Viral Video: ಪ್ರಜ್ಞೆತಪ್ಪಿದ ಹಾವಿಗೆ ಸಿಪಿಆರ್‌ ಕೊಟ್ಟು ಪ್ರಾಣ ಉಳಿಸಿದ ಪೊಲೀಸ್‌ ಪೇದೆ

Team Udayavani, Oct 26, 2023, 3:11 PM IST

Viral Video: ಪ್ರಜ್ಞೆತಪ್ಪಿದ ಹಾವಿಗೆ ಸಿಪಿಆರ್‌ ಕೊಟ್ಟು ಪ್ರಾಣ ಉಳಿಸಿದ ಪೊಲೀಸ್‌ ಪೇದೆ

ಭೋಪಾಲ್:‌ ಪ್ರಜ್ಞೆತಪ್ಪಿದ ಹಾವಿಗೆ ಸಿಪಿಆರ್‌ ಕೊಟ್ಟು ಪ್ರಾಣ ಉಳಿಸಿರುವ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಮಧ್ಯಪ್ರದೇಶದ ನರ್ಮದಾಪುರಂನಲ್ಲಿ ಈ ಘಟನೆ ನಡೆದಿದೆ. ವಿಷಕಾರಿಯಲ್ಲದ ಹಾವೊಂದು ವಸತಿ ಪ್ರದೇಶದ ಪೈಪ್‌ಲೈನ್‌  ಒಳಗೆ ನುಗ್ಗಿತ್ತು. ಇದನ್ನು ಹೊರ ತೆಗೆಯುವ ಭರದಲ್ಲಿ ಅಲ್ಲಿನ ಜನರು ಪೈಪ್‌ ನೊಳಗೆ ಕ್ರಿಮಿನಾಶಕವನ್ನು ಸುರಿದಿದ್ದಾರೆ. ಇದರ ಪರಿಣಾಮ ಹಾವು ಪ್ರಜ್ಞೆತಪ್ಪಿದೆ.  ಆಗ ಪೈಪ್‌ ನೊಳಗೆ ನೀರು ಹಾಕಿದಾಗ ಹಾವು ಹೊರಗೆ ಬಂದಿದೆ.

ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾನ್ಸ್‌ ಟೇಬಲ್ ಅತುಲ್ ಶರ್ಮಾ‌ ಅವರು ಮೊದಲು ಹಾವು ಬದುಕಿರುವ ಬಗ್ಗೆ ಪರಿಶೀಲಿಸಿದ್ದಾರೆ. ಹಾವು ಬದುಕಿರುವುದು ದೃಢವಾದ ಹಿನ್ನೆಲೆಯಲ್ಲಿ ಅತುಲ್‌ ಅವರು ಹಾವಿನ ಬಾಯಿಗೆ ತನ್ನ ಬಾಯಿಯಿಟ್ಟು ಸಿಪಿಆರ್‌ ನೀಡಿ ಉಸಿರು ನೀಡಿದ್ದಾರೆ. ನಿಧಾನವಾಗಿ ಹಾವು ಚಲಿಸಲು ಆರಂಭಿಸಿದೆ. ಈ ಕಾರಣದಿಂದ ಹಾವಿನ ಮೇಲೆ ನೀರು ಸಿಂಪಡಿಸಿದ್ದಾರೆ. ಆ ಬಳಿಕ ಹಾವನ್ನು ಕಾಡಿಗೆ ಬಿಟ್ಟು ಬರಲಾಗಿದೆ ಎಂದು ವರದಿ ತಿಳಿಸಿದೆ.

ಸಾಮಾನ್ಯವಾಗಿ ಹಾವಿಗೆ ಸಿಪಿಆರ್‌ ನೀಡುವುದು ಸಾಧ್ಯವಿಲ್ಲ. ಪ್ರಜ್ಞೆತಪ್ಪಿದ ಹಾವು ಕೆಲ ಸಮಯದ ಬಳಿಕ ತಾನಾಗಿಯೇ ಚೇತರಿಸಿಕೊಳ್ಳುತ್ತದೆ ಎಂದು ಪಶುವೈದ್ಯರು ಹೇಳುತ್ತಾರೆ.

