Udayavni Special

1910ರಲ್ಲಿ “ಗೋಧಿ ಹಿಟ್ಟು” ಗಾಳಿಗೆಸೆದು ಕಾಲರಾ ಹೋಗಲಾಡಿಸಿದ್ದ ಶಿರಡಿ ಸಾಯಿಬಾಬಾ!

ಜಾತಿಮತ ಭೇದವಿಲ್ಲದೆ ಭಕ್ತಾದಿಗಳದರ ತುಣುಕು ಸೇವಿಸಿ ಕೃತಾರ್ಥರಾಗುತ್ತಿದ್ದರು

Team Udayavani, Jan 5, 2021, 5:45 PM IST

1910ರಲ್ಲಿ “ಗೋಧಿ ಹಿಟ್ಟು” ಗಾಳಿಗೆಸೆದು ಕಾಲರಾ ಹೋಗಲಾಡಿಸಿದ್ದ ಶಿರಡಿ ಸಾಯಿಬಾಬಾ

ಶಿರಡಿ ಸಾಯಿಬಾಬಾರವರ ಭಾವಚಿತ್ರಗಳನ್ನು ನಾವು ಮನೆಗಳಲ್ಲಿ , ಅಂಗಡಿ/ಹೊಟೇಲುಗಳಲ್ಲಿ , ಮಂದಿರಗಳಲ್ಲಿ, ವಾಹನಗಳಲ್ಲಿ… ಹೀಗೆ ಬಹುತೇಕ ಕಡೆಗಳಲ್ಲಿ ಕಾಣಬಹುದಾಗಿದೆ. ಶಿರಡಿ ಸಾಯಿಬಾಬಾರವರು ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಶಿರಡಿಯಲ್ಲಿ ನೆಲೆಸಿದ್ದ ಓರ್ವ ಮಹಾಸಂತನೆಂದು ಸುಪ್ರಸಿದ್ಧರು. ನಮ್ಮ ರಾಷ್ಟ್ರದಲ್ಲಿ ಜೀವಿಸಿ ಆಗಿಹೋದ ಅಗಣಿತ ಸಾಧು-ಸತ್ಪುರುಷರಲ್ಲಿ ಇವರು ಅಗ್ರಗಣ್ಯರು. ಇವರ ಜೀವನ ಚರಿತ್ರೆಯ ಕೆಲವು ಪ್ರಮುಖ ಹಂತಗಳು ಹೀಗೆ ಸಾಗುತ್ತವೆ.

ಮಹಾರಾಷ್ಟ್ರದ ಔರಂಗಾಬಾದ್‌ ಜಿಲ್ಲೆಯ ಧೂಪ್‌ಖೇಡೆ ಎಂಬೊಂದು ಗ್ರಾಮದಲ್ಲಿ ಛಾಂಗ್‌ಬಾಯ್‌ ಎಂಬ ಪಟೇಲ ಅದೊಮ್ಮೆ ತನ್ನ ಕುದುರೆಯನ್ನು ಕಳೆದುಕೊಂಡ. ಎಲ್ಲಿ ಹುಡುಕಿದರೂ ಸಿಗಲಿಲ್ಲ. ಸುಮಾರು ಒಂದು ವಾರದ ನಂತರ, ರಸ್ತೆ ಬದಿಯಲ್ಲಿ ಹದಿನಾರರ ವಯಸ್ಸಿನ ಗಂಭೀರ ಮುಖಮುದ್ರೆಯ ಹೊಳೆವ ಕಣ್ಣುಗಳ ಫ‌ಕೀರ ವೇಷಧಾರಿ ಯುವ ಆಗಂತುಕನೊಬ್ಬ ಛಾಂದ್‌ಬಾಯಿಯನ್ನು ಕರೆದು ವಿಚಾರಿಸಿ, “ಪಟೇಲ, ನಿನ್ನ ಕುದುರೆ ಆ ಬೇಲಿಯಿಂದಾಚೆ ಹುಲ್ಲು ಮೇಯುತ್ತ ಇದೆ ನೋಡು” ಎಂದು ಒತ್ತಾಗಿ ಬೆಳೆದ ದಟ್ಟ ಬೇಲಿಯೊಂದನ್ನು ತೋರಿಸಿದ. ಛಾಂಗ್‌ಬಾಯ್‌ ಅಲ್ಲಿ ಹೋಗಿ ನೋಡಿದಾಗ ತನ್ನ ಕುದುರೆ ಸದ್ದಿಲ್ಲದೆ ಮೇಯುತ್ತಿರುವುದನ್ನು ಕಂಡು ಭಯಾಶ್ಚರ್ಯಚಕಿತನಾದನು. ತನ್ನ ಪರಿಚಯವಿಲ್ಲದಿದ್ದರೂ “ಪಟೇಲ’ನೆಂದು ಗುರುತಿಸಿ ಕುದುರೆಯನ್ನು ಪತ್ತೆ ಹಚ್ಚಿದ ಈ ಹುಡುಗನಲ್ಲಿ ಅದ್ಭುತ ದೈವಾಂಶವಿದೆಯೆಂದು ಪ್ರಪ್ರಥಮವಾಗಿ ಖಚಿತಪಡಿಸಿಕೊಂಡವನಾತ ಛಾಂಗ್‌ಬಾಯ್‌ ತನ್ನ ಸ್ನೇಹಿತರಿಗೂ ನೆರೆಹೊರೆಯವರಿಗೂ ಈ ವಿಷಯ ತಿಳಿಸಿದ. ಸದ್ರಿ ಯುವಕನ ಕೀರ್ತಿ ನಾಡಿನೆಲ್ಲೆಡೆ ಹಬ್ಬಲು ಈ ಘಟನೆ ನಾಂದಿಯಾಯಿತು.

ಕೆಲವು ತಿಂಗಳ ಬಳಿಕ ಮದುವೆಯ ತಂಡವೊಂದು ಧೂಪ್‌ ಖೇಡ ಗ್ರಾಮದಿಂದ ಶಿರಡಿಗೆ ಹೊರಟಾಗ ಈ ಫ‌ಕೀರ ಹುಡುಗನೂ ಜೊತೆಯಲ್ಲಿ ಹೊರಟ. ಶಿರಡಿ ಗ್ರಾಮದ ಹೊರವಲಯವನ್ನು ಪ್ರವೇಶಿಸುತ್ತಲೇ ಅಲ್ಲಿದ್ದ ಖಂಡೋಬ ದೇವಾಲಯವನ್ನು ಕಂಡು ದೇವರಿಗೆ ನಮಸ್ಕರಿಸುವ ಸಲುವಾಗಿ ತಂಡ ಅಲ್ಲಿ ಕೊಂಚ ಕಾಲ ತಂಗಿತು. ಆಗ ಖಂಡೋಬ ಮಂದಿರದ ಪೂಜಾರಿ ಮಾಲ್ಸಾಪತಿಯೆಂಬವರು ಈ ತೇಜೋಮಯ ತರುಣನನ್ನು ಗಮನಿಸಿ ಸಹಜ ಪ್ರಶಂಸೆಯೊಂದಿಗೆ, “ಆವೋ… ಸಾಯಿ ಬಾಬಾ” (ಸುಸ್ವಾಗತ, ಓ ಸಾಯಿಬಾಬಾ) ಎಂದುದ್ಗರಿಸಿದರು. 1854ನೇ ಇಸವಿಯ ಆ ದಿನದಿಂದ ಈ ಹೆಸರು ಆತನ ಜೀವಮಾನ ಪೂರ್ತಿ ಮಾತ್ರವಲ್ಲದೆ ಆತನ ಕಾಲಾನಂತರವೂ ಶಾಶ್ವತವಾಗಿ ಉಳಿಯಿತು. ಅಂದಿನಿಂದ ಶಿರ್ಡಿಯಲ್ಲೇ ನೆಲೆಸಿದ ಆತನ ನಿಜನಾಮಧೇಯವಾಗಲೀ, ಜನ್ಮಸ್ಥಳವಾಗಲೀ ಯಾರಿಗೂ ತಿಳಿಯಲೇ ಇಲ್ಲ !

