಧರಿ

ಮಾತ ನಾಡಿ ಶಕ್ತಿ-ಸಮಯ ಹಾಳು ಮಾಡಬೇಡಿ. ನೀವು ಏನು ಹೇಳುತ್ತೀರಿ ಎನ್ನುವುದಕ್ಕಿಂತ, ಏನು ಮಾಡುತ್ತೀರಿ ಎನ್ನುವುದು ಮುಖ್ಯ.

- ರಾಬಿನ್‌ ಶರ್ಮಾ

ಕನ್ನಡ ನಾಡಿನಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆಯನ್ನು ನೀಡುವುದನ್ನು ಯಾರೇ ನಿರಾಕರಿಸಿದರೂ ಅದನ್ನು ಅಪರಾಧ ಎಂದು ಪರಿಗಣಿಸುವಂಥ ಕಾನೂನು ಜಾರಿಯಾಗಲಿ

- ವಿಜಯಕಲ್ಯಾಣ್‌ ರಾಮನ್‌

ಪ್ರಕೃತಿಯ ಸೌಂದರ್ಯ, ಉಗ್ರರೂಪ ಹಾಗೂ ಅಭೂತಪೂರ್ವ ಸಾಮರ್ಥ್ಯವನ್ನು ಈಗಲಾದರೂ ಅರ್ಥಮಾಡಿಕೊಂಡು, ಅದಕ್ಕೆ ತಲೆಬಾಗಿಸೋಣ. ನಾವು ಏನಾಗಿದ್ದೇವೆ ಎಂಬುದನ್ನು ಅರಿಯಲು ಮತ್ತು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ.

- ಸೋನಂ ಕೆ ಅಹುಜಾ

ಕರೋನಾ ಭಯಕ್ಕೆ ಧಾರ್ಮಿಕ ಕೇಂದ್ರಗಳೆಲ್ಲ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿ ಬಾಗಿಲು ಹಾಕಿರುವಾಗ, ಈ ದೇಶದ ವೈದ್ಯರು, ದಾದಿಯರು, ಪೊಲೀಸ್‌, ಸೇನೆ, ಪತ್ರಕರ್ತರು, ಸಾರಿಗೆ ನೌಕರರು ಜೀವದ ಹಂಗು ತೊರೆದು ಸಾರ್ವಜನಿಕ ಸೇವೆ ಮಾಡುತ್ತಿದ್ದಾರೆ. ಇವರೇ ನಿಜವಾದ ದೇವರುಗಳು

- ರೇಖಾ ತಿಪಟೂರು

ಈಗ ಎಲ್ಲ ಧಾರ್ಮಿಕ ಕೇಂದ್ರಗಳೂ ಮುಚ್ಚಿವೆ, ಆದರೆ ಎಲ್ಲ ಆಸ್ಪತ್ರೆಗಳ ಬಾಗಿಲುಗಳೂ ತೆರೆದಿವೆ.

- ಮೇ ಫ್ಲವರ್‌

ಒಂದು ತಲೆಮಾರಾಗಿ ನಾವು ಮಾಡಿರುವ ದೊಡ್ಡ ತಪ್ಪೆಂದರೆ, ನಮ್ಮ ಹಿರಿಯರಿಗೆ ವಾಟ್ಸ್‌ಆ್ಯಪ್‌ ಅನ್ನು ಪರಿಚಯಿಸಿರುವುದು.

- ಸಾನಿಯಾ

ಕೊರೊನಾವೈರಸ್‌ನ ಪರಿಣಾಮದಿಂದಾಗಿ, ಈ ಜಗತ್ತಿನಲ್ಲಿ ಈಗ ಎಲ್ಲವೂ "ವಿರಾಮ' ತೆಗೆದುಕೊಳ್ಳುತ್ತಿವೆ.

- ಆಖೀಬ್‌ ದರ್‌

ಯುರೋಪ್‌, ಅಮೆರಿಕ ಪ್ರವಾಸಿಗರನ್ನು ನಿಷೇಧಿಸುವ ಸರದಿ ಈಗ ಆಫ್ರಿಕಾ ದೇಶಗಳದ್ದು. ನಿಸರ್ಗ ಮಾನವನಿಗೆ ಕಲಿಸುವ ಪಾಠ ಎಂದರೆ ಇದೆ. ಇಂಥ ದಿನಗಳನ್ನು ಯಾರು ಊಹಿಸಿದ್ದರು?

- ನಿಮಿಷಾ

ನಾವು ಸಾವಿಗೆ ಹೆದರಿದ್ದೇವೆ ನಿಜ. ಆದರೆ ಅದಕ್ಕಾಗಿ ಬದುಕುವುದನ್ನು ಬಿಟ್ಟುಬಿಡಬೇಕೇ?

- ಚೇತನ್‌ ಭಗತ್‌

ಕೊರೊನಾವೈರಸ್‌ ಅನ್ನು ನಿಭಾಯಿಸುವುದೆಂದರೆ ಕ್ರಿಕೆಟ್‌ ಆಡಿದಂತೆ. ಬೌಲರ್‌ನ ಕೈಯಿಂದ ಚೆಂಡು ಹೊರಟ ಕೂಡಲೇ ನೀವು ನಿಮ್ಮ ಶಾಟ್‌ ಅನ್ನು ಪ್ಲಾನ್‌ ಮಾಡಿಟ್ಟುಕೊಂಡಿರಬೇಕು.

