Gooseberry Benefits: ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನವಿದೆ…


Team Udayavani, Nov 29, 2023, 5:15 PM IST

web-29-goosberry

ನೆಲ್ಲಿಕಾಯಿ ಎಂಬ ಶಬ್ದ ನೆನಪಿಸಿಕೊಂಡರೆ ಸಾಕು.. ಬಾಯಿ ಹುಳಿ-ಹುಳಿ ಎನಿಸುತ್ತದೆ. ನೆಲ್ಲಿಕಾಯಿಯಲ್ಲಿ ಹಲವಾರು ವೈದ್ಯಕೀಯ ಗುಣ ಲಕ್ಷಣಗಳನ್ನು ಹೊಂದಿದೆ. ನೆಲ್ಲಿಕಾಯಿಯನ್ನು ಆಯುರ್ವೇದ ಔಷಧಿಗಳಲ್ಲಿಯೂ ಬಳಸಲಾಗುತ್ತದೆ.

ಕಿತ್ತಳೆ ಹಣ್ಣಿಗಿಂತ 20 ಪಟ್ಟು ಹೆಚ್ಚು “ಸಿ” ಜೀವಸತ್ವ ನೆಲ್ಲಿಕಾಯಿ ಹೊಂದಿರುತ್ತದೆ. ನೆಲ್ಲಿಕಾಯಿಯು ಹುಳಿಯ ಜೊತೆಗೆ, ಸ್ವಲ್ಪ ಕಹಿಯ ರುಚಿಯನ್ನು ಹೊಂದಿರುತ್ತದೆ. ಆದರೆ ಒಮ್ಮೆ ನೆಲ್ಲಿಕಾಯಿ ತಿಂದು ನೀರು ಕುಡಿದರೆ, ಸಿಹಿಯ ಅನುಭವವಾಗುತ್ತದೆ.

ನೆಲ್ಲಿಕಾಯಿಯನ್ನು ಹಾಗೇ ತಿನ್ನುವುದು ಮಾತ್ರವಲ್ಲದೇ ಉಪ್ಪಿನಕಾಯಿ, ಚಟ್ನಿ, ತಂಬುಳಿ.. ಹೀಗೆ ವಿವಿಧ ಬಗೆಯಲ್ಲೂ ತಿನ್ನಬಹುದು. ನೆಲ್ಲಿಕಾಯಿಯನ್ನು ಒಣಗಿಸಿಕೊಂಡು ವರ್ಷಪೂರ್ತಿ ಕೂಡಾ ಉಪಯೋಗಸಬಹುದು.

ನೆಲ್ಲಿಕಾಯಿಯ ಗಿಡದ ಬೇರು, ಎಲೆ, ಕಾಯಿ ಎಲ್ಲವು ಔಷಧೀಯ ಗುಣಗಳನ್ನು ಹೊಂದಿವೆ. ನೆಲ್ಲಿಕಾಯಿಯಲ್ಲಿ ಎರಡು ವಿಧಗಳಿದ್ದು, ಒಂದು ನಾಡಿನ ನೆಲ್ಲಿಕಾಯಿ. ಇದು ಮಾರುಕಟ್ಟೆಯಲ್ಲಿ ಸಿಗುವ ದೊಡ್ಡ ಗಾತ್ರದ ನೆಲ್ಲಿಕಾಯಿ. ಮತ್ತೊಂದು ಬೆಟ್ಟದ ನೆಲ್ಲಿಕಾಯಿ. ಈ ನೆಲ್ಲಿಕಾಯಿ ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿ ಸಾಕಷ್ಟು ಆರೋಗ್ಯವರ್ಧಕ ಗುಣಗಳಿದ್ದು, ಶೀತ, ಕೆಮ್ಮು ದೂರ ಮಾಡಲು ಈ ನೆಲ್ಲಿಕಾಯಿ ಸೇವನೆ ಉತ್ತಮ ಎನ್ನಲಾಗುತ್ತದೆ. ಇತರ ಆರೋಗ್ಯ ಗುಣಗಳ ಬಗ್ಗೆ ತಿಳಿದುಕೊಳ್ಳೋಣ.

