ಐಶಾರಾಮಿ ಆಸ್ಪತ್ರೆ ಬದಲು ಬಡವರಿಗಾಗಿ ಗ್ರಾಮದಲ್ಲೇ 10 ರೂ.ಶುಲ್ಕದ ಕ್ಲಿನಿಕ್ ಸ್ಥಾಪಿಸಿದ ನೂರಿ


Team Udayavani, Mar 17, 2021, 7:20 PM IST

ಐಶಾರಾಮಿ ಆಸ್ಪತ್ರೆ ಬದಲು ಬಡವರಿಗಾಗಿ ಗ್ರಾಮದಲ್ಲೇ 10 ರೂ.ಶುಲ್ಕದ ಕ್ಲಿನಿಕ್ ಸ್ಥಾಪಿಸಿದ ನೂರಿ

ಸ್ವಾರ್ಥ. ಎಲ್ಲರೊಳಗೂ ಇರುವ ಬೇರು. ಇದ್ದಷ್ಟು ಬೇಕು, ಬೇಕೆನ್ನುವುದು ಸಿಕ್ಕಾಗ ಮತ್ತಷ್ಟು ಬೇಕೆನ್ನುವ ಸ್ವಾರ್ಥದ ಯುಗದಲ್ಲಿ ಇನ್ನೊಬ್ಬರ ಮುಖದಲ್ಲಿ, ಇನ್ನೊಬ್ಬರ ಬದುಕಿನಲ್ಲಿ ನೆಮ್ಮದಿಯ ನಗು ತರುವ ಕೆಲವೊಂದಿಷ್ಟು ವ್ಯಕ್ತಿಗಳ ವ್ಯಕ್ತಿತ್ವ ನಾಲ್ಕು ಜನಗಳ ನಡುವೆ ಇದ್ದರೂ ಬೆಳಕಿಗೆ ಬಾರದೆ ಇರುತ್ತದೆ.

ನೂರಿ ಪರ್ವಿನ್. ವಿಜಯವಾಡದಲ್ಲಿ ಹುಟ್ಟಿ, ಆಂಧ್ರಪ್ರದೇಶದ ಕಡಪದಲ್ಲಿ ಎಂ.ಬಿ.ಬಿ.ಎಸ್ ಕಲಿಕೆಯನ್ನು ಪೂರ್ತಿಗೊಳಿಸುತ್ತಾರೆ. ನೂರಿ, ಕಲಿಯುತ್ತಾ ತನ್ನ ಊರು ಕಡಪದಲ್ಲಿ ಅಲ್ಲಿಯ ಬಡವರ್ಗ ಆಸ್ಪತ್ರೆಯ ದುಬಾರಿ ಚಿಕಿತ್ಸೆಯನ್ನು ಪಡೆಯಲು ಕಷ್ಟ ಪಡುತ್ತಿರುವುದನ್ನು ನೋಡುತ್ತಾರೆ. ಇದು ನೂರಿಯಲ್ಲಿ ಮಾನವೀಯತೆಯ ಮೌಲ್ಯವನ್ನು ಹುಟ್ಟುವಂತೆ ಮಾಡುತ್ತದೆ.

ನೂರಿ ಇರುವ ಊರಿನಲ್ಲಿ ಬಡ ವರ್ಗದ ಜನತೆಗೆ ಆಸ್ಪತ್ರೆ ಚಿಕಿತ್ಸೆ ಕೈಗೆಟುಕುವ ದರದಲ್ಲಿ ಸಿಗಬೇಕು ಎನ್ನುವ ಉಮೇದು ನೂರಿಯಲ್ಲಿ ಇರುತ್ತದೆ. ಅದೇ ಕಾರಣಕ್ಕೆ ನೂರಿ ತಮ್ಮ ಊರು ಕಡಪದಲ್ಲೇ, ಗ್ರಾಮೀಣ ಜನರಿಗೆ ಹತ್ತಿರವಾಗುವಂತೆ ತಮ್ಮದೊಂದು ಪುಟ್ಟ ಕ್ಲಿನಿಕ್ ನ್ನು ತೆರೆಯುತ್ತಾರೆ. ದಿನ ಕಳೆದಂತೆ ನೂರಿಯ ಪುಟ್ಟ ಕ್ಲಿನಿಕ್ ಗೆ ಜನಸಾಮಾನ್ಯರು ಅಂದರೆ ಹೆಚ್ಚಾಗಿ ಬಡ ವರ್ಗದ ಜನ ಸಾಲು ಗಟ್ಟಿ ನಿಲ್ಲುತ್ತಾರೆ. ನೂರಿಯ ಕ್ಲಿನಿಕ್ ಕಡಪದಲ್ಲಿ ಮಾತ್ರವಲ್ಲ ಅಕ್ಕಪಕ್ಕದ ಊರಿಗೂ ವಿಶೇಷವಾಗಿ ಆಕರ್ಷಣೆ ಆಗುತ್ತದೆ. ಅದಕ್ಕೆ ಕಾರಣ ನೂರಿಯ ಮಾನವೀಯತೆಯ ಮನಸ್ಸು.

