
ಕಾಣಿಕೆ ಹಾಕಲು ಹುಂಡಿಯೇ ಇಲ್ಲದ ಚಿಲ್ಕೂರು “ವೀಸಾ ಬಾಲಾಜಿ” ದೇವಸ್ಥಾನದ ವಿಶೇಷತೆ ಗೊತ್ತಾ?
108 ಪ್ರದಕ್ಷಿಣೆಯೇ ಈ ದೇವರಿಗೆ ಹರಕೆ... ಇಲ್ಲಿ ದೇವರಿಗೆ ಕಾಣಿಕೆ ಹಾಕುವಂತಿಲ್ಲ..
ಸುಧೀರ್, Mar 11, 2023, 6:07 PM IST

ದೇಶದಲ್ಲಿ ಜನರು ತಮ್ಮ ಸಮಸ್ಯೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಿ ಎಂದು ದೇವರ ಮೊರೆ ಹೋಗುವುದನ್ನು ನಾವು ನೋಡುತ್ತೇವೆ ಅದರಲ್ಲಿ, ಉದ್ಯೋಗ, ಅರೋಗ್ಯ ಸಮಸ್ಯೆ, ಮದುವೆ, ಮನೆ ನಿರ್ಮಾಣ ಹೀಗೆ ಹಲವು ರೀತಿಯ ಸಮಸ್ಯೆಗಳನ್ನು ನಿವಾರಿಸು ಎಂದು ದೇವರಲ್ಲಿ ಬೇಡೋಕೊಳ್ಳುವುದುಂಟು, ಆದರೆ ತೆಲಂಗಾಣದಲ್ಲಿರುವ ದೇವಾಲಯ ಇದಕ್ಕೆಲ್ಲ ಭಿನ್ನವಾಗಿದೆ, ಅಲ್ಲದೆ ಇಲ್ಲಿಗೆ ದಿನವೊಂದಕ್ಕೆ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಿದ್ದಾರೆ, ಹಾಗಾದರೆ ಅಷ್ಟೊಂದು ಮಂದಿ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಲು ಕಾರಣವೇನು ಈ ದೇವರಲ್ಲಿರುವ ಪವಾಡವಾದರೂ ಏನು ಎಂಬುದನ್ನು ತಿಳಿಯೋಣಾ…
ತೆಲಂಗಾಣದ ರಾಜ್ಯದ ರಂಗಾರೆಡ್ಡಿ ಜಿಲ್ಲೆಯಲ್ಲಿರುವ ಚಿಲ್ಕೂರು ಬಾಲಾಜಿ ದೇವಸ್ಥಾನ ಬಹಳ ವಿಶೇಷತೆಗಳನ್ನು ಹೊಂದಿರುವ ದೇವಸ್ಥಾನವಾಗಿದೆ. ಇಲ್ಲಿ ದಿನವೊಂದಕ್ಕೆ ಸಾವಿರಾರು ಮಂದಿ ಭಕ್ತರು ಈ ದೇವಳಕ್ಕೆ ಬರುತ್ತಾರೆ. ಇದರಲ್ಲಿ ಸುಮಾರು 80% ಮಂದಿ ವಿದೇಶಕ್ಕೆ ಉದ್ಯೋಗ ನಿಮಿತ್ತ ತೆರಳುವವರು ಅಲ್ಲದೆ ವಿದೇಶಕ್ಕೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲೆಂದು ವಿದೇಶಕ್ಕೆ ಪ್ರಯಾಣ ಬೆಳೆಸುವವರ ಸಂಖ್ಯೆಯ ಹೆಚ್ಚಾಗಿರುತ್ತದೆ ಕಾರಣ, ವಿದೇಶಕ್ಕೆ ತೆರಳಬೇಕಾದರೆ ವೀಸಾ ಅಗತ್ಯ.. ಕೆಲವೊಂದು ಜನರಿಗೆ ವೀಸಾ ಬಹು ಬೇಗನೆ ಸಿಗುತ್ತದೆ. ಇನ್ನು ಕೆಲವರಿಗೆ ವೀಸಾ ಸಿಗುವುದು ತಡವಾಗಬಹುದು ಇಲ್ಲವೇ ಸಿಗದೇ ಇರಬಹುದು ಆದರೆ ಚಿಲ್ಕೂರಿನಲ್ಲಿರು ಬಾಲಾಜಿ ದೇವಸ್ಥಾನಕ್ಕೆ ಬಂದು ದೇವರಲ್ಲಿ ವೀಸಾ ಆದಷ್ಟು ಬೇಗ ಕರುಣಿಸುವಂತೆ ಮಾಡು ದೇವರೇ ಎಂದು ಬೇಡಿಕೊಂಡರೆ ಕೆಲವೇ ದಿನಗಳಲ್ಲಿ ವೀಸಾ ಬರುತ್ತಂತೆ ಅಷ್ಟು ಶಕ್ತಿ ಈ ವೆಂಕಟೇಶ್ವರ ದೇವರಿಗೆ ಇದೆಯಂತೆ ಎನ್ನುತ್ತಾರೆ ಇಲ್ಲಿಗೆ ಬರುವ ಭಕ್ತರು.
