ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ವರೆಗೆ ಭಾರತ ತಂಡದ ಪಯಣ ಹೇಗಿತ್ತು?


ಕೀರ್ತನ್ ಶೆಟ್ಟಿ ಬೋಳ, Jun 12, 2021, 9:04 AM IST

ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ವರೆಗೆ ಭಾರತ ತಂಡದ ಪಯಣ ಹೇಗಿತ್ತು?

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್.. ಐಸಿಸಿಯು ಇಂತಹದ್ದೊಂದು ಯೋಜನೆಯನ್ನು ಮುಂದಿಟ್ಟಾಗ ಬಹುತೇಕರು ಇದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಏಕದಿನ, ಟಿ20 ಮಾದರಿಯಂತೆ ಟೆಸ್ಟ್ ವಿಶ್ವಕಪ್ ಅಥವಾ ಚಾಂಪಿಯನ್ ಶಿಪ್ ನಡೆಸುವುದು ಹೇಗೆ ಸಾಧ್ಯ ಎಂಬಿತ್ಯಾದಿ ಪ್ರಶ್ನೆಗಳು ಎದ್ದಿತ್ತು. ಇದು ವಿಫಲವಾಗುತ್ತದೆ ಎಂಬ ಅಭಿಪ್ರಾಯಗಳೂ ಕೇಳಿ ಬಂದಿತ್ತು. ಆದರೆ ಐಸಿಸಿಯು ಕೂಟ ಹೇಗಿರಬೇಕು ಎಂದು ಸೂಕ್ತ ರೂಪುರೇಷೆಯೊಂದಿಗೆ ತಯಾರಾಗಿ ಬಂದಿತ್ತು. ಅದರಂತೆ 2019ರ ಜುಲೈನಲ್ಲಿ ಈ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆರಂಭವಾಗಿತ್ತು.

ಇದು ಏಕದಿನ, ಟಿ20 ವಿಶ್ವಕಪ್ ನಂತೆ ಒಂದು ಅಥವಾ ಎರಡು ತಿಂಗಳಲ್ಲಿ ನಡೆಯುವ ಕೂಟವಲ್ಲ. ಅಥವಾ ಒಂದೇ ದೇಶದಲ್ಲಿ ನಡೆಯವ ಪಂದ್ಯಾವಳಿಯಲ್ಲ. ಇದರ ಅವಧಿ ಎರಡು ವರ್ಷ. ದೇಶಗಳು ದ್ವಿಪಕ್ಷೀಯವಾಗಿ ಆಡುವ ಟೆಸ್ಟ್ ಸರಣಿಗಳಿಗೆ ಅಂಕ ನೀಡುತ್ತಾ ಎರಡು ವರ್ಷಗಳ ಬಳಿಕ ಹೆಚ್ಚು ಅಂಕ ಪಡೆದ ಎರಡು ತಂಡಗಳ ನಡುವೆ ಫೈನಲ್ ಪಂದ್ಯ ನಡೆಸುವುದು. 2021ರ  ಜೂನ್ ನಲ್ಲಿ ಇಂಗ್ಲೆಂಡ್ ನಲ್ಲಿ ಫೈನಲ್ ಪಂದ್ಯ ನಡೆಸಲಾಗುತ್ತದೆ ಎಂದು ಐಸಿಸಿ ತಿಳಿಸಿತ್ತು.

ಇದೀಗ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಎರಡು ವರ್ಷ ನಡೆದ ಸರಣಿಗಳಲ್ಲಿ ಉತ್ತಮವಾಗಿ ಆಡಿ ಅಗ್ರ ಅಂಕ ಗಳಿಸಿದ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಫೈನಲ್ ಪಂದ್ಯ ಆಡಲಿದೆ.

ಫೈನಲ್ ವರೆಗೆ ಭಾರತ ತಂಡದ ಪಯಣ ಹೇಗಿತ್ತು?