ರೋಗಿ ಪರೀಕ್ಷೆಗೆ 10 ರೂಪಾಯಿ ಶುಲ್ಕ.! :

ಡಾಕ್ಟರ್ ನೂರಿ ಕ್ಲಿನಿಕ್ ಗೆ ಬರುವ ರೋಗಿಯ ಪರೀಕ್ಷೆಗೆ ಅವರು ತೆಗೆದುಕೊಳ್ಳುವ ಶುಲ್ಕ ಕೇವಲ 10 ರೂಪಾಯಿ ಮಾತ್ರ. ಹೊರ ರೋಗಿಗಳಿಗೆ 10 ರೂಪಾಯಿ ಆದ್ರೆ, ಒಳರೋಗಿಗಳಿಗೆ ಒಂದು ಬೆಡ್ ಗೆ 40 ರೂಪಾಯಿಯಂತೆ ಶುಲ್ಕ ತೆಗೆದುಕೊಳ್ಳುತ್ತಾರೆ.

ನೂರಿ ಕ್ಲಿನಿಕ್ ಗೆ ಹೆಚ್ಚಾಗಿ ಬರುವವರು ಬಡ ಕುಟುಂಬದ ಜನರು. ನೂರಿಯ ಕ್ಲಿನಿಕ್ ಬಗ್ಗೆ ಹಾಗೂ ಅವಳ ಮಾನವೀಯತೆಯನ್ನು ನೋಡಿ  ಅಪ್ಪ ಅಮ್ಮನಿಗೆ ತುಂಬಾ ಖುಷಿ ಆಗುತ್ತದೆ. ನೂರಿಯ 10 ರೂಪಾಯಿ ಶುಲ್ಕದ ಯೋಜನೆ  ಗೆ ಹಾಗೂ ಮಾನವೀಯತೆಯ ಮೌಲ್ಯ  ಮೂಡಲು ಅಪ್ಪ ಅಮ್ಮನೇ ಪ್ರೇರಣೆ ಎನ್ನುತ್ತಾರೆ ನೂರಿ.

ಇದಲ್ಲದೆ ಬಡವರಿಗಾಗಿ ಸರ್ಕಾರದ ಮೆಡಿಕಲ್ ಯೋಜನೆಗಳನ್ನು ಮಾಡಿಕೊಡುತ್ತಾರೆ. ಸರ್ಕಾರದಿಂದ ಇರುವ ಎಲ್ಲಾ ಯೋಜನೆಗಳ ಕುರಿತು ನೂರಿ ಬಡ ಕುಟುಂಬಕ್ಕೆ ಮಾಹಿತಿ ನೀಡಿ ಯೋಜನೆಯನ್ನು ಪಡೆದುಕೊಳ್ಳಲು ನೆರವಾಗುತ್ತಾರೆ.

ನೂರಿ ಕ್ಲಿನಿಕ್ ಆರಂಭಿಸುವ‌ ಮೊದಲು ‘Healthy Inspiring Young India’, ‘Noor Charitable Trust’ ಎಂಬ ಎನ್.ಜಿ.ಓ ಸ್ಥಾಪಿಸಿ ಅದರಲ್ಲಿ ಆರೋಗ್ಯ ಹಾಗೂ ಶಿಕ್ಷಣದ ಕುರಿತು ಸಹಾಯವನ್ನು ಮಾಡುತ್ತಿದ್ದರು.

ನೂರಿ ಮುಂದೆ ಸೈಕಾಲಜಿಯಲ್ಲಿ ಪಿ.ಜಿ ಶಿಕ್ಷಣವನ್ನು ಮಾಡಿ, ಬಡ ಜನರಿಗೆ ಸೂಕ್ತ ಬೆಲೆಯಲ್ಲಿ ಲಭ್ಯವಾಗುವ ಆಸ್ಪತ್ರೆಯನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿದ್ದಾರೆ.

