
CSK Forever: ಮದುವೆ ಕಾರ್ಡ್‌ನಲ್ಲಿ ಧೋನಿ ಫೋಟೋ ಪ್ರಿಂಟ್ ಮಾಡಿಸಿದ ಅಭಿಮಾನಿ
Team Udayavani, Jun 4, 2023, 9:45 AM IST

ಛತ್ತೀಸ್‌ಗಢ: ಟೀಮ್ ಇಂಡಿಯಾದ ಮಾಜಿ ಕಪ್ತಾನ, ಚೆನ್ನೈ ಸೂಪರ್ ಕಿಂಗ್ಸ್ ನ ನಾಯಕ ಎಂ.ಎಸ್.ಧೋನಿ ಅವರನ್ನು ಇಷ್ಟಪಡದವರ ಸಂಖ್ಯೆ ಕಮ್ಮಿ. ಅವರ ಮೇಲಿನ ಅಭಿಮಾನ ಎಂಥದ್ದು ಎನ್ನುವುದು ಇತ್ತೀಚೆಗೆ ಮುಕ್ತಾಯ ಕಂಡ ಐಪಿಎಲ್ ನಲ್ಲಿ ಮತ್ತೊಮ್ಮೆ ಸಾಬೀತಾಗಿದೆ.
ಧೋನಿಯನ್ನು ಕಣ್ತುಂಬಿಕೊಳ್ಳಲು ಮಳೆಯನ್ನು ಲೆಕ್ಕಿಸದೇ ಕಾದು ಕೂತವರು, ರೈಲ್ವೇ ಸ್ಟೇಷನ್ ನಲ್ಲಿ ಮಲಗಿ ಕಾದ ಅನೇಕ ಅಭಿಮಾನಿಗಳಿದ್ದಾರೆ. ಈ ಅಭಿಮಾನಕ್ಕಾಗಿ ಧೋನಿಯೇ ಹೇಳಿದಂತೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಮ್ಮಿಯೇ. ಅಭಿಮಾನಿಗಳಿಗಾಗಿ ಕಷ್ಟವಾದರೂ ಸರಿಯೇ ಇನ್ನೊಂದು ಸೀಸನ್ ಐಪಿಎಲ್ ಆಡಲು ಬಯಸುತ್ತೇನೆ ಎಂದು ಧೋನಿ ಫೈನಲ್ ಪಂದ್ಯದ ದಿನ ಹೇಳಿದ್ದಾರೆ.
ಇದನ್ನೂ ಓದಿ: ಹೊಸ ಇನ್ನಿಂಗ್ಸ್ ಆರಂಭಿಸಿದ ರುತುರಾಜ್: ಕ್ರಿಕೆಟ್ ಆಟಗಾರ್ತಿಯನ್ನೇ ವರಿಸಿದ CSK ಪ್ಲೇಯರ್
‘ತಲಾ’ ಅಭಿಮಾನಿಯೊಬ್ಬ ತನ್ನ ಮದುವೆಯ ಆಮಂತ್ರಣ ಪತ್ರಿಕೆಯಲ್ಲೂ ಧೋನಿಯನ್ನು ಮರೆತಿಲ್ಲ.!
ಹೌದು ಛತ್ತೀಸ್‌ಗಢದ ವ್ಯಕ್ತಿಯೊಬ್ಬ ತನ್ನ ಲಗ್ನ ಪತ್ರಿಕೆಯ ಎರಡೂ ಕಡೆ ಧೋನಿ ಅವರ ಜೆರ್ಸಿ ನಂ.7 ಹಾಗೂ ಅವರ ಫೋಟೋವನ್ನು ಪ್ರಿಂಟ್ ಮಾಡಿಸಿದ್ದಾನೆ. ಜೂ.7 ರಂದು ಈ ಮದುವೆ ನಡೆಯಲಿದ್ದು, ಮದುವೆ ಕಾರ್ಡ್ ನ್ನು ಧೋನಿ ಅವರಿಗೂ ಅಭಿಮಾನಿ ಕಳುಹಿಸಿದ್ದಾನೆ. ಟ್ವಿಟರ್ ನಲ್ಲಿ ಈ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಧೋನಿಗೆ ಮೊಣಕಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಮುಂದಿನ 6-7 ತಿಂಗಳು ಫಿಟ್ ಆಗಿದ್ದರೆ ಮುಂದಿನ ಸೀಸನ್ ನಲ್ಲಿ ಅಭಿಮಾನಿಗಳಿಗಾಗಿ ಆಡುವುದೆಂದು ಧೋನಿ ಹೇಳಿದ್ದಾರೆ.
CSK #yellove 💛 fever isn’t over yet⁉️
A fan boy of @msdhoni from #chhattisgarh printed Dhoni face, #Jersey no 7 on his wedding card and invite to the #ChennaiSuperKings captain❤🔥
#MSDhoni𓃵 #thala #Dhoni pic.twitter.com/dZmAqFvI14— Shivsights (@itsshivvv12) June 3, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral News; ಗುಜರಾತ್ ಕಡಲಿನಲ್ಲಿ ಕಾಣಿಸಿಕೊಂಡ ಸಿಂಹದ ಚಿತ್ರ: ಅಸಲಿಯತ್ತೇನು?

