ಪಿಯುಸಿಯಲ್ಲಿ ಶೇ.90 ಅಂಕ ಇಲ್ಲದ್ದಕ್ಕೆ ಮನೆ ಬಾಡಿಗೆ ನೀಡಲು ನಿರಾಕರಣೆ!
Team Udayavani, Apr 29, 2023, 12:36 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಮನೆ ಬಾಡಿಗೆ ಪಡೆಯುವ ಮುನ್ನ ಆಹಾರ ಪದ್ಧತಿ, ಜಾತಿ, ವಿವಾಹಿತರು ಹೌದೋ, ಅಲ್ಲವೋ ಎಂದು ಕೇಳುವುದು ಸಾಮಾನ್ಯ. ಆದರೆ, ಬೆಂಗಳೂರಿನಲ್ಲೊಬ್ಬ ಮಾಲೀಕ ಮನೆ ಬಾಡಿಗೆ ನೀಡಲು ಪಿಯುಸಿ ಮಾರ್ಕ್ಸ್ ಮಾನದಂಡ ವಾಗಿಸಿಕೊಂಡಿದ್ದು, ಶೇ.90 ಅಂಕ ಪಡೆಯದ ಹಿನ್ನೆಲೆ ಮನೆ ಬಾಡಿಗೆ ನೀಡದೇ ಇರುವ ಘಟನೆ ವರದಿಯಾಗಿದೆ.
ಹೌದು. ಶುಭ್ ಹೆಸರಿನ ಟ್ವಿಟರ್ ಖಾತೆದಾರರೊಬ್ಬರು ತಮ್ಮ ಸಂಬಂಧಿಕರೊಬ್ಬರು ಬೆಂಗಳೂರಿನಲ್ಲಿ ಮನೆ ಹುಡುಕಲು ನಡೆಸಿದ ಪರದಾಟದ ಮೆಸೇಜ್ಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಬಾಡಿಗೆದಾರರು ಮಧ್ಯವರ್ತಿಯೊಬ್ಬರಿಗೆ ಮನೆ ಹುಡುಕಲು ತಿಳಿಸಿದ್ದು, ಮಧ್ಯವರ್ತಿ ಬಾಡಿಗೆದಾರರ ಜಾಲತಾಣ ಮಾಹಿತಿ ಹಾಗೂ ಪಿಯುಸಿ ಮಾರ್ಕ್ಸ್ಕಾರ್ಡ್ ಹಂಚಿಕೊಳ್ಳಲು ಕೇಳಿದ್ದಾರೆ. ಬಳಿಕ ಮನೆಯ ಮಾಲೀಕರಿಗೆ ನೀವು ಪಿಯುಸಿಯಲ್ಲಿ ಪಡೆದ ಶೇ.75ರ ಅಂಕ ತೃಪ್ತಿ ತಂದಿಲ್ಲವಂತೆ, ಕನಿಷ್ಠ ಶೇ.90 ಅಂಕ ಪಡೆದಿರಬೇಕಿತ್ತು ಎಂದು ತಿಳಿಸಿ ಮನೆ ಬಾಡಿಗೆ ನೀಡಲು ನಿರಾಕರಿಸಿದ್ದಾರೆ ಎಂದು ಮಧ್ಯವರ್ತಿ ತಿಳಿಸಿದ್ದಾರೆ.
ಈ ವಿಚಾರವೀಗ ವೈರಲ್ ಆಗಿದ್ದು, ಬಾಡಿಗೆ ಮನೆಗೂ ಅಂಕಪಟ್ಟಿ ಬೇಕೆ ಎಂದು ನೆಟ್ಟಿಗರು ಹುಬ್ಬೇರಿಸಿದ್ದಾರೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್