- ರೋಫ‌ಲ್‌ ಇಂಡಿಯನ್‌

‌ಕನಸುಗಳ ಬೆನ್ನತ್ತಿದವನು ವಾಸ್ತವ ಪ್ರಪಂಚದಿಂದ ದೂರವಿರಬಾರದು.

- ಜೆನ್‌ ಟಾಕ್‌

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದೂಗಳ ವಿರುದ್ಧ ತಾರತಮ್ಯ ಉಂಟಾಗುತ್ತಿದೆ. ಹೀಗಾಗಿ, ಪ್ರಧಾನಿಯವರು ಈ ಬಗ್ಗೆ ವಿಶ್ವಸಂಸ್ಥೆಗೆ ದೂರು ಸಲ್ಲಿಸಬೇಕು.

- ಸಂಜಯ ದೀಕ್ಷಿತ್‌

ಅನುಭವಕ್ಕಿಂತ ದೊಡ್ಡ ಮಿತ್ರರಿಲ್ಲ, ಜೀವನಾನುಭವವೇ ಸಂತಸದ ಗುಟ್ಟು.

- ಅಲೆನ್‌ ಡೆ ಬಾಟನ್‌

ಚೀನಾ ತನ್ನ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್‌ ಹರಡದಂತೆ ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ. ಅದೇ ಮಾದರಿಯನ್ನು ನಾವೇಕೆ ಕೈಗೊಳ್ಳಬಾರದು. ನಷ್ಟವಾಗುವ ಅಂಶವನ್ನಾದರೂ ತಪ್ಪಿಸಬಹುದು.

- ಅನಿ

ನಿಮ್ಮ ಸಂತೋಷವನ್ನು ಯಾರೊಂದಿಗೆ ಹಂಚಿ ಕೊಳ್ಳುತ್ತೀರಿ, ದುಃಖವನ್ನು ಯಾರೊಂದಿಗೆ ಹಂಚಿಕೊಳ್ಳುತ್ತೀರಿ ಎನ್ನುವುದರ ಮೇಲೆ ಎಚ್ಚರಿಕೆ ಇರಲಿ.

- ಕೋಟ್ಸ್‌ ಕೋರ್‌

ಮನುಷ್ಯ ವಯಸ್ಸಿನಿಂದ ಹಿರಿಯನಾಗುವುದು ದೊಡ್ಡ ವಿಷಯವಲ್ಲ, ಜ್ಞಾನದಿಂದ ದೊಡ್ಡವನಾಗುವುದು ಮುಖ್ಯ.

- ಜೆನ್‌ ಗಾರ್ಡನ್‌

ಅಪ್ಪ ಊಟ ಮಾಡಿದ ತಾಟಿನಲ್ಲಿ ಊಟ ಮಾಡುವ ಅಮ್ಮ, ಮಗಳು ಬಿಟ್ಟ ತಾಟಿನಲ್ಲಿ ಊಟ ಮಾಡುವ ಅಪ್ಪ. ನಮಗ್ಯಾಕೆ ವೈರಸ್‌ ಭಯ. ನಮ್ಮ ಮಣ್ಣಿನಲ್ಲೇ ಸಾಕಷ್ಟು ರೋಗ ನಿರೋಧಕ ಶಕ್ತಿ ಇದೆ. ಚಮಚದಲ್ಲಿ ಊಟ ಮಾಡುವ ಜನ ಹೆದರಬೇಕು ಅಷ್ಟೆ.

- ಸಿದು

ಯೆಸ್‌ ಬ್ಯಾಂಕ್‌= ಓಹ್‌, ನೋ ಬ್ಯಾಂಕ್‌.

- ಜಿಕೆ

ಎಲ್ಲದಕ್ಕೂ "ಸರಿ' ಎಂದು ಹೇಳುವ ಅಭ್ಯಾಸವನ್ನು "ಸರಿಕಲ್ಚರ್‌' ಎಂದು ಕರೆಯುತ್ತಾರೆ.

- ಸಂಯುಕ್ತಾ

ಬಾಯಿ, ಮೂಗು ಮತ್ತು ಕಣ್ಣುಗಳನ್ನು ಮುಟ್ಟದೇ ಇರುವುದು ಅತ್ಯಂಕ ಕಷ್ಟಕರ ಸಂಗತಿಯಲ್ಲವೇ?

- ತಸ್ಲೀಮಾ ನಸ್ರೀನ್

ನಮ್ಮ ದೇಶದ ಪಾನಿಪುರಿ ಅಣ್ಣ ತಟ್ಟೆ ತೊಳೆಯುವುದನ್ನು ನೋಡಿಯೇ ಕೊರೋನಾ ವೈರಸ್‌ ಹೆದರಿ ಓಡಿ ಹೋಗುತ್ತದೆ.

- ಮೋನಿಕಾ

ಸಾಧನೆಗೆ ಸಣ್ಣ ಸಣ್ಣ ಪ್ರಯತ್ನಗಳೇ ಮೆಟ್ಟಿಲುಗಳು ಎನ್ನುವುದು ಸ್ಪಷ್ಟವಿದ್ದಾಗ ಮಾತ್ರ ಬೃಹತ್‌ ಒತ್ತಡದಿಂದ ಮುಕ್ತರಾಗುತ್ತೇವೆ.