ಇಲ್ಲಿಗೆ ಬರುವ ಭಕ್ತರಲ್ಲಿ ಹೆಚ್ಚಿನವರು ವಿದೇಶಗಳಿಗೆ ತೆರಳಲು ತಯಾರಿ ನಡೆಸಿ ಕೇವಲ ವೀಸಾ ಬರುವುದಕೋಸ್ಕರ ಕಾಯುವವರು ಅಂಥವರು ಈ ದೇವಸ್ಥಾನಕ್ಕೆ ಬಂದು ದೇವರಲ್ಲಿ ಬೇಡಿಕೊಂಡರೆ ತಮ್ಮ ಬೇಡಿಕೆ ಈಡೇರುತ್ತದೆ ಎನ್ನುತ್ತಾರೆ. ಹಾಗಾಗಿ ಈ ದೇವರಿಗೆ ‘ವೀಸಾ ಬಾಲಾಜಿ ದೇವಸ್ಥಾನ’ ಎಂದು ಕರೆಯುತ್ತಾರೆ.
ವೀಸಾ ಬಾಲಾಜಿ ಹೆಸರು ಬಂದ ಹಿನ್ನೆಲೆ :
ನಮ್ಮ ದೇಶದಲ್ಲಿ ಉದ್ಯೋಗಾವಕಾಶಕ್ಕೆ, ವಿದ್ಯಾಭ್ಯಾಸಕ್ಕೆ ಎಲ್ಲಾ ಅವಕಾಶಗಳು ಇದ್ದರೂ ಇಲ್ಲಿನ ಕೆಲ ಜನರಿಗೆ ವಿದೇಶಕ್ಕೆ ತೆರಳಿ ಅಲ್ಲಿ ಉದ್ಯೋಗ ಮಾಡಬೇಕು ಹೆಚ್ಚಿನ ಸಂಪಾದನೆ ಮಾಡಬೇಕು ಎಂಬುದು ಆಸೆ. ಅದರಂತೆ ಕೆಲವರು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದರೆ ಒಳ್ಳೆಯ ಕೆಲಸ, ಹೆಚ್ಚಿನ ಸಂಬಳ ದೊರೆಯುತ್ತದೆ ಎಂದು ವಿದೇಶಕ್ಕೆ ತೆರಳಲು ತುದಿಗಾಲಿನಲ್ಲಿ ನಿಲ್ಲುತ್ತಾರೆ. ಹಾಗೆಯೆ ಹೈದರಾಬಾದಿನ ಹೆಚ್ಚಿನ ಯುವಕ/ ಯುವತಿಯರು ತಮ್ಮ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಲು ನಿರ್ಧರಿಸಿದ್ದಾರೆ ಅಲ್ಲದೆ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡರು ವೀಸಾ ಮಾತ್ರ ಬಂದಿರಲಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ತೆಲಂಗಾಣದ ಚಿಲ್ಕೂರಿನಲ್ಲಿರುವ ಬಾಲಾಜಿ ದೇವಸ್ಥಾನಕ್ಕೆ ತೆರಳಿ ತಮ್ಮ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಲು ವೀಸಾ ಸಮಸ್ಯೆಯಾಗಿದೆ ಆದಷ್ಟು ಬೇಗ ಸಮಸ್ಯೆ ನಿವಾರಿಸುವಂತೆ ಬೇಡಿಕೊಂಡಿದ್ದರು. ಅದರಂತೆ ದೇವರಲ್ಲಿ ಬೇಡಿದ ಕೆಲ ದಿನಗಳಲ್ಲೇ ಕೆಲವು ಮಂದಿಗೆ ವೀಸಾ ಬಂದಿದೆ ಅಂದಿನಿಂದ ಹೈದರಾಬಾದ್ ಸುತ್ತಮುತ್ತ ಯಾರೇ ವಿದೇಶಕ್ಕೆ ತೆರಳುವುದಾದರೂ ವೀಸಾ ಪ್ರಕ್ರಿಯೆಗಾಗಿ ಈ ದೇವರಲ್ಲಿ ಪ್ರಾರ್ಥನೆ ಸಲ್ಲುಸುತ್ತಿದ್ದರು. ಕ್ರಮೇಣ ಈ ದೇವಸ್ಥಾನಕ್ಕೆ ವೀಸಾ ಸಂಬಂಧಿತ ಜನರೇ ಹೆಚ್ಚೆಚ್ಚು ಬರಲು ಆರಂಭವಾಯಿತು ಅಂದಿನಿಂದ ಈ ಬಾಲಾಜಿ ದೇವಸ್ಥಾನವನ್ನು ‘ವೀಸಾ ಬಾಲಾಜಿ ದೇವಸ್ಥಾನ’ ಎಂದು ಕರೆಯಲು ಆರಂಭವಾಯಿತು.
