ವೈರಲ್: ಬುಲ್ಡೋಜರ್ ನಲ್ಲಿ ಬಂದ ಮದುವೆ ದಿಬ್ಬಣ; ವರನ ಕನಸು ಕೊನೆಗೂ ನನಸು.!
Team Udayavani, Feb 4, 2023, 3:01 PM IST
ಗುಜರಾತ್: ಮದುವೆಯ ದಿಬ್ಬಣ ಕಾರಿನಲ್ಲಿ ಬರುವುದನ್ನು ನೋಡಿದ್ದೇವೆ. ಕಾರಿಗೆ ಅಲಂಕೃತ ಹೂಗಳನ್ನು ಶೃಂಗಾರಿಸಿ ಹೆಣ್ಣಿನ ಕಡೆಗೆ ಗಂಡಿನ ಕಡೆಯವರು ಹೋಗುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮದುವೆ ಗಂಡು ದಿಬ್ಬಣದೊಂದಿಗೆ ಬಂದಿರುವುದೇ ಸುದ್ದಿಯಾಗಿದೆ.
ಗುಜರಾತ್ ನ ನವಸಾರಿಯಲ್ಲಿ ಇತ್ತೀಚೆಗೆ ನಡೆದ ಮದುವೆ ಸಮಾರಂಭದ ವಿಡಿಯೋ ವೈರಲ್ ಆಗಿದೆ. ಮದುವೆ ಗಂಡು ಕಾರಿನಲ್ಲಿ ಅಥವಾ ಬಸ್ಸಿನಲ್ಲಿ ಬರದೇ ಬುಲ್ಡೋಜರ್ ಗಾಡಿಯಲ್ಲಿ ಬಂದಿದ್ದಾನೆ.!
ಹೆಣ್ಣಿನ ಕಡೆ ಅಂದರೆ ಮದುವೆ ಆಗುವ ಜಾಗಕ್ಕೆ ದಿಬ್ಬಣದೊಂದಿಗೆ, ತನ್ನ ಸಂಬಂಧಿಕರೊಂದಿಗೆ ಅಲಂಕೃತಗೊಂಡ ಜೆಸಿಬಿನಲ್ಲಿ ಕೂತು, ಡಿಜೆ, ಡ್ರಮ್ಸ್ ನೊಂದಿಗೆ ವರ ಮದುವೆ ಮನೆಗೆ ಜಾಗಕ್ಕೆ ಬಂದಿದ್ದಾರೆ.
ಇದನ್ನೂ ಓದಿ: ವಿಧಾನಸಭಾ ಚುನಾವಣೆ: ಬಿಜೆಪಿ ಪ್ರಭಾರಿಯಾಗಿ ಪ್ರಧಾನ್, ಸಹ ಪ್ರಭಾರಿ ಅಣ್ಣಾಮಲೈ
ಮದುವೆ ಗಂಡು ಕೆಯೂರ್ ಪಟೇಲ್ ಕೆಲ ಸಮಯದ ಹಿಂದೆ ಪಂಜಾಬ್ ನಲ್ಲಿ ಬುಲ್ಡೋಜರ್ ನಲ್ಲಿ ಮದುವೆ ಗಂಡು ಬರುವ ವಿಡಿಯೋವನ್ನು ನೋಡಿದ್ದರು. ತಾನು ಕೂಡ ತನ್ನ ಮದುವೆಯಲ್ಲಿ ಹೀಗೆಯೇ ಬುಲ್ಡೋಜರ್ ನಲ್ಲೇ ಕೂತು ಹೋಗಬೇಕೆನ್ನುವ ಕನಸು ಕೆಯೂರ್ ಪಟೇಲ್ ಅವರದಿತ್ತು. ಇದೇ ಕಾರಣಕ್ಕೆ ಕೆಯೂರ್ ಪಟೇಲ್ ಬುಲ್ಡೋಜರ್ ನಲ್ಲಿ ಕೂತು ಮದುವೆ ಮನೆಗೆ ಬಂದಿದ್ದಾರೆ.
ರಸ್ತೆ ಇಡೀ ಡಿಜೆ ಹಾಕಿಕೊಂಡು, ಮೆರವಣಿಗೆ ಹೊರಟಂತೆ, ಬುಲ್ಡೋಜರ್ ನಲ್ಲಿ ಕೂತು ಬಂದ ಮದುವೆ ಗಂಡಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
#viralvdoz#WATCH: #Groom arrives in #bulldozer at bride’s house in #Gujarat‘s #Navsari
Keyur Patel, belonging to the Dhodi Patel community of #Kaliyari_village, said he was inspired by a #viralvideo in which the groom was seen arriving at the #bride‘s house in a bulldozer. pic.twitter.com/g6zslLkABx— ViralVdoz (@viralvdoz) February 3, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಗನಿಗಾಗಿ ಆರ್‌ಆರ್‌ಆರ್ ಸಿನಿಮಾ ಕಥೆಯನ್ನೇ ಪುಸ್ತಕ ಮಾಡಿಕೊಟ್ಟ ತಾಯಿ! -ವಿಡಿಯೋ ವೈರಲ್
ಅಪಘಾತದಲ್ಲಿ ಪೇದೆ ಮೃತ್ಯು: 5 ವರ್ಷದ ಮಗನನ್ನು ಮಕ್ಕಳ ಕಾನ್ಸ್ ಟೇಬಲ್ ಆಗಿ ನೇಮಿಸಿದ ಇಲಾಖೆ
ON CAMERA: ಮನೆ ಮೇಲೆ ಬಿದ್ದ ಖಾಸಗಿ ಲಘು ವಿಮಾನ; ಇಬ್ಬರು ಮಕ್ಕಳು ಪವಾಡಸದೃಶ ಪಾರು!
ವಿದ್ಯಾರ್ಥಿನಿಗೆ ಹೊಡೆದ ಆರೋಪ: ಶಿಕ್ಷಕನನ್ನೇ ಅಟ್ಟಾಡಿಸಿ ಥಳಿಸಿದ ಪೋಷಕರು
Watch Viral Video; ಕಾಡಿನಲ್ಲಿ ಮಾತ್ರ ರಾಜ…ಆದರೆ ನಾಡಲ್ಲಿ…ಸಿಂಹ V/S ಬೀದಿನಾಯಿ