
Video: ಬೈಕ್‌ನಲ್ಲಿ ಚಲಿಸುವ ವೇಳೆ ಹಾವು ಕಡಿತ; ಸೆರೆ ಹಿಡಿದ ಹಾವಿನಿಂದಲೇ ಪ್ರಾಣ ಹಾನಿ.!
Team Udayavani, Sep 24, 2023, 5:29 PM IST

ಭೋಪಾಲ್: ಬೈಕ್ ನಲ್ಲಿ ಚಲಿಸುತ್ತಿರುವ ವೇಳೆ ಹಾವು ಕಡಿದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಮೋವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮೃತ ವ್ಯಕ್ತಿಯನ್ನು ಮನೀಶ್ ಎಂದು ಗುರುತಿಸಲಾಗಿದೆ.
ಮನೀಶ್ ಅವರು ಮನೆ ಅಥವಾ ಊರಿನಲ್ಲಿ ಕಾಣಿಸಿಕೊಳ್ಳುವ ಹಾವನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುತ್ತಿದ್ದರು. ಇತ್ತೀಚೆಗೆ ತೇಲಿ ಖೇಡಾ ಗ್ರಾಮದ ದನದ ಕೊಟ್ಟಿಗೆಗೆ ಹಾವೊಂದು ನುಗ್ಗಿರುವ ಬಗ್ಗೆ ಮನೀಶ್‌ಗೆ ಮಾಹಿತಿ ಅವರಿಗೆ ಹೇಳಲಾಗಿತ್ತು. ಕೂಡಲೇ ಮನೀಶ್ ತನ್ನ ಸ್ನೇಹಿತನೊಂದಿಗೆ ಗ್ರಾಮಕ್ಕೆ ತೆರಳಿ ಹಾವನ್ನು ಹಿಡಿದಿದ್ದಾರೆ.
ಇದಾದ ಬಳಿಕ ಹಾವನ್ನು ಕಾಡಿಗೆ ಬಿಡಲು ಮನೀಶ್ ಹಾಗೂ ಆತನ ಸ್ನೇಹಿತ ತೆರಳಿದ್ದಾರೆ. ಬೈಕ್‌ನ ಹಿಂಬದಿಯಲ್ಲಿ ಕೂತಿದ್ದ ಮನೀಶ್ ಅವರು ಹಾವನ್ನು ಕೈಯಲ್ಲಿ ಹಿಡಿಕೊಂಡಿದ್ದಾರೆ. ಬೈಕ್ ನಲ್ಲಿ ಹೋಗುವ ವೇಳೆ ಹಾವು ಮನೀಶ್ ಅವರ ಕೈಗೆ ಕಚ್ಚಿದೆ. ಕೂಡಲೇ ಮನೀಶ್ ಬೈಕ್ ನಿಲ್ಲಿಸುವಂತೆ ಹೇಳಿದ್ದಾರೆ. ಬೈಕ್ ನಿಲ್ಲಿಸಿದ ಕ್ಷಣಮಾತ್ರದಲ್ಲಿ ಮನೀಶ್ ದಿಢೀರ್ ಕುಸಿದು ಬಿದ್ದಿದ್ದಾರೆ.
ಹಾವಿನ ವಿಷ ದೇಹದೊಳಗೆ ಹೋಗಿದೆ. ಮನೀಶ್ ಒಮ್ಮೆ ಎದ್ದು ನಿಲ್ಲಲು ಯತ್ನಿಸಿದ್ದಾರೆ ಆದರೆ ಏಳುವ ವೇಳೆ ಮತ್ತೆ ಕುಸಿದು ಬಿದ್ದು ಅಲ್ಲೇ ಪ್ರಾಣ ಬಿಟ್ಟಿದ್ದಾರೆ.
ಸದ್ಯ ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
Viral Video: Cobra bit a young man on a moving bike, CCTV footage of the incident went viral.#viralnews #cobra #Indore #MadhyaPradesh #india #viral #viralvideo #snake pic.twitter.com/FfQB3JRFHT
— Siraj Noorani (@sirajnoorani) September 23, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Panaji: ನಮ್ಮ ಸಂಸ್ಕೃತಿ ಪರಂಪರೆಯನ್ನು ಸಾಹಿತ್ಯದ ಮೂಲಕ ಪುನರುಜ್ಜೀವನಗೊಳ್ಳಲು ಸಾಧ್ಯ

Kannada Cinema: ‘ಐ ಲವ್ ಯೂ ಕಣೇ.. ‘; ಭೀಮನ ಸೈಕ್ ಡ್ಯುಯೆಟ್ ಬಂತು

Belagavi; ಜಾತಿ ಸಮೀಕ್ಷೆ ವರದಿ ಜಾರಿಗೆ ಮಠಾಧೀಶರು ಅಡ್ಡಿಪಡಿಸಬಾರದು: ಎಂ.ಸಿ. ವೇಣುಗೋಪಾಲ

VIDEO; 43 ಎಸೆತದಲ್ಲಿ 193 ರನ್ ಚಚ್ಚಿದ ಬ್ಯಾಟರ್; ಸ್ಟ್ರೈಕ್ ರೇಟ್ ಬರೋಬ್ಬರಿ 449!

Sagara: ಸಂಧ್ಯಾ ಎಂ.ಎಸ್.ಗೆ ಯೋಗದಲ್ಲಿ ಟಾಪ್ ರ‍್ಯಾಂಕಿಂಗ್