ಇಡೀ ಘಟನೆಯ ವಿಡಿಯೋ ಮೊಬೈಲ್‌ ನಲ್ಲಿ ಸೆರೆಯಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.  ಅತುಲ್‌ ಅವರು ಹಾವಿನ ಪ್ರಾಣ ಉಳಿಸಲು ಮಾಡಿದ ಪ್ರಯತ್ನಕ್ಕೆ ನೆಟ್ಟಿಗರು ಶ್ಲಾಘಿಸಿದ್ದಾರೆ.

ಟಾಪ್ ನ್ಯೂಸ್

Bigg Boss ಮನೆಯಲ್ಲಿ ಖುಲ್ಲಂ ಖುಲ್ಲಾ ರೊಮ್ಯಾನ್ಸ್:‌ ವೈರಲ್ ವಿಡಿಯೋಗೆ ಆಯೋಜಕರ ಸ್ಪಷ್ಟನೆ

Bigg Boss ಮನೆಯಲ್ಲಿ ಖುಲ್ಲಂ ಖುಲ್ಲಾ ರೊಮ್ಯಾನ್ಸ್:‌ ವೈರಲ್ ವಿಡಿಯೋಗೆ ಆಯೋಜಕರ ಸ್ಪಷ್ಟನೆ

CHandrababu Naidu

Budget ಅಪಾರ ಅನುದಾನ ; ಕೇಂದ್ರ ಸರಕಾರಕ್ಕೆ ಧನ್ಯವಾದ ತಿಳಿಸಿದ ಮಿತ್ರಪಕ್ಷ ಟಿಡಿಪಿ

Budget-New

Union Budget 2024: ಕೇಂದ್ರ ಬಜೆಟ್‌ ನಲ್ಲಿ ಯಾವ ವಸ್ತು ದುಬಾರಿ, ಯಾವುದು ಅಗ್ಗ?

Tax

#Budget2024; ಹೊಸ ಆದಾಯ ತೆರಿಗೆ ಸ್ಲ್ಯಾಬ್ ಘೋಷಣೆ: ಇಲ್ಲಿದೆ ವಿವರ

Mangaluru: ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್, GPS ಅಳವಡಿಕೆಗೆ ವಿರೋಧಿಸಿ ಪ್ರತಿಭಟನೆ

Mangaluru: ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್, GPS ಅಳವಡಿಕೆ ವಿರೋಧಿಸಿ ಪ್ರತಿಭಟನೆ

1-wwewqe

#Budget2024; ಉದ್ಯೋಗಸ್ಥ ಮಹಿಳೆಯರ ನೆರವಿಗೆ ಹಾಸ್ಟೆಲ್‌,ಇಂಟರ್ನ್‌ಶಿಪ್ ವೇಳೆ 5 ಸಾವಿರ ರೂ.

Budget 2024: 30 ಲಕ್ಷ ಯುವಕರಿಗೆ 1 ತಿಂಗಳ ಪಿಎಫ್‌ , ಸೂರ್ಯ ಘರ್‌ ಉಚಿತ ವಿದ್ಯುತ್‌ ಯೋಜನೆ

Budget 2024: 30 ಲಕ್ಷ ಯುವಕರಿಗೆ 1 ತಿಂಗಳ ಪಿಎಫ್‌ , ಸೂರ್ಯ ಘರ್‌ ಉಚಿತ ವಿದ್ಯುತ್‌ ಯೋಜನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Video: ರಸ್ತೆಗಾಗಿ ಇಬ್ಬರು ಮಹಿಳೆಯರನ್ನು ಜೀವಂತ ಸಮಾಧಿ ಮಾಡಲು ಮುಂದಾದ ದುಷ್ಕರ್ಮಿಗಳು