ಶಿರಡಿಯ ಜನರು ಈ ಫ‌ಕೀರನ ಸಂಪೂರ್ಣ ಸಾಧುತ್ವವನ್ನು ಶೀಘ್ರದಲ್ಲಿಯೇ ಪತ್ತೆ ಹಚ್ಚಿ ಅನೇಕರು ಆತನ ಭಕ್ತರಾದರು. ಈ ಯುವ ಬಾಬಾ ಬೃಹತ್ತಾಗಿ ಬೆಳೆದು ಬಳಿಕ ಶಿರಡಿ ಸಾಯಿಬಾಬಾ ಎಂಬುದಾಗಿ ಪ್ರಖ್ಯಾತಿ ಪಡೆದರು.

ಪವಾಡಗಳ ಮೂಲಕ ನಿಜದರ್ಶನ
ಮಾಲ್ಸಾಪತಿ ಮತ್ತು ಕಾಶೀರಾಮ್‌ ಎಂಬುವರು ಬಾಬಾರವರ ಮೊತ್ತಮೊದಲನೆಯ ಭಕ್ತರಾಗಿದ್ದು ಅವರು ಶಿಥಿಲವಾದ ಮಸೀದಿಯೊಂದನ್ನು ಬಾಬಾರವರ ವಾಸಕ್ಕಾಗಿ ಗೊತ್ತು ಮಾಡಿದ್ದರು. ಅದನ್ನು “ದ್ವಾರಕಾಮಯಿ’ ಎಂದು ಕರೆದರು. ಶ್ರೀ ಸಾಯಿಬಾಬಾರವರು ಜೀವನ ಪರ್ಯಂತ (ಸುಮಾರು 60 ವರ್ಷ) ಈ ದ್ವಾರಕಾಮಯಿಯಲ್ಲೇ ವಾಸವಾಗಿದ್ದರು. ಅಗಣಿತ ಭಕ್ತಾದಿಗಳು ಬಾಬಾರವರಿಂದ ಆಶೀರ್ವಾದವನ್ನು ಈ ಪವಿತ್ರ ಸ್ಥಳದಿಂದಲೇ ಪಡೆದರು. ಬಾಬಾರವರು ಆಸೀನರಾಗುತ್ತಿದ್ದ “ಶಿಲಾಪೀಠ’ವಿಲ್ಲಿ ಈಗಲೂ ಅಸ್ತಿತ್ವದಲ್ಲಿದೆ. ಅಷ್ಟೇ ಅಲ್ಲದೆ ಬಡವರು ಹಾಗೂ ಭಕ್ತಾದಿಗಳಿಗಾಗಿ ತಯಾರಿಸುತ್ತಿದ್ದ ಅಡುಗೆಗಾಗಿ ಅವರು ಬಳಸುತ್ತಿದ್ದ “ಧುನಿ’ಯೆಂಬ ಪವಿತ್ರಾಗ್ನಿ ಸದಾ ಉರಿಯುತ್ತಿರುತ್ತದೆಯಿಲ್ಲಿ !

ಭಕ್ತಾದಿಗಳ ಸಂಕಷ್ಟಗಳನ್ನು ದೂರಮಾಡಲು “ಉಧಿ’ ನಾಮಾಂಕಿತ ಪವಿತ್ರ ಭಸ್ಮವನ್ನೂ ಇಲ್ಲಿಂದಲೇ ವಿತರಿಸುತ್ತಿದ್ದರು. ಆಹಾರ ಧಾನ್ಯಗಳನ್ನು ಅರೆಯಲು ಉಪಯೋಗಿಸುತ್ತಿದ್ದ ಅರೆಯುವ ಕಲ್ಲನ್ನೂ ಇಂದೂ ವೀಕ್ಷಿಸಬಹುದಾಗಿದೆ! ಅಂದು ಶಿರಡಿಯ ಮಾಧವ ರಾವ್‌ ದೇಶಪಾಂಡೆಯೆಂಬವರು ಬಾಬಾರವರಿಂದ ಅತೀವ ಆಕರ್ಷಿತರಾಗಿ ಅವರ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಬಾಬಾರವರು ಈ ಭಕೊ¤àತ್ತಮರನ್ನು “ಶ್ಯಾಮ’ ಎಂದು ಪ್ರೀತಿಯಿಂದ
ಸಂಬೋಧಿಸುತ್ತಿದ್ದರು. ದ್ವಾಪರಾಯುಗದ ಕೃಷ್ಣ-ಅರ್ಜುನರಂತಿತ್ತು ಕಲಿಯುಗದ ಈ ಬಾಬಾ ಮತ್ತು ಶ್ಯಾಮರವರ ಪರಸ್ಪರ ಅವಿನಾಭಾವ ಸಂಬಂಧ!

