
ʼತುನಿವುʼ ಸಿನಿಮಾದಿಂದ ಪ್ರೇರಣೆಗೊಂಡು ಬ್ಯಾಂಕ್ ದರೋಡೆಗೆ ಬಂದ ವಿದ್ಯಾರ್ಥಿ.!
ದರೋಡೆಗೆ ಬಂದ ವ್ಯಕ್ತಿಯನ್ನು ಹಿಡಿದ ವಿಡಿಯೋ ವೈರಲ್
Team Udayavani, Feb 5, 2023, 12:44 PM IST

ಚೆನ್ನೈ: ಸಿನಿಮಾಗಳು ನಮ್ಮ ಮೇಲೆ ತುಂಬಾ ಪರಿಣಾಮವನ್ನು ಬೀರುತ್ತದೆ. ಸಿನಿಮಾವನ್ನೇ ನೋಡಿ ನಮ್ಮ ಜೀವನವೂ ಹೀಗೆಯೇ ಇರಬೇಕಿತ್ತು ಕೆಲವೊಮ್ಮೆ ಅಂದುಕೊಳ್ಳುತ್ತೇವೆ. ಸಿನಿಮಾವನ್ನು ನೋಡಿ ವ್ಯಕ್ತಿಯೊಬ್ಬ ಇಲ್ಲಿ ಏನೋ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾನೆ.
ಕಾಲಿವುಡ್ ಸ್ಟಾರ್ ಅಜಿತ್ ಕುಮಾರ್ ಅವರ ʼತುನಿವುʼ ಯಶಸ್ವಿಯಾಗಿ ಪ್ರದರ್ಶನವನ್ನು ಕಾಣುತ್ತಿದೆ. ಬ್ಯಾಂಕ್ ದರೋಡೆಯ ಕಥೆಯನ್ನೊಳಗೊಂಡ ಸಿನಿಮಾದಲ್ಲಿ ಮಾಸ್, ಕ್ಲಾಸ್ ಎರಡೂ ಅಂಶವೂ ಇದೆ. ಸಿನಿಮಾದಲ್ಲಿ ಬ್ಯಾಂಕ್ ದರೋಡೆ ಮಾಡುವ ದೃಶ್ಯವನ್ನು ನೋಡಿ, ವ್ಯಕ್ತಿಯೊಬ್ಬ ಬ್ಯಾಂಕ್ ಲೂಟಿ ಮಾಡಲು ಬಂದು ಸಿಕ್ಕಿ ಬಿದ್ದಿರುವ ಘಟನೆ ತಿರುಪ್ಪೂರಿನ ಧಾರಾಪುರಂ ಪ್ರದೇಶದಲ್ಲಿ ನಡೆದಿದೆ.
ಸುರೇಶ್ ಎಂಬ ಪಾಲಿಟೆಕ್ನಿಕ್ ವಿದ್ಯಾರ್ಥಿ ʼತುನಿವುʼ ಸಿನಿಮಾದಿಂದ ಪ್ರೇರಣೆಗೊಂಡು ಬುರ್ಖಾಧರಿಸಿ ಬ್ಯಾಂಕ್ ಗೆ ಬಂದಿದ್ದಾನೆ. ಕೆಲ ಸಮಯ ಅತ್ತಿತ್ತ ನೋಡಿ, ಕೈಯಲ್ಲಿ ಚಾಕು ಹಾಗೂ ಗನ್ ಹಿಡಿದುಕೊಂಡು ಅಲ್ಲಿಂದ ಗ್ರಾಹಕರು, ಸಿಬ್ಬಂದಿಗಳನ್ನು ಹೆದರಿಸಿದ್ದಾನೆ. ಹಣ ನೀಡಿ ಎಂದು ಸಿಬ್ಬಂದಿಗೆ ಬೆದರಿಸಲು ಮುಂದೆ ಹೋಗುವಾಗ ಕೈ ಆಯುಧವೊಂದು ಕೆಳಕ್ಕೆ ಬೀಳುತ್ತದೆ. ಆಯುಧವನ್ನು ತೆಗೆದುಕೊಳ್ಳಲು ಬಗ್ಗುವಾಗ, ಭಯದಲ್ಲೇ ಚೇರ್ ನಲ್ಲಿ ಕೂತಿದ್ದ ವೃದ್ಧರೊಬ್ಬರು ಇದನ್ನು ನೋಡಿ ಕೂಡಲೇ ತನ್ನ ಟವೆಲ್ ನಲ್ಲಿ ದರೋಡೆಕೋರನನ್ನು ಗಟ್ಟಿಯಾಗಿ ಹಿಡಿದು ನುಕ್ಕುತ್ತಾರೆ. ಇದಕ್ಕೆ ಎಲ್ಲರೂ ಸಾಥ್ ಕೊಟ್ಟು ದರೋಡೆ ಮಾಡಲು ಬಂದವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ.
ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆರೋಪಿಯ ಬಳಿ ಇದ್ದದ್ದು ಆಟಿಕೆ ಗನ್ ಎಂದು ತಿಳಿದು ಬಂದಿದೆ. ಸದ್ಯ ಸಿಸಿಟಿವಿಯಲ್ಲಿ ಘಟನೆಯ ದೃಶ್ಯ ಸೆರೆಯಾಗಿದ್ದು ವೈರಲ್ ಆಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ವಿಗ್ಗಿ ಸಮೀಕ್ಷೆಯಲ್ಲಿ ಏನಿದೆ…ಇಡ್ಲಿ ಇಂದಿಗೂ ಜನಪ್ರಿಯ ಎಂಬುದಕ್ಕೆ ಈ ವ್ಯಕ್ತಿಯೇ ಸಾಕ್ಷಿ!

ಜಮೀನು,ಚಿನ್ನ,ಟ್ರ್ಯಾಕ್ಟರ್, ವಾಹನ.. ತಂಗಿ ಮದುವೆಗೆ 8ಕೋಟಿ ರೂ. ವರದಕ್ಷಿಣೆ ನೀಡಿದ ಸಹೋದರರು

ಆಮೆ ಮತ್ತು ಮೊಲದ ಓಟ : ಅತೀ ಉತ್ಸಾಹವೇ ಈತನಿಗೆ ಮುಳುವಾಯ್ತು!!

ಸಾಶಾ ಅಗಲುವಿಕೆಯ ಬೆನ್ನಲ್ಲೇ ನಾಲ್ಕು ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದಿಂದ ತಂದ ಚೀತಾ

ಪೋಪ್ ಫ್ರಾನ್ಸಿಸ್ ನೋಡಿ ಬೆರಗಾದ ಜನ! ಫೋಟೋ ವೈರಲ್
MUST WATCH
ಹೊಸ ಸೇರ್ಪಡೆ

ರಾಮನವಮಿ: ದೇವಾಲಯದ ಬಾವಿಯ ಸಿಮೆಂಟ್ ಹಾಸು ಕುಸಿದು 13 ಭಕ್ತರ ಮೃತ್ಯು

ಸ್ವಿಗ್ಗಿ ಸಮೀಕ್ಷೆಯಲ್ಲಿ ಏನಿದೆ…ಇಡ್ಲಿ ಇಂದಿಗೂ ಜನಪ್ರಿಯ ಎಂಬುದಕ್ಕೆ ಈ ವ್ಯಕ್ತಿಯೇ ಸಾಕ್ಷಿ!

ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಸಂಕಷ್ಟ; ಬಂಧಿಸುವಂತೆ ಕೋರ್ಟ್ ಆದೇಶ

ರಚನೆಯಾಗಿ ಎಂಟು ವರ್ಷಕ್ಕೇ ಸೋಂದಾ ಗ್ರಾಪಂಗೆ ಒಲಿದ ಗಾಂಧಿ ಗ್ರಾಮ ಪುರಸ್ಕಾರ

ಮರಳಿ ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಚಿವ ಗುಬ್ಬಿ ಶ್ರೀನಿವಾಸ್