
ವೈರಲ್: ಜ್ಯೂಸ್ ಮಾರುವುದರ ಜೊತೆ ಯೂಟ್ಯೂಬರ್ ಆಗಿಯೂ ಫೇಮ್ ಆದ ಬೆಂಗಳೂರಿನ ವ್ಯಾಪಾರಿ
Team Udayavani, Mar 21, 2023, 10:37 AM IST

ಬೆಂಗಳೂರು: ಇದು ಇಂಟರ್ ನೆಟ್ ಯುಗ. ನಮ್ಮ ಪ್ರತಿಭೆಯನ್ನು ತೋರಿಸಲು ಇನ್ಸ್ಟಾಗ್ರಾಮ್, ಯೂಟ್ಯೂಬ್ ನಂತಹ ಫ್ಲಾಟ್ ಫಾರ್ಮ್ ಗಳಿವೆ. ಇತ್ತೀಚೆಗೆ ಬೆಂಗಳೂರಿನ ಆಟೋ ಚಾಲಕನೊಬ್ಬ ತನ್ನ ಆಟೋದಲ್ಲಿ ಯೂಟ್ಯೂಬ್ ಚಾನೆಲ್ ಕುರಿತು ಮಾಹಿತಿಯನ್ನು ಹಾಕಿದ ಫೋಟೋ ವೈರಲ್ ಆಗಿತ್ತು. ಇದೀಗ ಅಂಥದ್ದೇ ಮತ್ತೊಂದು ಫೋಟೋ ವೈರಲ್ ಆಗಿದೆ.
ಬೆಂಗಳೂರಿನ ಬೆಳ್ಳಂದೂರುನಲ್ಲಿನ ರಸ್ತೆಯಲ್ಲಿ ಗಾಡಿಯೊಂದರಲ್ಲಿ ಜ್ಯೂಸ್ ವ್ಯಾಪಾರ ಮಾಡುವ ಕುಂಕುಮ್ ಮೃಧ ಜ್ಯೂಸ್ ಮಾರಾಟವನ್ನು ಮಾಡುವುದರ ಜೊತೆ ತಮ್ಮ ಯೂಟ್ಯೂಬ್ ಚಾನೆಲ್ ನ್ನು ಹೊಂದಿದ್ದಾರೆ.
ಇದನ್ನೂ ಓದಿ: ಭಾರತೀಯನೊಬ್ಬ ಪಾಕಿಸ್ಥಾನ ತಂಡಕ್ಕೆ ಬೆದರಿಕೆ ಹಾಕಿದ್ದ, ಆದರೆ…; ಬಾಂಬ್ ಸಿಡಿಸಿದ ಅಫ್ರಿದಿ
ಕೇಶವ್ ಲೋಹಿಯಾ ಎಂಬ ಟ್ವಿಟರ್ ಬಳಕೆದಾರರೊಬ್ಬರು ಈ ಕುರಿತು ಮಾಹಿತಿ ಹಾಗೂ ಫೋಟೋವನ್ಬು ಹಂಚಿಕೊಂಡಿದ್ದಾರೆ. ಒಂದು ಕಡೆ ಜ್ಯೂಸ್ ಗೆ 40 ರೂ. ಎಂದು ಬರೆದು ಕ್ಯೂಆರ್ ಸ್ಕ್ಯಾನರ್ ಇಟ್ಟಿದ್ದು, ಇನ್ನೊಂದೆಡೆ ಮತ್ತೊಂದು ಕ್ಯೂಆರ್ ಸ್ಕ್ಯಾನರ್ ಇದೆ. ಅದು ಕುಂಕುಮ್ ಮೃಧ ಯೂಟ್ಯೂಬ್ ಚಾನೆಲ್ ನ ಸ್ಕ್ಯಾನರ್.
ಕುಂಕುಮ್ ಮೃಧ ಅವರ ಯೂಟ್ಯೂಬ್ ಚಾನೆಲ್ ನಲ್ಲಿ 2 ಸಾವಿರ ಸಬ್ ಸ್ಕ್ರೈಬರ್ಸ್ ಇದ್ದು, ವಿವಿಧ ಬಗೆಯ ಅಡುಗೆ ಹಾಗೂ ಜ್ಯೂಸ್ ಮಾಡುವ ವಿಧಾನದ ಕುರಿತು ವಿಡಿಯೋ ಇವರ ಚಾನೆಲ್ ನಲ್ಲಿ ಇದೆ.
ನೆಟ್ಟಿಗರು ಕುಂಕುಮ್ ಮೃಧ ಅವರ ಯೂಟ್ಯೂಬ್ ಚಾನೆಲ್ ಕುರಿತು ಖುಷಿ ವ್ಯಕ್ತಪಡಿಸಿದ್ದಾರೆ.
Yesterday, I had fresh juice from this vendor in Bellandur. What stood out was that he had a “YouTube” channel (with 2k subscribers!) along with common barcodes.
And he was promoting it – visit my channel! This is peak creator economy and ofc @peakbengaluru pic.twitter.com/ZnhiwVRnIn
— Keshav Lohia (@Keshav_Lohiaa) March 18, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bihar: ಶಾಲಾ ಮಕ್ಕಳಿಗೆ ಕೊಟ್ಟ ʼಖಿಚಡಿʼಯಲ್ಲಿ ಹಾವು ಪತ್ತೆ; ವಿದ್ಯಾರ್ಥಿಗಳು ಅಸ್ವಸ್ಥ

Video: ಕೋತಿ ಕಸಿದುಕೊಂಡು ಹೋದ ಕನ್ನಡಕ ಬುದ್ಧಿವಂತಿಕೆಯಿಂದ ಹಿಂಪಡೆದ ಮಹಿಳೆ!

Watch Viral Video: ವಿದ್ಯಾರ್ಥಿಗಳ ಎದುರೇ ಹೊಡೆದಾಡಿಕೊಂಡ ಪ್ರಿನ್ಸಿಪಾಲ್, ಟೀಚರ್

Lesbian couple: ಮಧ್ಯರಾತ್ರಿ ದೇವಸ್ಥಾನದಲ್ಲಿ ವಿವಾಹವಾದ ಸಲಿಂಗಿ ಜೋಡಿ

Van steal: ವಾಹನ ಕದಿಯಲು ಹೋದ ಮೂವರಿಗೂ ಡ್ರೈವಿಂಗ್‌ಗೇ ಬರಲ್ಲ.. ಮುಂದೇನಾಯ್ತು?