ಈ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಹೆಚ್ಚು ಸ್ಥಿರ ಪ್ರದರ್ಶನ ನೀಡಿದ ಮತ್ತು ಯಶಸ್ವಿ ತಂಡವೆಂದರೆ ಅದು ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ.  2019 ಆಗಸ್ಟ್ ನಿಂದ ಭಾರತ ಒಟ್ಟು 17 ಪಂದ್ಯಗಳನ್ನಾಡಿದ್ದು, ಅದರಲ್ಲಿ12 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿದೆ. ಒಂದು ಪಂದ್ಯ ಮಾತ್ರ ಡ್ರಾನಲ್ಲಿ ಅಂತ್ಯವಾಗಿದೆ.

ಈ ಸಮಯದಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಇಂಗ್ಲೆಂಡ್, ಆಸೀಸ್ ವಿರುದ್ಧ ಸರಣಿ ಗೆಲುವು ಕಂಡಿದೆ. ಸರಣಿ ಸೋಲು ಅನುಭವವಾಗಿದ್ದು ನ್ಯೂಜಿಲ್ಯಾಂಡ್ ವಿರುದ್ಧ ಮಾತ್ರ.

ಭಾರತ ಮೊದಲ ಸರಣಿ ಆಡಿದ್ದು ವೆಸ್ಟ್ ಇಂಡೀಸ್ ವಿರುದ್ಧ. ಕೆರಿಬಿಯನ್ ನಲ್ಲಿ ನಡೆದ ಎರಡು ಪಂದ್ಯಗಳ ಸರಣಿಯಲ್ಲಿ ಭಾರತ ಎರಡೂ ಪಂದ್ಯವನ್ನು ಸುಲಭವಾಗಿ ಗೆದ್ದಿತ್ತು. ತ್ರಿವಳಿ ವೇಗಿಗಳಾದ ಬುಮ್ರಾ, ಇಶಾಂತ್ ಮತ್ತು ಶಮಿ ಘಾತಕ ಸ್ಪೆಲ್ ಮಾಡಿದ್ದರು. ಇದೇ ಸರಣಿಯಲ್ಲಿ ಹನುಮ ವಿಹಾರಿ ತಮ್ಮ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ್ದರು.

ಎರಡನೇ ಸರಣಿ ನಡೆದಿದ್ದು ದಕ್ಷಿಣ ಆಫ್ರಿಕಾ ವಿರುದ್ಧ. ಭಾರತದಲ್ಲಿ ಈ ಸರಣಿಯ ಎಲ್ಲಾ ಮೂರು ಪಂದ್ಯಗಳನ್ನು ಭಾರತ ಗೆದ್ದುಕೊಂಡಿತ್ತು. ಈ ಸರಣಿಯಲ್ಲಿ ಗಮನ ಸೆಳೆದ ಅಂಶವೆಂದರೆ ರೋಹಿತ್ ಶರ್ಮಾ ಟೆಸ್ಟ್ ನಲ್ಲಿ ಮೊದಲ ಬಾರಿಗೆ ಆರಂಭಿಕನಾಗಿ ಕಣಕ್ಕಿಳಿದಿದ್ದು. ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಮಯಾಂಕ್ ಅಗರ್ವಾಲ್ ದ್ವಿಶತಕ ಬಾರಿಸಿದರೆ, ರೋಹಿತ್ ಶರ್ಮಾ ಎರಡೂ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದರು. ಎರಡನೇ ಟೆಸ್ಟ್ ನಲ್ಲಿ ಮಯಾಂಕ್ ಶತಕ ಬಾರಿಸಿದರೆ, ವಿರಾಟ್ ಕೊಹ್ಲಿ ದ್ವಿಶತಕ ಗಳಿಸಿದರು. ಮೂರನೇ ಪಂದ್ಯದಲ್ಲಿ ರೋಹಿತ್ ದ್ವಿಶತಕ ಬಾರಿಸಿದರೆ, ಅಜಿಂಕ್ಯ ರಹಾನೆ ಶತಕ ಗಳಿಸಿದರು. ಒಟ್ಟಿನಲ್ಲಿ ಭಾರತದ ಬ್ಯಾಟಿಂಗ್ ವೈಭವಕ್ಕೆ ಹರಿಣಗಳು  ದಿಕ್ಕಾಪಾಲಾಗಿದ್ದರು.