- ಜೆನ್‌ ಕೋಟ್ಸ್‌

ಜಗತ್ತಿನ ಮೇಧಾವಿ ವಿಜ್ಞಾನಿಗಳು: ಕೊರೊನಾ ವೈರಸ್‌ಗೆ ಔಷಧ ಇನ್ನೂ ಕಂಡು ಹಿಡಿದಿಲ್ಲ. ವಾಟ್ಸ್‌ ಆ್ಯಪ್‌: ಲವಂಗ ತಿನ್ನಿ, ಗೋಮೂತ್ರ ಕುಡಿಯಿರಿ, ಕಷಾಯ ಕುಡಿಯಿರಿ ವೈರಸ್‌ ನಿಮ್ಮಿಂದ ದೂರ ಓಡುತ್ತದೆ.

- ಅಕ್ಷರ್‌

ಜಗತ್ತು ಹೊಲಸು ಎಂದು ದೂರುವ ಮುನ್ನ,ನಿಮ್ಮ ಕನ್ನಡಕ ಸ್ವತ್ಛವಾಗಿದೆಯೇ ಪರೀಕ್ಷಿಸಿ!

- ಕೋಟ್‌ ಗಾರ್ಡನ್‌

ನಿಮ್ಮನ್ನು ನೀವು ಹೇಗೆ ನೋಡುತ್ತೀರಿ ಎನ್ನುವುದರ ಮೇಲೆ ನಿಮ್ಮೆಡೆಗಿನ ಜನರ ದೃಷ್ಟಿಕೋನ ಬದಲಾಗುತ್ತದೆ.

- ಜೆನ್‌ ಕೋಟ್‌

ನೀವು ಯಾವಾಗಲೂ ಸತ್ಯದ ಪರವಾಗಿರಿ. ಇದು ನನ್ನ ಮನವಿ. ಇಲ್ಲದಿದ್ದರೆ ನೀವು ಕೊನೆಯವರೆಗೂ ಪಶ್ಚಾತ್ತಾಪ ಪಡಬೇಕಾದೀತು.

- ಸೋನಂ ಕೆ. ಅಹುಜಾ

ಸೋತಿದ್ದೀವಿ ಎನಿಸಿದಾಗ, ಎಲ್ಲಿಂದ ಶುರುವಾಯ್ತೋ, ಅಲ್ಲಿಂದಲೇ ಮತ್ತೆ ಆರಂಭಿಸಿ ಗೆಲ್ಲಬೇಕು...

- ಕಿರಿಕ್‌ ಕೀರ್ತಿ

ನಮ್ಮ ಬಳಿ ಏನಿಲ್ಲವೋ ಅದನ್ನು ಪಡೆಯುವುದರಲ್ಲಿ ನಮ್ಮ ಖುಷಿ ಇದೆ ಎಂದು ಭಾವಿಸುತ್ತೇವೆ. ಆದರೆ ಅದು ತಪ್ಪು. ನಮ್ಮ ಬಳಿ ಏನಿದೆ ಎಂಬುದನ್ನು ಗುರುತಿಸುವುದರಲ್ಲಿ ನಮ್ಮ ಸಂತೋಷ ಅಡಗಿದೆ.

- ನಿಮಿಷಾ

ಸ್ವತಂತ್ರವಾಗಿ ಹಾರಲು ಬಿಟ್ಟು, ನಮ್ಮವರು ನಮ್ಮನ್ನೇ ಹಿಂಬಾಲಿಸುತ್ತಾರೆ. ಯಾವುದೇ ಕೆಲಸ ಮಾಡುವಾಗ ಎಚ್ಚರಿಕೆಯಿಂದ ಮಾಡಿ.

- ಅನಿತಾ ಅರ್ಜುನ್

ಇಡೀ ಜಗತ್ತು ಕೊರೋನಾ ವೈರಸ್‌ ವಿರುದ್ಧ ಹೋರಾಟದಲ್ಲಿ ನಿರತವಾಗಿದೆ. ಭಾರತೀಯರು ಈ ವಿಷಯದಲ್ಲಿ ಸ್ವಲ್ಪ ಅದೃಷ್ಟವಂತರು. ಆದಕ್ಕೇ ಅವರು ಈಗ ತಮ್ಮ ತಮ್ಮಲ್ಲಿಯೇ ಯುದ್ಧ ಮಾಡಿಕೊಳ್ಳುತ್ತಿದ್ದಾರೆ.

- ಚೇತನ್‌ ಭಗತ್‌

ಬುದ್ಧಿವಂತರ ಆಲೋಚನೆಗಳನ್ನು ನಕಲು ಮಾಡಿ ನಾನೂ ಬುದ್ಧಿವಂತ ಎಂದು ಭಾವಿಸುವ ಮೂರ್ಖನಿಗಿಂಥ ದೊಡ್ಡ ಮೂರ್ಖ ಬೇರೊಬ್ಬ ಇರಲಾರ.

- ದ ಬ್ಯಾಡ್‌ ಡಾಕ್ಟರ್‌

72 ವರ್ಷಗಳ ರಾಜಕೀಯದ ಅತಿ ದೊಡ್ಡ ಸಾಧನೆ ಏನೆಂದರೆ..., "ಜನರೇ ಸರಿ ಇಲ್ಲ ಎಂದು ಜನರೇ ಮಾತಾಡಿಕೊಳ್ಳುವಂತೆ ಮಾಡಿರುವುದು'!

