
Police Officers: ನಡುರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡ ಪೊಲೀಸರು; ವಿಡಿಯೋ ವೈರಲ್
Team Udayavani, Sep 18, 2023, 4:50 PM IST

ಪಾಟ್ನಾ: ನಡು ರಸ್ತೆಯಲ್ಲೇ ಪೊಲೀಸರಿಬ್ಬರು ಹೊಡೆದಾಡಿಕೊಂಡಿರುವ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿಹಾರದ ನಳಂದಾದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರಿಬ್ಬರು ರಸ್ತೆಯಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಜನರ ರಕ್ಷಣೆಯಲ್ಲಿ ತೊಡಗಿ, ಅಪರಾಧವನ್ನು ತಡೆಯಬೇಕಾಗಿರುವ ಪೊಲೀಸರೇ ಹಾಡಹಗಲೇ ನಡು ರಸ್ತೆಯಲ್ಲಿ ಹೊಡೆದಾಡಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಡಯಲ್ 112 ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳ ನಡುವೆ ಮಾರಾಮಾರಿ ನಡೆದಿದೆ. ಸೊಹ್ಸರಾಯ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ರೈಲ್ವೇ ಹಾಲ್ಟ್ ಬಳಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ.
ವಿಡಿಯೋದಲ್ಲಿ ಇಬ್ಬರು ಪರಸ್ಪರರನ್ನು ಬೈದುಕೊಂಡಿದ್ದಾರೆ. ಒಬ್ಬರು ಮತ್ತೊಬ್ಬರ ಮೇಲೆ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದಾರೆ. ಗಲಾಟೆಯ ವೇಳೆ ಒಬ್ಬ ಪೊಲೀಸ್ ಜೀಪ್ ನಿಂದ ಲಾಠಿ ತೆಗೆದು ಮತ್ತೊಬ್ಬ ಪೊಲೀಸ್ ಮೇಲೆ ಹಲ್ಲೆಗೈದಿದ್ದಾರೆ.
ಅಕ್ಕಪಕ್ಕದಲ್ಲಿದ್ದ ಜನ ಜಗಳವನ್ನು ಬಿಡಿಸುವ ಯತ್ನವನ್ನು ಮಾಡಿದ್ದರೂ ಅದು ಸಾಧ್ಯವಾಗಿಲ್ಲ. ಈ ಘಟನೆಗೆ ಕಾರಣವೇನೆಂದು ಇದುವರೆಗೆ ತಿಳಿದು ಬಂದಿಲ್ಲ.
ಸದ್ಯ ವೈರಲ್ ವಿಡಿಯೋವನ್ನು ಇಲಾಖೆ ಪರಿಶೀಲನೆ ಮಾಡಿದ್ದು, ಇಬ್ಬರು ಪೊಲೀಸರ ತನಿಖೆಯನ್ನು ಇಲಾಖೆ ಆರಂಭಿಸಿದೆ. ಇಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಇಲಾಖೆ ಹೇಳಿದೆ.
बिहार में शराब बंद है pic.twitter.com/If3tEpUIpU
— Piyush Rai (@Benarasiyaa) September 18, 2023
ಟಾಪ್ ನ್ಯೂಸ್