ಇದನ್ನೂ ಓದಿ:ಸೌತಾಂಪ್ಟನ್‌ ಅಂಗಳದಲ್ಲಿ ಟೀಂ ಇಂಡಿಯಾದ ಕಠಿಣ ಅಭ್ಯಾಸ

ಟೆಸ್ಟ್ ಚಾಂಪಿಯನ್ ಶಿಪ್ ನ ಮೂರನೇ ಸರಣಿ ನಡೆದಿದ್ದು ಬಾಂಗ್ಲಾ ವಿರುದ್ಧ. ಭಾರತದಲ್ಲಿ ನಡೆದ ಎರಡು ಪಂದ್ಯಗಳ  ಸರಣಿಯನ್ನು ವೈಟ್ ವಾಶ್ ಮಾಡಿ ಗೆದ್ದು, ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡ ಅಜೇಯ ದಾಖಲೆ ಮುಂದುವರಿಸಿತು. ಮೊದಲ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಭರ್ಜರಿ ದ್ವಿಶತಕ ಗಳಿಸಿದರು. ಎರಡನೇ ಪಂದ್ಯದಲ್ಲಿ ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ದಾಳಿಗೆ ಬಾಂಗ್ಲಾ ಹುಲಿಗಳು ತಬ್ಬಿಬ್ಬಾಗಿದ್ದರು.

ಮೊದಲ ಸೋಲು: ಚಾಂಪಿಯನ್ ಶಿಪ್ ನಲ್ಲಿ ಅಜೇಯ ಸಾಧನೆಯಿಂದ ಮೆರೆಯುತ್ತಿದ್ದ ಭಾರತ ತಂಡಕ್ಕೆ ಶಾಕ್ ನೀಡಿದ್ದು ಕಿವೀಸ್. ಅವರ ನೆಲದಲ್ಲಿ ನಡೆದ ಸರಣಿಯ ಎರಡೂ ಪಂದ್ಯಗಳಲ್ಲಿ ಭಾರತ ಸೋಲನುಭವಿಸಿತ್ತು. ಕಿವೀಸ್ ವೇಗಿಗಳ ದಾಳಿಗೆ ನಲುಗಿದ ಭಾರತ ತಂಡ ಟೆಸ್ಟ್ ಚಾಂಪಿಯನ್ ಶಿಪ್ ನ ಮೊದಲ ( ಏಕೈಕ) ಸರಣಿ ಸೋಲನುಭವಿಸಿತು.

ಆಸೀಸ್ ವಿಕ್ರಮ: 2020ರ ವರ್ಷಾಂತ್ಯದಲ್ಲಿ ಆಸೀಸ್ ನಲ್ಲಿ ನಡೆದ ಬಾರ್ಡರ್- ಗಾವಸ್ಕರ್ ಟ್ರೋಫಿಯಲ್ಲಿ ಭಾರತ ತಂಡ ಅಭೂತಪೂರ್ವ ಸಾಧನೆ ಮಾಡಿತು. ಮೊದಲ ಪಂದ್ಯದಲ್ಲಿ ಅವಮಾನಕರ ಸೋಲಾದರೂ ನಂತರದ ಪಂದ್ಯಗಳಲ್ಲಿ ಉತ್ತಮ ಕಮ್  ಬ್ಯಾಕ್ ಮಾಡಿತು. ವಿರಾಟ್ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಯುವ ಪಡೆಯು ಆಸೀಸ್ ಗೆ ಅವರದ್ದೇ ನೆಲದಲ್ಲಿ ಮಣ್ಣು ಮುಕ್ಕಿಸಿತು. ರಹಾನೆ, ಪೂಜಾರ ಸೇರಿದಂತೆ ಹಿರಿಯರ ಜೊತೆ ಪಂತ್, ಸುಂದರ್, ಗಿಲ್ ಸೇರಿದಂತೆ ಕಿರಿಯರು ತೋರಿದ ಅಸಾಮಾನ್ಯ ಪರಾಕ್ರಮದಿಂದ ತಂಡ 2-1 ಅಂತರದಿಂದ ಸರಣಿ ಗೆದ್ದಿತು.