- ಉಪೇಂದ್ರ

ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಡಿ. ಕೆಲವೊಮ್ಮೆ ಕೆಲವೊಂದನ್ನು ಅರ್ಥಮಾಡಿಕೊಳ್ಳುವ ಬದಲು, ನೇರವಾಗಿ ಸ್ವೀಕರಿಸಿಬಿಡುವುದೇ ಒಳ್ಳೆಯದು.

- ಶೃತಿ

ಟ್ರಂಪ್‌ಗಾಗಿ ಬ್ರಕೋಲಿ ಸಮೋಸ ತಯಾರಿಸಿದ್ದರಂತೆ. ಮೋದಿ ಅಮೆರಿಕಕ್ಕೆ ಹೋದಾಗ ಅವರು ಆಲೂಗಡ್ಡೆ, ಮೆಂತ್ಯೆ ಸೊಪ್ಪಿನ ಬರ್ಗರ್‌ ಮಾಡಿಕೊಟ್ಟಿದ್ದರೆ ಹೇಗಿರುತ್ತದೆ?

- ಗಬ್ಬರ್‌

ಸಂತೋಷ ಒಂದು ಹಾಸ್ಯ, ಒಂದು ಪದ, ಒಂದು ಫೋನ್‌ ಕರೆ, ಒಂದು ಹಾಡು, ಒಂದು ಮುಗುಳು ನಗುವಿನಿಂದ ಆರಂಭವಾಗುತ್ತದೆ. ಆದರೆ ಅದು ಅಂತ್ಯವಾಗಲು ಒಂದು ತಪ್ಪು ಸಾಕು.

- ಇನ್‌ಸ್ಪಿರೇಷನಲ್‌ ಕೋಟ್‌

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ಭಾಷಣವನ್ನು ಹೀಗೆ ಆರಂಭಿಸಿದರು. ಅಮೆರಿಕ ಭಾರತವನ್ನು ಪ್ರೀತಿಸುತ್ತದೆ. ಅಮೆರಿಕ ಭಾರತವನ್ನು ಗೌರವಿಸುತ್ತದೆ. ಇದು ನಿಜವೂ ಹೌದು.

- ಮಾರಿಯ ವ್ರಿತ್‌

ಭಗವಂತನು ಎಲ್ಲರನ್ನೂ, ಎಲ್ಲವನ್ನೂ ನೋಡುತ್ತಿರುತ್ತಾನೆ. ಏಕೆಂದರೆ, ಆತ ಅಪ್ಪರ್‌ ಬರ್ತ್‌ನಲ್ಲಿ ಕುಳಿತಿರುತ್ತಾನೆ!

- ಫೈಂಡಿಂಗ್‌ ಫ‌ನ್ನಿ

ಕನ್ನಡಕವು ಆಗಾಗ ಜಾರುವುದೆಂದು, ಸಿಟ್ಟಾಯಿತು ಮನವು ಅದರ ಮೇಲಿಂದು ಕಡೆಗೆ ಮನವು ಹೇಳಿದ ಮಾತೊಂದು, ಅಯ್ಯೋ ನನಗೆ ಕನ್ನಡಕವು ಶಾಶ್ವತವಾಯಿತೆಂದು.

- ಹೊನಲು

ಟ್ರಂಪ್‌ ಅವರ ಭಾರತ ಭೇಟಿಯಿರುವಾಗಲೇ ಹಿಂಸಾಚಾರ ಆರಂಭವಾಗಿರುವುದು ಅತ್ಯಂತ ದುರದೃಷ್ಟಕರ. ಇಂಥದ್ದು ನಡೆಯದಂತೆ ತಡೆಯಬೇಕಿತ್ತು. ಎಲ್ಲರೂ ಈ ಹೊತ್ತಿನಲ್ಲಿ ಸಂಯಮ ಕಾಯ್ದುಕೊಳ್ಳಬೇಕಾಗಿದೆ.

- ಸುಧೀಂದ್ರ ಕುಲಕರ್ಣಿ

ಮೊನ್ನೆ ಟ್ರಂಪ್‌ ರೋಡ್‌ಶೋಗೆ 50-60 ಲಕ್ಷ ಜನ ಸೇರುತ್ತಾರೆ ಎನ್ನಲಾಗಿತ್ತು, ಈಗ ಒಂದು ಕೋಟಿ ಎನ್ನುತ್ತಿದ್ದಾರೆ. ಫೆ.24ರ ವೇಳೆಗೆ ಈ ಸಂಖ್ಯೆ 125 ಕೋಟಿಯಾದರೂ ಅಚ್ಚರಿಯಿಲ್ಲ!

- ಸೌರಭ್‌ ರಾಯ್‌

ಅನ್ಯಾಯ ನಡೆದಾಗ ನೀವು ತಟಸ್ಥರಾಗಿದ್ದೀರಿ ಎಂದರೆ ನೀವು ದಮನಕಾರಿಗಳ ಜೊತೆ ನಿಂತಿದ್ದೀರಿ ಎಂದು ಅರ್ಥ.