ಇದೀಗ ಈ ದೇವಸ್ಥಾನಕ್ಕೆ ದೇಶದ ನಾನಾ ಮೂಲೆಗಳಿಂದ ಭಕ್ತರು ಬರುತ್ತಾರೆ ಅದರಲ್ಲಿ ಹೆಚ್ಚಿನವರು ವಿದೇಶಕ್ಕೆ ತೆರಳುವವರೇ ಆಗಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ಹೇಳುತ್ತಾರೆ.
ದೇವಸ್ಥಾನದ ವಿಶೇಷತೆ:
ಅಂದಹಾಗೆ ಈ ವೀಸಾ ಬಾಲಾಜಿ ದೇವಸ್ಥಾನದಲ್ಲಿ ಹುಂಡಿಗಳಿಲ್ಲ ದೇವಸ್ಥಾನಕ್ಕೆ ಬರುವ ಭಕ್ತರು ಇಲ್ಲಿ ದೇವರಿಗೆ ಕಾಣಿಕೆ ಹಾಕುವಂತಿಲ್ಲ ಬದಲಾಗಿ ಭಕ್ತರು ತಾವು ಬೇಡಿದ ಬೇಡಿಕೆ ಈಡೇರಿದಲ್ಲಿ ದೇವರಿಗೆ 108 ಪ್ರದಕ್ಷಿಣೆ ಹಾಕಿ ನಮಸ್ಕರಿಸಿದರೆ ಅದೇ ಕಾಣಿಕೆ. ಹಾಗಾಗಿ ಇಲ್ಲಿನ ದೇವರ ಮೇಲೆ ಇಲ್ಲಿಗೆ ಬರುವ ಭಕ್ತರಿಗೂ ಅಪಾರ ನಂಬಿಕೆ, ಇಲ್ಲಿನ ದೇವರು ಭಕ್ತರಿಂದ ಯಾವುದೇ ರೀತಿಯಲ್ಲಿ ಹಣವನ್ನು ಪಡೆಯುವುದಿಲ್ಲ ಹಾಗಾಗಿ ಈ ದೇವಸ್ಥಾನದಲ್ಲಿ ಕಾಣಿಕೆ ಹಾಕಲು ಹುಂಡಿಯೇ ಇಲ್ಲ.
ದೇವರಲ್ಲಿ ಪ್ರಾರ್ಥನೆ ಮಾಡಲು ಬರುವವರು ದೇವರಿಗೆ ಮೂರು ಸುತ್ತು ಪ್ರದಕ್ಷಿಣೆ ಬಂದು ತಮ್ಮ ಬೇಡಿಕೆಗಳನ್ನು ಬೇಡಿಕೊಳ್ಳುತ್ತಾರೆ ಅದರಂತೆ ತಮ್ಮ ಬೇಡಿಕೆ ಈಡೇರಿದ ಬಳಿಕ ದೇವಸ್ಥಾನಕ್ಕೆ ಬಂದು ದೇವರಿಗೆ 108 ಸುತ್ತು ಪ್ರದಕ್ಷಿಣೆ ಹಾಕಿ ದೇವರಿಗೆ ನಮಸ್ಕರಿಸಿದರೆ ಅದೇ ಕಾಣಿಕೆ, ಅದೇ ಹರಕೆ ಸಂದಾಯ ಮಾಡಿದಂತೆ.
ವಿಶೇಷ ದರ್ಶನಕ್ಕೆ ಅನುಮತಿ ಇಲ್ಲ
ಈ ದೇವಸ್ಥಾನದ ಇನ್ನೊಂದು ವಿಶೇಷತೆ ಏನೆಂದರೆ ಎಷ್ಟೇ ಶ್ರೀಮಂತ ವ್ಯಕ್ತಿಯಾದರೂ ಸರತಿ ಸಾಲಿನಲ್ಲೇ ನಿಲ್ಲಬೇಕು ಆಗ ಮಾತ್ರ ಈ ದೇವರ ದರುಶನಕ್ಕೆ ಅವಕಾಶ, ಎಷ್ಟೇ ಶ್ರೀಮಂತ ವ್ಯಕ್ತಿಯಾಗಿರಲಿ ಅವರು ಸಾಮಾನ್ಯರು ನಿಂತ ಸಾಲಿನಲ್ಲೇ ನಿಲ್ಲಬೇಕು ಹಾಗಾಗಿ ಇಲ್ಲಿಗೆ ಬರುವ ಎಲ್ಲರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.
*ಸುಧೀರ್ ಎ. ಪರ್ಕಳ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಚ್ಚರ…ಬಿಸಿಲ ಬೇಗೆಗೆ ನಿರ್ಜಲೀಕರಣ ಸಮಸ್ಯೆ ಹೆಚ್ಚಳ; ಅಗತ್ಯವಾಗಿ ಈ ಆಹಾರ ಸೇವಿಸಿ

