Udayavni Special

ಸಿಕ್ಸ್ ಸಿಕ್ಸರ್: ಕೆಣಕಿದ್ದ ಮಾಲ್ಕಂ‌ ಎಸೆತಗಳನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದ್ದ ಸೋಬರ್ಸ್


Team Udayavani, Jan 8, 2021, 5:32 PM IST

ತನ್ನನ್ನು ಕೆಣಕಿದ್ದ ಮಾಲ್ಕಂ ನಾಶ್‌ ಎಸೆತಗಳನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದ್ದ ಸೋಬರ್

ಇಂದಿನ ಟಿ20 ಯುಗದಲ್ಲಿ ಸಿಕ್ಸರ್‌ ಬಾರಿಸುವುದು ದೊಡ್ಡ ಕತೆಯಲ್ಲ. ಓವರಿಗೆ ಆರು ಸಿಕ್ಸರ್‌ ಸಿಡಿದರೂ ಇದೆಲ್ಲ ಮಾಮೂಲು ಎಂದು ಪರಿಗಣಿಸುವವರೇ ಹೆಚ್ಚು. ಆದರೆ ಆಗಿನ್ನೂ ಸೀಮಿತ ಓವರ್‌ಗಳ ಕ್ರಿಕೆಟ್‌ ಆರಂಭವಾಗದಿದ್ದ ಕಾಲದಲ್ಲಿ ಇಂಥದೊಂದು ಪರಾಕ್ರಮ ಮೆರೆದರೆ ಅದಕ್ಕೆ ಸಿಗುತ್ತಿದ್ದ ಮಾನ್ಯತೆ, ಗೌರವ, ಪ್ರಶಂಸೆಗಳನ್ನೆಲ್ಲ ಬಹುಶಃ ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿರಲಿಲ್ಲ. ಇಂಥದೊಂದು ಗೌರವಕ್ಕೆ ಪಾತ್ರರಾದವರೇ ವೆಸ್ಟ್‌ ಇಂಡೀಸಿನ ಆಲ್‌ರೌಂಡರ್‌ ಸರ್‌ ಗ್ಯಾರಿ ಸೋಬರ್ಸ್!

ಕ್ರಿಕೆಟ್‌ ಇತಿಹಾಸದಲ್ಲಿ ಓವರಿನ ಆರೂ ಎಸೆತಗಳನ್ನು ಸಿಕ್ಸರ್‌ಗೆ ಬಡಿದಟ್ಟಿದ ಮೊದಲ ಆಟಗಾರನೇ ಗ್ಯಾರಿ ಸೋಬರ್ಸ್. ಬಳಿಕ ರವಿಶಾಸ್ತ್ರಿ, ಹರ್ಷಲ್ ಗಿಬ್ಸ್, ಯುವರಾಜ್‌ ಸಿಂಗ್‌ ಅವರೆಲ್ಲ ಈ ಸಾಹಸವನ್ನು ಪುನರಾವರ್ತಿಸಿದರು. ಆದರೆ ಸೋಬರ್ಸ್ ಅವರ ಆ ಮೊದಲ ಪರಾಕ್ರಮ ಮಾತ್ರ ಸಾಟಿಯಿಲ್ಲದ್ದು, ಕಲ್ಪನೆಗೂ ಮೀರಿದ್ದು.

1968ರ ಇಂಗ್ಲಿಷ್‌ ಕೌಂಟಿ ಋತುವಿನಲ್ಲಿ ಗ್ಯಾರಿ ಸೋಬರ್ಸ್ “ಸಿಕ್ಸ್‌ ಸಿಕ್ಸರ್’ ಮೂಲಕ ಕ್ರಿಕೆಟ್‌ ಲೋಕದಲ್ಲಿ ನೂತನ ಸಂಚಲನ ಮೂಡಿಸಿ ಸುದ್ದಿಯಾದರು. ನಾಟಿಂಗ್‌ಹ್ಯಾಮ್‌ಶೈರ್‌ ಕೌಂಟಿಯ ಪ್ರಮುಖ ಸದಸ್ಯನಾಗಿದ್ದ ಅವರು ಆಗಸ್ಟ್‌ 30ರಂದು ಗ್ಲಾಮರ್ಗನ್‌ ವಿರುದ್ಧ ಸ್ವಾನ್ಸಿ ಮೈದಾನದಲ್ಲಿ ಈ ಅಸಾಮಾನ್ಯ ಪರಾಕ್ರಮ ಮೆರೆದರು. ಇವರಿಂದ ದಂಡಿಸಲ್ಪಟ್ಟ ಬೌಲರ್‌ ವೇಗಿ ಮಾಲ್ಕಂ ನಾಶ್‌.