- ಟುಟು

ಶಾಂತಿಯಿಂದ ಕೂಡಿದ್ದ ಕನ್ನಡನಾಡು ಈಗ ಹಿಂದೂಸ್ತಾನ, ಪಾಕಿಸ್ತಾನ, ಹಿಂದೂ, ಮುಸ್ಲಿಂ, ಎಡ-ಬಲದವರು ಜಗಳದಲ್ಲಿ ಮುಳುಗಿ ಹೋಗುತ್ತಿದೆ. ಕನ್ನಡದ ಮೂಲಕ ಏಳಿಗೆಯತ್ತ ಸಾಗಬೇಕಾಗಿದ್ದ ನಾಡು ಪರನಾಡಿನವರ ವಿಷಯಗಳನ್ನು ತನ್ನ ಕುತ್ತಿಗೆಗೆ ಕಟ್ಟಿಕೊಂಡು ಉಸಿರುಗಟ್ಟಿಸಿಕೊಳ್ಳುತ್ತಿದೆ.

- ಪ್ರಶಾಂತ್‌ ಎಸ್‌.

ಕಷ್ಟಗಳ ಒಡಲಲ್ಲಿ ಬದುಕಿನ ನೀಲನಕ್ಷೆ ಇರುತ್ತದೆ. ಆದರೆ ಅದನ್ನು ಹುಡುಕಲು ಸಂಯಮವೆಂಬ ಜ್ಯೋತಿ ಅಗತ್ಯ.

- ಬ್ರೇನಿಕೋಟ್‌

ಆಕಾಂಕ್ಷೆ ಯಾವುದನ್ನೂ ಬದಲಿಸುವುದಿಲ್ಲ. ಆದರೆ, ಬದ್ಧತೆ ಎಲ್ಲವನ್ನೂ ಬದಲಿಸುತ್ತದೆ.

- ಸುಷಾಂತ ನಂದ ಐಎಫ್ಎಸ್‌

ಯಾವುದೇ ಕೆಲ ಸವು ನಿಮ್ಮ ಶಾಂತಿಗೆ ಭಂಗ ತರುತ್ತದೆ ಎಂದಾದರೆ, ಅದನ್ನು ಮಾಡಲೇಬೇಡಿ.

- ಟ್ರೂಕೋಟ್‌

"ದುರಾಸೆ'ಯನ್ನು ಇನ್ನೂ ಏಕೆ ಮಾನಸಿಕ ಕಾಯಿಲೆ ಎಂದು ಘೋಷಿಸಿಲ್ಲ?

- ದೇವದತ್ತ ಪಟ್ನಾಯಕ್‌

ನಾವು ಮುಹೂರ್ತ ಕೇಳದೇ ಹುಟ್ಟುತ್ತೇವೆ, ಸಾಯುತ್ತೇವೆ. ಆದರೆ ಬದುಕಿದ್ದಾಗ ಪ್ರತಿಯೊಂದಕ್ಕೂ ಮುಹೂರ್ತ ನೋಡುತ್ತೇವೆ!

- ತನಕ್‌ ನಿಗಂ

ಪ್ರವಾಹ ಪೀಡಿತ ಪ್ರದೇಶಗಳ ದುಸ್ಥಿತಿಯ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗುತ್ತಲೇ ಇದೆ, ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನ ಮಾತ್ರ ಸರ್ಕಾರ ಉಳಿಸಿಕೊಳ್ಳೋದರ ಮೇಲೆ ಕೇಂದ್ರೀಕೃತವಾಗಿದೆ. ಅನೈತಿಕ ಮಾರ್ಗದ ಮೂಲಕ ಅಧಿಕಾರ ಹಿಡಿದ ಇವರು ಸಹಜವಾಗಿಯೇ ಅಭಿವೃದ್ಧಿಯನ್ನು ಕಡೆಗಣಿಸಿ ಸ್ವಾರ್ಥ ಸಾಧನೆಗೆ ಇಳಿದಿದ್ದಾರೆ.

- ಸಿದ್ದರಾಮಯ್ಯ

ಮೊಬೈಲ್‌ ಎಂಬ ಶಬ್ದ ಕೇಳಿದರೆ ಸಾಕು, 2 ವರ್ಷದ ಮಗುವಿನ ಕಿವಿ ಕೂಡ ನೆಟ್ಟಗಾಗುತ್ತದೆ. ಮೊಬೈಲ್‌ ಬಂದ ಮೇಲೆ ಮಕ್ಕಳು ತಮ್ಮ ಬಾಲ್ಯದ ದಿನಚರಿಗಳನ್ನೇ ಬದಲಿಸಿಕೊಂಡಿದ್ದಾರೆ. ಪಕ್ಕದ ಮನೆಯ ಸ್ನೇಹಿತರ ಜತೆಗೂಡಿ ಆಡುವ ಸ್ಥಿತಿಯನ್ನು ಮೊಬೈಲ್‌ ನುಂಗಿಹಾಕಿದೆ.

- ಮನಸ್ಸೇ

"ವಿಭಿನ್ನ ಹೂವುಗಳಿದ್ದರೇನೇ, ಹೂಗುತ್ಛ ಸುಂದರವಾಗಿ ಕಾಣುವುದು' ಎಂಬ ಸತ್ಯವನ್ನು ನಮ್ಮ ಜನರು ಮತ್ತು ರಾಜಕಾರಣಿಗಳು ಅರಿತುಕೊಂಡರೆ ಚೆನ್ನಾಗಿತ್ತು.

