
ಸ್ಪಾರ್ಕ್ ಗನ್ ಹಿಡಿದು ಪೋಸ್ ಕೊಡುವಾಗ ವಧುವಿನ ಮುಖಕ್ಕೆ ತಾಗಿದ ಬೆಂಕಿ ಕಿಡಿ: ವಿಡಿಯೋ ವೈರಲ್
ಮದುವೆಯ ವೇದಿಕೆಯಲ್ಲಿ ಸಂಭ್ರಮಿಸಲು ಹೋಗಿ ಎಡವಟ್ಟು
Team Udayavani, Apr 1, 2023, 12:42 PM IST

ಮಹಾರಾಷ್ಟ್ರ: ಮದುವೆಯ ಸಂಭ್ರಮದಲ್ಲಿ ಕೇಕ್ ಕಟ್ ಮಾಡುವುದು, ಆ ವೇಳೆ ಪಟಾಕಿಯಂತೆ ಪಾಪ್ಅಪ್ ಹೊಡೆಯುವುದು ಸಾಮಾನ್ಯ. ಇಲ್ಲೊಂದು ಜೋಡಿ ಮದುವೆಯ ವೇದಿಕೆಯಲ್ಲಿ ಸಂಭ್ರಮಿಸಲು ಹೋಗಿ ಎಡವಟ್ಟು ಮಾಡಿಕೊಂಡಿರುವುದು ವೈರಲ್ ಆಗಿದೆ.
ವಧು ವರರು ಇಬ್ಬರು ಮದುವೆಯ ವೇದಿಕೆಯಲ್ಲಿ ಸಂತಸವಾಗಿ ನಿಂತುಕೊಂಡಿದ್ದಾರೆ. ಇಬ್ಬರ ಮುಂದೆ ಮದುವೆಯ ಕೇಕ್ ಕೂಡ ಇದೆ. ವಧು-ವರ ಗನ್ ಹಿಡಿದುಕೊಂಡಿದ್ದಾರೆ. ಗನ್ ಒತ್ತಿದ್ದರೆ ಅದರಲ್ಲಿ ಸ್ಪಾರ್ಕ್ ಬರುತ್ತದೆ. ಸ್ಪಾರ್ಕ್ಲ್ ಗನ್ ಹಿಡಿದುಕೊಂಡು ಪೋಸ್ ನೀಡಿದ ಬಳಿಕ ಅದನ್ನು ಒತ್ತಿದ್ದಾರೆ. ನಗುಮುಖದಲ್ಲಿ ವಧುವಿಗೆ ಒಮ್ಮೆಗೆ ಶಾಕ್ ಆಗಿದೆ. ಕಾರಣ ಸ್ಪಾರ್ಕ್ ಗನ್ ನಿಂದ ಬೆಂಕಿ ಕಿಡಿ ಅಚಾನಕ್ಕಾಗಿ ಮುಖಕ್ಕೆ ಬಂದು ತಾಗಿದೆ. ಬೆಂಕಿಯ ಕಿಡಿ ಮುಖಕ್ಕೆ ಬಂದು ತಾಗಿದ ಕೂಡಲೇ ವಧು ಗನ್ ಬಿಸಾಕಿ ಹೆದರಿಕೊಂಡು ಬದಿಗೆ ಓಡಿದ್ದಾರೆ.
ಇದನ್ನೂ ಓದಿ: ಧೋನಿ ಕಾಲುಮುಟ್ಟಿ ನಮಸ್ಕರಿಸಿದ ಅರಿಜಿತ್ ಸಿಂಗ್: ರಶ್ಮಿಕಾ ಮಾಡಿದ್ದೇನು?
ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದಿತಿ ಎನ್ನುವವರು ಈ ವಿಡಿಯೋ ಹಂಚಿಕೊಂಡಿದ್ದು, ಇದು ಮಹಾರಾಷ್ಟ್ರದಲ್ಲಿ ನಡೆದ ಮದುವೆ ಕಾರ್ಯಕ್ರಮದಾಗಿದೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ʼಒಂದು ವಿವಾಹ ಹೀಗೂ..ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಶುಭ್ ಮಂಗಲ್ ಸವಧನ್ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ವಿವಾಹ ಲೈಟ್! ಎಂದು ಬರೆದು ನೆಟ್ಟಿಗರೊಬ್ಬರು ನಕ್ಕಿದ್ದಾರೆ.
Idk what’s wrong with people these days they are treating wedding days more like parties and this is how they ruin their perfect day. 🤷♀️ pic.twitter.com/5o626gUTxY
— Aditi. (@Sassy_Soul_) March 31, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bihar: ಶಾಲಾ ಮಕ್ಕಳಿಗೆ ಕೊಟ್ಟ ʼಖಿಚಡಿʼಯಲ್ಲಿ ಹಾವು ಪತ್ತೆ; ವಿದ್ಯಾರ್ಥಿಗಳು ಅಸ್ವಸ್ಥ

Video: ಕೋತಿ ಕಸಿದುಕೊಂಡು ಹೋದ ಕನ್ನಡಕ ಬುದ್ಧಿವಂತಿಕೆಯಿಂದ ಹಿಂಪಡೆದ ಮಹಿಳೆ!

Watch Viral Video: ವಿದ್ಯಾರ್ಥಿಗಳ ಎದುರೇ ಹೊಡೆದಾಡಿಕೊಂಡ ಪ್ರಿನ್ಸಿಪಾಲ್, ಟೀಚರ್

Lesbian couple: ಮಧ್ಯರಾತ್ರಿ ದೇವಸ್ಥಾನದಲ್ಲಿ ವಿವಾಹವಾದ ಸಲಿಂಗಿ ಜೋಡಿ

Van steal: ವಾಹನ ಕದಿಯಲು ಹೋದ ಮೂವರಿಗೂ ಡ್ರೈವಿಂಗ್‌ಗೇ ಬರಲ್ಲ.. ಮುಂದೇನಾಯ್ತು?