Mumbai to London;ಯೋಗೇಶ್ ಎಂಬ ಅಲೆಮಾರಿ! 100 ದಿನಗಳ ಬೈಕ್ ಪ್ರಯಾಣ…24 ದೇಶಗಳಿಗೆ ಭೇಟಿ…

ಈ ನಿಗೂಢ ಗುಹೆಯಲ್ಲಿದೆ ಚಿನ್ನದ ಖಜಾನೆ: ಇದರ ರಹಸ್ಯ ಭೇದಿಸಲು ಯಾರಿಗೂ ಸಾಧ್ಯವಾಗಿಲ್ಲವಂತೆ

ಮುಖದ ಅಂದ ಕೆಡಿಸುವ “ಡಾರ್ಕ್ ಸರ್ಕಲ್ಸ್” ನಿವಾರಣೆಗೆ ಈ ಮನೆಮದ್ದು ಬಳಸಿ…

ಮಕ್ಕಳಲ್ಲೂ ಹೃದಯ ಸಂಬಂಧಿ ಕಾಯಿಲೆ; ತಾಯಂದಿರು ಎಚ್ಚರ ವಹಿಸಲೇ ಬೇಕು
MUST WATCH
ಹೊಸ ಸೇರ್ಪಡೆ

ಐಟಂ ಡ್ಯಾನ್ಸ್ ಮಾಡ್ಬೇಡ… ʼಊ ಅಂಟವಾʼ ಹಾಡಿಗೆ ಸಮಂತಾ ಆಪ್ತರಿಂದಲೇ ವ್ಯಕ್ತವಾಗಿತ್ತು ವಿರೋಧ

ತೆರೆಗೆ ಬಂತು ಡಾಲಿ ಧನಂಜಯ ಅಭಿನಯದ ‘ಗುರುದೇವ್ ಹೊಯ್ಸಳ’

ಜನಪ್ರತಿನಿಧಿಗಳಿಗೂ ಜನಸಾಮಾನ್ಯರಿಗೂ ಒಂದೇ ನಿಯಮ; ಸುಪ್ರೀಂ ಕೋರ್ಟ್

“ಜೈ ಶ್ರೀರಾಮ್” ಎಂದು ಹೇಳಿ ರಾಮನವಮಿ ದಿನ ʼಆದಿಪುರುಷ್ʼ ಹೊಸ ಪೋಸ್ಟರ್ ಹಂಚಿಕೊಂಡ ಪ್ರಭಾಸ್

“ಆಡಿದ್ದು ಸಾಕು ಓದು” ಎಂದ ಅಪ್ಪನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ 9 ವರ್ಷದ ಮಗಳು