ಉನ್ನತ ಸರಕಾರಿ ಅಧಿಕಾರಿಯಾಗಿದ್ದ ನಾನಾ ಸಾಹೇಬ್‌ ಚಂದೋರ್ಕರ್‌ ಎಂಬವರು ಬಾಬಾರವರ ಅಚಲ ಭಕ್ತರಾಗಿ ತಮ್ಮ ಉದ್ಯೋಗಕ್ಕೆ ರಾಜೀನಾಮೆಯಿತ್ತು, ತದನಂತರ ಶ್ರೇಷ್ಠ ಕೀರ್ತನಕಾರರಾಗಿ ಕೀರ್ತಿ ಪತಾಕೆ ಹಾರಿಸಿದರು. ಸಾಠೆಯೆಂಬೋರ್ವರು ಶಿರ್ಡಿಯಲ್ಲಿ ವಸತಿಗೃಹವನ್ನು ನಿರ್ಮಿಸಿದ ಪ್ರಪ್ರಥಮರು. ಆನಂತರ ನಾಗಪುರದ ಗೋಪಾಲ್‌ರಾವ್‌ ಬೂಟಿ ಎಂಬವರು ಪ್ರಸಕ್ತ ಸಮಾಧಿ ಮಂದಿರವಿರುವ ಭವ್ಯ ಶಿಲಾ ಕಟ್ಟಡವನ್ನು ಕಟ್ಟಿಸಿದರು.

ರಾಧಾಕೃಷ್ಣ ಮಾಯಿ ಎನ್ನುವ ಮಹಿಳೆಯೋರ್ವರು ತನ್ನ ಪತಿಯ ನಿಧನಾನಂತರ ಕೇವಲ ಹತ್ತು ವರ್ಷಗಳ ಅಲ್ಪ ಜೀವಿತಾವಧಿಯಲ್ಲಿ ಶಿರ್ಡಿಯ ಸ್ವರೂಪವನ್ನೆಲ್ಲ ಸಂಪೂರ್ಣ ಬದಲಾಯಿಸಿದರು. ತಮ್ಮ ಅವಿಶ್ರಾಂತ ದುಡಿಮೆ ಹಾಗೂ ಕಲ್ಪನಾ ಸಾಮರ್ಥ್ಯಗಳಿಂದ ಶಿರ್ಡಿಯನ್ನು ಸಂಸ್ಥಾನದ ಅಂತಸ್ತಿಗೇರಿಸಿ ದೈನಂದಿನ ವಿಧಿ-ನಿಯಮಗಳನ್ನು ಗೊತ್ತುಪಡಿಸಿದರು. ಬಾಬಾರವರು ತಮ್ಮ ಯೋಗಶಕ್ತಿಯಿಂದ ಜ್ವಲಿಸಿದ ಅಗ್ನಿ “ಧುನಿ’ಯಿಂದ ದೊರೆತ ಪವಿತ್ರ ಭಸ್ಮ “ಉಧಿ’ಯನ್ನು ಅನೇಕ ವ್ಯಾಧಿಗಳಿಗೆ ಔಷಧಿಯಾಗಿ ಕೊಟ್ಟು ಸ್ವಯಂ ತಾವೇ ರೋಗಿಗಳ ಶುಶ್ರೂಷೆಗೈಯುತ್ತಿದ್ದರು.