ಅಸ್ತಮಾ ನಿಯಂತ್ರಿಸಲು:

ನೆಲ್ಲಿಕಾಯಿಯನ್ನು ಕಚ್ಚಿ ತಿನ್ನುವುದರಿಂದ ಗ್ಯಾಸ್, ಜೊತೆಗೆ ಹೊಟ್ಟೆಯಲ್ಲಿನ ಹುಳ ಬಾಧೆ ಪರಿಹಾರವಾಗುತ್ತೆ. ಈಗಿನ ಮಾಲಿನ್ಯ ಪರಿಸರದಲ್ಲಿ ಹಲವರು ಅಸ್ತಮಾಕ್ಕೆ ಬಲಿಯಾಗುತ್ತಾರೆ. ಅಸ್ತಮಾದಿಂದ ಬಳಲುತ್ತಿರುವವರು ನೆಲ್ಲಿಕಾಯಿ ಜ್ಯೂಸ್ ಮಾಡಿ ಕುಡಿದರೆ ಅಸ್ತಮಾ ಕಡಿಮೆಯಾಗುತ್ತೆ. ಮಾತ್ರವಲ್ಲದೇ ಮಲಬದ್ಧತೆಯೂ ನಿವಾರಣೆಯಾಗಿ, ಜೀರ್ಣಶಕ್ತಿ ವೃದ್ಧಿಯಾಗುತ್ತದೆ. ಇದು ವಾತ, ಪಿತ್ತ, ಕಫ ಮೂರು ದೋಷಗಳನ್ನು ನಿವಾರಿಸಿ ದೇಹವನ್ನು ರೋಗಮುಕ್ತವನ್ನಾಗಿ ಮಾಡುತ್ತದೆ.

ಮಧುಮೇಹ ನಿಯಂತ್ರಣ:

ಬೆಟ್ಟದ ನೆಲ್ಲಿಕಾಯಿಯನ್ನು ತೆಗೆದುಕೊಂಡು, ಸಣ್ಣ ತುಂಡುಗಳನ್ನು ಮಾಡಿ ನೀರಿಗೆ ಹಾಕಿ ಕುದಿಸಬೇಕು. ನಂತರ ಅದಕ್ಕೆ ಜೀರಿಗೆ ಪುಡಿ, ಮೆಂತ್ಯೆ ಪುಡಿ, ಸ್ವಲ್ಪ ಅರಿಶಿನ ಹಾಕಿ ಚೆನ್ನಾಗಿ ಕುದಿಸಿ ಮಾಡಿದ ಕಷಾಯವನ್ನು ಪ್ರತಿನಿತ್ಯ ಕುಡಿಯುವುದರಿಂದ ಇದು ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಿಸಿ, ಮಧುಮೇಹ ಹತೋಟಿಗೆ ಬರುತ್ತದೆ.

ರಕ್ತ ಶುದ್ಧೀಕರಿಸಲು ಸಹಕಾರಿ:

ನೆಲ್ಲಿಕಾಯಿಯು ರಕ್ತ ಶುದ್ಧೀಕರಿಸುತ್ತದೆ. ಬೆಟ್ಟದ ನೆಲ್ಲಿಕಾಯಿಯನ್ನು ಜ್ಯೂಸ್ ಮಾಡಿ ಅದಕ್ಕೆ ಜೇನು ತುಪ್ಪ ಸೇರಿಸಿಕೊಂಡು ಪ್ರತಿದಿನ ಕುಡಿಯುವುದರಿಂದ ದೇಹದಲ್ಲಿ ರಕ್ತ ಶುದ್ಧಿಯಾಗುತ್ತದೆ.

