
Love Story: ಪತ್ನಿಯನ್ನೇ ಪ್ರಿಯಕರನ ಜೊತೆ ಮದುವೆ ಮಾಡಿಸಿಕೊಟ್ಟ ಪತಿ ಮಹಾಶಯ.!
Team Udayavani, Sep 24, 2023, 1:12 PM IST

ಲಕ್ನೋ: ಪತಿಯೊಬ್ಬ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ವಿವಾಹ ಮಾಡಿಸಿಕೊಟ್ಟ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ.
ಒಂದು ವರ್ಷದ ಹಿಂದೆ ಮಹಿಳೆ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು. ಆದರೆ ಮಹಿಳೆ ಬಿಹಾರ ಮೂಲದ ಆಕಾಶ್ ಶಾ ಎನ್ನುವವನೊಂದಿಗೆ ಪ್ರೀತಿಯಲ್ಲಿದ್ದರು. ಈ ವಿಚಾರ ಮಹಿಳೆಯ ಗಂಡನಿಗೆ ತಿಳಿದಿರಲಿಲ್ಲ. ಮಹಿಳೆ ವಿವಾಹದ ಬಳಿಕವೂ ಪ್ರಿಯಕರ ಆಕಾಶ್ ನೊಂದಿಗೆ ಸಂಪರ್ಕದಲ್ಲಿದ್ದರು.
ಶುಕ್ರವಾರ ರಾತ್ರಿ (ಸೆ.22 ರಂದು) ಆಕಾಶ್ ಬಿಹಾರದ ಗೋಪಾಲಗಂಜ್ ನಿಂದ ಉತ್ತರ ಪ್ರದೇಶದಲ್ಲಿರುವ ಮಹಿಳೆಯ ಪತಿಯ ಮನೆ ಬಳಿ ಭೇಟಿ ಆಗಲೆಂದು ಬಂದಿದ್ದಾನೆ. ಭೇಟಿಯ ವೇಳೆ ಸ್ಥಳೀಯರು ನೋಡಿದ್ದು, ಆಕಾಶ್ ನನ್ನು ಅಲ್ಲೇ ಹಿಡಿದು ಥಳಿಸಿದ್ದಾರೆ.
ಮಹಿಳೆಯೊಂದಿಗೆ ತಾನು ಎರಡು ವರ್ಷದಿಂದ ಸಂಬಂಧದಲ್ಲಿದ್ದೇನೆ. ಆಕೆಯ ಮದುವೆಯ ಬಳಿಕವೂ ಆಕೆಯನ್ನು ನಾನು ಮರೆಯಲು ಆಗುತ್ತಿಲ್ಲ. ಹಾಗಾಗಿ ನಾನು ಭೇಟಿಗೆಂದು ಬಂದೆ ಎಂದು ಆಕಾಶ್ ಹೇಳಿದ್ದಾನೆ.
ಇನ್ನೇನು ಆಕಾಶ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ ಅಂದುಕೊಂಡಿದ್ದ ಎಲ್ಲರಿಗೂ ಮಹಿಳೆಯ ಪತಿಯ ಪ್ರತಿಕ್ರಿಯೆ ನೋಡಿ ಶಾಕ್ ಆಗಿದೆ. ಪ್ರಿಯಕರನೊಂದಿಗೆ ಹೋಗಲು ಬಿಡುವಂತೆ ಪತ್ನಿ ತನ್ನ ಪತಿಗೆ ಮನವಿ ಮಾಡಿದ್ದು, ಇದಕ್ಕೆ ಪತಿ ಒಪ್ಪಿದ್ದಾನೆ. ಆ ಬಳಿಕ ಇಬ್ಬರನ್ನು ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದಾರೆ.
ಎರಡೂ ಕುಟುಂಬಗಳ ಒಪ್ಪಿಗೆ ಪಡೆದ ನಂತರ ವ್ಯಕ್ತಿ, ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ದೇವಸ್ಥಾನಕ್ಕೆ ಕರೆದೊಯ್ದು ಮದುವೆ ಮಾಡಿಸಿದ್ದಾರೆ. ಆ ಬಳಿಕ ಪ್ರೇಮಿ ಬಂದಿದ್ದ ಮೋಟಾರ್ ಸೈಕಲ್ ನಲ್ಲಿಯೇ ಇಬ್ಬರನ್ನೂ ಕಳುಹಿಸಿದ್ದಾರೆ.
1999 ರ ಬ್ಲಾಕ್‌ಬಸ್ಟರ್ ಚಲನಚಿತ್ರ ‘ಹಮ್ ದಿಲ್ ದೇ ಚುಕೇ ಸನಮ್’ ಸಿನಿಮಾದಲ್ಲಿನ ಕಥೆಯೂ ಇದೇ ರೀತಿ ಆಗಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric Car: ಬ್ಯಾಟರಿ ಚಾಲಿತ ಕಾರು ನಿರ್ಮಿಸಿದ ವಿದ್ಯಾರ್ಥಿಗಳು…

Panaji: ಶಾಲಾ ಬಸ್ ಅಪಘಾತದ ಕುರಿತು ವಿಸ್ತೃತ ತನಿಖೆ ನಡೆಸಲು ಆದೇಶ

Video; ಭಾರತದ ಮೊದಲ ಬುಲೆಟ್ ರೈಲು ನಿಲ್ದಾಣದ ವಿಡಿಯೋ ಬಿಡುಗಡೆ

Mizoram ನೂತನ ಮುಖ್ಯಮಂತ್ರಿಯಾಗಿ ಲಾಲ್ಡುಹೋಮ ಪ್ರಮಾಣವಚನ ಸ್ವೀಕಾರ

CM Post: 3 ರಾಜ್ಯಗಳಲ್ಲಿ ಮುಂದುವರಿದ ಸಿಎಂ ಆಯ್ಕೆ ಕಸರತ್ತು…ಬಿಜೆಪಿಯಿಂದ ವೀಕ್ಷಕರ ನೇಮಕ?
MUST WATCH
ಹೊಸ ಸೇರ್ಪಡೆ

VIDEO; 43 ಎಸೆತದಲ್ಲಿ 193 ರನ್ ಚಚ್ಚಿದ ಬ್ಯಾಟರ್; ಸ್ಟ್ರೈಕ್ ರೇಟ್ ಬರೋಬ್ಬರಿ 449!

Sagara: ಸಂಧ್ಯಾ ಎಂ.ಎಸ್.ಗೆ ಯೋಗದಲ್ಲಿ ಟಾಪ್ ರ‍್ಯಾಂಕಿಂಗ್

Bagalkote: ಬೀದಿ ಬದಿ ವ್ಯಾಪಾರಸ್ಥರಿಂದ ಪ್ರತಿಭಟನೆ

Electric Car: ಬ್ಯಾಟರಿ ಚಾಲಿತ ಕಾರು ನಿರ್ಮಿಸಿದ ವಿದ್ಯಾರ್ಥಿಗಳು…

Fighter Teaser ಔಟ್: ಇಂಟರ್‌ನೆಟ್ ನಲ್ಲಿ ಬೆಂಕಿ ಹಚ್ಚಿದ ಹೃತಿಕ್ – ದೀಪಿಕಾ ಕೆಮೆಸ್ಟ್ರಿ