ಶುರುವಾಯಿತು ಸಿಕ್ಸರ್‌ ಸುರಿಮಳೆ

ಅದು ಮಾಲ್ಕಂ ನಾಶ್‌ ಅವರ 4ನೇ ಓವರ್‌ ಆಗಿತ್ತು. ನಾಶ್‌ ಅವರ ಹಿಂದಿನ ಓವರ್‌ಗಳಲ್ಲೂ ಸೋಬರ್ಸ್ ಸಿಡಿದು ನಿಂತಿದ್ದರಿಂದ ಈ ಓವರಿನ ಮೊದಲ ಎಸೆತ ಸಿಕ್ಸರ್‌ಗೆ ರವಾನೆಯಾದಾಗ ಯಾರಿಗೂ ಅಚ್ಚರಿ ಆಗಲಿಲ್ಲ. 2ನೇ ಎಸೆತ ಆಫ್‌ ಸ್ಟಂಪಿನಿಂದ ತುಸು ಹೊರಗಿತ್ತು. ಉತ್ತಮ ನೆಗೆತವೂ ಲಭಿಸಿತು. ಸೋಬರ್ಸ್ ಬಡಿದಟ್ಟಿದ ರಭಸಕ್ಕೆ ಇದು ಲಾಂಗ್‌ಆಫ್‌ ಮೂಲಕ ಸಾಗಿ ವೀಕ್ಷಕರ ನಡುವೆ ಹೋಗಿ ಬಿತ್ತು. ಸತತ ಎರಡು ಸಿಕ್ಸರ್‌!

ಹತಾಶರಾಗಿ ಕೆಣಕಿದ ನಾಶ್‌

ಮಾಲ್ಕಂ ನಾಶ್‌ ದಿಕ್ಕೆಟ್ಟರು. ಸೀದಾ ನಾಯಕ ಟೋನಿ ಲೂಯಿಸ್‌ ಬಳಿ ಹೋಗಿ ಏನೋ ಹೇಳಿದರು. ಅವರು ಬೆನ್ನು ತಟ್ಟಿ ಕಳಿಸಿದರು. ಇದರಿಂದ ನಾಶ್‌ಗೆ ಏನನಿಸಿತೋ, ನೇರವಾಗಿ ಸೋಬರ್ ಬಳಿ ಹೋಗಿ, “ಈ ಎಸೆತಕ್ಕೆ ನಿಮ್ಮಿಂದ ಫ್ಲಡ್‌ಲೈಟ್‌ ಪುಡಿ ಮಾಡಲು ಸಾಧ್ಯವಾಗದು’ ಎಂದು ಕೆಣಕಿದರು.

ಸೋಬರ್ಸ್ ಸುಮ್ಮನುಳಿಯಲಿಲ್ಲ. “ಫ್ಲಡ್‌ಲೈಟ್‌ ಪುಡಿಗೈಯಬೇಕೆಂದು ನಾನೂ ಎಣಿಸಿದ್ದೆ. ಆದರೆ ನಿಮ್ಮ ಮಾತು ಕೇಳಿ ಈ ನಿರ್ಧಾರವನ್ನು ಬದಲಿಸಲು ತೀರ್ಮಾನಿಸಿದ್ದೇನೆ’ ಎಂದರು!