ದೇಹ ತಂಪಾಗಿಸಲು:

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ನೆಲ್ಲಿಕಾಯಿಯ ಉಪಯೋಗಿಸಲಾಗುತ್ತದೆ. ಕೊತ್ತಂಬರಿ ಬೀಜ ಹಾಗೂ ಜೀರಿಗೆಯನ್ನು ರಾತ್ರಿ ನೆನೆಸಿಟ್ಟು, ನಂತರ ಬೆಳಿಗ್ಗೆ ಅದನ್ನು ಸೋಸಿಕೊಂಡು ಆ ನೀರಿಗೆ ನೆಲ್ಲಿಕಾಯಿಯ ಜ್ಯೂಸ್ ಮತ್ತು ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ದೇಹ ತಂಪಾಗಿರುತ್ತದೆ.

ಹೊಟ್ಟೆನೋವು ನಿವಾರಣೆ:

ಹೊಟ್ಟೆನೋವು ನಿವಾರಣೆಗೆ ನೆಲ್ಲಿಕಾಯಿ ಸಹಕಾರಿ. ಹಸಿ ಬೆಟ್ಟದ ನೆಲ್ಲಿಕಾಯಿಯ ರಸ ತೆಗೆದು ಅದಕ್ಕೆ ಬೆಲ್ಲ ಸೇರಿಸಿ ಕುಡಿಯುವುದರಿಂದ ಹೊಟ್ಟೆ ನೋವು ನಿವಾರಣೆಯಾಗುತ್ತದೆ.

ದೇಹದ ತೂಕ ನಿಯಂತ್ರಿಸಲು:

ನೆಲ್ಲಿಕಾಯಿ ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೆಲ್ಲಿಕಾಯಿ ಅತಿ ಕಡಿಮೆ ಕ್ಯಾಲೋರಿ ಹೊಂದಿದೆ. ಆದ್ದರಿಂದ ಪ್ರತಿದಿನ ನೆಲ್ಲಿಕಾಯಿ ರಸ ಸೇವಿಸುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನ ಉತ್ಪಾದನೆ ನಿಯಂತ್ರಿಸಿ ದೇಹದ ತೂಕ ಕಡಿಮೆ ಮಾಡಲು ಸಹಕರಿಸುತ್ತದೆ.

ಕೂದಲಿನ ಆರೋಗ್ಯಕ್ಕೆ:

ಕೂದಲಿನ ಆರೋಗ್ಯವನ್ನು ಹೆಚ್ಚಿಸುವಲ್ಲಿ ನೆಲ್ಲಿಕಾಯಿ ಸಹಕಾರಿ. ನೆಲ್ಲಿಕಾಯಿ ಬಳಸಿ ಎಣ್ಣೆ ತಯಾರಿಸಬಹುದು. ಮಾರುಕಟ್ಟೆಗಳಲ್ಲಿ ನೆಲ್ಲಿಕಾಯಿ ಎಣ್ಣೆ, ನೆಲ್ಲಿಕಾಯಿ ಶ್ಯಾಂಪೂ ಲಭ್ಯ.

ಎಣ್ಣೆ ಮಾಡುವ ವಿಧಾನ ಈ ರೀತಿಯಾಗಿದೆ : ಬೆಟ್ಟದ ನೆಲ್ಲಿಕಾಯಿಯನ್ನು ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಿ ನಂತರ ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ಆ ಎಣ್ಣೆಯ ಬಣ್ಣ ಹಸಿರು ಬಣ್ಣಕ್ಕೆ ಬದಲಾದ ಮೇಲೆ ತಣ್ಣಗಾಗಲು ಬಿಡಿ. ನಂತರ ಬಾಟಲ್‌ ಗಳಲ್ಲಿ ಶೇಖರಿಸಿ, ಪ್ರತಿನಿತ್ಯ ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ ಮಾತ್ರವಲ್ಲದೇ ಕೂದಲು ಕಾಂತಿಯುತವಾಗುತ್ತದೆ.