ಉಧಿಯನ್ನು ಶರೀರಕ್ಕೆ ಹಚ್ಚಿ ಬಾಯಿಯ ಮೂಲಕ ಸೇವನೆಗೂ ನೀಡುತ್ತಿದ್ದರು! ತಮ್ಮ ಸ್ವಹಸ್ತದಿಂದಲೇ ಪ್ರತಿದಿನವೂ ಬಾಬಾರವರು “ಪ್ರಸಾದ’ವನ್ನು ದೊಡ್ಡದೊಂದು ಹಂಡೆಯಲ್ಲಿ ತಯಾರಿಸುತ್ತಿದ್ದರು. ಜಾತಿಮತ ಭೇದವಿಲ್ಲದೆ ಭಕ್ತಾದಿಗಳದರ ತುಣುಕು ಸೇವಿಸಿ ಕೃತಾರ್ಥರಾಗುತ್ತಿದ್ದರು. ದ್ವಾರಕಾಮಯಿಯಲ್ಲೇ ವಾಸಿಸುತ್ತಿದ್ದ ಬಾಬಾರವರು ಸನಿಹದ “ಲೆಂಡಿಬಾಗ್‌’ ಎಂಬ ಕುರುಚಲು ಗಿಡಗಳ ಅರಣ್ಯ ಪ್ರದೇಶದಲ್ಲಿ ದೀರ್ಘ‌ಕಾಲ ಯೋಗ ಸಾಧನೆಗಳನ್ನು ಮಾಡುತ್ತಿದ್ದರು. ಭಕ್ತರು ನೀಡಿದ ದಕ್ಷಿಣೆಯ ಹಣವನ್ನು ಬಡವರಿಗೂ, ಸಂಕಷ್ಟ ಪೀಡಿತರಿಗೂ ಹಂಚುತ್ತಿದ್ದರು.

ಭವಿಷ್ಯದ ಆಗುಹೋಗುಗಳೂ ಅವರ ದಿವ್ಯಶಕ್ತಿಗೆ ನಿಲುಕುತ್ತಿದ್ದು ತಕ್ಕಂತೆ ಜನಸಾಮಾನ್ಯರಿಗೆ ಸೂಚಕ ರೂಪದಲ್ಲಿ ಎಚ್ಚರಿಕೆ ಮೂಡಿಸುತ್ತಿದ್ದರು. ಅವರಿಗೆ ಕುರಾನ್‌ ಹಾಗೂ ವೇದ, ಉಪನಿಷತ್ತು, ಭಗವದ್ಗೀತೆಗಳ ಪರಿಜ್ಞಾನವೂ ಇತ್ತು. ಅವರಿಗೆ ತಮ್ಮ ದೇಹ ಅಥವಾ ವಸ್ತ್ರಾದಿಗಳಲ್ಲಿ ಅಭಿಮಾನವಿರಲಿಲ್ಲ. ಭಕ್ತಾದಿಗಳ ಭಿಕ್ಷೆಯಿಂದಲೇ ಆಹಾರ ತಯಾರಿಸುತ್ತಿದ್ದರು. ದ್ವಾರಕಾಮಯಿಯಲ್ಲಿ ನೇತುಹಾಕಿದ್ದ ಐದಡಿ ಉದ್ದದ 9 ಅಂಗುಲ ಅಗಲದ ಮರದ ಹಲಗೆಯ ಮೇಲೆ ಅವರು ಮಲಗುತ್ತಿದ್ದರು. ಅದರ ತೆಳುದಾರಗಳು ಅವರ ಹಾಗೂ ಹಲಗೆಯ ಒಟ್ಟು ಭಾರ ಹೊರಲು ಶಕ್ತವಾಗಿರುವುದೇ ಒಂದು ಪವಾಡ!

