
World Cup ಫೈನಲ್‌ನಲ್ಲಿ ಭಾರತಕ್ಕೆ ಸೋಲು; ಟಿವಿ ಮುಂದೆ ಕುಸಿದು ಬಿದ್ದು ಅಭಿಮಾನಿ ಮೃತ್ಯು
Team Udayavani, Nov 20, 2023, 4:46 PM IST

ಹೈದರಾಬಾದ್: ಟೀಮ್ ಇಂಡಿಯಾ ವಿಶ್ವಕಪ್ ಟ್ರೋಫಿ ಗೆಲ್ಲುವ ಕನಸನ್ನು ಆಸೀಸ್ ಭಗ್ನಗೊಳಿಸಿದೆ. ಟೂರ್ನಿ ಇಡೀ ಉತ್ತಮ ಪ್ರದರ್ಶನ ನೀಡಿ ಟೇಬಲ್ ಟಾಪರ್ ಆಗಿದ್ದ ರೋಹಿತ್ ಪಡೆ ಫೈನಲ್ ಹಂತದಲ್ಲಿ ಸೋತು ಟ್ರೋಫಿ ಎತ್ತುವ ಕನಸನ್ನು ಕೈಚೆಲ್ಲಿದೆ.
ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಭಾರತದ ಸೋಲಿನಿಂದ ಹತಾಶರಾಗಿದ್ದು, ಅಭಿಮಾನಿಗಳ ಕನಸು ನುಚ್ಚುನೂರಾಗಿದೆ. ಆದರೆ ಸೋಲಿನ ಹತಾಶೆಯಲ್ಲಿ ಅಭಿಮಾನಿಯೊಬ್ಬನ ಪ್ರಾಣ ಹೋಗಿರುವ ಘಟನೆ ತಿರುಪತಿಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಜ್ಯೋತಿಶ್ ಕುಮಾರ್ ಯಾದವ್ (35) ದೀಪಾವಳಿ ರಜೆಯ ಪ್ರಯುಕ್ತ ತನ್ನ ಊರಾದ ತಿರುಪತಿಗೆ ಬಂದಿದ್ದರು. ಕ್ರಿಕೆಟ್ ಅಭಿಮಾನಿಯಾಗಿದ್ದ ಜ್ಯೋತಿಶ್ ಭಾನುವಾರ(ನ.19 ರಂದು) ಭಾರತ – ಆಸೀಸ್‌ನ ಡುವಿನ ವಿಶ್ವಕಪ್ ಫೈನಲ್ ಪಂದ್ಯವನು ವೀಕ್ಷಣೆ ಮಾಡುತ್ತಿದ್ದರು.
ಇತ್ತ ಗೆಲುವಿನ ನಿರೀಕ್ಷೆಯಲ್ಲಿದ್ದ ಪಂದ್ಯದಲ್ಲಿ ಭಾರತ ಸೋಲಿನ ಹಂತಕ್ಕೆ ಬಂದಾಗ, ಟಿವಿ ನೋಡುತ್ತಿದ್ದ ಜ್ಯೋತಿಶ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಹತ್ತಿರದ ತಿರುಪತಿಯ ಶ್ರೀ ವೆಂಕಟೇಶ್ವರ ರಾಮನಾರಾಯಣ್ ರುಯಿಯಾ ಸರ್ಕಾರಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅವರು ಹೃದಯಾಘಾತವಾಗಿ ಆದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