- ಹರ್ಷ ಗೋಯೆಂಕಾ

ಸಂಬಂಧಿಕರು- ನೀನು ಫೈನಲ್‌ ಇಯರ್‌ ಅಲ್ವಾ? ಪ್ಲೇಸ್‌ಮೆಂಟ್‌ ಆಗಿದ್ಯಾ? ನಾನು- ಇಲ್ಲ. ಸಂಬಂಧಿಕರು- ಮತ್ತೆ ಭವಿಷ್ಯದ ಪ್ಲಾನ್‌ ಏನು? ನಾನು- ಸ್ವಲ್ಪ ವರ್ಕೌಟ್ ಮಾಡಿ ದಪ್ಪ ಆಗ್ಬೇಕು ಅಂದ್ಕೊಂಡಿದೀನಿ.

- ಟ್ರೋಲ್‌ ಹೈಕ್ಳು

ಗೆಲ್ಲೋವರೆಗೂ ಯಾರೂ ನಿನ್ನ ಗುರುತಿಸಲ್ಲ. ಗೆದ್ದ ಮೇಲೆ ಎಲ್ಲರಿಗೂ ನೀನು ಬೇಕಾಗಿರೋನೆ. ಆದರೆ, ನೆನಪಿರಲಿ. ಜನಗಳಿಗೆ ನಿನ್ನ ಗೆಲುವಷ್ಟೇ ಬೇಕು!

- ಚೇತನ್‌ ದಾಸರಹಳಿ

ಕನಸು ಕಾಣುವುದಕ್ಕಿಂತ ಗುರಿ ಹಾಕಿಕೊಳ್ಳುವುದು ಮುಖ್ಯ. ಗುರಿಯಷ್ಟೇ ಮುಖ್ಯವಾದದ್ದು, ಅದಕ್ಕೆ ತಕ್ಕ ಪ್ರಯತ್ನ ಪಡುವುದು.

- ಪೌಲೋ ಕೋಲ್ಹೋ

ಕೆಲವರು ಪಾಕಿಸ್ತಾನವನ್ನು ಹೊಗಳುತ್ತಾರೆ, ಭಾರತದ ಸಕಲ ಸೌಲಭ್ಯ, ಸ್ವಾತಂತ್ರ ಅನುಭವಿಸುತ್ತಾ!

- ಅನಿರ್ಬಾನ್‌ ಚಟರ್ಜಿ

ನಾನು ಪದೇ ಪದೆ ಕೆಲಸದ ನಿಮಿತ್ತ ವಿದೇಶಗಳಿಗೆ ಪ್ರಯಾಣ ಮಾಡುತ್ತಿರುತ್ತೇನೆ. ಸೋಜಿಗವೆಂದರೆ ದೆಹಲಿ ಏರ್‌ಪೋರ್ಟ್‌ನಲ್ಲಿ ಬೋರ್ಡಿಂಗ್‌ ಪಾಸ್‌ ಮತ್ತು ಇತರ ವಿಚಾರಗಳಿಗೆ ಸರತಿಯಲ್ಲಿ ನಿಂತಿರುವಾಗ ಆಫ‌^ನ್ನರು ನನ್ನ ಬಳಿ ಪಶೊ ಅಥವಾ ದರಿ ಭಾಷೆಯಲ್ಲಿ ಮಾತನಾಡುತ್ತಾರೆ.

- ಸಿದ್ಧಾರ್ಥ್ ಸಿಂಗ್‌

ದೆಹಲಿ ಚುನಾವಣೆಯಲ್ಲಿ ಸೋತ ಬಿಜೆಪಿಗೆ ಚಿದಂಬರಂ ಪಾಠ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ತಮ್ಮ ಪಕ್ಷವೂ ನಿಂತಿತ್ತು ಎನ್ನುವುದನ್ನು ಅವರು ಮರೆತೇ ಬಿಟ್ಟರಾ?

- ಅನಿಶಾ ಮುಖರ್ಜಿ

ಕಷ್ಟಗಳು ಮನುಷ್ಯನನ್ನು ಗಟ್ಟಿಗೊಳಿಸಲು ಬರುವ ಇಟ್ಟಿಗೆಗಳು. ಅವುಗಳಿಂದ ಮನೆ ಕಟ್ಟಿ ಕೊಳ್ಳುತ್ತೀರೋ, ಮೈಮೇಲೆ ಹಾಕಿಕೊಂಡು ಸಮಾಧಿಯಾಗುತ್ತೀರೋ ನಿಮಗೇ ಬಿಟ್ಟದ್ದು!

- ಟ್ರೂಕೋಟ್ಸ್‌

ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲು ಸಾಧ್ಯವಾಗದೇ ಇರುವಂಥ ಕಠಿಣ ದೇಶದ್ರೋಹದ ಕಾನೂನು ಬೇಕು. ಏಕೆಂದರೆ ಜಿರಳೆಗಳಂತೆ ವ್ಯವಸ್ಥೆಯೊಳಗೆ ತೂರಿಕೊಂಡಿರುವವರನ್ನು ನಿಯಂತ್ರಿಸಲು ಅದು ಬೇಕು. ಇದರ ಜತೆಗೆ ವಾಕ್‌ ಸ್ವಾತಂತ್ರ್ಯ ವಿಚಾರ ಮುಂದಿಟ್ಟುಕೊಂಡು ಮಾತಾಡುವವರನ್ನು ತಣ್ಣಗಾಗಿಸಬೇಕು.