ಮೂರನೇ ಎಸೆತ ಧಾವಿಸಿ ಬಂತು. ಸೋಬರ್ಸ್ ಅವರಿಂದಷ್ಟೇ ಸಾಧ್ಯ ಎಂಬಂತಿದ್ದ ಹುಕ್‌ ಶಾಟ್‌ ಅದಾಗಿತ್ತು. ಅವರು ಸಿಕ್ಸರ್‌ಗಳ ಹ್ಯಾಟ್ರಿಕ್‌ ಪೂರ್ತಿಗೊಳಿಸಿದ್ದರು. ನಾಶ್‌ ಅವರ 4ನೇ ಎಸೆತವೂ ಸಿಕ್ಸರ್‌ಗೆ ರವಾನೆಯಾದಾಗ ವೀಕ್ಷಕರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಇದನ್ನೂ ಓದಿ:ಸಿಡ್ನಿ ಟೆಸ್ಟ್:  ಪುರುಷರ ಪಂದ್ಯಕ್ಕೆ ವನಿತಾ ಫೋರ್ತ್‌ ಅಂಪಾಯರ್‌!

ಸಿಕ್ಕಿತೊಂದು ಜೀವದಾನ!

5ನೇ ಎಸೆತದ ವೇಳೆ ಎಡವಟ್ಟೊಂದು ಸಂಭವಿಸಿತು. ಗುಡ್‌ಲೆಂತ್‌ ಆಗಿ ಆಫ್‌ಸ್ಟಂಪ್‌ನಿಂದ ಸ್ವಲ್ಪವೇ ಹೊರಗೆ ಹೋಗುತ್ತಿದ್ದ ಚೆಂಡನ್ನು ಸೋಬರ್ಸ್ ಲಾಂಗ್‌ಆಫ್‌ನತ್ತ ಎತ್ತಿ ಬಾರಿಸಿದರು. ಅದು ಗಾಳಿಯಲ್ಲಿ ಹಾರಾಡುತ್ತ ನೇರವಾಗಿ ಫೀಲ್ಡರ್‌ ರೋಜರ್‌ ಡೇವಿಸ್‌ ಕೈಸೇರಿತು. ಸೋಬರ್ಸ್ ಔಟಾಗಬೇಕಿತ್ತು, ಆದರೆ ಹಾಗಾಗಲಿಲ್ಲ. ಕ್ಯಾಚ್‌ ಪಡೆಯುವಾಗ ನಿಯಂತ್ರಣ ಕಳೆದುಕೊಂಡ ಡೇವಿಸ್‌ ಬೌಂಡರಿ ಗೆರೆ ದಾಟಿ ಬಿಟ್ಟರು. ನಾಶ್‌ ಅವರ ಸಂಭ್ರಮ ಕೆಲವೇ ಕ್ಷಣದಲ್ಲಿ ಸರ್ವನಾಶವಾಗಿತ್ತು. ಅವರು ಸೋಬರ್ಸ್ ಗೆ ಸತತ 5ನೇ ಸಿಕ್ಸರ್‌ ನೀಡಿದ್ದರು!

ಎರಡು ವಿಶ್ವದಾಖಲೆ

ಮಾಲ್ಕಂ ನಾಶ್‌ ತೀವ್ರ ಹತಾಶರಾಗಿದ್ದರು. ಸೋಬರ್ಸ್ ವಿಕೆಟ್‌ ಉರುಳಿಸಲು ಸಾಧ್ಯವಾಗದಿದ್ದರೂ ವಿಶ್ವದಾಖಲೆ ನಿರ್ಮಾಣವಾಗದಂತೆ ತಡೆಯಬೇಕೆಂಬ ತೀರ್ಮಾನಕ್ಕೆ ಬಂದರು. ಹೀಗಾಗಿ ಯಾರ್ಕರ್‌ ಎಸೆಯಲು ಮುಂದಾದರು. ಆದರೆ ಸಂಪೂರ್ಣವಾಗಿ ಲಯ ತಪ್ಪಿದರು. ಸೋಬರ್ಸ್ ಬ್ಯಾಟಿನಿಂದ ಬಂದೂಕಿನ ಗೋಲಿಯತೆ ಸಿಡಿದ ಆ ಚೆಂಡು ಯಾವ ಮಾರ್ಗವಾಗಿ ಮೈದಾನದಿಂದ ಹಾರಿ ಹೋಯಿತು ಎಂಬುದು ಯಾರಿಗೂ ತಿಳಿಯಲಿಲ್ಲ!