ಬಾಬಾರವರು ತಮ್ಮನ್ನು ತಾವು “ದೇವರ ಸೇವಕ’ ಎಂದುಕೊಂಡು ಎಣ್ಣೆಯ ಅಭಾವವಿದ್ದಾಗ ಕೇವಲ ನೀರಿನಿಂದ ದೀಪ ಹಚ್ಚಿರುವುದು, ಕಾಲರಾ ಸಾಂಕ್ರಾಮಿಕ ರೋಗವನ್ನು ಗೋಧಿಹಿಟ್ಟು ಗಾಳಿಗೆಸೆದು ಹೋಗಲಾಡಿಸಿದ್ದು, ಬಿರುಗಾಳಿ ಸಹಿತ ಭಾರೀ ಮಳೆಯನ್ನು ಕಪ್ಪು ದೊಣ್ಣೆಯೊಂದರಿಂದ ದ್ವಾರಕಾಮಯಿಯ ಕಂಬಗಳನ್ನು ಹೊಡೆಯುತ್ತ ತಡೆದದ್ದು , ಧುನಿಯ ಭಯಂಕರ ಅಗ್ನಿ ಜ್ವಾಲೆಯನ್ನು ತನ್ನಪ್ಪಣೆಯ ಮೂಲಕವೇ ಶಾಂತವಾಗಿರಿಸಿದ್ದು , ಭಕ್ತರ ವ್ಯಾಧಿಗಳನ್ನು
ಸ್ವಯಂ ಆವಾಹನೆ ತೆಗೆದುಕೊಂಡು ತೀವ್ರ ಯಾತನೆ ಅನುಭವಿಸಿ ನಿವಾರಿಸಿದ್ದು ಇತ್ಯಾದಿ ಅಗಣಿತ ಅದ್ಭುತ ಪವಾಡ-ಕಾರ್ಯಗಳನ್ನು ಜನಹಿತಕ್ಕಾಗಿ ತಮ್ಮ ಅಲೌಕಿಕ ದೈವೀಶಕ್ತಿಯ ಮುಖೇನ ಎಸಗಿ ಮಹಾನ್‌ ಶಕ್ತಿಯೆನಿಸಿಕೊಂಡರು. ಆದರೂ ಅವರು ತಮ್ಮನ್ನೆಂದೂ ಗುರುವೆಂದು ಕರೆದುಕೊಳ್ಳಲಿಲ್ಲ ಮತ್ತು ಶಿಷ್ಯಂದಿರನ್ನೂ ಹೊಂದಿರಲಿಲ್ಲ ಅವರೋರ್ವ ವರ್ತಮಾನ, ಭೂತ ಮತ್ತು ಭವಿಷ್ಯ ಕಾಲವನ್ನು ಅರಿತಿದ್ದ ತ್ರಿಕಾಲ ಜ್ಞಾನಿಯಾಗಿದ್ದರೆನ್ನುವುದಕ್ಕೂ ಹಲವಾರು ದೃಷ್ಟಾಂತಗಳಿವೆ.

ದೇವರೊಬ್ಬನೇ ಹಾಗೂ ಆತ ನಾಮರೂಪ ರಹಿತ ಎನ್ನುವುದನ್ನೂ ಬಾಬಾರವರು ಕೆಲವೊಮ್ಮೆ ತಾವು ಸ್ವಯಂ ರಾಮ ಅಥವಾ ಕೃಷ್ಣನಾಗಿ ಭಕ್ತರಿಗೆ ಗೋಚರಿಸುವ ಮೂಲಕ, ಇನ್ನು ಕೆಲವೊಮ್ಮೆ ವಿಠಲ ಅಥವಾ ಅಕ್ಕಲಕೋಟೆಯ ಸ್ವಾಮಿಯಾಗಿ ಹಾಗೂ ಹಲವು ಬಾರಿ ಮೌಲ್ವಿಯಾಗಿ ಅಥವಾ ಗುರುವಾಗಿ ಕಾಣಿಸಿಕೊಂಡು ನಿರೂಪಿಸಿದ್ದರು! ಅಂತಿಮವಾಗಿ 1918ರ ದಸರಾ ದಿನದಂದು, “”ನಾನು ಈ ಭೌತಿಕ ದೇಹವನ್ನು ತ್ಯಜಿಸುತ್ತಿದ್ದೇನೆ, ಆದರೂ ಭಕ್ತರಿಗಾಗಿ ಓಡೋಡಿ ಬರುತ್ತೇನೆ, ಇದನ್ನು ನೀವು ಭವಿಷ್ಯದಲ್ಲಿ ಅನುಭವದಿಂದ ತಿಳಿಯುವಿರಿ” ಎನ್ನುತ್ತಾ ಗಹನವಾದ ಆಶ್ವಾಸನೆಯನ್ನು ನೀಡುತ್ತಲೇ ಸಮಾಧಿಯಾದರು.