- ಸಿಯಾರಾಮ್‌ ಶರ್ಮಾ

15 ವರ್ಷ ನಿರಂತರ ದೆಹಲಿಯನ್ನು ಆಳಿದ ಕಾಂಗ್ರೆಸ್‌ ಎಂಥ ದುಸ್ಥಿತಿಗೆ ತಲುಪಿದೆ. ಆದರೂ ಅದು ಬಿಜೆಪಿ ಸೋತಿತೆಂದು ಸಂಭ್ರಮಿಸು ದೆ!

- ಅನೀಶಾ ಬ್ಯಾನರ್ಜಿ

ಮನುಷ್ಯ ಸಾಫ್ಟ್ ವೇರ್‌ ಗಳಂತೆ ನಿರಂತರ ಅಪ್ಡೆಟ್‌ ಆಗುತ್ತಲೇ ಇರಬೇಕು. ಇಲ್ಲದಿದ್ದರೆ ಅವನು ಎಲ್ಲಿಯೂ ಸಲ್ಲುವುದಿಲ್ಲ.

- ಲೈಫ್ ಕೋಕ್‌

ಕೀಳು ಮಟ್ಟದ ತಂತ್ರಗಾರಿಕೆ, ಭ್ರಷ್ಟಗೊಂಡಿರುವ ಚುನಾವಣಾ ಆಯೋಗದ ನಡುವೆ ಈ ವಿಜಯ ಸಾಧಿಸಿದ್ದಕ್ಕೆ ಎಎಪಿಗೆ ಅಭಿನಂದನೆಗಳು. ಇತ್ತೀಚಿನ ಕೋಮುಧ್ರುವೀಕರಣದ ಕೀಳು ಪ್ರಚಾರವನ್ನು ಕಡೆಗಣಿಸಿದ್ದಕ್ಕೆ ಮತ್ತು ದೇಶದಲ್ಲಿ ಅದು ಸಿದ್ಧ ಮಾದರಿಯಾಗುವುದನ್ನು ತಪ್ಪಿಸಿದ್ದಕ್ಕೆ ದೆಹಲಿ ಮತದಾರರಿಗೂ ಅಭಿನಂದನೆಗಳು.

- ಯೋಗೇಂದ್ರ ಯಾದವ್‌

ಹಿರಿಯರ ಚಾಳಿ ಕಿರಿಯರಿಗೆಲ್ಲ ಎನ್ನುವಂತಿದೆ ಬಾಂಗ್ಲಾ ದೇಶಿ ಕಿರಿಯ ಕ್ರಿಕೆಟಿಗರ ದುರ್ವರ್ತನೆ.

- ಗೌರವ್‌ ಅಹುಜಾ

ಸಂತೋಷವನ್ನು ಹುಡುಕುವುದಲ್ಲ, ಬದುಕಿನ ಅರ್ಥವನ್ನು ಹುಡುಕುವುದು ನಮ್ಮ ಗುಣವಾಗಬೇಕು.

- ಟ್ರೂ ಕೋಟ್‌

ಫೇರ್‌ನೆಸ್‌ ಕ್ರೀಮ್‌ ಬ್ಯಾನ್‌ ಮಾಡಿ ಪರವಾಗಿಲ್ಲ, ಆದ್ರೆ, ಫೇರ್‌ನೆಸ್‌ ಆ್ಯಪ್‌ ಬ್ಯಾನ್‌ ಮಾಡಬ್ಯಾಡ್ರಿ. ನಮ್ಮ ಹೆಣ್ಣುಮಕ್ಕಳಿಗೆ ಶ್ಯಾನೆ ಪ್ರಾಬ್ಲಿಮ್‌ ಆಯ್ತದೆ.

- ಸಿದ್ದು

ಅಂಡರ್‌ 19 ವಿಶ್ವಕಪ್‌ ಹೇಗಿತ್ತೆಂದರೆ, ಅತ್ಯಂತ ಬೋರಿಂಗ್‌ ಥ್ರಿಲ್ಲರ್‌ ಥರ.

- ಗಬ್ಬರ್‌

ಹಕ್ಕಿಲ್ಲದಿದ್ದರೂ ಪಡೆದುಕೊಳ್ಳಲು ಮನಸ್ಸಾದರೆ, ಅಲ್ಲೊಂದು "ಮಹಾಭಾರತ' ಪ್ರಾರಂಭವಾಗುತ್ತದೆ. ಹಕ್ಕಿದ್ದರೂ ಅದನ್ನು ತ್ಯಾಗ ಮಾಡುವ ಮನ್ಸಾಸದರೆ, ಅಲ್ಲೊಂದು "ರಾಮಾಯಣ' ಪ್ರಾರಂಭವಾಗುತ್ತದೆ.

- ಪ್ರಿಯದರ್ಶಿನಿ ಗೌಡ

ನೀವು ಕೆಲವರನ್ನು ಪ್ರತಿ ಬಾರಿಯೂ ಮೂರ್ಖರನ್ನಾಗಿಸಬಹುದು. ಕೆಲವು ಬಾರಿ ಎಲ್ಲರನ್ನೂ ಮೂರ್ಖರನ್ನಾಗಿಸಬಹುದು. ಆದರೆ, ಪ್ರತಿ ಬಾರಿಯೂ ಎಲ್ಲರನ್ನೂ ಮೂರ್ಖರನ್ನಾಗಿಸಲು ಆಗುವುದಿಲ್ಲ.

