Video: ಕಾಡಾನೆ ಜೊತೆ ಯುವಕರ ಹುಚ್ಚಾಟ… ಭಯ ಹುಟ್ಟಿಸುವ ವಿಡಿಯೋ ವೈರಲ್

Team Udayavani, Dec 8, 2023, 12:48 PM IST

Video: ಕಾಡಾನೆ ಜೊತೆ ಯುವಕರ ಹುಚ್ಚಾಟ… ಭಯ ಹುಟ್ಟಿಸುವ ವಿಡಿಯೋ ವೈರಲ್

ದೇಶಾದ್ಯಂತ ಕಾಡಾನೆ ಹಾವಳಿ ಮಿತಿ ಮೀರಿದೆ ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುವ ಆನೆಗಳು ಸಿಕ್ಕ ಸಿಕ್ಕ ತೋಟಗಳಿಗೆ ನುಗ್ಗಿ ದಾಂದಲೆ ನಡೆಸುತ್ತವೆ ಅದೇ ರೀತಿ ಎದುರಿಗೆ ಯಾರಾದರು ಸಿಕ್ಕರೆ ಅವರ ಜೇವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

ಅದೇ ರೀತಿ ಇಲ್ಲೊಂದು ಯುವಕರ ಗುಂಪು ಕಾಡಾನೆಯ ಎದುರು ಹುಚ್ಚಾಟ ಮೆರೆದಿದ್ದಾರೆ ಅಲ್ಲದೆ ಕೈಯಲ್ಲಿ ಚಪ್ಪಲಿ ಹಿಡಿದು ಕಾಡಾನೆಯನ್ನು ಓಡಿಸುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ, ಆದರೆ ಕಾಡಾನೆ ಮದವೇರಿ ಯುವಕರ ಮೇಲೆ ಎರಗಲು ಮುಂದಾಗುತ್ತದೆ ಆದರೆ ಅಷ್ಟರಲ್ಲಿ ಯುವಕರು ಅಲ್ಲೇ ಇರುವ ಕಂದಕಕ್ಕೆ ಹಾರುತ್ತಾರೆ, ಆದರೆ ಆನೆ ಕಂದಕದ ಬದಿಗೆ ಬಂದು ಗರ್ಜಿಸಿ ಹಿಂತಿರುಗುತ್ತದೆ ಆದರೆ ಈ ಪುಂಡ ಯುವಕರು ಮತ್ತೆ ಆನೆಯನ್ನು ಓಡಿಸಲು ಮುಂದಾಗುತ್ತಾರೆ ಈ ವೇಳೆ ಆನೆ ಮತ್ತೆ ಈ ಯುವಕರ ಮೇಲೆರಗಲು ಮುಂದಾಗುತ್ತದೆ ಆಗ ಯುವಕರು ಮತ್ತೆ ಓಡಿ ಬಂದು ಕಂದಕಕ್ಕೆ ಇಳಿದು ಜೀವ ಉಳಿಸಿಕೊಳ್ಳುತ್ತಾರೆ. ಒಂದು ವೇಳೆ ಸಿಟ್ಟಿಗೆದ್ದ ಆನೆ ಕಂದಕಕ್ಕೆ ಇಳಿದಿದ್ದರೆ ಕೆಲ ಜೀವಗಳೇ ಹೋಗುತಿತ್ತು ನಿಜಕ್ಕೂ ಈ ವಿಡಿಯೋ ನೋಡುವಾಗ ಒಮ್ಮೆ ಜೀವ ನಡುಗುತ್ತದೆ.

ಸದ್ಯ ಅರಣ್ಯ ಅಧಿಕಾರಿಯೊಬ್ಬರು ಟ್ವಿಟರ್ ‘X’ ನಲ್ಲಿ ವಿಡಿಯೋ ಹಂಚಿಕೊಂಡಿದ್ದು ಇಲ್ಲಿ ನಿಜವಾಗಿಯೂ ಪ್ರಾಣಿ ಯಾರು ಎಂಬ ಶರ್ಶಿಕೆಯಡಿ ವಿಡಿಯೋ ಹಂಚಿಕೊಂಡಿದ್ದು ಯುವಕರ ಹುಚ್ಚಾಟ ನಿಜಕ್ಕೂ ಅಪಾಯದ ಮಟ್ಟಕ್ಕೆ ಹೋಗಿತ್ತು ಎಂಬುದು ಈ ವಿಡಿಯೋದಲ್ಲಿ ಗೊತ್ತಾಗುತ್ತದೆ.

ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ಕೆಲವರು ಆನೆಯೊಂದಿಗೆ ಯುವಕರು ನಡೆಸಿದ ಹುಚ್ಚಾಟಕ್ಕೆ ಕಿಡಿಕಾರಿದ್ದಾರೆ, ಅಲ್ಲದೆ ಅವರನ್ನು ಬಂಧಿಸಿ ಎಂದು ಕಾಮೆಂಟ್ ಮಾಡಿದ್ದಾರೆ, ಇನ್ನೂ ಕೆಲವರು ಯುವಕರು ಮಾಡಿದ ಕೆಲಸದ ಹಿಂದೆ ಅವರು ಬೆಳೆದ ಬೆಳಗಳನ್ನು ರಕ್ಷಣೆ ಮಾಡುವ ಉದ್ದೇಶವೂ ಇರಬಹುದು ಎಂದು ಬರೆದುಕೊಂಡಿದ್ದಾರೆ.

ಯಾವುದು ಸರಿ ಯಾವುದು ತಪ್ಪು ಎಂಬುದು ತೀರ್ಮಾನಕ್ಕೆ ಬರುವುದು ಕಷ್ಟ ಆದರೆ ವಿಡಿಯೋ ನೋಡಿದಾಗ ಯುವಕರು ಆನೆಯ ಜೊತೆ ಸ್ವಲ್ಪ ಯಾಮಾರಿದರೂ ಜೇವಕ್ಕೆ ಅಪಾಯ ಇರುವುದಂತೂ ಸತ್ಯ.

ಟಾಪ್ ನ್ಯೂಸ್

Mangaluru ವಿ.ವಿ.ಗೆ ಇಡಿ ಅಧಿಕಾರಿಗಳು ಮತ್ತೆ ಭೇಟಿ

Mangaluru ವಿ.ವಿ.ಗೆ ಇಡಿ ಅಧಿಕಾರಿಗಳು ಮತ್ತೆ ಭೇಟಿ

Tiger Attack; ಕೊಡಗಿನ ಹೋದವಾಟದಲ್ಲಿ ಹುಲಿ ದಾಳಿ: 2 ಹಸು ಸಾವು: ಆತಂಕ

Tiger Attack; ಕೊಡಗಿನ ಹೋದವಾಟದಲ್ಲಿ ಹುಲಿ ದಾಳಿ: 2 ಹಸು ಸಾವು: ಆತಂಕ

Manipal; ಉದಯವಾಣಿ ಎಂಐಸಿ ನಮ್ಮ ಸಂತೆಗೆ ಇಂದು ಚಾಲನೆ

Manipal; ಉದಯವಾಣಿ ಎಂಐಸಿ ನಮ್ಮ ಸಂತೆಗೆ ಇಂದು ಚಾಲನೆ

ಸರ್ವರಿಗೂ ಭೂಮಿ ಕೇರಳ ಗುರಿ: ಸಿಎಂ ಪಿಣರಾಯಿ ವಿಜಯನ್‌

Kasaragod ಸರ್ವರಿಗೂ ಭೂಮಿ ಕೇರಳ ಗುರಿ: ಸಿಎಂ ಪಿಣರಾಯಿ ವಿಜಯನ್‌

Surathkal ವಾಹನದಡಿ ಸಿಲುಕಿದ ವಿದ್ಯಾರ್ಥಿ ಪಾರು

Surathkal ವಾಹನದಡಿ ಸಿಲುಕಿದ ವಿದ್ಯಾರ್ಥಿ ಪಾರು

Brahmavar;ಯುವತಿಗೆ ವಂಚನೆ, ಬೆದರಿಕೆ ಆರೋಪ: ಪ್ರಕರಣ ದಾಖಲು

Brahmavar;ಯುವತಿಗೆ ವಂಚನೆ, ಬೆದರಿಕೆ ಆರೋಪ: ಪ್ರಕರಣ ದಾಖಲು

Kadaba ತಂಡದಿಂದ ಹಲ್ಲೆ: ನಾಲ್ವರ ಬಂಧನ

Kadaba ತಂಡದಿಂದ ಹಲ್ಲೆ: ನಾಲ್ವರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

ತಂಗಿ ಪರೀಕ್ಷೆಯಲ್ಲಿ ಕಾಪಿ ಮಾಡಲೆಂದು ನಕಲಿ ಪೊಲೀಸ್‌ ಆಗಿ ಪರೀಕ್ಷಾ ಕೇಂದ್ರಕ್ಕೆ ಹೋದ ಅಣ್ಣ

Video: ಪ್ರಸಾದ ತಿಂದು ನೂರಾರು ಮಂದಿ ಅಸ್ವಸ್ಥ… ರಸ್ತೆ ಬದಿಯಲ್ಲೇ ರೋಗಿಗಳಿಗೆ ಚಿಕಿತ್ಸೆ

Video: ಪ್ರಸಾದ ಸೇವಿಸಿ ನೂರಾರು ಮಂದಿ ಅಸ್ವಸ್ಥ… ರಸ್ತೆ ಬದಿಯಲ್ಲೇ ರೋಗಿಗಳಿಗೆ ಚಿಕಿತ್ಸೆ

Viral: ಮದುವೆಯಾಗಲು ಸಿಗದ ವಧು; ಆಟೋ ಮೇಲೆ ಬಯೋಡೇಟಾ ಹಾಕಿ ಹೆಣ್ಣು ಹುಡುಕಲು ಹೊರಟ ಯುವಕ.!

