
ಐಪಿಎಲ್ ಫೈನಲ್ ವೇಳೆ 2423ಕ್ಕೂ ಹೆಚ್ಚು ಕಾಂಡೋಮ್ ಆರ್ಡರ್: ಸ್ವಿಗ್ಗಿ ಟ್ವೀಟ್ Viral
Team Udayavani, May 30, 2023, 10:40 AM IST

ಅಹಮದಬಾದ್: ಐಪಿಎಲ್ ನ ರೋಚಕ ಫೈನಲ್ ಮುಕ್ತಾಯ ಕಂಡಿದೆ. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 5ನೇ ಬಾರಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಫೈನಲ್ ಪಂದ್ಯವನ್ನು ವೀಕ್ಷಿಸಲು ಮಳೆಯನ್ನು ಲೆಕ್ಕಿಸದೇ 75 ಸಾವಿರ ಮಂದಿ ಸ್ಟೇಡಿಯಂಗೆ ಬಂದಿದ್ದಾರೆ. ಪಂದ್ಯ ನಡೆಯುತ್ತಿರುವಾಗ ಜನಪ್ರಿಯ ಫುಡ್ ಡೆಲಿವರಿ ಸ್ವಿಗ್ಗಿ ಆ್ಯಪ್ ಮಾಡಿರುವ ಟ್ವೀಟ್ ವೈರಲ್ ಆಗಿದೆ.
ಪಂದ್ಯದ ವೇಳೆ ಪ್ರತಿ ನಿಮಿಷಕ್ಕೆ 212 ಬಿರಿಯಾನಿಗಳು ಆರ್ಡರ್ ಆಗಿವೆ. ಒಟ್ಟು 12 ಮಿಲಿಯನ್ ಬಿರಿಯಾನಿಗಳು ಫೈನಲ್ ಪಂದ್ಯದ ವೇಳೆ ಆರ್ಡರ್ ಆಗಿವೆ ಎಂದು ಸ್ವಿಗ್ಗಿ ಟ್ವೀಟ್ ಮಾಡಿದೆ.
ಇದರರೊಂದಿಗೆ ಮಾಡಿರುವ ಮತ್ತೊಂದು ಟ್ವೀಟ್ ವೈರಲ್ ಆಗಿದ್ದು, ನೆಟ್ಟಿಗರು ನಾನಾ ಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:ನಿವೃತ್ತಿ ಘೋಷಣೆ ಮಾಡುವುದು ಸುಲಭ ಆದರೆ…: ಕ್ರಿಕೆಟ್ ವಿಶ್ವದ ಕುತೂಹಲ ತಣಿಸಿದ Dhoni ಉತ್ತರ
ಸ್ವಿಗ್ಗಿ ಇನ್‌ಸ್ಟಾಮಾರ್ಟ್ ನಲ್ಲಿ 2423 ಕಾಂಡೋಮ್‌ಗಳನ್ನು ಆರ್ಡರ್ ಮಾಡಿದ್ದಾರೆ ಎಂದು ಸಂಸ್ಥೆ ಟ್ವೀಟ್ ಮಾಡಿದೆ.
ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೂಲಕ ಇದುವರೆಗೆ 2423 ಕಾಂಡೋಮ್‌ಗಳನ್ನು ವಿತರಿಸಲಾಗಿದೆ. ಇಂದು ರಾತ್ರಿ 22 ಕ್ಕೂ ಹೆಚ್ಚು ಆಟಗಾರರು ಆಡುತ್ತಿರುವಂತೆ ತೋರುತ್ತಿದೆ ಎಂದು ಕಾಂಡೋಮ್ ಕಂಪೆನಿಯೊಂದನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದು ವೈರಲ್ ಆಗಿದೆ.
ಈ ಟ್ವೀಟ್ 793.3 ಲಕ್ಷ ಜನರಿಗೆ ತಲುಪಿದ್ದು, 8,878 ಸಾವಿರ ಮಂದಿ ಲೈಕ್ ಮಾಡಿದ್ದಾರೆ.
“ಇದು ಸ್ವಿಗ್ಗಿಯ ನಿಜವಾದ ಮಟ್ಟ” ಎಂದು ಒಬ್ಬರು ರಿಟ್ವೀಟ್ ಮಾಡಿದ್ದಾರೆ. “ನನಗೆ 22 ಆಟಗಾರರ ಬಗ್ಗೆ ತಿಳಿದಿಲ್ಲ, ಆದರೆ ಇತರ 2423 ಆಟಗಾರರು ನಿಜವಾಗಿಯೂ ಸುರಕ್ಷಿತವಾಗಿ ಆಡುತ್ತಿದ್ದಾರೆ” ಎಂದು ಕಮೆಂಟ್ ಮಾಡಿದ್ದಾರೆ. “ಈ ಅಂಕಿಅಂಶಗಳನ್ನು ನೋಡಿದ ಬಳಿಕ ಸಿಂಗಲ್ಸ್ ಒಂದು ಬದಿಯಲ್ಲಿ ಕೂತು ಅಳುತ್ತಾರೆ” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
2423 condoms have been delivered via @SwiggyInstamart so far, looks like there are more than 22 players playing tonight 👀 @DurexIndia
— Swiggy (@Swiggy) May 29, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Reels Craze: ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡಲು ಹೋಗಿ 14 ವರ್ಷದ ಬಾಲಕನ ದುರಂತ ಅಂತ್ಯ

Viral Video: ಆಡಿ ಕಾರಿನಲ್ಲಿ ಬಂದು ರಸ್ತೆ ಬದಿ ತರಕಾರಿ ಮಾರುವ ಕೇರಳದ ರೈತ…

Viral: ಶಾಲೆಯಲ್ಲೇ ಶಿಕ್ಷಕಿಯರ ರೀಲ್ಸ್, ವಿದ್ಯಾರ್ಥಿಗಳು ಶೇರ್ ಮಾಡಬೇಕಂತೆ, ಇಲ್ಲದಿದ್ದರೆ…

Cop In Trouble: ರೀಲ್ಸ್ ಮಾಡಲು ಡ್ಯೂಟಿ ವಾಹನ ನೀಡಿ ತೊಂದರೆಗೆ ಸಿಲುಕಿದ ಪೊಲೀಸ್ ಅಧಿಕಾರಿ

Viral Video: ಬಿಟ್ಟೋಗ್ಬೇಡಾ…ಮಾವುತ ಬಿಟ್ಟು ಹೋಗದಂತೆ ಪುಟ್ಟ ಮಗುವಿನಂತೆ ರಚ್ಚೆ ಹಿಡಿದ ಆನೆ