- ಪನ್‌ಸ್ಟರ್‌

ದೆಹಲಿ ಎಕ್ಸಿಟ್‌ ಪೋಲ್‌ ನೋಡಿ ಆಪ್‌ ಮತ್ತು ಬಿಜೆಪಿಗೆ ಟೆನ್ಶನ್‌ ಆರಂಭವಾಗಿದೆ. ಆದರೆ ಕಾಂಗ್ರೆಸ್‌ ಮಾತ್ರ ಆರಾಮವಾಗಿದೆ... !

- ಶೇಖರ್‌ಸ್ಪಾಟ್‌

ಈಗ ಕಲ್ಯಾಣ ಕರ್ನಾಟಕದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಹೈದರಾಬಾದ್‌ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು ರಸ್ಕರಿಸಿದವರು, ವಿರೋಧಿಸಿದವರು ಯಾರು ಎನ್ನುವುದನ್ನು ಕೂಡಾ ಮರೆಯಬಾರದು. ನಮ್ಮ ಸರ್ಕಾರ ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಿದ್ದರಿಂದಲೇ ಇಂದು ಉದ್ಯೋಗ ಶಿಕ್ಷಣದಲ್ಲಿ ವಿಶೇಷ ಮೀಸಲಾತಿ ಸಿಗುತ್ತಿದೆ.

- ಸಿದ್ದರಾಮಯ್ಯ

ಎಲ್ಲ ರಾಜಕೀಯ ಪಂಡಿತರೂ ಗಾಢ ನಿದ್ರೆಯಿಂದ ಎದ್ದು ಕುಳಿತಿದ್ದಾರೆ. ದೆಹಲಿ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲದೇ ಇರುವವರು ಕೂಡ ಚುನಾವಣೆಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಬೇಗ ಬಾ, ಫೆ.11.

- ಪ್ರಶಾಂತ್‌ ಕುಮಾರ್‌

ಸಂಸತ್ತು ಎನ್ನುವುದು ಚುನಾವಣಾ ಅಖಾಡದಂತೆ ಬದಲಾಗಿದೆ. ಜನ ನಾಯಕರಿಗೆ ಏನು ಮಾತನಾಡ ಬೇಕು, ಏನು ಮಾತನಾಡಬಾರದು ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲದಾಗಿದೆ

- ರಾಕೇಶ್‌ ಬೂಂಬಕ್‌

ದೆಹಲಿ ಜನರೇ, ದಯವಿಟ್ಟು ಹಕ್ಕು ಚಲಾಯಿಸಿ. ದೆಹಲಿಯನ್ನೇಕೆ "ಕ್ಯಾಪಿಟಲ್‌'(ರಾಜಧಾನಿ) ಎನ್ನುತ್ತಾರೆ ಎಂಬುದನ್ನು ತೋರಿಸಿ.

- ಚೇತನ್‌ ಭಗತ್

ನಾವು ಅಸಂತೋಷದ ಆಗರಗಳಾದಷ್ಟೂ ನಮ್ಮ ಸುತ್ತಲಿರುವರಿಗೂ ಕಹಿಯನ್ನು ಹಂಚಲಾರಂಭಿಸುತ್ತೇವೆ.

- ಪೌಲೋ ಕೋಲ್ಹೋ

ತುಕ್ದೆ ಗ್ಯಾಂಗ್‌ ಬಗ್ಗೆ ಮಾಹಿತಿ ಇಲ್ಲ ಎಂದು ಗೃಹ ಸಚಿವಾಲಯವೇ ಸ್ಪಷ್ಟಪಡಿಸಿಯಾಗಿದೆ. ಆದರೆ ಪ್ರಧಾನಿ ಸಂಸತ್ತಿನಲ್ಲಿ ಯಾವ ತುಕ್ದೆ ಗ್ಯಾಂಗ್‌ನ ಹೆಸರಿಸಿದ್ದು?

- ಕೃಷಿಕ

ಈ ದೇಶದಲ್ಲಿ ಯಾವುದೂ ಉಚಿತವಾಗಿ ಸಿಗುವುದಿಲ್ಲ. ನಿಮಗೆ ಏನಾದರೂ ಉಚಿತವಾಗಿ ಸಿಕ್ಕರೆ ಕೇಜ್ರಿವಾಲ್‌ ಗಲ್ಲ, ತೆರಿಗೆದಾರರಿಗೆ ಧನ್ಯವಾದ ಹೇಳಿ!

- ಸತ್ಯಂ ಮಿಶಾ

ಚೀನಾದ ಪ್ರತಿನಿಧಿಗಳು ಆಗಮಿಸಿದ್ದ ಸಭೆಯಲ್ಲಿ ಪಾಲ್ಗೊಂಡ ಮಲೇಷ್ಯಾ ವ್ಯಕ್ತಿಗೆ ಕೊರೊನಾ ವೈರಸ್‌ ತಗುಲಿದೆ. ಈ ವೈರಸ್‌ ಇಷ್ಟೊಂದು ವ್ಯಾಪಿಸುತ್ತಿರುವುದು ನೋಡಿದರೆ, ಖಂಡಿತಾ ಚೀನಾ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದೆ ಎಂಬ ಅನುಮಾನ ಮೂಡಿದೆ.

- ಗಬ್ಬರ್‌

ಹೊಸ ಸೇರ್ಪಡೆ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.