ಹೀಗೆ ಓವರೊಂದರಲ್ಲಿ ಸತತ 6 ಸಿಕ್ಸರ್‌ ಹಾಗೂ ಓವರಿಗೆ ಅತ್ಯಧಿಕ 36 ರನ್‌ ಬಾರಿಸಿದ ಅಮೋಘ ವಿಶ್ವದಾಖಲೆಗಳಿಗೆ ಗ್ಯಾರಿ ಸೋಬರ್ಸ್ ಭಾಜನರಾಗಿದ್ದರು. ಕ್ರಿಕೆಟ್‌ ಜಗತ್ತಿನ ಸಂಭ್ರಮಕ್ಕೆ ಪಾರವಿರಲಿಲ್ಲ!

ಅಭಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Untitled-1

ಥಾಯ್ಲೆಂಡ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌-ಚಿರಾಗ್‌ಗೆ ಸೋಲು

Untitled-1

ಜೋ ಬೈಡನ್ ನನಗೆ ಹಿಂದಿನಿಂದಲೂ ಪರಿಚಯ : ಅಶೋಕ ಖೇಣಿ

ಕೋವಿಡ್ ಲಸಿಕೆ ನೀಡಿದ್ದಕ್ಕೆ ಭಾರತಕ್ಕೆ ಬ್ರೆಜಿಲ್‌, ವಿಶ್ವಸಂಸ್ಥೆ ಅಭಿನಂದನೆ

ಕೋವಿಡ್ ಲಸಿಕೆ ನೀಡಿದ್ದಕ್ಕೆ ಭಾರತಕ್ಕೆ ಬ್ರೆಜಿಲ್‌, ವಿಶ್ವಸಂಸ್ಥೆ ಅಭಿನಂದನೆ

ಕೋವಿಡ್ ಹಿನ್ನೆಲೆ: ಬಜೆಟ್‌ ಗಾತ್ರ ತಗ್ಗಿಸುವುದು ಅನಿವಾರ್ಯ: ಸಿಎಂ

ಕೋವಿಡ್ ಹಿನ್ನೆಲೆ: ಬಜೆಟ್‌ ಗಾತ್ರ ತಗ್ಗಿಸುವುದು ಅನಿವಾರ್ಯ: ಸಿಎಂ

ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ-ಆರು ಮಂದಿ ಬಂಧನ

ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ-ಆರು ಮಂದಿ ಬಂಧನ

ಮಂಡ್ಯ ಅಕ್ರಮ ಗಣಿಗಾರಿಕೆಗಳ ಮೇಲೆ ಪೊಲೀಸರ ದಾಳಿ : ಸ್ಫೋಟಕ ವಸ್ತುಗಳ ವಶ

ಮಂಡ್ಯ ಅಕ್ರಮ ಗಣಿಗಾರಿಕೆಗಳ ಮೇಲೆ ಪೊಲೀಸರ ದಾಳಿ : ಸ್ಫೋಟಕ ವಸ್ತುಗಳ ವಶ

fire

ರಸ್ತೆಗೆ ಹಾಕಿದ ಹುರುಳಿಕಾಳು ಸಿಪ್ಪೆ ಕಾರಿನ ಚಕ್ರಕ್ಕೆ ಸಿಲುಕಿ ಬೆಂಕಿ: ಹೊತ್ತಿ ಉರಿದ ಕಾರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವೀರೋಚಿತ ಸರಣಿ ಗೆಲುವಿನ ಹಿಂದಿದೆ ನೋವು ಅವಮಾನ.. ಈ ಸರಣಿಯಲ್ಲಿ ಭಾರತ ಗಳಿಸಿದ್ದೇನು?