Reels Craze: ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡಲು ಹೋಗಿ 14 ವರ್ಷದ ಬಾಲಕನ ದುರಂತ ಅಂತ್ಯ

Viral Video: ಆಡಿ ಕಾರಿನಲ್ಲಿ ಬಂದು ರಸ್ತೆ ಬದಿ ತರಕಾರಿ ಮಾರುವ ಕೇರಳದ ರೈತ…

Viral: ಶಾಲೆಯಲ್ಲೇ ಶಿಕ್ಷಕಿಯರ ರೀಲ್ಸ್, ವಿದ್ಯಾರ್ಥಿಗಳು ಶೇರ್ ಮಾಡಬೇಕಂತೆ, ಇಲ್ಲದಿದ್ದರೆ…

Cop In Trouble: ರೀಲ್ಸ್ ಮಾಡಲು ಡ್ಯೂಟಿ ವಾಹನ ನೀಡಿ ತೊಂದರೆಗೆ ಸಿಲುಕಿದ ಪೊಲೀಸ್ ಅಧಿಕಾರಿ
MUST WATCH
ಹೊಸ ಸೇರ್ಪಡೆ

Egg ಹೊರೆ ಹೆತ್ತವರ ಹೆಗಲಿಗೆ? ಮೊಟ್ಟೆಗೆ ಅಧಿಕ ಬೇಡಿಕೆ, ಸಾಕಾಗದ ಅನುದಾನ

Paddy ಇಳುವರಿ ಕುಸಿತ? ತುಂಗಭದ್ರಾ,ಕಾವೇರಿ ತೀರದಲ್ಲಿ ನೀರಿಲ್ಲದೆ ಭತ್ತ ಬೆಳೆಗೆ ಸಂಕಷ್ಟ

Viral News; ಗುಜರಾತ್ ಕಡಲಿನಲ್ಲಿ ಕಾಣಿಸಿಕೊಂಡ ಸಿಂಹದ ಚಿತ್ರ: ಅಸಲಿಯತ್ತೇನು?

Nov. 25, 26: ಬೆಂಗಳೂರಿನಲ್ಲಿ ಕಂಬಳ: 125ಕ್ಕೂ ಅಧಿಕ ಜತೆ ಕೋಣಗಳ ಭಾಗವಹಿಸುವಿಕೆ

Heavy rain; ಮೂರೇ ದಿನಗಳಲ್ಲಿ ಸ್ಥಗಿತ: ಕುಮಾರಪರ್ವತ ಚಾರಣಕ್ಕೆ ನಿರ್ಬಂಧ