ಮುಖದ ಆರೋಗ್ಯ:

ಮುಖದ ಆರೋಗ್ಯಕ್ಕೆ ನೆಲ್ಲಿಕಾಯಿ ಉತ್ತಮ ಔಷಧಿ. ಬೆಟ್ಟದ ನೆಲ್ಲಿಕಾಯಿಯನ್ನು ಜಜ್ಜಿ ಪೇಸ್ಟ್ ಮಾಡಿ ಒಂದು ಚಮಚ ಪೇಸ್ಟ್ ಗೆ ಅರ್ಧ ಚಮಚ ಮುಲ್ತಾನಿ ಮಿಟ್ಟಿ ಸೇರಿಸಿಕೊಳ್ಳಬೇಕು. ಇದಕ್ಕೆ ನೀರನ್ನು ಸೇರಿಸುವ ಅಗತ್ಯ ಇರುವುದಿಲ್ಲ, ಏಕೆಂದರೆ ಹಸಿ ನೆಲ್ಲಿಕಾಯಿ ಉಪಯೋಗಿಸುವುದರಿಂದ ಅದರ ರಸದಲ್ಲೇ ಕಲಸಬಹುದು. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಇದು ಮುಖದ ಆರೋಗ್ಯ ಕಾಪಾಡುತ್ತದೆ.

ಚರ್ಮದ ಆರೋಗ್ಯಕ್ಕೆ ಬೇಕಾದ ಕೊಲಾಜೆನ್ ನ ರಚನೆಗೆ ಇದು ತುಂಬಾ ಸಹಕಾರಿ. ಇದು ತ್ವಚೆಯನ್ನು ಕಾಂತಿಯುತವಾಗಿಸುತ್ತದೆ ಎನ್ನಲಾಗುತ್ತದೆ.

ಡಾರ್ಕ್‌ ಸರ್ಕಲ್ಸ್ (ಕಣ್ಣಿನ ಸುತ್ತ ಕಲೆ):

ಕಣ್ಣಿನ ಸುತ್ತ ಇರುವ ಕಪ್ಪು ಕಲೆ ನಿವಾರಣೆಗೆ ನೆಲ್ಲಿಕಾಯಿ ಸಹಕಾರಿ. ಇತ್ತೀಚಿಗೆ ಹಲವರಲ್ಲಿ ಕಾಣುವ ಸಾಮಾನ್ಯ ಸಮಸ್ಯೆ ಕಣ್ಣಿನ ಸುತ್ತಲೂ ಕಪ್ಪಗಿರುವುದು. ಇದನ್ನು ಹೋಗಲಾಡಿಸಲು ರಾಸಾಯನಿಕ ಕ್ರೀಮ್ ಗಳ ಬಳಕೆ ಮಾಡುವ ಬದಲು ನೆಲ್ಲಿಕಾಯಿ ಪೇಸ್ಟ್ ಮಾಡಿಕೊಂಡು, ಕಣ್ಣಿನ ಸುತ್ತಲೂ ಹಚ್ಚಿಕೊಳ್ಳುವುದರಿಂದ ಕಣ್ಣು ತಂಪಾಗುವುದಲ್ಲದೆ, ನಿಧಾನವಾಗಿ ಕಪ್ಪು ಕಲೆಯು ನಿವಾರಣೆಯಾಗುತ್ತದೆ.

*ಕಾವ್ಯಶ್ರೀ

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-fusion-cinema

UV Fusion: Cinema- ದಿ ಲಾಸ್ಟ್‌  ಬರ್ತ್‌ಡೇ

4-fusion-2

UV Fusion: Cinema- ದಿ ಪ್ರೆಸಿಡೆಂಟ್

15-uv-fusion

Reality Shows: ಮಕ್ಕಳ ಬೆಳವಣಿಗೆಯಲ್ಲಿ ರಿಯಾಲಿಟಿ ಶೋಗಳ ಪಾತ್ರ

14-uv-fusion

Tourism: ಭೂಲೋಕದ ಸ್ವರ್ಗ ಕಪ್ಪತ ಗುಡ್ಡ

13-uv-fusion

UV Fusion: ಚಪ್ಪಲಿಯೆಂದು ಹೀಗಳೆಯದಿರು ಮನುಜ, ಅದಕ್ಕೂ ಒಂದು ಮೌಲ್ಯವಿದೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.