
VIDEO: ಅಂತರ್ಜಾತಿ ವಿವಾಹವಾದ ಸಹೋದರಿಯನ್ನು ಗಂಡನ ಮನೆಯಿಂದ ಬಲವಂತವಾಗಿ ಎಳೆದೊಯ್ದ ಸಹೋದರರು
Team Udayavani, Jun 6, 2023, 10:48 AM IST

ಪಾಟ್ನಾ: ಪ್ರೀತಿಸಿ ಮದುವೆಯಾದ ಯುವತಿಯನ್ನು ತನ್ನ ಸಹೋದರರೇ ಗಂಡನ ಮನೆಯಿಂದ ಬಲವಂತವಾಗಿ ಕರೆದುಕೊಂಡು ಬಂದಿರುವ ಘಟನೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿಹಾರದ ಅರಾರಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಯುವತಿ ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಮದುವೆಯಾಗಿದ್ದಾಳೆ. ಇದು ಅಂತರ್ಜಾತಿ ವಿವಾಹವಾಗಿದ್ದರಿಂದ ಯುವತಿಯ ಮನೆಯವರಿಗೆ ಇದು ಇಷ್ಟವಿರಲಿಲ್ಲ. ಇದರಿಂದ ಮನೆತನದ ಘನತೆಗೆ ಹಾನಿ ಆಗಿದ್ದು, ಇದೇ ಮುಜುಗರದಿಂದ ಯುವತಿ ಮನೆಯವರು ಇದ್ದರು.
ಇದನ್ನೂ ಓದಿ: Gujarat: ಕ್ರಿಕೆಟ್ ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳು ಕತ್ತರಿಸಿ, ಹಲ್ಲೆ
ಆದರೆ ಮದುವೆಯಾಗಿ ಕೆಲವೇ ದಿನಗಳು ಆಗಿವೆ ಅಷ್ಟೇ. ಯುವತಿಯ ಸಹೋದರರು, ಆಕೆಯ ಗಂಡನ ಮನೆಗೆ ತೆರಳಿದ್ದಾರೆ. ಅಲ್ಲಿ ಒಂದಷ್ಟು ಸಮಯ ಗಲಾಟೆ ನಡೆದಿದೆ. ಅಕ್ಕಪಕ್ಕದ ಮನೆಯವರು ಸೇರಿದ್ದಾರೆ. ಈ ನಡುವೆಯೇ ಯುವತಿಯ ಸಹೋದರರು ಆಕೆಯನ್ನು ಬಲವಂತವಾಗಿ ಎತ್ತಿಕೊಂಡು ಬೈಕ್ ನಲ್ಲಿ ಕರೆದುಕೊಂಡು ಸೀದಾ ಮನೆಗೆ ತೆರಳಿದ್ದಾರೆ. ಯುವತಿ ಕಿರುಚಿಕೊಂಡರು ಆಕೆಯ ಸಹೋದರರು ಅದನ್ನು ಕೇಳದೆ ಬೈಕ್ ನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ.
ಈ ಸಂಬಂಧ ಗಂಡನ ಮನೆಯವರು ಭೀತಿಯಿಂದ ದೂರು ನೀಡಿದ್ದು, ಆಕೆಯ ಮನೆಯವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ. ಸದ್ಯ ಈ ಸಂಬಂಧ ತನಿಖೆ ನಡೆಯುತ್ತಿದೆ.
ಘಟನೆಯ ವಿಡಿಯೋ ಸಿನಿಮೀಯ ರೀತಿ ಇದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
View this post on Instagram
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Indian Army ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವುದು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

Delhi; 40 ಕೋಟಿ ರೂ. ಮೌಲ್ಯದ ಅಫೀಮು ಸಹಿತ ಮೂವರ ಬಂಧನ

Asian Games; ಅರುಣಾಚಲ ಪ್ರದೇಶದ ಆಟಗಾರರಿಗೆ ಪ್ರವೇಶ ನಿರಾಕರಿಸಿ ಚೀನಾ: ಭಾರತದ ತೀವ್ರ ವಿರೋಧ

NDA ಗೆ ಜೆಡಿಎಸ್ ಪಕ್ಷವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ ಶಾ, ನಡ್ಡಾ

J&K; ಗೃಹಬಂಧನದಿಂದ ಬಿಡುಗಡೆ: ಕಣ್ಣೀರಿಟ್ಟ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್
MUST WATCH
ಹೊಸ ಸೇರ್ಪಡೆ

Reliance Jio: ಐಫೋನ್ 15 ಖರೀದಿಸಿದರೆ ಆರು ತಿಂಗಳು ಫ್ರೀ ಪ್ಲಾನ್

BJP Ticket ವಂಚನೆ ; ಗದಗದಲ್ಲೂ ಅಭಿನವ ಹಾಲಶ್ರೀಯಿಂದ 1 ಕೋಟಿ ರೂ. ನಾಮ!

Chikodi; ಪಟಾಕಿ ಸಿಡಿಸುವ ವೇಳೆ ಯುವಕನ ಕೈ ನುಜ್ಜು ಗುಜ್ಜು

JDS ಎನ್ ಡಿಎ ಮೈತ್ರಿಕೂಟ ಸೇರ್ಪಡೆಯಿಂದ ಎರಡೂ ಪಕ್ಷಗಳಿಗೂ ಶಕ್ತಿ: ಜಿಟಿಡಿ

Indian Army ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವುದು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್