ಕಷ್ಟದ ದಿನಗಳಲ್ಲಿ ಅರೆಕಾಲಿಕ ಶಿಕ್ಷಕನಾಗಿ ದುಡಿಯುತ್ತಿದ್ದಾತ ಈಗ ಭಾರತದ ಕಬಡ್ಡಿ ಸ್ಟಾರ್!

Team Udayavani, Jan 18, 2021, 5:38 PM IST

ಕಷ್ಟದ ದಿನಗಳಲ್ಲಿ ಅರೆಕಾಲಿಕ ಶಿಕ್ಷಕನಾಗಿ ದುಡಿಯುತ್ತಿದ್ದಾತ ಈಗ ಭಾರತದ ಕಬಡ್ಡಿ ಸ್ಟಾರ್!

ಬಾಲ್ಯದಲ್ಲಿ ತಾಯಿಯ ಮರಣ, ಯೌವ್ವನದಲ್ಲಿ ತಂದೆಯ ಸಾವು. ಒಂದೆಡೆ ಅಕ್ಕನ ಮಕ್ಕಳನ್ನು ನೋಡಿಕೊಳ್ಳಬೇಕಾದ ಸ್ಥಿತಿ. ಇನ್ನೊಂದೆಡೆ ಶಿಕ್ಷಣ ಪಡೆಯುವ ಗುರಿ. ಇದರ ಜತೆಗೆ ಕಬಡ್ಡಿ ಅಭ್ಯಾಸಕ್ಕೆ ಹೋಗುತ್ತಿದ್ದಾಗ ಎದುರಾಗುತ್ತಿದ್ದ ಪ್ರಾಣ ಭಯ. ಇವೆಲ್ಲವನ್ನು ಮೆಟ್ಟಿ ನಿಂತ ಹರಿಯಾಣದ ರೋಹ್ಟಕ್‌ ಜಿಲ್ಲೆಯ ಚಮಾರಿಯಾ ಗ್ರಾಮದ ದೀಪಕ್‌ ನಿವಾಸ್‌ ಹೂಡ, ಇಂದು ಭಾರತೀಯ ಕಬಡ್ಡಿ ತಂಡದ ಆಲ್‌ರೌಂಡರ್‌ ಆಟಗಾರ.

ಗುವಾಹಟಿಯಲ್ಲಿ 2016ರಲ್ಲಿ ನಡೆದ ದಕ್ಷಿಣ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ತಂಡವನ್ನು ಮೊದಲ ಬಾರಿ ಪ್ರತಿನಿಧಿಸಿದ್ದ ದೀಪಕ್‌, ಅದೇ ವರ್ಷ ಅಹಮದಾಬಾದ್‌ನಲ್ಲಿ ನಡೆದ ಕಬಡ್ಡಿ ವಿಶ್ವಕಪ್‌ ಚಾಂಪಿಯನ್‌ ಪಟ್ಟ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು.

ಕಬಡ್ಡಿ ಆಸಕ್ತಿ ಮೂಡಿದ್ದು ಹೇಗೆ?

ಹರಿಯಾಣ ಕಬಡ್ಡಿ ರಾಜ್ಯ. ಇಲ್ಲಿನ ಬಹುತೇಕರು ಕಬಡ್ಡಿ ಬಗ್ಗೆ ಒಲವು ಹೊಂದಿರುತ್ತಾರೆ. ಏರ್‌ ಇಂಡಿಯಾ, ಭಾರತ್‌ ಪೆಟ್ರೋಲಿಯಂ, ಇಂಡಿಯನ್‌ ನೇವಿ ಸೇರಿದಂತೆ ಹಲವು ತಂಡಗಳು ವೃತ್ತಿಪರವಾಗಿ ಕಬಡ್ಡಿ ಆಡುತ್ತಿದ್ದವು. ಇದನ್ನು ನೋಡಿ ನನಗೂ ಆಸಕ್ತಿ ಬೆಳೆಯಿತು. 2009ರಲ್ಲಿ ಪಿಯುಸಿ ಓದುವಾಗ ಕುಟುಂಬದ ಆರ್ಥಿಕ ಸಂಕಷ್ಟಗಳನ್ನು ಬಗೆಹರಿಸಿಕೊಳ್ಳಲು ಕಬಡ್ಡಿಯನ್ನು ವೃತ್ತಿಯಾಗಿ ಸ್ವೀಕರಿಸಿದೆ. ಚಿಕ್ಕಂದಿನಲ್ಲೆ ತಾಯಿಯನ್ನು ಕಳೆದುಕೊಂಡೆ. ಕೆಲ ವರ್ಷಗಳ ಬಳಿಕ ತಂದೆ ಮೃತ ಪಟ್ಟರು ಆರ್ಥಿಕ ಸಂಕಷ್ಟಗಳು ದಿನೇ ದಿನೆ ಹೆಚ್ಚಾಗ ತೊಡಗಿದ್ದರಿಂದ ಕೆಲ ಕಾಲ ಅರೆಕಾಲಿಕ ಶಿಕ್ಷಕನಾಗಿ ಕಾರ್ಯನಿರ್ವಹಿಸಿದೆ.