ವೀರೋಚಿತ ಸರಣಿ ಗೆಲುವಿನ ಹಿಂದಿದೆ ನೋವು ಅವಮಾನ..! ಈ ಸರಣಿಯಲ್ಲಿ ಭಾರತ ಗಳಿಸಿದ್ದೇನು?

ಜಂಟಲ್‌ಮನ್‌ ಗೇಮ್ ನಲ್ಲಿ ಜನಾಂಗೀಯ ನಿಂದನೆ: ಮೋಯಿನ್ ಅಲಿಗೆ ‘ಒಸಾಮ’ ಎಂದಿದ್ದ ಆಸೀಸ್ ಆಟಗಾರ

ಜಂಟಲ್‌ಮನ್‌ ಗೇಮ್ ನಲ್ಲಿ ಜನಾಂಗೀಯ ನಿಂದನೆ: ಮೋಯಿನ್ ಅಲಿಗೆ ‘ಒಸಾಮ’ ಎಂದಿದ್ದ ಆಸೀಸ್ ಆಟಗಾರ

Untitled-1

ಬದುಕು ಬದಲಾಯಿಸಿದ ಅಪಘಾತ : ಆಸ್ಪತ್ರೆ ಬೆಡ್ ನಲ್ಲೇ ಅರಳಿದ ಸಾಧಕಿಯ ರೋಚಕ ಕಥೆ

ಅಂಧನಾಗಿಕೊಂಡೇ ಅಂಗಡಿಯ ಮಾಲಿಕನಾದ 69 ರ ವೃದ್ಧ :ಸ್ವಾಭಿಮಾನದ ಬದುಕಿಗೊಂದು ಸಾಕ್ಷಿ ಈ ವ್ಯಕ್ತಿ

ಅಂಧನಾಗಿಕೊಂಡೇ ಅಂಗಡಿಯ ಮಾಲೀಕನಾದ 69 ರ ವೃದ್ಧ :ಸ್ವಾಭಿಮಾನದ ಬದುಕಿಗೊಂದು ಸಾಕ್ಷಿ ಈ ವ್ಯಕ್ತಿ

01

ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿ ಮಾನವೀಯತೆ ಸಾರಿದ 19 ರ ದಿಟ್ಟೆ.!

MUST WATCH

udayavani youtube

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

udayavani youtube

ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್

udayavani youtube

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

udayavani youtube

ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,

udayavani youtube

ಮಂಗಳೂರು ಪೊಲೀಸರ ಭರ್ಜರಿ ಬೇಟೆ: 44 ಕೆಜಿ ಗಾಂಜಾ ವಶ, ಏಳು ಆರೋಪಿಗಳ ಬಂಧನ

ಹೊಸ ಸೇರ್ಪಡೆ

Untitled-1

ಕಟ್ಟಡ ನಿರ್ಮಾಣವಾದರೂ ಮೂಲಸೌಕರ್ಯ ಕೊರತೆ

ಸಮ್ಮೇಳನ ಕನ್ನಡದ ಮನಸ್ಸುಗಳು ಒಂದಾಗುವ ಉತ್ಸವ

ಸಮ್ಮೇಳನ ಕನ್ನಡದ ಮನಸ್ಸುಗಳು ಒಂದಾಗುವ ಉತ್ಸವ

ಕಲೆಕ್ಟರ್ ಗೇಟ್‌ ಜಂಕ್ಷನ್‌: ಹಳೆ ಕಟ್ಟಡಕ್ಕೆ ಶೀಘ್ರ ಮುಕ್ತಿ?

ಕಲೆಕ್ಟರ್ ಗೇಟ್‌ ಜಂಕ್ಷನ್‌: ಹಳೆ ಕಟ್ಟಡಕ್ಕೆ ಶೀಘ್ರ ಮುಕ್ತಿ?

ಮೂಡುಬಿದಿರೆ: ಪೊಲೀಸ್‌ ನಗರ ಸಂಚಾರ

ಮೂಡುಬಿದಿರೆ: ಪೊಲೀಸ್‌ ನಗರ ಸಂಚಾರ

ಕಾರ್ಕಳ ತಾ| 17ನೇ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ

ಕಾರ್ಕಳ ತಾ| 17ನೇ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.