
ಬಡತನ: ಮಕ್ಕಳ ಕಾಲಿಗೆ ಚಪ್ಪಲಿಯಂತೆ ಪ್ಲ್ಯಾಸ್ಟಿಕ್ ಸುತ್ತಿ ಕೆಲಸಕ್ಕಾಗಿ ಬೀದಿ ಅಲೆದ ತಾಯಿ.!
ಮಕ್ಕಳ ಕಾಲಿಗೆ ಪ್ಲ್ಯಾಸ್ಟಿಕ್ ಕವರ್ ಗಳನ್ನು ಶೂಗಳಂತೆ ಹಾಕಿದ್ದಾರೆ.
Team Udayavani, May 23, 2023, 3:18 PM IST

ಭೋಪಾಲ್: ಎರಡೂ ಹೊತ್ತಿನ ಊಟಕ್ಕೂ ಪರದಾಡುವ ಬಡತನ ಯಾರಿಗೂ ಬರಬಾರದು. ತಾನು ಹಸಿವಿನಲ್ಲಿದ್ದರೂ, ತನ್ನ ಮಕ್ಕಳಿಗೆ ಒಂದು ಹೊತ್ತಿನ ಊಟವನ್ನಾದರೂ ಎಂಥ ಪರಿಸ್ಥಿತಿಯಲ್ಲೂ ಮಾಡಿ ಹಾಕುವ ಏಕೈಕ ಜೀವವೆಂದರೆ ಅದು ತಾಯಿ ಮಾತ್ರ.
ತನ್ನ ಮೂವರು ಪುಟ್ಟ ಮಕ್ಕಳೊಂದಿಗೆ ಕೆಲಸವನ್ನು ಹುಡುಕುತ್ತಾ ಬೀದಿಯಲ್ಲಿ ಅಲೆಯುತ್ತಿದ್ದ ಮಹಿಳೆಯೊಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ಶಿಯೋಪುರದ ಬುಡಕಟ್ಟು ಸಮುದಾಯದ ಮಹಿಳೆಯಾಗಿರುವ ರುಕ್ಮಿಣಿ ಎಂಬಾಕೆ ತನ್ನ ಮೂವರು ಮಕ್ಕಳೊಂದಿಗೆ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಸ್ಥಳೀಯ ಪತ್ರಕರ್ತರೊಬ್ಬರು ಅವರ ಫೋಟೋವೊಂದನ್ನು ಸೆರೆಹಿಡಿದು ಹಂಚಿಕೊಂಡಿದ್ದೀಗ ವೈರಲ್ ಆಗಿದೆ.
ರಣಬಿಸಿಲಿನಲ್ಲಿ ತನ್ನ ತಾಯಿಯೊಂದಿಗೆ ಮಕ್ಕಳಿಬ್ಬರು ನಡೆಯುತ್ತಿದ್ದಾರೆ. ಒಂದು ಮಗುವನ್ನು ರುಕ್ಮಿಣಿ ಅವರು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಅವರ ಬಡತನ ಸ್ಥಿತಿ ಎಷ್ಟು ಇದೆ ಎಂದರೆ ಮಕ್ಕಳ ಕಾಲಿನಲ್ಲಿ ಚಪ್ಪಲಿಯೂ ಇಲ್ಲ. ಆ ಮಕ್ಕಳಿಗೆ ಬಿಸಿಲಿನ ಬಿಸಿ ತಟ್ಟಬಾರದೆಂದು ತಾಯಿ ರುಕ್ಮಿಣಿ ತಮ್ಮ ಮಕ್ಕಳ ಕಾಲಿಗೆ ಪ್ಲ್ಯಾಸ್ಟಿಕ್ ಕವರ್ ಗಳನ್ನು ಶೂಗಳಂತೆ ಹಾಕಿದ್ದಾರೆ.
ಇದನ್ನೂ ಓದಿ: VIRAL: ಮದುವೆ ದಿನ ಪರಾರಿಯಾಗಲು ಯತ್ನಿಸಿದ ವರ: 20ಕಿ.ಮೀ ಚೇಸ್ ಮಾಡಿ ಮಂಟಪಕ್ಕೆ ಕರೆತಂದ ವಧು
ಪತ್ರಕರ್ತ ಇನ್ಸಾಫ್ ಖುರೈಶಿ ಈ ಬಗ್ಗೆ ರುಕ್ಮಿಣಿ ಅವರ ಬಳಿ ಕೇಳಿದಾಗ “ ನನ್ನ ಪತಿಗೆ ಕ್ಷಯರೋಗವಿದೆ. ಕುಟುಂಬ ಸಾಗಬೇಕು. ಕೆಲಸವನ್ನು ಹುಡುಕುತ್ತಿದ್ದೇನೆ. ಮಕ್ಕಳನ್ನು ಮನೆಯಲ್ಲಿ ಬಿಟ್ಟರೆ ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ. ಅದಕ್ಕಾಗಿ ಅವರನ್ನು ಜೊತೆಯಾಗಿ ಹಿಡಿದುಕೊಂಡು ಕೆಲಸವನ್ನು ಹುಡುಕುತ್ತಿದ್ದೇನೆ” ಎಂದಿದ್ದಾರೆ.
ಪತ್ರಕರ್ತ ಇನ್ಸಾಫ್ ಖುರೈಶಿ ಮಕ್ಕಳಿಗೆ ಚಪ್ಪಲಿ ತೆಗೆದುಕೊಳ್ಳಲು ಹಣ ಹಾಗೂ ಸ್ವಲ್ಪ ಆರ್ಥಿಕವಾಗಿ ಸಹಾಯವನ್ನು ಮಾಡಿದ್ದಾರೆ.
ಈ ವಿಚಾರ ಸ್ಥಳೀಯ ಆಡಳಿತಕ್ಕೆ ಗಮನಕ್ಕೆ ಬಂದಿದ್ದು, ಸಂಬಂಧಪಟ್ಟ ಕುಟುಂಬದವರಿಂದ ಮಾಹಿತಿ ಸಂಗ್ರಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಕಳುಹಿಸಲಾಗಿದೆ. ಸರ್ಕಾರದ ಯೋಜನೆಗಳ ಗರಿಷ್ಠ ಲಾಭವನ್ನು ಕುಟುಂಬಕ್ಕೆ ನೀಡಲು ಸೂಚನೆಗಳನ್ನು ನೀಡಲಾಗಿದೆ ಎಂದು ಶೆಯೋಪುರ್ ಕಲೆಕ್ಟರ್ ಶಿವಂ ವರ್ಮಾ ಆಜ್ ಇಂಡಿಯಾ ಟುಡೇಗೆ ತಿಳಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Odisha ಭೀಕರ ರೈಲು ಅವಘಡ; ಕನಿಷ್ಠ 30 ಮೃತ್ಯು, 300ಕ್ಕೂ ಹೆಚ್ಚು ಮಂದಿಗೆ ಗಾಯ

