Same-s*x Wedding: ಗಂಡನನ್ನು ಬಿಟ್ಟು ಸೊಸೆಯನ್ನೇ ಮದುವೆಯಾದ ಅತ್ತೆ.!
Team Udayavani, Aug 13, 2024, 10:02 AM IST
ಪಾಟ್ನಾ: ಮಹಿಳೆಯೊಬ್ಬರು ತನ್ನ ಗಂಡನನ್ನು ಬಿಟ್ಟು ಸಂಬಂಧಿ ಮಹಿಳೆಯೊಂದಿಗೆ ವಿವಾಹವಾಗಿರುವ ಅಪರೂಪದ ಘಟನೆ ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ.
ಸುಮನ್ ಹಾಗೂ ಶೋಭಾ ಸಂಬಂಧಿಗಳಾಗಿದ್ದು, ಇಬ್ಬರ ನಡುವೆ ಕೌಟುಂಬಿಕ ಸಂಬಂಧದ ಹೊರತಾಗಿ ಪ್ರೇಮ ಬಂಧವಿದೆ. ಕಳೆದ ಮೂರು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.
ಶೋಭಾ ಇನ್ನೊಬ್ಬರ ಜತೆ ವಿವಾಹವಾಗುವುದು ಸುಮಾನ್ ಗೆ ಇಷ್ಟವಿರಲಿಲ್ಲ. ಈ ಕಾರಣದಿಂದ ಸುಮನ್ ಗಂಡನ ಮನೆಬಿಟ್ಟು ಶೋಭಾಳ ಜತೆ ಓಡಿ ಹೋಗಿ ಮದುವೆ ಆಗಿದ್ದಾರೆ. ಇಬ್ಬರು ಬೆಳವ ಗ್ರಾಮದ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡು, ತಾಳಿ ಕಟ್ಟಿ ಸಪ್ತಪದಿ ತುಳಿದಿದ್ದಾರೆ.
“ಶೋಭಾ ನನ್ನ ಜೀವನದ ಪ್ರೀತಿ. ಬೇರೆಯವರನ್ನು ಮದುವೆಯಾದರೆ ಆಕೆಯನ್ನು ಕಳೆದುಕೊಳ್ಳುವುದನ್ನು ನಾನು ಊಹಿಸಲೂ ಸಾಧ್ಯವಾಗಲಿಲ್ಲ. ಒಬ್ಬರನ್ನೊಬ್ಬರು ಕಳೆದುಕೊಳ್ಳುವ ಭೀತಿ ಮದುವೆ ಆಗಲು ಪ್ರೇರಣೆ ನೀಡಿತು” ಎಂದು ಸೊಸೆ ಸುಮನ್ ಹೇಳುತ್ತಾರೆ.
बिहार के गोपालगंज से थोड़ा विचित्र मामला सामने आया है….
जहां मामी और भांजी के बीच प्यार हो गया और दोनों ने जन्म-जन्म तक साथ रहने की कसमें खा ली।
मामी- भांजी ने पुरे रिती रेवाज के साथ शादी कर ली….#SameSexMarriage pic.twitter.com/AyDSUzKZBb
— Afroz Alam (@AfrozJournalist) August 12, 2024
ಮದುವೆ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಜೀವನದ ಕೊನೆಯವರೆಗೂ ನಾವಿಬ್ಬರೂ ಜೊತೆಯಾಗಿ ಇರುತ್ತೇವೆ ಎಂದಿದ್ದಾರೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದು “ಅಸ್ವಾಭಾವಿಕ”, “ನೈಸರ್ಗಿಕ ನಿಯಮಗಳ ಉಲ್ಲಂಘನೆ” ಮತ್ತು ಇದನ್ನು “ಕಲಿಯುಗದ ಸೂಚನೆ” ಎಂದು ಕೆಲವರು ಕರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haryana; ಭರ್ಜರಿ ಪ್ರಚಾರ ಆರಂಭಿಸಿದ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್
Bihar: ಯೂಟ್ಯೂಬ್ ನೋಡಿ ಶಸ್ತ್ರ ಚಿಕಿತ್ಸೆ: ನಕಲಿ ವೈದ್ಯನ ಸಾಹಸಕ್ಕೆ 15ರ ಬಾಲಕ ಬಲಿ
Kolkata hospital Case; ಮಮತಾ ಸರ್ಕಾರದ ಕ್ರಮ ವಿರೋಧಿಸಿ ಟಿಎಂಸಿ ಸಂಸದ ಜವಾಹರ್ ರಾಜೀನಾಮೆ
Jharkhand; ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ 12 ಸಾವು; ಮುಳುವಾಯಿತಾ ಬದಲಾದ ನಿಯಮ
Ajit Doval; ರಷ್ಯಾ – ಉಕ್ರೇನ್ ಯುದ್ದ ನಿಲ್ಲಿಸಲು ಭಾರತದ ದೋವಲ್ ಮಧ್ಯಸ್ಥಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.