ರಾತ್ರಿ ಹೊತ್ತು ಅಭ್ಯಾಸ ನಡೆಸುತ್ತಿದ್ದೆ. ಕೆಲವೊಮ್ಮೆ ರಾತ್ರಿ ಊಟಕ್ಕೆ ದುಡ್ಡಿಲ್ಲದೆ ಪರದಾಡುತ್ತಿದ್ದೆವು. ಅಭ್ಯಾಸಕ್ಕಾಗಿ ಊರಿನಿಂದ 5 ಕಿ.ಮೀ. ದೂರವಿರುವ ನರ್ವಲ್‌ಗೆ ಹೋಗಿ ಬರುತ್ತಿದ್ದೆ. ಅಭ್ಯಾಸದ ವೇಳೆ ಗಾಯಗೊಂಡಾಗ ಔಷಧ ಹಚ್ಚಲು ಸಹ ನನ್ನಲ್ಲಿ ಹಣ ಇರುತ್ತಿರಲಿಲ್ಲ ಎಂದು ದೀಪಕ್‌ ನಿವಾಸ್‌ ಹೂಡ ತಮ್ಮ ಹಳೆಯ ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಬದುಕು ಬದಲಿಸಿದ ಪ್ರೋ ಕಬಡ್ಡಿ

ದೀಪಕ್‌

ನಾನು ಕಬಡ್ಡಿಯಲ್ಲಿ ಮಿಂಚಲು ಪ್ರಮುಖ ಕಾರಣ ಪ್ರೊ ಕಬಡ್ಡಿ ಲೀಗ್‌. ಈ ಲೀಗ್‌ನಲ್ಲಿ ಆಯ್ಕೆಯಾದ ನಂತರ ಇಂಡಿಯನ್‌ ಏರ್‌ ಪೋರ್ಸ್‌ನಲ್ಲಿ ಉದ್ಯೋಗವು ಸಿಕ್ಕಿತು. ಮತ್ತು ಭಾರತ ತಂಡದಲ್ಲಿ ಸ್ಥಾನವು ಲಭಿಸಿತು. ಇದೀಗ ನಮ್ಮ ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಿಸಿದೆ ಎನ್ನುತ್ತಾರೆ ದೀಪಕ್‌.

 ಪ್ರೋ ಕಬಡ್ಡಿ ಅನುಭವದ ಸರಮಾಲೆ

ನನ್ನ ಪ್ರಕಾರ ಪ್ರೋ ಕಬ್ಬಡಿ ಎನ್ನುವುದು ಕೇವಲ ಒಂದು ಲೀಗ್‌ ಅಲ್ಲ ಇಲ್ಲಿ ಕಲಿಕೆಗೆ ಮತ್ತು ಕಬಡ್ಡಿಯಲ್ಲಿರುವ ನಮ್ಮ ಸಾಮರ್ಥ್ಯವನ್ನು ತೋರ್ಪಡಿಸಲು ಇರುವ ಉತ್ತಮ ವೇದಿಕೆಯಾಗಿದೆ. ಅದೆಷ್ಟೋ ಹಳ್ಳಿಯ ಯುವ ಆಟಗಾರರು ಈ ಅವಕಾಶವನ್ನು ಸದುಪಗೋಗಪಡಿಸಿಕೊಂಡು ರಾಷ್ಟ್ರೀಯ ತಂಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಉಳಿದಂತೆ ಅನುಭವಿ ಕೋಚ್‌, ಆಟಗಾರರಿಂದ ಸಲಹೆಯನ್ನು ಪಡೆಯುವ ಮೂಲಕ ನಮ್ಮಲ್ಲಿ ತಪ್ಪುಗಳನ್ನು ತಿದ್ದಿಕೊಳ್ಳಲು ಉತ್ತಮ ಅವಕಾಶವೂ ಇದೆ ಎನ್ನುತ್ತಾರೆ ದೀಪಕ್ ನಿವಾಸ ಹೂಡ.

ದೀಪಕ್‌ ನಿವಾಸ್‌ ಹೂಡ

ಅಭಿ

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jammu Kashmir: ಗುಲ್‌ ಮಾರ್ಗ್‌, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…

Jammu Kashmir: ಗುಲ್‌ ಮಾರ್ಗ್‌, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…

ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?

ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?

Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ

Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ

Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?

Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?

Jammu-Kashmir: ಅಂದು-ಇಂದು- ಸಮೃದ್ಧಿಯ ನಾಡು- ನೆಮ್ಮದಿಯ ಬೀಡು

Jammu-Kashmir: ಅಂದು-ಇಂದು- ಸಮೃದ್ಧಿಯ ನಾಡು- ನೆಮ್ಮದಿಯ ಬೀಡು

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.