ಇಂಗ್ಲೆಂಡ್ ಸರಣಿ: ಇದು ಈ ಕೂಟದ ಅಂತಿಮ ಸರಣಿ. ಒಂದೆಡೆ ದಕ್ಷಿಣ ಆಫ್ರಿಕಾ- ಆಸೀಸ್ ಸರಣಿ ರದ್ದಾದ ಕಾರಣ ನ್ಯೂಜಿಲ್ಯಾಂಡ್ ಫೈನಲ್ ಗೇರಿತ್ತು. ಭಾರತ ಫೈನಲ್ ತಲುಪಬೇಕಾದರೆ ಭಾರತ ಸರಣಿ ಗೆಲ್ಲಬೇಕಿತ್ತು. ಅತ್ತ ಇಂಗ್ಲೆಂಡ್ ಗೂ ಅವಕಾಶವಿತ್ತು. ಇಂತಹ ಸಂದರ್ಭದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಅಧಿಕಾರಯುತವಾಗಿ ಗೆದ್ದಿತು. ಆದರೆ ಮುಂದೆ ನಡೆದಿದ್ದು ಭಾರತದ ಆಟ. ಬ್ಯಾಟ್ಸಮನ್ ಗಳ ಪರಾಕ್ರಮ ಮತ್ತು ಸ್ಪಿನ್ನರ್ ಗಳ ಕೈಚಳಕದ ಎದುರು ಇಂಗ್ಲೆಂಡ್ ಆಟ ನಡೆಯಲಿಲ್ಲ.  ಮುಂದಿನ ಮೂರು ಪಂದ್ಯಗಳನ್ನು ಭಾರತ ತಂಡ ಗೆದ್ದು ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿತಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಟಿಕೆಟ್ ಪಡೆಯಿತು.

ಒಟ್ಟಿನಲ್ಲಿ ಭಾರತ ತಂಡ ಈ ಕೂಟದುದ್ದಕ್ಕೂ ಉತ್ತಮ ಪ್ರದರ್ಶನವನ್ನೇ ನೀಡಿಕೊಂಡು ಬಂದಿದೆ. ಸರಣಿ ಸೋಲಾಗಿದ್ದು ಕೇನ್ ವಿಲಿಯಮ್ಸನ್ ಪಡೆಯ ವಿರುದ್ಧ ಮಾತ್ರ. ಇದೀಗ ಫೈನಲ್ ಪಂದ್ಯದಲ್ಲೂ ಅದೇ ವಿಲಿಯಮ್ಸನ್ ಪಡೆ ಭಾರತಕ್ಕೆ ಎದುರಾಗಿದೆ. 2019ರ ವಿಶ್ವಕಪ್ ಸೆಮಿ  ಫೈನಲ್  ಸೋಲು ಮತ್ತು ಕಿವೀಸ್ ಸರಣಿ ಸೋಲು ಎರಡಕ್ಕೂ ಪ್ರತಿಕಾರ ತೀರಿಸುವ ಸಂದರ್ಭ ಎದುರಾಗಿದೆ.

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

BCCI

T20 World Cup: ಇಂದು ಭಾರತ ತಂಡ ಪ್ರಕಟ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.