ಸುಹಾನ್ ಶೇಕ್

ಟಾಪ್ ನ್ಯೂಸ್

gdghgfd

ನಾಳೆಯಿಂದ 1-5ನೇ ತರಗತಿ ಶಾಲೆಗಳು ಆರಂಭ : ಸರ್ಕಾರದ ಗೈಡ್ ಲೈನ್ಸ್ ಅನುಸಾರ ತರಗತಿ ಶುರು

bfnbvcx

ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  

hjhjm,nbdsa

ಜಿಲ್ಕಾ ಹುಡುಗನ ಜೊತೆ ಮೇಘಾಶೆಟ್ಟಿ : ಹೊಸ ಚಿತ್ರಕ್ಕೆ ಸಹಿ ಹಾಕಿದ ಜೊತೆ ಜೊತೆಯಲಿ ಬೆಡಗಿ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಮಾತು-ಕೃತಿ ಮುಖಾಮುಖಿಯಾದಾಗ…

ಮಾತು-ಕೃತಿ ಮುಖಾಮುಖಿಯಾದಾಗ…

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

ದಿನದಲ್ಲಿ ಎರಡು ಬಾರಿ ಮಾಯವಾಗುವ ಶಿವಾಲಯ! ಏನಿದರ ವಿಶೇಷತೆ?

1-t

ವಿದೇಶ ಪ್ರವಾಸ,ಅಲ್ಲೇ ಸೆಟ್ಲ್ ಆಗ್ತೀರಾ? : 24 ಲಕ್ಷದವರೆಗೆ ಆರ್ಥಿಕ ಪ್ರೋತ್ಸಾಹವೂ ಇದೆ!

Athletics star Simi story

ಬರಿಗಾಲಿನಲ್ಲಿ ಓಡಲಾರಂಭಿಸಿ ರಾಷ್ಟ್ರಮಟ್ಟದಲ್ಲಿ ಮಿಂಚಿದ ಅಥ್ಲೆಟಿಕ್ಸ್‌ ತಾರೆ ʼಸಿಮಿʼ ಪಯಣ

ಯಶಸ್ವಿ ನಾಯಕತ್ವವೆಂದರೆ ಟ್ರೋಫಿ ಗೆಲ್ಲುವುದು ಮಾತ್ರವೇ..?

ಯಶಸ್ವಿ ನಾಯಕತ್ವವೆಂದರೆ ಟ್ರೋಫಿ ಗೆಲ್ಲುವುದು ಮಾತ್ರವೇ..?

why india struggling against new zealand in icc tournaments

ಟೀಂ ಇಂಡಿಯಾಗೆ ಕೇನ್ ಬಳಗ ಕಬ್ಬಿಣದ ಕಡಲೆಯಾಗುತ್ತಿರುವುದ್ಯಾಕೆ?

MUST WATCH

udayavani youtube

3 ವರ್ಷದಲ್ಲಿ ಫಲ ಬರುವ ತೆಂಗಿನಕಾಯಿ ಇಲ್ಲಿದೆ ನೋಡಿ

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

ಹೊಸ ಸೇರ್ಪಡೆ

gdghgfd

ನಾಳೆಯಿಂದ 1-5ನೇ ತರಗತಿ ಶಾಲೆಗಳು ಆರಂಭ : ಸರ್ಕಾರದ ಗೈಡ್ ಲೈನ್ಸ್ ಅನುಸಾರ ತರಗತಿ ಶುರು

ದುಬೈ ಎಕ್ಸ್ ಪೋದಲ್ಲಿ ಕರಕುಶಲ ವಸ್ತುಗಳಿಗೆ ಉತ್ತಮ ಸ್ಪಂದನೆ

ದುಬೈ ಎಕ್ಸ್ ಪೋದಲ್ಲಿ ಕರಕುಶಲ ವಸ್ತುಗಳಿಗೆ ಉತ್ತಮ ಸ್ಪಂದನೆ

7womens

ಕಸಾಪ ಅಧ್ಯಕ್ಷ ಸ್ಥಾನ ಮಹಿಳೆಗೆ ನೀಡಿ: ಸರಸ್ವತಿ

6swamiji

ಚನ್ನಮ್ಮ ಹೆಸರು ದೇಶಾದ್ಯಂತ ಪಸರಿಸುವಂತೆ ಮಾಡಲಿ: ಶ್ರೀ

ಇಸ್ಕಾನ್‌ನಲ್ಲಿ ಸಾಮೂಹಿಕ ಕೀರ್ತನೆ ಮೂಲಕ ಪ್ರತಿಭಟನೆ

ಇಸ್ಕಾನ್‌ನಲ್ಲಿ ಸಾಮೂಹಿಕ ಕೀರ್ತನೆ ಮೂಲಕ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.