
Tamil Nadu; 22 ವರ್ಷಗಳಿಂದ ಏಳು ಹಳ್ಳಿಗಳಲ್ಲಿ ಮೌನ ದೀಪಾವಳಿ ಆಚರಣೆ: ಕಾರಣವೇನು?
Team Udayavani, Nov 12, 2023, 9:17 PM IST

ಈರೋಡ್: ಪಟಾಕಿಗಳ ಅಬ್ಬರದಿಂದ ದೇಶಾದ್ಯಂತ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ, ತಮಿಳುನಾಡಿನ ಈರೋಡ್ ಜಿಲ್ಲೆಯ ಏಳು ಗ್ರಾಮಗಳು ಸದ್ದುಗದ್ದಲವಿಲ್ಲದೆ ಕೇವಲ ದೀಪಗಳ ಮೂಲಕ ಹಬ್ಬವನ್ನು ಆಚರಿಸುತ್ತಿವೆ. ಇದಕ್ಕೆ ಕಾರಣವೆಂದರೆ ವಡಮುಗಂ ವೆಲ್ಲೋಡ್‌ನ ಪಕ್ಷಿಧಾಮದಿಂ 10 ಕಿಲೋಮೀಟರ್ ದೂರದ ಸುತ್ತಮುತ್ತ ಈ ಗ್ರಾಮಗಳಿವೆ.
ಅಕ್ಟೋಬರ್ ಮತ್ತು ಜನವರಿ ನಡುವೆ ಸಾವಿರಾರು ಸ್ಥಳೀಯ ಪಕ್ಷಿ ಪ್ರಭೇದಗಳು ಮತ್ತು ಇತರ ಪ್ರದೇಶಗಳಿಂದ ವಲಸೆ ಬರುವ ಹಕ್ಕಿಗಳು ಮೊಟ್ಟೆಗಳನ್ನು ಇಟ್ಟು ಮರಿ ಮಾಡಲು ಅಭಯಾರಣ್ಯಕ್ಕೆ ಭೇಟಿ ನೀಡುತ್ತವೆ. ದೀಪಾವಳಿ ಹಬ್ಬ ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಬರುವುದರಿಂದ ಪಕ್ಷಿಧಾಮದ ಸುತ್ತಮುತ್ತ ವಾಸಿಸುವ 900 ಕ್ಕೂ ಹೆಚ್ಚು ಕುಟುಂಬಗಳು ಪಕ್ಷಿಗಳನ್ನು ಉಳಿಸುವ ಸಂಕಲ್ಪದೊಂದಿಗೆ, ಪಟಾಕಿಗಳನ್ನು ಸಿಡಿಸಿ ಅವುಗಳು ಭಯಪಡಬಾರದು ಎಂದು ನಿರ್ಧರಿಸಿ ಮೌನ ದೀಪಾವಳಿ ಆಚರಿಸುತ್ತಿದ್ದಾರೆ.
ಕಳೆದ 22 ವರ್ಷಗಳಿಂದ ಈ ಸಂರಕ್ಷಣಾ ವಿಧಾನವನ್ನು ಅನುಸರಿಸುತ್ತಿದ್ದಾರೆ. ದೀಪಾವಳಿ ಸಮಯದಲ್ಲಿ, ಅವರು ತಮ್ಮ ಮಕ್ಕಳಿಗೆ ಹೊಸ ಬಟ್ಟೆಗಳನ್ನು ಖರೀದಿಸುತ್ತಾರೆ ಮತ್ತು ಕೇವಲ ಸದ್ದಿಲ್ಲದ ಸುಡುಮದ್ದುಗಳನ್ನು ಸುಡಲು ಅವಕಾಶ ನೀಡುತ್ತಾರೆ, ಪಟಾಕಿಗಳನ್ನು ಸಿಡಿಸಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಈ ವರ್ಷವೂ ಸೆಲ್ಲಪ್ಪಂಪಳಯಂ, ವಡಮುಗಂ ವೆಲ್ಲೊಡೆ, ಸೆಮ್ಮಂಡಂಪಳಯಂ, ಕರುಕ್ಕಂಕಟ್ಟು ವಲಸು, ಪುಂಗಂಪಾಡಿ ಸೇರಿ ಎರಡು ಗ್ರಾಮಗಳು ಮೌನ ದೀಪಾವಳಿಯ ಗೌರವಯುತ ಸಂಪ್ರದಾಯವನ್ನು ಎತ್ತಿ ಹಿಡಿದಿವೆ. ಕುಟುಂಬಗಳು ತಮ್ಮದೇ ಆದ ರೀತಿಯಲ್ಲಿ ದೀಪಾವಳಿಯನ್ನು ಸಂತೋಷದಿಂದ ಆಚರಿಸುತ್ತಿದ್ದಂತೆ, ಶನಿವಾರ ಮತ್ತು ಭಾನುವಾರದಂದು ಯಾವುದೇ ಘಟನೆ ವರದಿಯಾಗದೆ, ಸಾವಿರಾರು ಪಕ್ಷಿಗಳು ಸುರಕ್ಷಿತವಾಗಿ ಮತ್ತು ಆನಂದದಿಂದ ಅಭಯಾರಣ್ಯದಲ್ಲಿ ಉಳಿದಿವೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1 ಕಿರುಚಿತ್ರ ,ಎರಡೇ ಎರಡು ಸಿನಿಮಾ.. ಹೇಗಿದೆ ಯಶ್ ʼಟಾಕ್ಸಿಕ್ʼ ನಿರ್ದೇಶಕಿ ಗೀತು ಸಿನಿಪಯಣ

ಭಾರತದ ಈ ಅರಮನೆ ಲಂಡನ್‌ನ ಬಕ್ಕಿಂಗ್‌ಹ್ಯಾಮ್ ಪ್ಯಾಲೇಸ್‌ಗಿಂತ 4 ಪಟ್ಟು ದೊಡ್ಡದು.!

Satellite, ಇಂಟರ್ನೆಟ್ ತಂತ್ರಜ್ಞಾನದಲ್ಲಿ ಕ್ರಾಂತಿ ಮಾಡಲಿವೆ RLVಗಳು! ಏನಿದರ ವಿಶೇಷತೆ

Seethakka ; ಅಂದು ನಕ್ಸಲೈಟ್,ಇಂದು ತೆಲಂಗಾಣ ಸರಕಾರದಲ್ಲಿ ಸಚಿವೆ!!

Halim Seeds: ಪೌಷ್ಠಿಕಾಂಶದ ಶಕ್ತಿ ಕೇಂದ್ರ… ಹಲೀಮ್ ಬೀಜಗಳ ಪ್ರಯೋಜನವೇನು?