Bizarre: ಮಲವಿಸರ್ಜನೆ ವೇಳೆ ಖಾಸಗಿ ಅಂಗದ ಮೂಲಕ ದೇಹದೊಳಗೆ ಹಾವು ಪ್ರವೇಶಿಸಿದೆ ಎಂದ ವ್ಯಕ್ತಿ
Team Udayavani, Apr 8, 2023, 10:34 AM IST
ಲಕ್ನೋ: ಖಾಸಗಿ ಅಂಗದ ಮೂಲಕ ತನ್ನ ದೇಹದೊಳಗೆ ಹಾವು ಪ್ರವೇಶಿಸಿದೆ ಎಂದು ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿ ವೈದ್ಯರನ್ನೇ ಬೆಚ್ಚಿ ಬೀಳಿಸಿದ ಘಟನೆ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿನ ನಡೆದಿದೆ.
ಮಹೇಂದ್ರ ಎಂಬ ವ್ಯಕ್ತಿ ಹರ್ದೋಯಿ ವೈದ್ಯಕೀಯ ಕಾಲೇಜಿನ ತುರ್ತು ವಿಭಾಗಕ್ಕೆ ಹೊಟ್ಟೆ ನೋವೆಂದು ಮದ್ಯರಾತ್ರಿ ಬಂದಿದ್ದಾನೆ. ಈ ವೇಳೆ ವೈದ್ಯರು ಏನಾಯಿತು ಹೇಗೆ ಹೊಟ್ಟೆ ನೋವೆಂದು ಕೇಳಿದಾ ತಾನು ಮಲವಿಸರ್ಜನೆ ಮಾಡುವ ವೇಳೆಯಲ್ಲಿ ತನ್ನ ಖಾಸಗಿ ಅಂಗದ ಮೂಲಕ ಹಾವು ದೇಹದೊಳಗೆ ಪ್ರವೇಶ ಮಾಡಿದೆ ಎಂದಿದ್ದಾನೆ.
ಇದನ್ನೂ ಓದಿ: ಸುಧಾಮೂರ್ತಿಗೆ ಪದ್ಮಭೂಷಣ: ಸಂತಸ ವ್ಯಕ್ತಪಡಿಸಿದ ಬ್ರಿಟನ್ ಪ್ರಧಾನಿ Rishi Sunak
ಕೂಡಲೇ ವೈದ್ಯರು ಶಾಕ್ ಆಗಿ ಪರೀಕ್ಷೆ ಮಾಡಿದ್ದಾರೆ. ಈ ವೇಳೆ ಅವರಿಗೆ ಹಾವಿನ ಕುರುಹು ಆಗಲಿ, ಅದರ ಕಡಿತದ ಕುರುಹು ಆಗಲಿ ಪತ್ತೆಯಾಗಿಲ್ಲ. ಆದರೆ ಈ ಮಾತನ್ನು ಮಹೇಂದ್ರರ ಕುಟುಂಬದವರು ಕೇಳದೇ ಮತ್ತೊಮ್ಮೆ ಪರೀಕ್ಷೆ ಮಾಡಿಸಲು ಬೇರೊಂದು ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲೂ ಕೂಡ ಇದೇ ರೀತಿಯ ಮಾತನ್ನು ವೈದ್ಯರು ಹೇಳಿದ್ದಾರೆ.
ಪರೀಕ್ಷೆ ಮಾಡಿದ ಬಳಿಕ ʼಈ ವ್ಯಕ್ತಿಗೆ ವಿಪರೀತ ಡ್ರಗ್ಸ್ ಸೇವಿಸಿದ ಪರಿಣಾಮ ಹೊಟ್ಟೆ ನೋವಾಗಿದೆ. ಡ್ರಗ್ಸ್ ನ ಅಮಲಿನಲ್ಲೇ ಮನೆಯವರ ಬಳಿ ವ್ಯಕ್ತಿ ಹಾವಿನ ವಿಚಾರವನ್ನು ಹೇಳಿದ್ದಾನೆ. ಸಿಟಿ ಸ್ಕ್ಯಾನ್ ಮಾಡಿದ ಬಳಿಕ ಇದು ಡ್ರಗ್ಸ್ ನ ಪ್ರಭಾವವೆಂದು ತಿಳಿದು ಬಂದಿದೆ. ಆತನನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಡಾ. ಶೇರ್ ಸಿಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು