ಸ್ನಾನದ ವಿಡಿಯೋ, ಖಾಸಗಿ ಫೋಟೋ ಲೀಕ್..‌ ನಟಿ ತ್ರಿಶಾ ಸುತ್ತ ಸಾಗಿದ ವಿವಾದ ಒಂದೆರೆಡಲ್ಲ..


Team Udayavani, Feb 24, 2024, 4:26 PM IST

ಸ್ನಾನದ ವಿಡಿಯೋ, ಖಾಸಗಿ ಫೋಟೋ ಲೀಕ್..‌ ನಟಿ ತ್ರಿಶಾ ಸುತ್ತ ಸಾಗಿದ ವಿವಾದ ಒಂದೆರೆಡಲ್ಲ..

ಬಣ್ಣದ ಲೋಕದಲ್ಲಿ ನಟ – ನಟಿಯರು ಎಷ್ಟು ಖ್ಯಾತರಾಗಿರುತ್ತಾರೋ ಅದರಾಚೆ ಒಂದಷ್ಟು ವಿವಾದಗಳಿಂದಲೂ ಸುದ್ದಿಯಾಗುತ್ತಾರೆ. ಸೆಲೆಬ್ರಿಟಿಗಳ ವಿವಾದಗಳು ಹೊಸತೇನಲ್ಲ. ಇಂದು ದಕ್ಷಿಣ ಸಿನಿರಂಗದಲ್ಲಿ ಸಾಕಷ್ಟು ಹೆಸರುಗಳಿಸಿರುವ ನಟಿ ತ್ರಿಶಾ ಕೃಷ್ಣನ್‌ ಕಳೆದ ಕೆಲ ಸಮಯದಿಂದ ಸಿನಿಮಾ ಬಿಟ್ಟು ಅನ್ಯ ವಿಚಾರಗಳಿಂದಲೇ ಸುದ್ದಿಯಲ್ಲಿದ್ದಾರೆ.

ರಾಜಕಾರಣಿಯೊಬ್ಬರು ಟೀಕಿಸುವ ಭರದಲ್ಲಿ ನಟಿ ತ್ರಿಷಾ ಅವರ ಹೆಸರನ್ನು ಎಳೆದುಕೊಂಡು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇತ್ತೀಚೆಗೆ ಹಿರಿಯ ನಟ ಮನ್ಸೂರ್‌ ಆಲಿಖಾನ್‌ ಅವರು ತ್ರಿಷಾ ಅವರ ಬಗ್ಗೆ ಹೇಳಿದ ಅಸಭ್ಯ ಮಾತಿನ ಬಳಿಕ ಎವಿ ರಾಜು ಅವರ ಹೇಳಿಕೆ ಕೂಡ ತ್ರಿಷಾ ಅವರಿಗೆ ಕೆಟ್ಟ ರೀತಿಯ ಹೆಸರು ತಂದಿದೆ.

ನಟಿ ತ್ರಿಷಾ ಅವರು ಈ ರೀತಿಯ ವಿವಾದಗಳಿಂದ ಸುದ್ದಿಯಾಗಿರುವುದು ಹೊಸತೇನಲ್ಲ. ಹಾಗಾದರೆ ಬನ್ನಿ ತ್ರಿಷಾ ಅವರ ಸುತ್ತ ಹುಟ್ಟಿದ ವಿವಾದಗಳತ್ತ ಒಂದು ನೋಟ ಹಾಕಿಬರೋಣ..

ತ್ರಿಶಾ ಮತ್ತು ರಾಣಾ ದಗ್ಗುಬಾಟಿ: ನಟಿ ತ್ರಿಷಾ ಹಾಗೂ ರಾಣಾ ದಗ್ಗುಬಾಟಿ ಒಂದು ಕಾಲದಲ್ಲಿ ಆತ್ಮೀಯವಾಗಿದ್ದವರು. ಇವರಿಬ್ಬರ ಆತ್ಮೀಯತೆ ಪ್ರೀತಿಗೆ ತಿರುಗಿತ್ತು. ಪರಸ್ಪರ ಪ್ರೀತಿಯಲ್ಲಿದ್ದರೂ, ಸಾಮಾಜಿಕ ಜಾಲತಾಣದಲ್ಲಿ ಫೋಟೋ, ಸಾರ್ವಜನಿಕವಾಗಿ ಜೊತೆಯಾಗಿ ಕಾಣಿಸಿಕೊಂಡರೂ ಹಾಗೂ ಒಟ್ಟಾಗಿ ಸುತ್ತಾಡಿದ್ದರೂ, ಎಲ್ಲೂ ಕೂಡ ಬಹಿರಂಗವಾಗಿ ಸಂಬಂಧದ ಬಗ್ಗೆ ತ್ರಿಷಾ ಹಾಗೂ ರಾಣಾ ಮಾತನಾಡಿರಲಿಲ್ಲ. ಆದರೆ ಕೆಲ ಸಮಯದ ಇಬ್ಬರ ನಡುವೆ ಬಿರುಕು ಉಂಟಾಗಿ ಪರಸ್ಪರ ದೂರವಾದರು. ರಾಣಾ ಆಗಸ್ಟ್ 8, 2020 ರಂದು ಮಿಹೀಕಾ ಬಜಾಜ್ ಅವರನ್ನು ವಿವಾಹವಾಗುವ ಮೂಲಕ ತ್ರಿಷಾ ಜೊತೆಗಿನ ಸಂಬಂಧ ಕೊನೆಯಾಗಿತ್ತು.

ತ್ರಿಶಾ ಮತ್ತು ದಳಪತಿ ವಿಜಯ್ : ತ್ರಿಶಾ ಹಾಗೂ ದಳಪತಿ ವಿಜಯ್‌ ಅವರ ಜೋಡಿಯನ್ನು ಪ್ರೇಕ್ಷಕರು 2005 ರಲ್ಲಿ ಬಂದ ʼಗಿಲ್ಲಿʼ ಸಿನಿಮಾದಲ್ಲಿ ನೋಡಿ ಮೆಚ್ಚಿದ್ದರು. ಸಿನಿಮಾದ ಬಳಿಕ ತ್ರಿಶಾ ಹಾಗೂ ದಳಪತಿ ಅವರ ನಡುವೆ ಏನೋ ನಡೆಯುತ್ತಿದೆ ಎನ್ನುವ ಮಾತುಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಇದು ದಳಪತಿ ವಿಜಯ್‌ ಹಾಗೂ ಸಂಗೀತಾ ಸೋರ್ನಲಿಂಗಂ ಅವರ ಸಂಬಂಧದ ಮೇಲೆ ಪರಿಣಾಮ ಬೀರಲು ಶುರುವಾಗಿತ್ತು. ಆದರೆ ಆ ಬಳಿಕ ತ್ರಿಶಾ ಈ ಸುದ್ದಿಗೆ ಅರ್ಥವಿಲ್ಲ. ಇದು ವದಂತಿ ಅಷ್ಟೇ, ವಿಜಯ್‌ ಹಾಗೂ ನಾನು ಉತ್ತಮ ಸ್ನೇಹಿತರು ಅಷ್ಟೇ ಎನ್ನುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದರು.

ತ್ರಿಶಾ ಮತ್ತು ಧನುಷ್:‌  ನಟಿ ತ್ರಿಶಾ ಹಾಗೂ ಧನುಷ್‌ ಅವರರಿಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಮಾತುಗಳು ಅಂದು ಕಾಲಿವುಡ್‌ ನಲ್ಲಿ ಹರಿದಾಡಿತ್ತು. ಈ ಸಂಬಂಧ ಇಬ್ಬರು ಆತ್ಮೀಯವಾಗಿರುವ ಕೆಲ ಖಾಸಗಿ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದು ಧನುಷ್‌ ಹಾಗೂ ಐಶ್ವರ್ಯಾ ಅವರ ಸಂಬಂಧದ ಮೇಲೂ ಪರಿಣಾಮ ಬೀರಿತ್ತು.

ಪೇಟಾ ಬೆಂಬಲಿಸಿ, ಕೆಂಗಣ್ಣಿಗೆ ಗುರಿಯಾಗಿದ್ದ ತ್ರಿಶಾ:  ಆ ಸಮಯದಲ್ಲಿ ನಟಿ ತ್ರಿಶಾ ಅವರು ದಕ್ಷಿಣ ಭಾರತದಲ್ಲಿ ಪೇಟಾ ಸಂಸ್ಥೆಯ ಬ್ರಾಂಡ್ ರಾಯಭಾರಿ ಆಗಿದ್ದರು. ಅದೇ ಸಮಯದಲ್ಲಿ ಜಲ್ಲಿಕಟ್ಟು ಸ್ಪರ್ಧೆಗೆ ಅವಕಾಶ ಕೋರಿ ಭಾರೀ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ತ್ರಿಶಾ ಅವರು ಮಾಡಿದ್ದ ಟ್ವೀಟ್‌ ವಿವಾದಕ್ಕೆ ಕಾರಣವಾಗಿತ್ತು. ಪರೋಕ್ಷವಾಗಿ ಜಲ್ಲಿಕಟ್ಟು ವಿರೋಧಿಸುವ ಟ್ವೀಟ್‌ ಇದಾಗಿತ್ತು. ಇದರಿಂದ ಜನ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆ ಬಳಿಕ ತ್ರಿಶಾ ಕ್ಷಮೆಯಾಚಿಸಿದ್ದರು.

ಮುರಿದು ಬಿದ್ದ ಮದುವೆ: ಇನ್ನು ವಿವಾಹದ ವಿಚಾರದಲ್ಲೂ ತ್ರಿಶಾ ಸುದ್ದಿಯಾಗಿದ್ದರು. ಅವರು ಉದ್ಯಮಿ ವರುಣ್‌ ಮಣಿಯನ್‌ ಎಂಬವರ ಜೊತೆ ಎಂಗೇಜ್‌ ಮೆಂಟ್‌ ಮಾಡಿಕೊಂಡಿದ್ದರು. ಇದಾದ ಕೆಲ ಸಮಯದಲ್ಲೇ ಅವರು ಮದುವೆ ಆಗಲು ನಿರಾಕರಿಸಿದ್ದರು. ಈ ವಿಚಾರ ಕೂಡ ಅಂದು ವಿವಾದಕ್ಕೆ ಕಾರಣವಾಗಿತ್ತು.

ಸ್ನಾನ ಮಾಡುವ ವಿಡಿಯೋ ವೈರಲ್..‌ ತ್ರಿಶಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬಳಿಕ ಅವರ ಜನಪ್ರಿಯತೆ ಹೆಚ್ಚಾಗಿತ್ತು. ಬ್ಯಾಕ್‌ ಟು ಬ್ಯಾಕ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು ಪ್ರೇಕ್ಷಕರ ಮನಗೆದ್ದಿದ್ದರು. ಅಂದು ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬರು ಸ್ನಾನ ಮಾಡುವ ವಿಡಿಯೋವೊಂದು ವೈರಲ್‌ ಆಗಿತ್ತು. ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಇದು ಮಾರ್ಫ್‌  ಮಾಡಿರುವ ಫೇಕ್‌ ವಿಡಿಯೋವೆಂದು ತ್ರಿಶಾ ಸ್ಪಷ್ಟನೆ ನೀಡಿದ್ದರು.

ವಿವಾದಕ್ಕೆ ಗುರಿಯಾದ ಹಿರಿಯ ನಟ:  ʼಲಿಯೋʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಹಿರಿಯ ನಟ ಮನ್ಸೂರ್‌ ಆಲಿಖಾನ್‌ ಅವರು ಸುದ್ದಿಗೋಷ್ಟಿಯೊಂದರಲ್ಲಿ ತ್ರಿಶಾ ಅವರ ಪಾತ್ರದ ಬಗ್ಗೆ ಹೇಳುತ್ತಾ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.

ತನಗೆ  ʼಲಿಯೋʼ ಸಿನಿಮಾದಲ್ಲಿ ತ್ರಿಶಾ ಜೊತೆ ರೇಪ್‌ ಸೀನ್‌  ಮಾಡಲು ಸಿಗಲಿಲ್ಲ ಎನ್ನುವ ಮೂಲಕ ದೊಡ್ಡ ವಿವಾದಕ್ಕೆ ಕಾರಣವಾಗಿದ್ದರು. ಈ ಹೇಳಿಕೆಯ ಪರಿಣಾಮ ಕಲಾವಿದರ ಸಂಘದಿಂದ ಮನ್ಸೂರ್‌ ಆಲಿಖಾನ್‌ ಕೆಲ ಸಮಯ ಬ್ಯಾನ್‌ ಆಗಿದ್ದರು. ಅವರ ವಿರುದ್ಧ ದೂರು ಕೂಡ ದಾಖಲಾಗಿತ್ತು.

ರೆಸಾರ್ಟ್‌ ಹೇಳಿಕೆ: ತ್ರಿಶಾ ಅವರ ಸುತ್ತ ಇತ್ತೀಚೆಗೆ ಸಾಗಿದ ವಿವಾದ ಇದು. ಎಐಎಡಿಎಂಕೆ ಮಾಜಿ ಸದಸ್ಯ ಟೀಕಿಸುವ ಭರದಲ್ಲಿ ತ್ರಿಶಾ ಅವರ ಹೆಸರನ್ನು ಎಳೆದು ತಂದಿದ್ದರು. ತ್ರಿಶಾ ಅವರನ್ನು ಶಾಸಕರ ಕೋರಿಕೆಯ ಮೇರೆಗೆ ರೆಸಾರ್ಟ್‌ ಗೆ ಕರೆಸಿಕೊಳ್ಳಲಾಗಿತ್ತು. ಇದಕ್ಕಾಗಿ ತ್ರಿಶಾ ಅವರಿಗೆ 25 ಲಕ್ಷ ಕೊಟ್ಟು ರೆಸಾರ್ಟ್‌ ಗೆ ಕರೆದುಕೊಂಡು ಬರಲಾಗಿತ್ತು ಎನ್ನುವ‌ ಹೇಳಿಕೆಯನ್ನು ನೀಡಿ ಭಾರೀ ವಿವಾದಕ್ಕೆ ಒಳಗಾಗಿದ್ದರು.

ಈ ಬಗ್ಗೆ ನಟಿ ತ್ರಿಶಾ ಪ್ರಚಾರಗಿಟ್ಟಿಸಿಕೊಳ್ಳಲು ಹಾಗೂ ಎಲ್ಲರ ಗಮನ ಸೆಳೆಯಲು ಜನ ಯಾವ ಮಟ್ಟಕ್ಕೆ ಬೇಕಾದ್ರೂ ಇಳಿಯುತ್ತಾರೆ. ಇದನ್ನು ಪದೇ ಪದೇ ನೋಡುವುದು ಅಸಹ್ಯಕರವಾಗಿದೆ. ಇವರ ಹೇಳಿಕೆ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು. ನನ್ನ ಲೀಗಲ್‌ ಟೀಮ್‌ ಇದನ್ನು ನೋಡಿಕೊಳ್ಳುತ್ತದೆ ಎಂದು ತ್ರಿಶಾ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡು, ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.

ಟಾಪ್ ನ್ಯೂಸ್

RCB; Will Glenn Maxwell play against Hyderabad? Here is the update

RCB; ಹೈದರಾಬಾದ್ ವಿರುದ್ದ ಆಡುತ್ತಾರಾ ಗ್ಲೆನ್ ಮ್ಯಾಕ್ಸ್ ವೆಲ್? ಇಲ್ಲಿದೆ ಅಪ್ಡೇಟ್

Minister zameer ahmed khan hospitalized at chitradurga

Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು

Nirmala Travels: ನಿರ್ಮಲಾ ಟ್ರಾವೆಲ್ಸ್ ನ ಸಂಸ್ಥಾಪಕಿ ನಿರ್ಮಲಾ ಕಾಮತ್ ಇನ್ನಿಲ್ಲ

Nirmala Travels: ನಿರ್ಮಲಾ ಟ್ರಾವೆಲ್ಸ್ ನ ಸಂಸ್ಥಾಪಕಿ ನಿರ್ಮಲಾ ಕಾಮತ್ ಇನ್ನಿಲ್ಲ

ಬಸವರಾಜ ಬೊಮ್ಮಾಯಿ

LokSabha Election; ಕಾಂಗ್ರೆಸ್ ನ ಬಹುಮತ ಹೇಳಿಕೆಯೇ ಹಾಸ್ಯಾಸ್ಪದ: ಬಸವರಾಜ ಬೊಮ್ಮಾಯಿ

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

Poll Panel: ಚುನಾವಣಾ ಆಯೋಗ ಈವರೆಗೂ ವಶಪಡಿಸಿಕೊಂಡ ನಗದು ಎಷ್ಟು ಗೊತ್ತಾ?

Poll Panel: ಚುನಾವಣಾ ಆಯೋಗ ಈವರೆಗೂ ವಶಪಡಿಸಿಕೊಂಡ ನಗದು ಎಷ್ಟು ಗೊತ್ತಾ?

Nomination: ಏ.18ಕ್ಕೆ ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸುತ್ತೇನೆ… ಪ್ರಿಯಂಕಾ ಜಾರಕಿಹೊಳಿ

Nomination: ಏ.18ಕ್ಕೆ ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸುತ್ತೇನೆ… ಪ್ರಿಯಂಕಾ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ರೋಮಾಂಚನಗೊಳಿಸುವ ಡಿಸ್ನಿ ಲೋಕ…. ; ಇಲ್ಲಿ ಎಲ್ಲವೂ ಕಣ್ಣೆದುರಿಗೆ

Disneyland: ರೋಮಾಂಚನಗೊಳಿಸುವ ಡಿಸ್ನಿ ಲೋಕ….ಇಲ್ಲಿ ಎಲ್ಲವೂ ಕಣ್ಣೆದುರಿಗೆ…

kambala-main

Kambala; ಹೀಗೆಯೇ ಮುಂದುವರಿದರೆ ಇರಬಹುದೇ ‘ಕಂಬುಲ ನನ ದುಂಬುಲಾ’?

Sulthan Bathery: ವಯನಾಡ್ ನ ಗಣಪತಿವಟ್ಟಂ “ಸುಲ್ತಾನ್‌ ಬತ್ತೇರಿ”ಯಾಗಿ ಬದಲಾಗಿದ್ದು ಹೇಗೆ?

Sulthan Bathery: ವಯನಾಡ್ ನ ಗಣಪತಿವಟ್ಟಂ “ಸುಲ್ತಾನ್‌ ಬತ್ತೇರಿ”ಯಾಗಿ ಬದಲಾಗಿದ್ದು ಹೇಗೆ?

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

marigold

Marigold; ನಿರ್ಮಾಪಕರ ಮೊಗದಲ್ಲಿ ಮಾರಿಗೋಲ್ಡ್‌ ನಗು

ಸೊರಬ: ಬಿದಿರಿನ ಬುಟ್ಟಿ ಉದ್ಯಮಕ್ಕೆ ಬಂತು ಸಂಕಷ್ಟ

ಸೊರಬ: ಬಿದಿರಿನ ಬುಟ್ಟಿ ಉದ್ಯಮಕ್ಕೆ ಬಂತು ಸಂಕಷ್ಟ

Lok sabha Election 2024-ವೈಯಕ್ತಿಕ ಟೀಕೆ ಸರಿಯಲ್ಲ: ಜಯಪ್ರಕಾಶ್‌ ಹೆಗ್ಡೆ

Lok sabha Election 2024-ವೈಯಕ್ತಿಕ ಟೀಕೆ ಸರಿಯಲ್ಲ: ಜಯಪ್ರಕಾಶ್‌ ಹೆಗ್ಡೆ

RCB; Will Glenn Maxwell play against Hyderabad? Here is the update

RCB; ಹೈದರಾಬಾದ್ ವಿರುದ್ದ ಆಡುತ್ತಾರಾ ಗ್ಲೆನ್ ಮ್ಯಾಕ್ಸ್ ವೆಲ್? ಇಲ್ಲಿದೆ ಅಪ್ಡೇಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.