ಗೋದಾವರಿಯ ತೀರದಲ್ಲಿ…
ಭಾರತದಲ್ಲೇ ಒಂದು ಸುಪ್ರಸಿದ್ಧ ಯಾತ್ರಾಸ್ಥಳವಾಗಿ ಇಂದು ಅಗಾಧ ಅಭಿವೃದ್ಧಿ ಹೊಂದಿ ಬೆಳವಣಿಗೆ ಕಂಡಿರುವ ಶಿರ್ಡಿ ಊರಿಗೆ ಗೋದಾವರಿ ನದಿ ನೀರೇ ಆಸರೆ. ಏಕೆಂದರೆ ಇಲ್ಲಿ ಮಳೆ ಸುರಿಯುವುದು ತುಂಬಾ ಅಪರೂಪ! ನಾಸಿಕ್‌ ಮತ್ತು ನಂದೂರ್‌ ಮುಡ್ನೇಶ್ವರ್‌ಗಳಲ್ಲಿನ ಅಣೆಕಟ್ಟುಗಳಿಂದ ಕಾಲುವೆ ಮುಖಾಂತರ ನದಿನೀರನ್ನಿಲ್ಲಿಗೆ ಹರಿಸಿ, ಕೃತಕ ಸರೋವರಗಳಲ್ಲಿ ಶೇಖರಿಸಿ ಕುಡಿವ ಮತ್ತು ವ್ಯವಸಾಯದ ನೀರಾವರಿ ವ್ಯವಸ್ಥೆ ಮಾಡಲಾಗಿದೆ. ಶಿರ್ಡಿಯಲ್ಲಿ ಶ್ರೀ ಸಾಯಿಬಾಬಾ ಮಂದಿರ ಮಾತ್ರವಲ್ಲದೆ ಜನಸಾಮಾನ್ಯರಿಗೆ ಹೆಚ್ಚು ಪ್ರಚಲಿತವಿಲ್ಲದ ಇನ್ನೂ ಕೆಲವು ಪ್ರೇಕ್ಷಣೀಯ ತಾಣಗಳಿವೆ! ಅವುಗಳಲ್ಲಿ ಪ್ರಮುಖವಾದ ಪಂಚಮುಖೀ ಗಣಪತಿ, ಶ್ರೀ ಹನುಮಾನ್‌ ಮತ್ತು ಅನ್ನಪೂರ್ಣ ಮಂದಿರ, “ಸಾಕುರಿ’ಯೆಂಬಲ್ಲಿಯ ಉಪಾಸನಿ ಮಹಾರಾಜ್‌ ಮಂದಿರ, ಹಳೆ ಶಿರಡಿ ಮತ್ತು ಖಂಡೋಬ ಎಂಬ ಸ್ಥಳವಿದೆ. ಈ ಎಲ್ಲಾ ತಾಣಗಳಿಗೆ ಸಾಗುವ, ಹಳ್ಳಿಗಳಿಂದಾವೃತವಾದ ದಾರಿಯುದ್ದಕ್ಕೂ ದಾಳಿಂಬೆ, ಜೋಳ, ಸೋಯಾಬಿನ್‌, ಕಬ್ಬು , ದ್ರಾಕ್ಷಿ , ಪೇರಳೆ… ಇತ್ಯಾದಿ ಫ‌ಸಲುಗಳಿಂದ ಕಂಗೊಳಿಸುವ ಹಸಿರು ಹೊಲ-ಗದ್ದೆ ಪೈರುಗಳೂ, ದಾಳಿಂಬೆಯ ಕೆಂಪು ಹಣ್ಣು ಗೊಂಚಲುಗಳೂ ಕಂಗಳಿಗೆ ತಂಪನ್ನೀಯುತ್ತವೆ. ಮನಸ್ಸಿಗೆ ಮುದ ನೀಡಿ ಆಹ್ಲಾದನೀಯವೆನಿಸುತ್ತವೆ. ಶಿರಡಿಯ ಹಿರಿಮೆಗೆ ಪರಿಧಿಯಿಲ್ಲ !