Viral: ಮದುವೆಯಾಗಲು ಸಿಗದ ವಧು; ಆಟೋ ಮೇಲೆ ಬಯೋಡೇಟಾ ಹಾಕಿ ಹೆಣ್ಣು ಹುಡುಕಲು ಹೊರಟ ಯುವಕ.!

Video: ನನ್ನನ್ನು ಬಿಟ್ಟೆ ಕ್ರಿಕೆಟ್ ಆಡ್ತಿದ್ದಿರೇನ್ರೋ.. ಬಿಡಲ್ಲ ನಿಮ್ಮನ್ನ.. ಗೂಳಿಯ ರಂಪಾಟ

Video: ಕ್ರಿಕೆಟ್ ಪಂದ್ಯಾವಳಿ ವೇಳೆ ಎಂಟ್ರಿ ಕೊಟ್ಟ ಗೂಳಿ… ಮುಂದೇನಾಯ್ತು ನೀವೇ ನೋಡಿ

Video: ಲಂಚ ಸ್ವೀಕರಿಸುವ ವೇಳೆ ಎಸಿಬಿ ಕೈಗೆ ಸಿಕ್ಕಿಬಿದ್ದು ಕಣ್ಣೀರು ಹಾಕಿದ ಮಹಿಳಾ ಅಧಿಕಾರಿ

Video: ಲಂಚ ಸ್ವೀಕರಿಸುವ ವೇಳೆ ಎಸಿಬಿ ಕೈಗೆ ಸಿಕ್ಕಿಬಿದ್ದು ಕಣ್ಣೀರು ಹಾಕಿದ ಮಹಿಳಾ ಅಧಿಕಾರಿ

MUST WATCH

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

udayavani youtube

ಅರಬ್ಬರ ನಾಡಿನಲ್ಲಿ ಹಿಂದೂ ದೇವಾಲಯ

udayavani youtube

ಶುಗರ್ ಬೀಟ್ : ನೂತನ ಪ್ರಯೋಗದತ್ತ ನಿಂಗಸಾನಿ ಸಹೋದರರು

ಹೊಸ ಸೇರ್ಪಡೆ

Mangaluru ವಿ.ವಿ.ಗೆ ಇಡಿ ಅಧಿಕಾರಿಗಳು ಮತ್ತೆ ಭೇಟಿ

Mangaluru ವಿ.ವಿ.ಗೆ ಇಡಿ ಅಧಿಕಾರಿಗಳು ಮತ್ತೆ ಭೇಟಿ

Tiger Attack; ಕೊಡಗಿನ ಹೋದವಾಟದಲ್ಲಿ ಹುಲಿ ದಾಳಿ: 2 ಹಸು ಸಾವು: ಆತಂಕ

Tiger Attack; ಕೊಡಗಿನ ಹೋದವಾಟದಲ್ಲಿ ಹುಲಿ ದಾಳಿ: 2 ಹಸು ಸಾವು: ಆತಂಕ

bUdupi MGM College ground: “ಬಿಲ್ಡ್‌ ಟೆಕ್‌-2024′ ಕಟ್ಟಡ ಸಾಮಗ್ರಿ ಪ್ರದರ್ಶನಕ್ಕೆ ಚಾಲನೆ

Udupi MGM College ground: “ಬಿಲ್ಡ್‌ ಟೆಕ್‌-2024′ ಕಟ್ಟಡ ಸಾಮಗ್ರಿ ಪ್ರದರ್ಶನಕ್ಕೆ ಚಾಲನೆ

Fishermen’s ಸಂಕಷ್ಟ ನಿಧಿ ಮೊತ್ತ 8 ಲಕ್ಷ ರೂ.ಗೆ ಏರಿಕೆ: ಚೇತನ್‌ ಬೆಂಗ್ರೆ

Fishermen’s ಸಂಕಷ್ಟ ನಿಧಿ ಮೊತ್ತ 8 ಲಕ್ಷ ರೂ.ಗೆ ಏರಿಕೆ: ಚೇತನ್‌ ಬೆಂಗ್ರೆ

Manipal; ಉದಯವಾಣಿ ಎಂಐಸಿ ನಮ್ಮ ಸಂತೆಗೆ ಇಂದು ಚಾಲನೆ

Manipal; ಉದಯವಾಣಿ ಎಂಐಸಿ ನಮ್ಮ ಸಂತೆಗೆ ಇಂದು ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.