WFI ಬ್ರಿಜ್ ಭೂಷಣ್ ಬಂಧಿಸಲು ಗಡುವು ವಿಧಿಸಿದ ಖಾಪ್ ಮಹಾಪಂಚಾಯತ್

Train ಅವಘಡ; ಬಾಲಸೋರ್ ನಲ್ಲಿ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ

Manish Sisodia ರಿಗೆ ಮಧ್ಯಂತರ ಪರಿಹಾರ; ಪತ್ನಿ ಭೇಟಿಗೆ ಕೋರ್ಟ್ ಅನುಮತಿ

UP; ಅಯೋಧ್ಯೆಯಲ್ಲಿ ಬ್ರಿಜ್ ಭೂಷಣ್ ‘ಮಹಾ ರ‍್ಯಾಲಿ’ಗೆ ಅನುಮತಿ ನಿರಾಕಾರ
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ
ಹೊಸ ಸೇರ್ಪಡೆ

Amazon ಫ್ಯಾಷನ್‌ನಿಂದ ವಾರ್ಡ್‌ರೋಬ್ ರಿಫ್ರೆಶ್ ಸೇಲ್ ಆರಂಭ

Odisha ಭೀಕರ ರೈಲು ಅವಘಡ; ಕನಿಷ್ಠ 30 ಮೃತ್ಯು, 300ಕ್ಕೂ ಹೆಚ್ಚು ಮಂದಿಗೆ ಗಾಯ

Mahalingpur ಗಾಳಿ ಮಳೆಗೆ ವ್ಯಾಪಕ ನಷ್ಟ; ಹಲವು ಮನೆಗಳಿಗೆ ಹಾನಿ, ಪರದಾಟ

Hunsur; ಅಪಘಾತದಲ್ಲಿ ಹುಟ್ಟು ಹಬ್ಬದಂದೇ ಫೋಟೋಗ್ರಾಫರ್ ಮೃತ್ಯು

ಸಿದ್ದರಾಮಯ್ಯ ಯುವಕರ ಹಣೆಗೆ ತುಪ್ಪ ಸವರಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