ರಮಣ ಶೆಟ್ಟಿ ರೆಂಜಾಳ್‌

ಟಾಪ್ ನ್ಯೂಸ್

ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು

ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು

ಸಿದ್ದು-ಡಿಕೆಶಿ ಜೋಡೆತ್ತಲ್ಲ, ಕಾಡೆತ್ತು: ನಳಿನ್ ಕುಮಾರ್ ಕಟೀಲ್

ಸಿದ್ದು-ಡಿಕೆಶಿ ಜೋಡೆತ್ತಲ್ಲ, ಕಾಡೆತ್ತು: ನಳಿನ್ ಕುಮಾರ್ ಕಟೀಲ್

100 ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :  ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ

100ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ

ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ ದೇಶಭ್ರಷ್ಟ ನೀರವ್‌ ಮೋದಿಗೆ ಮತ್ತೆ ನಿರಾಶೆ

ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ ದೇಶಭ್ರಷ್ಟ ನೀರವ್‌ ಮೋದಿಗೆ ಮತ್ತೆ ನಿರಾಶೆ

babul supriyo

ಸಂಸದ ಸ್ಥಾನಕ್ಕೆ ಬಾಬುಲ್‌ ಸುಪ್ರಿಯೋ ಅಧಿಕೃತ ರಾಜೀನಾಮೆ

fftytry

ಬಸ್‌ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳ ಪರದಾಟ 

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೃಜನಾತ್ಮಕ, ಆಸಕ್ತಿದಾಯಕ ಬೋಧನ ವಿಧಾನಗಳಿಗೆ ಆದ್ಯತೆ

ಸೃಜನಾತ್ಮಕ, ಆಸಕ್ತಿದಾಯಕ ಬೋಧನ ವಿಧಾನಗಳಿಗೆ ಆದ್ಯತೆ

ಪ್ರವಾಸಿಗರ ಸ್ವರ್ಗ ಎತ್ತಿನಭುಜ

ಪ್ರವಾಸಿಗರ ಸ್ವರ್ಗ ಎತ್ತಿನಭುಜ

ಶಾಲೆಯನ್ನು ಹೊಸತನಕ್ಕೆ ತೆರೆಯೋಣ

ಶಾಲಾ ಶಿಕ್ಷಣ ಹೊಸ ಹಾದಿ: ಶಾಲೆಯನ್ನು ಹೊಸತನಕ್ಕೆ ತೆರೆಯೋಣ

“ಜಾಗೃತ ಭಾರತ, ಸಮೃದ್ಧ ಭಾರತ”

ಜಾಗೃತ ಭಾರತ, ಸಮೃದ್ಧ ಭಾರತ

ಕನ್ನಡದಲ್ಲೂ ಬರೆಯಿರಿ ಐಬಿಪಿಎಸ್‌ ಪರೀಕ್ಷೆ !

ಕನ್ನಡದಲ್ಲೂ ಬರೆಯಿರಿ ಐಬಿಪಿಎಸ್‌ ಪರೀಕ್ಷೆ !

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು

ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು

ಸಿದ್ದು-ಡಿಕೆಶಿ ಜೋಡೆತ್ತಲ್ಲ, ಕಾಡೆತ್ತು: ನಳಿನ್ ಕುಮಾರ್ ಕಟೀಲ್

ಸಿದ್ದು-ಡಿಕೆಶಿ ಜೋಡೆತ್ತಲ್ಲ, ಕಾಡೆತ್ತು: ನಳಿನ್ ಕುಮಾರ್ ಕಟೀಲ್

100 ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :  ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ

100ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ

ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ ದೇಶಭ್ರಷ್ಟ ನೀರವ್‌ ಮೋದಿಗೆ ಮತ್ತೆ ನಿರಾಶೆ

ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ ದೇಶಭ್ರಷ್ಟ ನೀರವ್‌ ಮೋದಿಗೆ ಮತ್ತೆ ನಿರಾಶೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.