Shocking: ರಸ್ತೆಗಾಗಿ ಇಬ್ಬರು ಮಹಿಳೆಯರನ್ನೇ ಜೀವಂತ ಸಮಾಧಿ ಮಾಡಲು ಮುಂದಾದ ದುರುಳರು…

Video: ಮಕ್ಕಳು ತರಗತಿಯಲ್ಲಿ ಇದ್ದ ವೇಳೆಯೇ ಕುಸಿದು ಬಿದ್ದ ಗೋಡೆ… ವಿದ್ಯಾರ್ಥಿಗೆ ಗಾಯ

Wall Collapses: ಮಕ್ಕಳು ತರಗತಿಯಲ್ಲಿರುವಾಗಲೇ ಕುಸಿದು ಬಿದ್ದ ಗೋಡೆ.. ಭಯಾನಕ ವಿಡಿಯೋ ವೈರಲ್

1-insta

Instagram Influencer ಆನ್ವಿ ಕಾಮ್ದಾರ್‌ ಕಮರಿಗೆ ಬಿದ್ದು ಮರಣ

best

Crow-ded Bus: Best ಬಸ್ಸಲ್ಲಿ ಕಾಗೆಗಳ ಸವಾರಿ… ನೆಟ್ಟಿಗರಿಂದ ಬೆಸ್ಟ್ ಬೆಸ್ಟ್ ಕಾಮೆಂಟ್ಸ್

Silver Crown: ದೇವರ ಬಳಿ ಕ್ಷಮೆಯಾಚಿಸಿ ದೇವರ ಬೆಳ್ಳಿಯ ಕಿರೀಟವನ್ನೇ ಹೊತ್ತೊಯ್ದ ಕಳ್ಳ…

Silver Crown: ದೇವರ ಬಳಿ ಕೈಮುಗಿದು ಕ್ಷಮೆಯಾಚಿಸಿ ಬೆಳ್ಳಿಯ ಕಿರೀಟವನ್ನೇ ಹೊತ್ತೊಯ್ದ ಕಳ್ಳ..

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Bigg Boss ಮನೆಯಲ್ಲಿ ಖುಲ್ಲಂ ಖುಲ್ಲಾ ರೊಮ್ಯಾನ್ಸ್:‌ ವೈರಲ್ ವಿಡಿಯೋಗೆ ಆಯೋಜಕರ ಸ್ಪಷ್ಟನೆ

Bigg Boss ಮನೆಯಲ್ಲಿ ಖುಲ್ಲಂ ಖುಲ್ಲಾ ರೊಮ್ಯಾನ್ಸ್:‌ ವೈರಲ್ ವಿಡಿಯೋಗೆ ಆಯೋಜಕರ ಸ್ಪಷ್ಟನೆ

CHandrababu Naidu

Budget ಅಪಾರ ಅನುದಾನ ; ಕೇಂದ್ರ ಸರಕಾರಕ್ಕೆ ಧನ್ಯವಾದ ತಿಳಿಸಿದ ಮಿತ್ರಪಕ್ಷ ಟಿಡಿಪಿ

1-asddas

Canada; ಹಿಂದೂ ದೇವಾಲಯಕ್ಕೆ ದಾಳಿ: ಗೀಚುಬರಹದಿಂದ ವಿರೂಪ

Budget-New

Union Budget 2024: ಕೇಂದ್ರ ಬಜೆಟ್‌ ನಲ್ಲಿ ಯಾವ ವಸ್ತು ದುಬಾರಿ, ಯಾವುದು ಅಗ್ಗ?

Tax

#Budget2024; ಹೊಸ ಆದಾಯ ತೆರಿಗೆ ಸ್ಲ್ಯಾಬ್ ಘೋಷಣೆ: ಇಲ್ಲಿದೆ ವಿವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.